ETV Bharat / sports

ಜಾನ್ಸೆನ್​ ಸ್ಪೋಟಕ ಬ್ಯಾಟಿಂಗ್​; ಕಿವೀಸ್​ಗೆ ಸಾಮಾನ್ಯ ಗುರಿ ನೀಡಿದ ಹರಿಣ ಪಡೆ

ಟಿ20 ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್​ ಸ್ಫರ್ಧಾತ್ಮಕ ಮೊತ್ತವನ್ನು ಕಲೆಹಾಕಿದೆ.

ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್​ ಸೆಮಿಫೈನಲ್​
ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್​ ಸೆಮಿಫೈನಲ್​ (ETV Bharat Graphics)
author img

By ETV Bharat Sports Team

Published : March 4, 2026 at 6:45 PM IST

|

Updated : March 4, 2026 at 8:50 PM IST

3 Min Read
Choose ETV Bharat

SA vs NZ Semi Final Match: ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್​ ಪಂದ್ಯ ಇಂದು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್​ ​ ತಂಡಗಳ ಮಧ್ಯೆ ನಡೆಯುತ್ತಿದೆ. ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 169 ರನ್​ಗಳನ್ನು ಕಲೆಹಾಕಿತು.

ಕಳಪೆ ಆರಂಭದ ನಡುವೆಯೂ ಮಾರ್ಕೊ ಜಾನ್ಸೆನ್​ ಬ್ರೆವಿಸ್​ ಬ್ಯಾಟಿಂಗ್​ ಬಲದಿಂದ ಸಾಮಾನ್ಯ ಮೊತ್ತವನ್ನು ಕಲೆಹಾಕಿತು. ಇನ್ನಿಂಗ್ಸ್​ ಆರಂಭಿಸಿದ ದಕ್ಷಿಣ ಆಫ್ರಿಕಾ 12 ರನ್​ಗಳಿಗೆ 2 ವಿಕೆಟ್​ಗಳನ್ನು ಕಳೆದುಕೊಂಡಿತು. ಡಿಕಾಕ್ 10 ರನ್​ ಗಳಿಸಿ ನಿರ್ಗಮಿಸಿದರೇ, ರಿಕಲ್ಟನ್​ ಡಕೌಟ್​ ಆದರು. ಬಳಿಕ ಮಾಕ್ರಮ್​ ಮತ್ತು ಬ್ರೆವಿಸ್​ 42 ರನ್​ಗಳ ಜೊತೆಯಾಟ ಆಡಿ ಇನ್ನಿಂಗ್ಸ್​ ಸುಧಾರಿಸಲು ಪ್ರಯತ್ನಿಸಿದರು. ಆದಾಗ್ಯೂ ಮಾರ್ಕ್ರಮ್ 18 ರನ್​ಗಳಿಸಿ ನಿರ್ಗಮಿಸಿದರು. 34 ರನ್​ಗಳಿಸಿದ ಬ್ರೆವಿಸ್​ ಸುಲಭವಾಗಿ ವಿಕೆಟ್​ ಕಳೆದುಕೊಂಡರು. ಬಳಿಕ ಬಂದವರಲ್ಲಿ ಟ್ರಿಸ್ಟನ್​ ಸ್ಟಬ್ಸ್​ (29 ರನ್​), ಮಾರ್ಕೊ ಜಾನ್ಸೆನ್​ (55) ಅರ್ಧಶತಕ ಸಿಡಿಸಿದ್ದು ಬಿಟ್ಟರೇ ಉಳಿದ ಯಾವುದೇ ಆಟಗಾರರ ಎರಡಂಕಿ ಸ್ಕೋರ್​ ಅನ್ನು ತಲುಪಲೂ ಸಹ ಸಾಧ್ಯವಾಗಲಿಲ್ಲ. ಜಾನ್ಸೆನ್ 30 ಎಸೆತಗಳಲ್ಲಿ 5 ಸಿಕ್ಸರ್​ ಮತ್ತು 2 ಬೌಂಡರಿ ಸಹಾಯದಿಂಸ ಅಜೇಯವಾಗಿ 55 ರನ್​ ಗಳಿಸಿದರು. ನ್ಯೂಜಿಲೆಂಡ್​ ಪರ ಮ್ಯಾಟ್​ ಹೆನ್ರಿ, ಮೆಕಾನಿಚೆ, ರವೀಂದ್ರ ತಲಾ 2 ವಿಕೆಟ್​ ಪಡೆದುಕೊಂಡರು.​

ಈ ಪಂದ್ಯದಲ್ಲಿ ಕಿವಿಸ್​ ಪಡೆ ಎರಡು ಬದಲಾವಣೆಗಳನ್ನು ಮಾಡಿದ್ದು, ಮ್ಯಾಟ್ ಹೆನ್ರಿ ಮತ್ತು ಜೇಮ್ಸ್ ನೀಶಮ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಲಾಗಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದ್ದು, ಕಗಿಸೊ ರಬಾಡ, ಮಾರ್ಕೊ ಜಾನ್ಸನ್ ಮತ್ತು ಕೇಶವ್ ಮಹಾರಾಜ್ ಅವರನ್ನು ಆಡುವ ಹನ್ನೊಂದರೊಳಗೆ ಸೇರಿಸಿಕೊಳ್ಳಲಾಗಿದೆ.

ಹೆಡ್​ ಟು ಹೆಡ್​ ದಾಖಲೆ: ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಇಲ್ಲಿಯವರೆಗೆ ಒಟ್ಟು 19 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ, ದಕ್ಷಿಣ ಆಫ್ರಿಕಾ 12 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ ಕೇವಲ 7 ಬಾರಿ ಮಾತ್ರ ಗೆಲುವು ಸಾಧಿಸಿದೆ. ಗಮನಿಸಬೇಕಾದ ಅಂಶ ಎಂದರೆ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟಿ20 ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ.

ಎರಡೂ ತಂಡಗಳು ಇಲ್ಲಿಯವರೆಗೆ ಐಸಿಸಿ ಟೂರ್ನಿಗಳಲ್ಲಿ ಮೂರು ನಾಕೌಟ್ ಪಂದ್ಯಗಳನ್ನು ಆಡಿವೆ. ಈ ಮೂರು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಕಳಪೆ ದಾಖಲೆ ಹೊಂದಿದೆ. ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ವಿರುದ್ಧ ಐಸಿಸಿ ನಾಕೌಟ್ ಪಂದ್ಯವನ್ನು ಎಂದಿಗೂ ಗೆದ್ದಿಲ್ಲ. ಈ ಪಂದ್ಯವನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ಕೆಟ್ಟ ದಾಖಲೆಯನ್ನು ಅಳಿಸಿ ಹಾಕಲು ಎದುರು ನೋಡುತ್ತಿದೆ.

ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಐಸಿಸಿ ನಾಕೌಟ್ ಪಂದ್ಯವು 2011ರ ಏಕದಿನ ವಿಶ್ವಕಪ್‌ನಲ್ಲಿ ನಡೆಯಿತು. ಅದು ಕ್ವಾರ್ಟರ್ ಫೈನಲ್ ಆಗಿತ್ತು. ಢಾಕಾದಲ್ಲಿ ನಡೆದಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡ ದಕ್ಷಿಣ ಆಫ್ರಿಕಾವನ್ನು 49 ರನ್‌ಗಳಿಂದ ಸೋಲಿಸಿತ್ತು.

ನಂತರ ಕಿವೀಸ್ ಪಡೆ 2015ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿತ್ತು. ಆಕ್ಲೆಂಡ್‌ನಲ್ಲಿ ನಡೆದ ಮಳೆ ಪೀಡಿತ ಪಂದ್ಯವನ್ನು ನ್ಯೂಜಿಲೆಂಡ್ ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಐಸಿಸಿ ನಾಕೌಟ್ ಪಂದ್ಯದಲ್ಲಿ ಎರಡೂ ತಂಡಗಳು ಮೂರನೇ ಬಾರಿಗೆ ಪರಸ್ಪರ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲೂ, ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾವನ್ನು 50 ರನ್‌ಗಳಿಂದ ಸೋಲುಣಿಸಿತ್ತು. ಈ ಅಂಕಿ- ಅಂಶಗಳು ನಾಕೌಟ್​ ಪಂದ್ಯಗಳಲ್ಲಿ ನ್ಯೂಜಿಲೆಂಡ್​ ಬಲಿಷ್ಠತೆಯನ್ನು ಎತ್ತಿತೋರಿಸುತ್ತದೆ.

ಪ್ಲೇಯಿಂಗ್​ ಇಲೆವೆನ್ - ನ್ಯೂಜಿಲೆಂಡ್: ಟಿಮ್ ಸೀಫರ್ಟ್(ವಿಕೆಟ್ ಕೀಪರ್), ಫಿನ್ ಅಲೆನ್, ರಾಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್(ನಾಯಕ), ಕೋಲ್ ಮೆಕ್‌ಕೊಂಚಿ, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್

ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ಐಡೆನ್ ಮಾರ್ಕ್ರಮ್(ನಾಯಕ), ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ರಯಾನ್ ರಿಕಲ್ಟನ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ.

ಇದನ್ನೂ ಓದಿ: ಭಾರತವನ್ನು ತಮ್ಮದೇ ಅಭಿಮಾನಿಗಳ ಮುಂದೆ ಸೋಲಿಸುತ್ತೇವೆ; ಇಂಗ್ಲೆಂಡ್ ಖಡಕ್​ ವಾರ್ನಿಂಗ್

Last Updated : March 4, 2026 at 8:50 PM IST