ETV Bharat / sports

ಯುಎಸ್ ಓಪನ್‌ ಇಂದಿನಿಂದ ಪ್ರಾರಂಭ; ಇಬ್ಬರು ಭಾರತೀಯರು ಕಣಕ್ಕೆ, 25ನೇ ಪ್ರಶಸ್ತಿ ಮೇಲೆ ಜೊಕೊವಿಕ್ ಕಣ್ಣು!!

ಬಹುನಿರೀಕ್ಷಿತ ಯುಎಸ್​ ಓಪನ್​ ಇಂದಿನಿಂದ ಪ್ರಾರಂಭಗೊಳ್ಳಲಿದೆ. ಪಂದ್ಯಾವಳಿಯಲ್ಲಿ ಯಾರೆಲ್ಲ ಕಣಕ್ಕಿಳಿಯುತ್ತಿದ್ದಾರೆ ಎಂಬ ಮಾಹಿತಿ ಈ ಕೆಳಗಿದೆ.

ನೊವಾಕ್ ಜೊಕೊವಿಕ್
ನೊವಾಕ್ ಜೊಕೊವಿಕ್ (AP)
author img

By ETV Bharat Sports Team

Published : August 30, 2026 at 10:13 AM IST

2 Min Read
Choose ETV Bharat

ವರ್ಷದ ಕೊನೆಯ ಮತ್ತು ನಾಲ್ಕನೇ ಗ್ರ್ಯಾಂಡ್ ಸ್ಲ್ಯಾಮ್ ಆಗಿರುವ ಯುಎಸ್ ಓಪನ್‌ ಇಂದಿನಿಂದ ಪ್ರಾರಂಭಗೊಳ್ಳಲಿದೆ. ಇದರಲ್ಲಿ ಹಲವಾರು ಸ್ಟಾರ್​ ಆಟಗಾರರು ಕಣಕ್ಕಿಳಿಸಲು ಸಜ್ಜಾಗಿದ್ದಾರೆ. ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ನೆಚ್ಚಿನ ಆಟಗಾರನಾಗಿ ಪಂದ್ಯಾವಳಿಗೆ ಪ್ರವೇಶಿಸುತ್ತಿದ್ದಾರೆ.

ಮಣಿಕಟ್ಟಿನ ಗಾಯದಿಂದಾಗಿ ನಾಲ್ಕು ತಿಂಗಳ ವಿರಾಮದ ನಂತರ ಪಂದ್ಯಕ್ಕೆ ಮರಳಿರುವ ಸ್ಪ್ಯಾನಿಷ್ ತಾರೆ ಯುಎಸ್ ಓಪನ್‌ನಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂದು ನೋಡಲು ಫ್ಯಾನ್ಸ್​ ಕಾತುರರಾಗಿದ್ದಾರೆ. ಇವರ ಪ್ರಮುಖ ಪ್ರತಿಸ್ಪರ್ಧಿ ಜಾನಿಕ್ ಸಿನ್ನರ್ (ಇಟಲಿ) ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದಿರುವುದರಿಂದ, ಅಲ್ಕರಾಜ್ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಎರಡನೇ ಶ್ರೇಯಾಂಕಿತ ಅಲ್ಕರಾಜ್ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ರೋಮನ್ ಸಫಿಯುಲಿನ್ (ರಷ್ಯಾ) ಅವರನ್ನು ಎದುರಿಸಲಿದ್ದಾರೆ.

ಮಾಜಿ ಚಾಂಪಿಯನ್ ನೊವಾಕ್ ಜೊಕೊವಿಕ್ (ಸೆರ್ಬಿಯಾ) ತಮ್ಮ 25ನೇ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ನಾಲ್ಕನೇ ಶ್ರೇಯಾಂಕಿತ ಜೊಕೊವಿಕ್, ಮೊದಲ ಸುತ್ತಿನಲ್ಲಿ ನವೋನ್ (ಅರ್ಜೆಂಟೀನಾ) ಅವರನ್ನು ಎದುರಿಸಲಿದ್ದಾರೆ. ಇನ್ನು ಫ್ರೆಂಚ್ ಓಪನ್ ಚಾಂಪಿಯನ್ ಅಲೆಕ್ಸಾಂಡರ್ ಜ್ವೆರೆವ್ ಅಗ್ರ ಶ್ರೇಯಾಂಕಿತರಾಗಿ ಟೂರ್ನಿಗೆ ಪ್ರವೇಶಿಸಿದ್ದಾರೆ. ಇವರು ಜರ್ಮನ್ ತಾರೆ ಸೋನೆಗೊ (ಇಟಲಿ) ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ.

ಹ್ಯಾಟ್ರಿಕ್ ಗೆಲುವಿನ ಗುರಿಯಲ್ಲಿ ಸಬಲೆಂಕಾ: ಯುಎಸ್ ಓಪನ್​ನಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಅರಿನಾ ಸಬಲೆಂಕಾ (ಬೆಲಾರಸ್) ಹ್ಯಾಟ್ರಿಕ್ ಪ್ರಶಸ್ತಿ ಗೆಲುವಿನ ಗುರಿಯನ್ನು ಹೊಂದಿದ್ದಾರೆ. ಈ ಅಗ್ರ ಶ್ರೇಯಾಂಕಿತ ಆಟಗಾರ್ತಿ ಮೊದಲ ಸುತ್ತಿನಲ್ಲಿ ಒಸೊರಿಯೊ (ರೊಮೇನಿಯಾ) ಅವರನ್ನು ಎದುರಿಸಲಿದ್ದಾರೆ. ಸಬಲೆಂಕಾ ಇಗಾ ಸ್ವಿಟೆಕ್ (ಪೋಲೆಂಡ್), ಪೆಗುಲಾ (ಯುಎಸ್ಎ), ಕೊಕೊ ಗೌಫ್ (ಯುಎಸ್ಎ) ಮತ್ತು ಆಂಡ್ರೀವಾ (ರಷ್ಯಾ) ಅವರಿಂದ ಸ್ಪರ್ಧೆಯನ್ನು ಎದುರಿಸಲಿದ್ದಾರೆ.

ಎಂಟನೇ ಶ್ರೇಯಾಂಕಿತೆ ಸ್ವಿಟೆಕ್ ಮೊದಲ ಸುತ್ತಿನಲ್ಲಿ ವಾಂಗ್ (ಚೀನಾ) ವಿರುದ್ಧ ಆಡಲಿದ್ದಾರೆ. ನಾಲ್ಕನೇ ಶ್ರೇಯಾಂಕಿತೆ ಗೌಫ್ ಸೋನ್ಮೆಜ್ (ಟರ್ಕಿಯೆ) ಅವರನ್ನು ಎದುರಿಸಲಿದ್ದಾರೆ, ಆದರೆ ಮೂರನೇ ಶ್ರೇಯಾಂಕಿತೆ ಪೆಗುಲಾ ರುಸ್ (ಕೊಲಂಬಿಯಾ) ಅವರನ್ನು ಎದುರಿಸಲಿದ್ದಾರೆ. ನೊಸ್ಕೋವಾ (ಜೆಕ್ ಗಣರಾಜ್ಯ) ಅವರನ್ನು ಸಹ ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ ಆರನೇ ಶ್ರೇಯಾಂಕಿತೆ ಆಟಗಾರ್ತಿ ವೊಲಿನೆಟ್ಸ್ (ಯುಎಸ್ಎ) ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.

ಸೆರೆನಾ ಮತ್ತು ವೀನಸ್ ರಿಟರ್ನ್: ಅಮೆರಿಕದ ದಂತಕಥೆಯ ಜೋಡಿ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಯುಎಸ್ ಓಪನ್‌ನಲ್ಲಿ ಆಡಲು ಸಜ್ಜಾಗಿದ್ದಾರೆ. ವೀನಸ್ (46) ಮತ್ತು ಸೆರೆನಾ (44) ಮಹಿಳಾ ಡಬಲ್ಸ್‌ನಲ್ಲಿ ಸ್ಪರ್ಧಿಸಲು ವೈಲ್ಡ್‌ಕಾರ್ಡ್ ಪ್ರವೇಶವನ್ನು ಪಡೆದಿದ್ದಾರೆ. ವೀನಸ್ ಸಿಂಗಲ್ಸ್ ವಿಭಾಗದಲ್ಲಿಯೂ ಆಡುತ್ತಿದ್ದಾರೆ, ಅಲ್ಲಿ ಅವರು ಮೊದಲ ಸುತ್ತಿನಲ್ಲಿ ಸೋಫಿಯಾ ಕೆನಿನ್ (ಯುಎಸ್ಎ) ಅವರನ್ನು ಎದುರಿಸಲಿದ್ದಾರೆ.

ದೀರ್ಘ ವಿರಾಮದ ನಂತರ, ಸೆರೆನಾ ಈ ವರ್ಷ ವಿಂಬಲ್ಡನ್‌ನಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳಿಗೆ ಮರಳಿದರು ಆದರೆ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಸೋಲನ್ನು ಕಂಡರು. ನಂತರ ಅವರು ಗಾಯದಿಂದಾಗಿ ವೀನಸ್‌ನೊಂದಿಗೆ ಡಬಲ್ಸ್ ಸ್ಪರ್ಧೆಯಿಂದ ಹಿಂದೆ ಸರಿದರು. ಅವರು ಯುಎಸ್ ಓಪನ್‌ನಲ್ಲಿ ಸಿಂಗಲ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಿಲ್ಲ.

ಡಬಲ್ಸ್‌ನಲ್ಲಿ ಭಾರತ ಕಣಕ್ಕೆ

ಯುಎಸ್ ಓಪನ್‌ನಲ್ಲಿ ಸಿಂಗಲ್ಸ್ ಸ್ಪರ್ಧೆಗೆ ಅರ್ಹತೆ ಪಡೆಯಲು ಯಾವುದೇ ಭಾರತೀಯ ಆಟಗಾರರಿಗೆ ಸಾಧ್ಯವಾಗಿಲ್ಲ. ಅರ್ಹತಾ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದ ಸುಮಿತ್ ನಾಗಲ್ ಮೊದಲ ಸುತ್ತಿನಲ್ಲಿಯೇ ಹೊರಬಿದ್ದರು. ಡಬಲ್ಸ್ ಸ್ಪರ್ಧೆಗಳಲ್ಲಿ, ಯೂಕಿ ಭಾಂಬ್ರಿ ಮತ್ತು ಶ್ರೀರಾಮ್ ಬಾಲಾಜಿ ಸ್ಪರ್ಧಿಸಲಿದ್ದಾರೆ. ಯೂಕಿ ಮೈಕೆಲ್ ವೀನಸ್ (ನ್ಯೂಜಿಲೆಂಡ್) ಜೊತೆ ಪಾಲುದಾರಿಕೆ ಮಾಡಿದರೆ, ಬಾಲಾಜಿ ಇವಾನ್ ಕಿಂಗ್ (ಯುಎಸ್ಎ) ಜೊತೆ ಆಡಲಿದ್ದಾರೆ.

ಇದನ್ನೂ ಓದಿ: ಮಹಿಳಾ ಏಷ್ಯಾಕಪ್​ 2026: 7.5 ಓವರ್​ಗಳಲ್ಲೆ ಪಂದ್ಯ ಗೆದ್ದುಕೊಂಡ ಶ್ರೀಲಂಕಾ