ETV Bharat / state

ಇರಾನ್ - ಇಸ್ರೇಲ್ ನಡುವೆ ಯುದ್ದ: ಕೆಐಎಎಲ್​​​ನಲ್ಲಿ 22 ವಿಮಾನಗಳ ಹಾರಾಟ ರದ್ದು

ಇರಾನ್ - ಇಸ್ರೇಲ್ ನಡುವೆ ಯುದ್ಧ ಮುಂದುವರೆದ ಹಿನ್ನೆಲೆ ವಾಯುನೆಲೆ ಮುಚ್ಚಿರುವ ಕಾರಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 22 ವಿಮಾನಗಳ ಹಾರಾಟ ರದ್ದಾಗಿದೆ.

22 FLIGHTS CANCELLED AT KIAL
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : March 2, 2026 at 1:17 PM IST

2 Min Read
Choose ETV Bharat

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಇರಾನ್ - ಇಸ್ರೇಲ್ ನಡುವೆ ಯುದ್ಧ ಮುಂದುವರೆದ ಹಿನ್ನೆಲೆ ವಾಯುನೆಲೆ ಮುಚ್ಚಿರುವ ಕಾರಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 22 ವಿಮಾನಗಳ ಹಾರಾಟ ರದ್ದಾಗಿದೆ.

ಇರಾನ್, ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳಲ್ಲಿ ವಾಯುನೆಲೆ ಮುಚ್ಚಿರುವ ಕಾರಣ ಇಂದು ಸಹ ವಿಮಾನಗಳು ರದ್ದಾಗಿದೆ. ಕೆಐಎಬಿಯಿಂದ‌ ವಿದೇಶಕ್ಕೆ ನಿರ್ಗಮಿಸಬೇಕಿದ್ದ 10 ವಿಮಾನಗಳು, ಆಗಮಿಸಬೇಕಿದ್ದ 12 ವಿಮಾನಗಳು ರದ್ದಾಗಿವೆ. ಯುದ್ಧದ ಹಿನ್ನೆಲೆ ಇಂದು ಒಟ್ಟು‌ 22 ವಿಮಾನಗಳ ಹಾರಾಟ ರದ್ದಾಗಿದೆ.

ಅಬುಧಾಬಿ, ಜಿದ್ದಾ, ದೋಹಾ, ದುಬೈ, ಬಹ್ರೇನ್​​ ಮಾರ್ಗದ ವಿಮಾನಗಳು‌ ರದ್ದಾಗಿದೆ. ಏರ್ ಇಂಡಿಯಾ, ಏಮಿರೆಟ್ಸ್, ಇಂಡಿಗೋ, ಖತಾರ್ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ವಿಮಾನಗಳ ಹಾರಾಟ ರದ್ದು ಮಾಡಿದ್ದು, ರದ್ದಾದ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿದವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ಯುದ್ದದ ಆರಂಭದಿಂದಲೂ ಟಿಕೆಟ್ ಬುಕ್ ಮಾಡಿದವರಿಗೆ ಮಾಹಿತಿ ನೀಡುವ ಕೆಲಸವನ್ನು ವಿಮಾನಯಾನ ಸಂಸ್ಥೆಗಳು ಮಾಡುತ್ತೀವೆ. ಫ್ಲೈಟ್​​ ಕನ್ಫರ್ಮ್​ ಆಗದಿದ್ದರೆ ಏಪೋರ್ಟ್​ಗೆ ಬಾರದಂತೆ ವಿಮಾನ ನಿಲ್ದಾಣ ಆಡಳಿತ ಮಂಡಳಿಯು ಸಾಮಾಜಿಕ ಜಾಲತಾಣ ಹಾಗೂ ಏರ್ಪೋರ್ಟ್​ನಲ್ಲಿ ಸಹಾಯವಾಣಿ ಮೂಲಕ ಮನವಿ ಮಾಡಿದೆ.

ಮಂಗಳೂರು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಮತ್ತೊಂದೆಡೆ, ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವೆ ಉಂಟಾದ ದಾಳಿ - ಪ್ರತಿದಾಳಿ ಪರಿಸ್ಥಿತಿಯ ಹಿನ್ನೆಲೆ ಇರಾನ್ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರ ಪರಿಣಾಮವಾಗಿ ಗಲ್ಫ್ ರಾಷ್ಟ್ರಗಳಿಗೆ ಸಂಚರಿಸುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (IXE) ಮೂಲದ ಹಲವು ವಿಮಾನಗಳು ರದ್ದು, ಡೈವರ್ಟ್ ಮಾಡಲ್ಪಟ್ಟಿವೆ.

ಹಿಂತಿರುಗಿಸಿದ (Back to Bay) ವಿಮಾನ: IX 831 – ಮಂಗಳೂರು (IXE) ರಿಂದ ದುಬೈ (DXB) ನಿಗದಿತ ಹೊರಡುವ ಸಮಯ ಮಧ್ಯಾಹ್ನ 1:20 (13:20 IST) ಈ ವಿಮಾನವು ಟೇಕಾಫ್ ಆದ ನಂತರ ಇರಾನ್ ವಾಯುಪ್ರದೇಶ ಮುಚ್ಚಿರುವುದರಿಂದ ಮಂಗಳೂರಿಗೆ ಮರಳಿ ಬಂದು ನಿಲುಗಡೆಗೊಂಡಿತು. ನಂತರ ಮಧ್ಯಾಹ್ನ 3ಗಂಟೆಗೆ ವಿಮಾನವನ್ನು ಅಧಿಕೃತವಾಗಿ ರದ್ದು ಮಾಡಲಾಗಿದೆ ಎಂದು ಘೋಷಿಸಲಾಯಿತು. ವಿಮಾನದಲ್ಲಿದ್ದ ಒಟ್ಟು 174 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನು ವಿಮಾನದಿಂದ ಇಳಿಸಲಾಯಿತು.

ಡೈವರ್ಟ್ ಮಾಡಿದ ವಿಮಾನ: IX 821 – ಮಂಗಳೂರು (IXE) ರಿಂದ ದೋಹಾ (DOH) ಈ ವಿಮಾನವು ದೋಹಾಕ್ಕೆ ತೆರಳುತ್ತಿದ್ದಾಗ ಇರಾನ್ ವಾಯುಮಾರ್ಗ ಲಭ್ಯ ಇಲ್ಲದೇ ಇರುವುದರಿಂದ ಮಾರ್ಗ ಬದಲಾಯಿಸಿ ಮುಂಬೈ (BOM)ಗೆ ಡೈವರ್ಟ್ ಮಾಡಲಾಗಿದೆ.

ರದ್ದಾದ (Cancelled) ವಿಮಾನಗಳು: IX 831 – ಮಂಗಳೂರು (IXE) ರಿಂದ ದುಬೈ (DXB) ಹೊರಡುವ ಸಮಯ: ಮಧ್ಯಾಹ್ನ 1:20 (13:20 IST) – ರದ್ದು, IX 813 – ಮಂಗಳೂರು (IXE) ರಿಂದ ದುಬೈ (DXB) ಹೊರಡುವ ಸಮಯ: ರಾತ್ರಿ 8:15 (20:15 IST) – ರದ್ದು, IX 847 – ಮಂಗಳೂರು (IXE) ರಿಂದ ದಮ್ಮಾಮ್ (DMM) ಹೊರಡುವ ಸಮಯ: ರಾತ್ರಿ 11:10 (23:10 IST) – ರದ್ದು, IX 851 – ಮಂಗಳೂರು (IXE) ರಿಂದ ಕುವೈತ್ (KWI) ಹೊರಡುವ ಸಮಯ: ರಾತ್ರಿ 10:05 (22:05 IST) – ರದ್ದು, IX 815 – ಮಂಗಳೂರು (IXE) ರಿಂದ ಅಬುಧಾಬಿ (AUH) ಹೊರಡುವ ಸಮಯ: ರಾತ್ರಿ 11:20 (23:20 IST) – ರದ್ದು, 6E 1467 – ಮಂಗಳೂರು (IXE) ರಿಂದ ದುಬೈ (DXB) ಹೊರಡುವ ಸಮಯ: ಸಂಜೆ 7:15 (19:15 IST) – ರದ್ದು.

ಇವುಗಳನ್ನೂ ಓದಿ: