31 ಕಿ.ಮೀ. ಪ್ರಯಾಣಕ್ಕೆ ಬರೋಬ್ಬರಿ 2.5 ಗಂಟೆ: ಬೆಂಗಳೂರು ಟ್ರಾಫಿಕ್ಗೆ ಇನ್ಫೋಸಿಸ್ ಸಹ ಸಂಸ್ಥಾಪಕ ಅಸಮಾಧಾನ
ಬೆಂಗಳೂರಿನ ಟ್ರಾಫಿಕ್ ಬಗ್ಗೆ ಮಾತ್ರವಲ್ಲದೆ ಕಳಪೆ ರಸ್ತೆಗಳು ಮತ್ತು ಚಾಲನಾ ಶಿಸ್ತಿನ ಕೊರತೆಯನ್ನೂ ಕ್ರಿಸ್ ಗೋಪಾಲಕೃಷ್ಣನ್ ಅವರು ದೂಷಿಸಿದ್ದಾರೆ.

Published : July 6, 2026 at 9:47 AM IST
|Updated : July 6, 2026 at 10:02 AM IST
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದ ಸಂಚಾರ ದಟ್ಟಣೆ ಯಾವತ್ತೂ ಮುಗಿಯದ ಸಮಸ್ಯೆ. ಇದೀಗ ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರು ಬೆಂಗಳೂರು ಟ್ರಾಫಿಕ್ ಜಾಮ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ನಗರದಲ್ಲಿ ಹದಗೆಡುತ್ತಿರುವ ಸಂಚಾರ ದಟ್ಟಣೆಯತ್ತ ಗಮನ ಸೆಳೆದಿದ್ದಾರೆ. ಭಾರೀ ದಟ್ಟಣೆಯ ಬಗ್ಗೆ ಮಾತ್ರವಲ್ಲದೆ ಕಳಪೆ ರಸ್ತೆ ಪರಿಸ್ಥಿತಿಗಳು ಮತ್ತು ಚಾಲನಾ ಶಿಸ್ತಿನ ಕೊರತೆಯನ್ನೂ ದೂಷಿಸಿದ್ದಾರೆ.
"31 ಕಿ.ಮೀ. ಪ್ರಯಾಣ ಸುಮಾರು ಎರಡೂವರೆ ಗಂಟೆಗಳನ್ನು ತೆಗೆದುಕೊಂಡಿತು. ಇದು ಇನ್ನಷ್ಟು ಹದಗೆಡುತ್ತಿದೆ. ಸಂಚಾರ, ರಸ್ತೆಗಳ ಸ್ಥಿತಿ, ಕಳಪೆ ಶಿಸ್ತು" ಎಂದು ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
31 km took 2 1/2 hours today. It is only becoming worse. Traffic, condition of roads, and poor discipline
— kris gopalakrishnan (@kris_sg) July 4, 2026
ಸಾವಿರಾರು ಬೆಂಗಳೂರು ನಿವಾಸಿಗಳು ಟ್ರಾಫಿಕ್ ಜಾಮ್ ಸಮಸ್ಯೆ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೆ ಈ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ಈಗ ಕ್ರಿಸ್ ಗೋಪಾಲಕೃಷ್ಣನ್ ಅವರು ಕೂಡ ಸಾರಿಗೆ ಮೂಲಸೌಕರ್ಯ ಹಾಗೂ ಸಂಚಾರ ನಿರ್ವಹಣೆಯಲ್ಲಿ ತುರ್ತು ಸುಧಾರಣೆಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕ್ರಿಸ್ ಗೋಪಾಲಕೃಷ್ಣನ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ ತಮ್ಮ ಅನುಭವಗಳನ್ನು, ದೈನಂದಿನ ವಾಸ್ತವತೆಗಳನ್ನು ತೆರೆದಿಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಸಂಚಾರ ದಟ್ಟಣೆ ಸುಧಾರಿಸಲು ಪೊಲೀಸರ ಸಹಭಾಗಿತ್ವದಲ್ಲಿ ಐಆರ್‌ಟಿಇ, ಡಿಯಾಜಿಯೋದಿಂದ ಅಧ್ಯಯನ

