ETV Bharat / sports

ಮಹಿಳಾ ಏಷ್ಯಾಕಪ್​ 2026: 7.5 ಓವರ್​ಗಳಲ್ಲೆ ಪಂದ್ಯ ಗೆದ್ದುಕೊಂಡ ಶ್ರೀಲಂಕಾ

ಮಹಿಳಾ ಏಷ್ಯಾಕಪ್​ನಲ್ಲಿ ನಿನ್ನೆ ನಡೆದಿದ್ದ ಯುಎಇ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡ 9 ವಿಕೆಟ್​ಗಳಿಂದ ಗೆಲುವು ಸಾಧಿಸಿ ದಾಖಲೆ ಬರೆದಿದೆ.

ಮಹಿಳಾ ಏಷ್ಯಾಕಪ್​ 2026
ಮಹಿಳಾ ಏಷ್ಯಾಕಪ್​ 2026 (IANS)
author img

By ETV Bharat Sports Team

Published : August 30, 2026 at 9:14 AM IST

2 Min Read
Choose ETV Bharat

ಮಹಿಳಾ ಏಷ್ಯಾಕಪ್‌ನ ಎರಡನೇ ಪಂದ್ಯ ಶ್ರೀಲಂಕಾ ಮತ್ತು ಯುಎಇ ನಡುವೆ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಶ್ರೀಲಂಕಾ ಯುಎಇಯನ್ನು 9 ವಿಕೆಟ್‌ಗಳಿಂದ ಸೋಲಿಸಿ, ತಮ್ಮ ಟಿ20ಐ ಇತಿಹಾಸದಲ್ಲಿ ಅತಿದೊಡ್ಡ ಗೆಲುವು ದಾಖಲಿಸಿತು. ಯುಎಇ ತಂಡ 19.5 ಓವರ್‌ಗಳಲ್ಲಿ 79 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಯಾಗಿ, ಶ್ರೀಲಂಕಾ ಮಹಿಳಾ ತಂಡ 7.5 ಓವರ್‌ಗಳಲ್ಲಿ 9 ವಿಕೆಟ್‌ಗಳು ಮತ್ತು 73 ಎಸೆತಗಳು ಬಾಕಿ ಇರುವಾಗಲೆ ಗುರಿಯನ್ನು ತಲುಪಿತು. ಚೆಂಡುಗಳ ವಿಷಯದಲ್ಲಿ ಇದು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಅತಿದೊಡ್ಡ ಗೆಲುವಾಗಿದೆ.

ಯುಎಇ ಬ್ಯಾಟಿಂಗ್​ ವೈಫಲ್ಯ

ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಯುಎಇ ತಂಡವು ಕಳಪೆ ಆರಂಭ ಕಂಡಿತು. ಪಂದ್ಯದ ನಾಲ್ಕನೇ ಎಸೆತದಲ್ಲಿ ತೀರ್ಥ ಸತೀಶ್ ಒಂದೇ ಒಂದು ರನ್ ಗಳಿಸದೆ ಔಟಾದರು ಮತ್ತು ತಂಡದ ಸ್ಕೋರ್ 9ಕ್ಕೆ ತಲುಪಿದಾಗ, ಲಾವಣ್ಯ ಕೆನ್ನಿ (3) ಕೂಡ ತಮ್ಮ ವಿಕೆಟ್ ಕಳೆದುಕೊಂಡರು. ನಂತರ ನಾಯಕಿ ಇಶಾ ಓಜಾ (18) ಮತ್ತು ಹೀನಾ ಹೊಚ್ಚಂದನಿ (10) ಎಚ್ಚರಿಕೆಯಿಂದ ಆಟವಾಡಿ, ಮೂರನೇ ವಿಕೆಟ್‌ಗೆ 19ರನ್ ಸೇರಿಸಿದರು.

ನಂತರ ರಿನಿತಾ ರಜಿತ್ (15) ಸಮೈರಾ ಮತ್ತು ಮೆಹುಲ್ ಕುಲಕರ್ಣಿ (3) ಅವರೊಂದಿಗೆ ಸಣ್ಣ ಪಾಲುದಾರಿಕೆಯನ್ನು ನಿರ್ಮಿಸಿ ತಂಡವನ್ನು 50ರ ಗಡಿ ದಾಟಿಸುವಲ್ಲಿ ಯಶಸ್ವಿ ಆದರು. ಆದಾಗ್ಯೂ, ಈ ಪ್ರಯತ್ನಗಳ ಹೊರತಾಗಿಯೂ, ಇಡೀ ತಂಡವು 19.5 ಓವರ್‌ಗಳಲ್ಲಿ ಕೇವಲ 79 ರನ್‌ಗಳಿಗೆ ಆಲೌಟ್ ಆಯಿತು.

ಶ್ರೀಲಂಕಾ ಪರ ಮಿಥಾಲಿ ಅಯೋಧ್ಯಾ 3.5 ಓವರ್‌ಗಳಲ್ಲಿ 14 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರೆ, ಚೇತನಾ ವಿಮುಕ್ತಿ 4 ಓವರ್‌ಗಳಲ್ಲಿ 16 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು. ಸುಗಂಧಿಕಾ ಕುಮಾರಿ ಕೂಡ 2 ವಿಕೆಟ್‌ಗಳನ್ನು ಕಬಳಿಸಿದರು. ಅತ್ಯುತ್ತಮ ಬೌಲಿಂಗ್‌ಗಾಗಿ ಚೇತನಾ ವಿಮುಕ್ತಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಶ್ರೀಲಂಕಾ ಭರ್ಜರಿ ಆರಂಭ

ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಮಹಿಳಾ ತಂಡವು ಇಮೇಷಾ ದುಲಾನಿ ಮತ್ತು ಚಾಮರಿ ಅಟಪಟ್ಟು ಜೋಡಿಯೊಂದಿಗೆ ಉತ್ತಮ ಆರಂಭ ಪಡೆದುಕೊಂಡಿರು. ಇಬ್ಬರೂ 5.5 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 57 ರನ್‌ಗಳನ್ನು ಸೇರಿಸಿದರು. 18 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 25 ರನ್ ಗಳಿಸಿದ ನಂತರ ಇಮೇಷಾ ದುಲಾನಿ ರನೌಟ್ ಆದರು. ನಾಯಕಿ ಚಾಮರಿ ಅಟಪಟ್ಟು 25 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 48 ರನ್ ಗಳಿಸಿದರು. ಸಂಜನಾ ಕವಿಂದಿ 4 ಎಸೆತಗಳಲ್ಲಿ 5 ರನ್ ಗಳಿಸಿದರು. ಈ ಇಬ್ಬರೂ ಆಟಗಾರ್ತಿಯರು ಕೊನೆಯವರೆಗೂ ಅಜೇಯರಾಗಿ ಉಳಿದರು. ಇದರಿಂದಾಗಿ ಲಂಕಾ 7.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 80 ರನ್‌ಗಳ ಗುರಿಯನ್ನು ತಲುಪಿತು.

ತಂಡಗಳು - ಶ್ರೀಲಂಕಾ: ಇಮೇಶಾ ದುಲಾನಿ, ಚಾಮರಿ ಅಟಪಟ್ಟು (ನಾ), ಸಂಜನಾ ಕವಿಂದಿ, ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹರಿ, ಕೌಶನಿ ನುತ್ಯಂಗನಾ (ವಿ.ಕೀ), ನೀಲಕ್ಷಿಕಾ ಸಿಲ್ವ, ಸುಗಂದಿಕಾ ಕುಮಾರಿ, ಚಾಮುದಿ ಪ್ರಬೋದಾ, ಚೇತನ ವಿಮುಕ್ತಿ, ಮಿಥಾಲಿ ಅಯೋಧ್ಯಾ.

ಯುಎಇ: ಇಶಾ ಓಜಾ (ನಾ), ತೀರ್ಥ ಸತೀಶ್ (ವಿ.ಕೀ), ಹೀನಾ ಹೊತ್ಚಂದಾನಿ, ಸಮೀರ ಧರಣಿಧರಕ, ರಿನಿತಾ ರಜಿತ್, ಲಾವಣ್ಯ ಕೇನಿ, ಮೆಹುಲ್ ಪ್ರಣವ್ ಕುಲಕರ್ಣಿ, ವೈಷ್ಣವೆ ಮಹೇಶ್, ಇಂಧುಜಾ ನಂದಕುಮಾರ್, ಅತಿಗೆ ಸಿಲ್ವ, ಸುರಕ್ಷಾ ಕೊಟ್ಟೆ.

ಇದನ್ನೂ ಓದಿ: ಮೂರನೇ ಬಾರಿಗೆ ಹಾಕಿ ವಿಶ್ವಕಪ್ ಗೆದ್ದ ಅರ್ಜೆಂಟೀನಾ; ಸತತ ನಾಲ್ಕನೇ ಟ್ರೋಫಿ ಗೆಲ್ಲುವ ನೆದರ್ಲ್ಯಾಂಡ್ಸ್ ಕನಸು ಭಗ್ನ!!