ETV Bharat / sports

ಟಿಜಿ20 ಲೀಗ್: ಹೈದರಾಬಾದ್ ಈ ಚಾಂಪಿಯನ್ಸ್​​ಗೆ ಸತತ ಆರನೇ ಗೆಲುವು

ಟಿಜಿ20 ಲೀಗ್‌ನಲ್ಲಿ ಹೈದರಾಬಾದ್ ಈ ಚಾಂಪಿಯನ್ಸ್ ತಂಡವು ಸತತ ಆರನೇ ಗೆಲುವು ದಾಖಲಿಸಿದೆ.

tg20-league-hyderabad-e-champions-versus-karimnagar-diamonds
ಹೈದರಾಬಾದ್ ಈ ಚಾಂಪಿಯನ್ಸ್ ತಂಡದ ಬೌಲರ್​ ಸಂಭ್ರಮ (ETV Bharat)
author img

By ETV Bharat Karnataka Team

Published : July 4, 2026 at 11:07 PM IST

1 Min Read
Choose ETV Bharat

ಹೈದರಾಬಾದ್: ಹೈದರಾಬಾದ್ ಈ ಚಾಂಪಿಯನ್ಸ್ ತಂಡವು ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​(ಹೆಚ್‌ಸಿಎ) ಆಯೋಜಿಸಿರುವ ಟಿಜಿ20 ಲೀಗ್‌ನಲ್ಲಿ ಶನಿವಾರ ಕರೀಂನಗರ ಡೈಮಂಡ್ಸ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಸತತ ಆರನೇ ಗೆಲುವು ದಾಖಲಿಸಿತು.

ಈಗಾಗಲೇ ಪ್ಲೇ-ಆಫ್‌ಗೆ ತಲುಪಿರುವ ಹೈದರಾಬಾದ್ ಈ ಚಾಂಪಿಯನ್ಸ್ ತಂಡವು ಟೂರ್ನಿಯಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದೆ. ತಂಡವು ಸೋಮವಾರ ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅನುರಾಗ್ ನಲ್ಗೊಂಡ ನೈಟ್ಸ್ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಆಡಲಿದೆ.

ಶನಿವಾರ ನಡೆದ ಪಂದ್ಯದಲ್ಲಿ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರೀಂನಗರ ಡೈಮಂಡ್ಸ್ ತಂಡವು ತನ್ನ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 186 ರನ್ ಗಳಿಸಿತು. 187 ರನ್​​ ಗುರಿ ಬೆನ್ನಟ್ಟಿದ ಹೈದರಾಬಾದ್ ಈ ಚಾಂಪಿಯನ್ಸ್ ವೈಷ್ಣವ್ ರೆಡ್ಡಿ (42 ಎಸೆತಗಳಲ್ಲಿ ಔಟಾಗದೆ 65 ರನ್) ಅವರ ಆಕ್ರಮಣಕಾರಿ ಅರ್ಧಶತಕದ ನೆರವಿನಿಂದ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ತಂಡವು ಗೆಲುವಿನ ನಗೆ ಬೀರಿತು.

tg20-league-hyderabad-e-champions-versus-karimnagar-diamonds
ಮಾರ್ಗದರ್ಶಿ ಚಿಟ್ ಫಂಡ್ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ಅವರು ಪಂದ್ಯವನ್ನು ವೀಕ್ಷಿಸುತ್ತಿರುವುದು (ETV Bharat)

ಹೈದರಾಬಾದ್ ಈ ಚಾಂಪಿಯನ್ಸ್ ಪರ ಆರಂಭಿಕ ಆಟಗಾರರಾದ ಅಭಿರತ್ ರೆಡ್ಡಿ 16 ಎಸೆತಗಳಲ್ಲಿ 26 ಮತ್ತು ಸಾಯಿ ವಿಕಾಸ್ ರೆಡ್ಡಿ 17 ಎಸೆತಗಳಲ್ಲಿ 36 ರನ್​ ಬಾರಿಸಿ ಉತ್ತಮ ಆರಂಭ ನೀಡಿದರು. ಅವರು ಮೊದಲ ವಿಕೆಟ್‌ಗೆ 28 ​​ರನ್ ಸೇರಿಸಿದರು.

ಗದಗು ಗಣೇಶ್ 13 ಎಸೆತಗಳಲ್ಲಿ 21 ರನ್​ ಗಳಿಸಿದರು. ವೈಷ್ಣವ್‌ಗೆ ಎರಡನೇ ಉತ್ತಮ ಸಾಥ್​ ನೀಡಿದರು. 12 ನೇ ಓವರ್‌ನಲ್ಲಿ ಗಣೇಶ್ ಪತನಗೊಂಡ ನಂತರ, ವೈಷ್ಣವ್ ಮತ್ತು ಪ್ರಣವ್ ವರ್ಮಾ (21 ಎಸೆತಗಳಲ್ಲಿ ಔಟಾಗದೆ 38) ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡರು. ಈ ಜೋಡಿ ಎದುರಾಳಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿತು.

ವೈಷ್ಣವ್ ಅವರ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ವರ್ಮಾ ನಾಲ್ಕು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಗಳಿಸಿದರು. ತಂಡ ಗೆಲ್ಲುತ್ತಿದ್ದಂತೆ ಡ್ರೆಸ್ಸಿಂಗ್ ಕೋಣೆಯಲ್ಲಿ ಸಂಭ್ರಮಾಚರಣೆಗಳು ಮನೆ ಮಾಡಿತು. ವೈಷ್ಣವ್ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದನ್ನೂ ಓದಿ: ಕಿರಿಯ ವಯಸ್ಸಿಗೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ವೈಭವ್​! 37 ವರ್ಷದ ದಾಖಲೆ ಉಡೀಸ್!!