ETV Bharat / sports

ವೈಭವ್​ ಸೂರ್ಯವಂಶಿ ಕುರಿತು ದೊಡ್ಡ ಹೇಳಿಕೆ ನೀಡಿದ ಕಿವೀಸ್ ಬೌಲರ್! ​

ವೈಭವ್​ ಸೂರ್ಯವಂಶಿ ಕುರಿತು ನ್ಯೂಜಿಲೆಂಡ್​ ಸ್ಟಾರ್​ ಬೌಲರ್ ದೊಡ್ಡ ಹೇಳಿಕೆ ನೀಡಿದ್ದಾರೆ. ​

ವೈಭವ್​ ಸೂರ್ಯವಂಶಿ
ವೈಭವ್​ ಸೂರ್ಯವಂಶಿ (IANS)
author img

By ETV Bharat Sports Team

Published : October 11, 2026 at 5:25 PM IST

2 Min Read
Choose ETV Bharat

ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಸರಣಿ ಬೆನ್ನಲ್ಲೆ ಈ ತಿಂಗಳು ಕೊನೆಯಲ್ಲಿ ಟೀಮ್​ ಇಂಡಿಯಾ ನ್ಯೂಜಿಲೆಂಡ್​ ಪ್ರವಾಸ ಕೈಗೊಳ್ಳಲಿದೆ. ಈ ದೀರ್ಘ ಪ್ರವಾಸದಲ್ಲಿ ಭಾರತ ಎಲ್ಲಾ ಮೂರು ಸ್ವರೂಪಗಳಲ್ಲಿ ಪಂದ್ಯಗಳನ್ನು ಆಡಲಿದೆ. ಟಿ20 ಸರಣಿಯೊಂದಿಗೆ ಪಂದ್ಯಾವಳಿಗಳು ಪ್ರಾರಂಭಗೊಳ್ಳಲಿವೆ. ಈಗಾಗಲೇ ಟಿ20 ಸರಣಿಗಾಗಿ ಎರಡೂ ತಂಡಗಳು ಪ್ರಕಟಗೊಂಡಿವೆ. ಏತನ್ಮಧ್ಯೆ ಕಿವೀಸ್​ ವೇಗಿ ಲಾಕಿ ಫರ್ಗಿಸನ್​ ಈ ಟಿ20 ಸರಣಿಗಾಗಿ ತಾವು ಉತ್ಸುಕುರಾಗಿದ್ದಾಗಿ ತಿಳಿಸಿದ್ದಾರೆ.

ಇದೇ ವೇಳೆ ಯುವ ಸ್ಫೋಟಕ ಹಿಟ್ಟರ್​ ವೈಭವ್​ ಸೂರ್ಯವಂಶಿ ಕುರಿತು ಪ್ರಮುಖ ಹೇಳಿಕೆ ನೀಡಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿ ಅದ್ಭುತ ಪ್ರತಿಭೆಯನ್ನು ತೋರಿಸುತ್ತಿರುವ ವೈಭವ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಬರುವುದರಲ್ಲಿ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ. ಅವರನ್ನು ಅಸಾಧಾರಣ ಪ್ರತಿಭೆ ಎಂದು ಹೊಗಳಿದ ಅವರು ಐಪಿಎಲ್‌ನಲ್ಲಿ ವೈಭವ್ ಆಟ ನೋಡಿದ್ದೇನೆ. ಟಿ20 ಸರಣಿಯಲ್ಲಿ ಅವರಿಗೆ ಬೌಲಿಂಗ್ ಮಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

"ಐಪಿಎಲ್‌ನಲ್ಲಿ ವೈಭವ್ ಆಟವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ಪ್ರತಿಭಾನ್ವಿತ ಆಟಗಾರ. 14ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿ ಸತತ ಎರಡು ಋತುಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಂತಹ ಅಸಾಧಾರಣ ಪ್ರತಿಭೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವುದರಲ್ಲಿ ಆಶ್ಚರ್ಯವೇನಿಲ್ಲ. ನ್ಯೂಜಿಲೆಂಡ್ ಸರಣಿಯಲ್ಲಿ ವೈಭವ್‌ಗೆ ಬೌಲಿಂಗ್ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಇದು ನಮ್ಮ ದೇಶಕ್ಕೆ ವೈಭವ್ ಅವರ ಮೊದಲ ಪ್ರವಾಸವಾಗಿರಬಹುದು. ಅವರು ಇಲ್ಲಿನ ಪರಿಸ್ಥಿತಿಗಳಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ನೋಡಲು ಬಯಸುತ್ತೇನೆ" ಎಂದು ಫರ್ಗುಸನ್ ಬಹಿರಂಗಪಡಿಸಿದರು.

ಟಿ20 ಸರಣಿಯಿಂದ ಚಾಪ್ಮನ್ ಮತ್ತು ಫೌಲ್ಕ್ಸ್ ಔಟ್

ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಮಾರ್ಕ್ ಚಾಪ್‌ಮನ್ ಮತ್ತು ಜ್ಯಾಕ್ ಫೌಲ್ಕ್ಸ್ ಸರಣಿ ಆರಂಭಕ್ಕೂ ಮೊದಲೆ ಗಾಯದಿಂದ ಹೊರ ಬಿದ್ದಿದ್ದಾರೆ. ಈ ಇಬ್ಬರು ಆಟಗಾರರು ಹೊರಗುಳಿದ ಬೆನ್ನಲ್ಲೆ ನ್ಯೂಜಿಲೆಂಡ್ ಕ್ರಿಕೆಟ್, ಜೋಶ್ ಕ್ಲಾರ್ಕ್ಸನ್ ಮತ್ತು ಬ್ಲೇರ್ ಟಿಕ್ನರ್ ಅವರನ್ನು ಟಿ20 ತಂಡದಲ್ಲಿ ಸೇರಿಸಿಕೊಂಡಿದೆ.

ಟಿ20 ಸರಣಿಗೆ ಎರಡೂ ತಂಡಗಳು

ಭಾರತ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪನಾಯಕ), ಅಕ್ಷರ್ ಪಟೇಲ್, ಶಿವಂ ದುಬೆ, ನಿತೀಶ್ ರೆಡ್ಡಿ, ನಮನ್ ಧೀರ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್.

ನ್ಯೂಜಿಲೆಂಡ್​: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಜೋಶ್ ಕ್ಲಾರ್ಕ್ಸನ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಬೆವನ್ ಜಾಕೋಬ್ಸ್, ಕೈಲ್ ಜೇಮಿಸನ್, ಆಡಮ್ ಮಿಲ್ನೆ, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಿಮ್ ಸೀಫರ್ಟ್, ನಾಥನ್ ಸ್ಮಿತ್, ಬ್ಲೇರ್ ಟಿಕ್ನರ್.

ಭಾರತ ನ್ಯೂಜಿಲೆಂಡ್​ ಟಿ20 ಸರಣಿ

ಭಾರತ ತಂಡವು ಅಕ್ಟೋಬರ್ 22 ರಿಂದ ನವೆಂಬರ್ 1 ರವರೆಗೆ ನ್ಯೂಜಿಲೆಂಡ್‌ನಲ್ಲಿ ಐದು ಟಿ20 ಪಂದ್ಯಗಳನ್ನು ಆಡಲಿದೆ. ಸರಣಿಯ ಮೊದಲ ಪಂದ್ಯ ಅಕ್ಟೋಬರ್ 22 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಅಕ್ಟೋಬರ್ 24 ರಂದು ಇದೇ ನಗರದಲ್ಲಿ ನಡೆಯಲಿದೆ. ಮೂರನೇ ಟಿ20 ಪಂದ್ಯ ಅಕ್ಟೋಬರ್ 27 ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದ್ದು, ನಾಲ್ಕನೇ ಮತ್ತು ಐದನೇ ಪಂದ್ಯಗಳು ಕ್ರಮವಾಗಿ ಅಕ್ಟೋಬರ್ 30 ಮತ್ತು ನವೆಂಬರ್ 1 ರಂದು ಆಕ್ಲೆಂಡ್ ಮತ್ತು ಹ್ಯಾಮಿಲ್ಟನ್‌ನಲ್ಲಿ ನಡೆಯಲಿವೆ. ಟಿ20 ಸರಣಿಯ ನಂತರ, ಭಾರತ ಮತ್ತು ನ್ಯೂಜಿಲೆಂಡ್ ಐದು ಪಂದ್ಯಗಳ ಏಕದಿನ ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಸಹ ಆಡಲಿವೆ.

ಇದನ್ನೂ ಓದಿ

ಟೆಸ್ಟ್​ ಕ್ರಿಕೆಟ್​ನಲ್ಲಿ ಬಾಂಗ್ಲಾ ಬೌಲರ್​ ಕಮಾಲ್; ದಾಖಲೆ ಸೃಷ್ಟಿ

ಯುನಿಸೆಫ್​ ಇಂಡಿಯಾ ಸೆಲೆಬ್ರಿಟಿ ಅಡ್ವೊಕೇಟ್​ ಆಗಿ ಸ್ಮೃತಿ ಮಂಧಾನ ನೇಮಕ

ಅಚ್ಚರಿ! ಭಾರತ ವಿರುದ್ಧದ ಏಕದಿನ ಸರಣಿಗೆ ಎರಡು ತಂಡ ಪ್ರಕಟಿಸಿದ ನ್ಯೂಜಿಲೆಂಡ್