ಮುಸ್ತಾಫಿಜುರ್‌ಗೆ ನೀಡಿದ ₹9.20 ಕೋಟಿ ರೂ. ಕೆಕೆಆರ್ ವಾಪಸ್ ಪಡೆಯಲಿದೆಯೆ? ಐಪಿಎಲ್ ನಿಯಮ ಹೇಳುವುದೇನು?
ಕೆಕೆಆರ್ ತಂಡದಿಂದ ಬಿಡುಗಡೆಯಾದ ಬಾಂಗ್ಲಾ ಬೌಲರ್ ಮುಸ್ತಾಫಿಜುರ್ ರೆಹಮಾನ್‌ಗೆ ಎಷ್ಟು ಕೋಟಿ ಹಣ ಸಿಗಲಿದೆ ನಿಯಮಗಳೇನು ಹೇಳುತ್ತವೆ ಎಂದು ಈ ಸುದ್ದಿಯಲ್ಲಿ ತಿಳಿಯಿರಿ.


Published : January 3, 2026 at 5:27 PM IST
ಇತ್ತೀಚೆಗೆ ನಡೆದ 2026ರ ಐಪಿಎಲ್ ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು ₹9.20 ಕೋಟಿ ರೂ.ಗಳಿಗೆ ಖರೀದಿಸಿತ್ತು. ಆದಾಗ್ಯೂ, ಅವರನ್ನು ಐಪಿಎಲ್‌ನಲ್ಲಿ ಆಡಿಸದಂತೆ ವಿರೋಧ ವ್ಯಕ್ತವಾಗಿವೆ. ಬಾಂಗ್ಲಾದೇಶದಲ್ಲಿನ ಪ್ರಸ್ತುತ ರಾಜಕೀಯ ಗಲಭೆ ಮತ್ತು ಅಲ್ಲಿನ ಹಿಂದೂಗಳ ಮೇಲಿನ ಸರಣಿ ದಾಳಿಗಳು ಇದಕ್ಕೆ ಕಾರಣವಾಗಿವೆ. ತೀವ್ರ ವಿರೋಧಗಳ ಬೆನ್ನಲ್ಲೆ ಬಿಸಿಸಿಐ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಕೆಕೆಆರ್ಗೆ ಆದೇಶಿಸಿದೆ. ಇದರಿಂದಾಗಿ ಕೆಕೆಆರ್ ತಂಡದಿಂದ ಮುಸ್ತಾಫಿಜುರ್ ಅವರನ್ನು ಬಿಡುಗಡೆ ಮಾಡಿದೆ.
ಮುಸ್ತಾಫಿಜುರ್ ಒಂದೇ ಒಂದು ಚೆಂಡನ್ನು ಎಸೆಯದೆ ಐಪಿಎಲ್‌ನಿಂದ ನಿರ್ಗಮಿಸಿದ್ದಾರೆ. ಆದಾಗ್ಯೂ, ಕೆಕೆಆರ್ ಅವರಿಗೆ ನೀಡಿದ ₹9.20 ಕೋಟಿ ರೂ.ಗಳು ವಾಪಾಸ್ ಪಡೆಯಲಿದೆಯೆ? ಅಥವಾ ಇಲ್ಲವೇ? ಎಂಬ ಪ್ರಶ್ನೆಗಳು ಎದ್ದಿವೆ. ಈ ವಿಚಾರವಾಗಿ ಐಪಿಎಲ್ ಹರಾಜು ನಿಯಮಗಳು ಏನು ಹೇಳುತ್ತವೆ ಮುಸ್ತಾಫಿಜುರ್ ಎಷ್ಟು ಹಣ ಪಡೆಯಲಿದ್ದಾರೆ ಎಂದು ಇದೀಗ ತಿಳಿಯೋಣ.
ರೆಹಮಾನ್‌ಗೆ ಎಷ್ಟು ಹಣ ಸಿಗಲಿದೆ?: ಬಿಸಿಸಿಐನ ಈ ನಿರ್ಧಾರದ ನಂತರ, ಐಪಿಎಲ್ 2026ರ ಮಿನಿ ಹರಾಜಿನಲ್ಲಿ 9.20 ಕೋಟಿಗೆ ಮಾರಾಟವಾದ ರೆಹಮಾನ್ ಈಗ ಎಷ್ಟು ಹಣವನ್ನು ಪಡೆಯುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತಿದೆ? ಆದರೆ ಈ ಲೀಗ್‌ನಲ್ಲಿ ಆಡಲು ಅವರು ತಮ್ಮ ದೇಶದಿಂದ ಎನ್‌ಒಸಿಯನ್ನು ಸಹ ಪಡೆದಿದ್ದರು ಮತ್ತು ಅವರು ಕೆಕೆಆರ್‌ಗೂ ಲಭ್ಯವಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಬಾಂಗ್ಲಾದೇಶದ ಬೌಲರ್ ತನ್ನ ಐಪಿಎಲ್ ಶುಲ್ಕವನ್ನು ಪಡೆಯುತ್ತಾರೋ ಇಲ್ಲವೋ. ಇದು ದೊಡ್ಡ ಪ್ರಶ್ನೆಯಾಗಿದೆ.
ದುಬೈನಲ್ಲಿ ನಡೆದ ಐಪಿಎಲ್ 2026 ರ ಮಿನಿ ಹರಾಜಿನಲ್ಲಿ, ಕೆಕೆಆರ್ 2 ಕೋಟಿ ಮೂಲ ಬೆಲೆಯನ್ನು ಹೊಂದಿದ್ದ ಮುಸ್ತಾಫಿಜುರ್ ರೆಹಮಾನ್ ಅವರನ್ನು 9.20 ಕೋಟಿಗೆ ಒಪ್ಪಂದ ಮಾಡಿಕೊಂಡಿತ್ತು. ಬಿಸಿಸಿಐ ನಿಯಮಗಳ ಪ್ರಕಾರ, ಹರಾಜಿನ ನಂತರ ಆಟಗಾರನೊಬ್ಬ ಐಪಿಎಲ್‌ನಲ್ಲಿ ಆಡಲು ನಿರಾಕರಿಸಿದರೆ, ಅವನಿಗೆ ಎರಡು ವರ್ಷಗಳ ನಿಷೇಧ ವಿಧಿಸಲಾಗುತ್ತದೆ ಮತ್ತು ಐಪಿಎಲ್ ಶುಲ್ಕವನ್ನು ಪಾವತಿಸಲಾಗುವುದಿಲ್ಲ. ಇದಲ್ಲದೆ, ಹರಾಜಿನ ನಂತರ ಆಟಗಾರನೊಬ್ಬ ಗಾಯಗೊಂಡು ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೆ, ಅವನಿಗೆ ಐಪಿಎಲ್ ಶುಲ್ಕವನ್ನು ಪಾವತಿಸಲಾಗುವುದಿಲ್ಲ.
ಆದರೆ ಮುಸ್ತಾಫಿಜುರ್ ರೆಹಮಾನ್ ಪ್ರಕರಣ ಬೇರೆ ಏಕೆಂದರೆ ಅವರು ಆಯ್ಕೆಗೆ ಲಭ್ಯವಿದ್ದರು. ಅವರು ಗಾಯಗೊಂಡಿರಲಿಲ್ಲ, ಅಲ್ಲದೆ ಹರಾಜಿನ ನಂತರ ಅವರು ತಮ್ಮ ಹೆಸರನ್ನು ಸಹ ಹಿಂತೆಗೆದುಕೊಂಡಿಲ್ಲ. ಬದಲಾಗಿ, ಬಿಸಿಸಿಐ ಆದೇಶದ ಮೇರೆಗೆ ಕೆಕೆಆರ್ ಅವರನ್ನು ತಂಡದಿಂದ ಬಿಡುಗಡೆ. ಈ ಹಿನ್ನೆಲೆ ಕೆಕೆಆರ್ ಮುಸ್ತಾಫಿಜುರ್‌ಗೆ ಒಂದೇ ಒಂದು ಪೈಸೆಯನ್ನೂ ಪಾವತಿಸುವುದಿಲ್ಲ, ಏಕೆಂದರೆ ಕೆಕೆಆರ್ ಬಿಸಿಸಿಐ ಆದೇಶದ ಮೇರೆಗೆ ಆಟಗಾರನನ್ನು ಬಿಡುಗಡೆ ಮಾಡಿದೆ, ಬಿಸಿಸಿಐ ಆದೇಶವಿಲ್ಲದೆ ಕೆಕೆಆರ್ ಮುಸ್ತಾಫಿಜುರ್‌ನನ್ನು ಬಿಡುಗಡೆ ಮಾಡಿದ್ದರೆ ಅದು ಮುಸ್ತಾಫಿಜುರ್ ಮತ್ತು ಫ್ರಾಂಚೈಸಿ ನಡುವಿನ ವಿಷಯವಾಗುತ್ತಿತ್ತು, ಅಂತಹ ಪರಿಸ್ಥಿತಿಯಲ್ಲಿ ಕೆಕೆಆರ್ ಸಂಪೂರ್ಣ ಮೊತ್ತವನ್ನು ಪಾವತಿಸಬೇಕಾಗಿತ್ತು.
ಕೆಕೆಆರ್ ಹೇಳಿದ್ದೇನು?: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿಗೆ ಮುಂಚಿತವಾಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡಲು ಆದೇಶಿಸಿರುವುದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ದೃಢಪಡಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆ ಸಮಾಲೋಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಐಪಿಎಲ್ ನಿಯಮಗಳ ಪ್ರಕಾರ ಬಿಸಿಸಿಐ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಬದಲಿ ಆಟಗಾರನನ್ನು ಪಡೆಯಲು ಅವಕಾಶ ನೀಡಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ತಿಳಿಸಿದೆ.
ಕೆಕೆಆರ್‌ನ ಈ ಹೇಳಿಕೆಯು ಮುಸ್ತಾಫಿಜುರ್ ರೆಹಮಾನ್‌ಗೆ ಹಣ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ, ಏಕೆಂದರೆ ಅವರು ಬಿಸಿಸಿಐ ಆದೇಶದ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಿಷಯವು ಈಗ ಬಿಸಿಸಿಐ ಮತ್ತು ಮುಸ್ತಾಫಿಜುರ್ ರೆಹಮಾನ್ ನಡುವೆ ಮಾತ್ರ ಇತ್ಯರ್ಥವಾಗಲಿದೆ.
ಇದನ್ನೂ ಓದಿ: ಈ ವರ್ಷ ನಡೆಯಬೇಕಿದ್ದ ಬಾಂಗ್ಲಾ - ಭಾರತ ದ್ವಿಪಕ್ಷೀಯ ಸರಣಿ ರದ್ದು?

