ETV Bharat / sports

15 ಸಿಕ್ಸರ್​, 11 ಬೌಂಡರಿ, 144 ರನ್​; ವೈಭವ್​ ಸೂರ್ಯವಂಶಿ ಆರ್ಭಟಕ್ಕೆ ವಿಶ್ವದಾಖಲೆ ಸೃಷ್ಟಿ

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟಿ20 ಟೂರ್ನಮೆಂಟ್‌ನಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್​ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ​

ವಿಶ್ವದಾಖಲೆ ಬರೆದ ವೈಭವ್​ ಸೂರ್ಯವಂಶಿ
ವಿಶ್ವದಾಖಲೆ ಬರೆದ ವೈಭವ್​ ಸೂರ್ಯವಂಶಿ (IANS)
author img

By ETV Bharat Sports Team

Published : November 15, 2025 at 10:35 AM IST

2 Min Read
Choose ETV Bharat

Vaibhav Suryavnshi Fastest Century: 14ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿ ಸ್ಫೋಟಕ ಬ್ಯಾಟಿಂಗ್​ ನಿಂದಲೇ ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿದ ವೈಭವ್ ಸೂರ್ಯವಂಶಿ, ನಂತರವೂ ತಮ್ಮ ಆಕ್ರಮಣಕಾರಿ ಆಟವವನ್ನು ಮುಂದುರೆಸಿದ್ದಾರೆ, ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟಿ20 ಟೂರ್ನಮೆಂಟ್‌ನಲ್ಲಿ ಯುಎಇ ವಿರುದ್ಧ ವಿಧ್ವಂಸಕ ಪ್ರದರ್ಶನ ನೀಡಿ ಎದುರಾಳಿಯ ಬೌಲರ್​ಗಳ ಚೆಂಡಾಡಿದ್ದಾರೆ.

ಮೊದಲ ಎಸೆತದಿಂದಲೇ ಬ್ಯಾಟ್​ ಬೀಸಿದ ವೈಭವ್ ಕೇವಲ 42 ಎಸೆತಗಳಲ್ಲಿ 144 ರನ್ ಬಾರಿಸಿದರು. ಈ ಪಂದ್ಯದಲ್ಲಿ ಬರೋಬ್ಬರಿ 11 ಬೌಂಡರಿಗಳು ಮತ್ತು 15 ಸಿಕ್ಸರ್‌ಗಳು ಸೇರಿದ್ದವು ಎಂಬುದು ಗಮನಾರ್ಹ. ಅಲ್ಲದೇ ಈ ಪಂದ್ಯವನ್ನೂ ಭಾರತ-ಎ ತಂಡ 148 ರನ್‌ಗಳ ಅಂತರದಿಂದ ಗೆದ್ದು ಪಂದ್ಯಾವಳಿಯನ್ನು ಭರ್ಜರಿಯಾಗಿ ಆರಂಭಿಸಿತು.

ವೈಭವ್ ಅವರ ಬ್ಯಾಟಿಂಗ್‌ನಿಂದ ಭಾರತ-ಎ 4 ವಿಕೆಟ್‌ ನಷ್ಟಕ್ಕೆ 297 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಆರಂಭಿಕ ಪ್ರಿಯಾಂಶ್ ಆರ್ಯ (10) ಬೇಗನೆ ಔಟಾದರೂ, ನಮನ್ ಧೀರ್ (34) ಅವರೊಂದಿಗೆ ಎರಡನೇ ವಿಕೆಟ್‌ಗೆ ವೈಭವ್ ಕೇವಲ 57 ಎಸೆತಗಳಲ್ಲಿ 163 ರನ್ ಸೇರಿಸಿದರು. ವೈಭವ್​ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು ಮತ್ತು ಕೇವಲ 32 ಎಸೆತಗಳಲ್ಲಿ ಶತಕ ತಲುಪಿದರು.

ವೈಭವ್ ಅವರ ಆಟ ನೋಡಿದರೆ, ಟಿ20ಯಲ್ಲಿ ತಮ್ಮ ಮೊದಲ ದ್ವಿಶತಕ ದಾಖಲಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ 13ನೇ ಓವರ್‌ನಲ್ಲಿ ಅವರು ದೊಡ್ಡ ಹೊಡೆತಕ್ಕೆ ಕಲೆಹಾಕಿ ಔಟಾದರು. ಇದರ ಮುಂದಿನ ಓವರ್‌ನಲ್ಲಿಯೇ ಸ್ಕೋರ್ 200 ದಾಟಿತು. ವೈಭವ್ ಔಟಾದ ನಂತರ, ಜಿತೇಶ್ ಶರ್ಮಾ ಅದ್ಭುತ ಆಟ ಪ್ರದರ್ಶಿಸಿ ಸ್ಕೋರ್ ಅನ್ನು 300ರ ಸಮೀಪಕ್ಕೆ ತಂದರು. ಅವರು 32 ಎಸೆತಗಳಲ್ಲಿ 8 ಬೌಂಡರಿ ಮತ್ತು×6 ಸಿಕ್ಸರ್​ ಸಹಾಯದಿಂದ 83 ರನ್ ಚಚ್ಚಿದರು.​

ಯುಎಇ ಬೌಲರ್‌ಗಳಲ್ಲಿ ಫರಾಜುದ್ದೀನ್ ಮತ್ತು ಜವಾದುಲ್ಲಾ 4 ಓವರ್‌ಗಳಲ್ಲಿ ತಲಾ 64 ರನ್ ಬಿಟ್ಟುಕೊಟ್ಟರು ಎಂಬುದು ಗಮನಾರ್ಹ. ನಂತರ ಭಾರತದ ಪರ ಗುರ್ಜನ್‌ಪ್ರೀತ್ (3/18) ಮತ್ತು ಹರ್ಷ್ ದುಬೆ (2/12) ಯುಎಇಯನ್ನು 149/7 ರನ್‌ಗೆ ಕಟ್ಟಿಹಾಕುವಲ್ಲಿ ಯಶಸ್ವಿ ಆದರು. ಶೋಯೆಬ್ ಖಾನ್ ಗರಿಷ್ಠ ಸ್ಕೋರರ್ ಆಗಿದ್ದರು. ಇವರು 41 ಎಸೆತಗಳಲ್ಲಿ 3 ಬೌಂಡರಿ ಮತ್ತು 6 ಸಿಕ್ಸರ್​ ಸಹಾಯದಿಂದ 63 ರನ್​ ಚಚ್ಚಿದರು. ಭಾರತ ಎ ತಂಡ ಭಾನುವಾರ ನಡೆಯಲಿರುವ ತಮ್ಮ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ ಶಹೀನ್ಸ್ ತಂಡವನ್ನು ಎದುರಿಸಲಿದೆ.

ಈ ಸಾಧನೆ ಮಾಡಿದ ಮೊದಲ ಬ್ಯಾಟರ್: ಯುಎಇಯಲ್ಲಿ ರೈಸಿಂಗ್ ಸ್ಟಾರ್ಸ್ ತಂಡದ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ವೈಭವ್ ಕೇವಲ 32 ಎಸೆತಗಳಲ್ಲಿ ಶತಕ ಪೂರೈಸಿದರು. ಇದರೊಂದಿಗೆ, ಟಿ20 ಕ್ರಿಕೆಟ್‌ನಲ್ಲಿ 35 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಶತಕ ಗಳಿಸಿದ ವಿಶ್ವದ ಏಕೈಕ ಆಟಗಾರ ಎಂಬ ದಾಖಲೆ ಬರೆದರು. ಟಿ20 ಕ್ರಿಕೆಟ್‌ನಲ್ಲಿ ಭಾರತಕ್ಕಾಗಿ ಕಡಿಮೆ ಎಸೆತಗಳಲ್ಲಿ ಶತಕ ಪೂರೈಸಿದ ವಿಷಯದಲ್ಲಿ ವೈಭವ್ ಈಗ ರಿಷಭ್ ಪಂತ್‌ ದಾಖಲೆ ಸರಿಗಟ್ಟಿದ್ದಾರೆ. 28 ಎಸೆತಗಳಲ್ಲಿ ಶತಕ ಗಳಿಸಿದ ಉರ್ವಿಲ್ ಪಟೇಲ್ ಮತ್ತು ಅಭಿಷೇಕ್ ಶರ್ಮಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೇ ಈ ಶತಕದ ಮೂಲಕ, 2017ರಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಶತಕ ಗಳಿಸಿದ ರೋಹಿತ್ ಶರ್ಮಾ ಅವರ ದಾಖಲೆಯನ್ನು ವೈಭವ್​ ಮುರಿದರು.

ಅತೀ ಹೆಚ್ಚು ಸಿಕ್ಸರ್​ ದಾಖಲೆ​: ಟಿ20 ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ ಒಂದರಲ್ಲಿ ಭಾರತೀಯ ಆಟಗಾರನೊಬ್ಬ ಸಿಡಿಸಿದ ಅತಿ ಹೆಚ್ಚು ಸಿಕ್ಸರ್‌ಗಳ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಈಗ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ, ಪುನೀತ್ ಬಿಶ್ಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮಿಜೋರಾಂ ವಿರುದ್ಧದ ಪಂದ್ಯದಲ್ಲಿ ಪುನೀತ್ ಒಟ್ಟು 17 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಇದನ್ನೂ ಓದಿ: IND vs SA ಮೊದಲ ಟೆಸ್ಟ್: ಬುಮ್ರಾ ಮಾರಕ ದಾಳಿಗೆ ದಕ್ಷಿಣ ಆಫ್ರಿಕಾ ಪತನ