ETV Bharat / sports

ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇ-ಆಫ್‌, ಮೊದಲ ದಿನ ಸ್ಲೊವೇನಿಯಾ ಪ್ರಾಬಲ್ಯ

ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇ-ಆಫ್ ಪಂದ್ಯದ ಮೊದಲ ದಿನದಂ ಸ್ಲೊವೇನಿಯಾ ಅದ್ಭುತ ಪ್ರದರ್ಶನ ನೀಡಿ ಪ್ರಾಬಲ್ಯ ಸಾಧಿಸಿದೆ.

ಸ್ಲೊವೇನಿಯಾ ಅರಾಂಟ್ಕ್ಸಾ ರಸ್
ಸ್ಲೊವೇನಿಯಾ ಅರಾಂಟ್ಕ್ಸಾ ರಸ್ (BJK Cup 2025)
author img

By ETV Bharat Sports Team

Published : November 15, 2025 at 10:56 AM IST

2 Min Read
Choose ETV Bharat

ಬೆಂಗಳೂರು: ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇ-ಆಫ್ ಅಭಿಯಾನವನ್ನು ಸ್ಲೊವೇನಿಯಾ ಪ್ರಬಲವಾಗಿ ಆರಂಭಿಸಿದೆ. ಬೆಂಗಳೂರಿನ ಎಸ್.ಎಂ.ಕೃಷ್ಣ ಟೆನ್ನಿಸ್ ಕ್ರೀಡಾಂಗಣದಲ್ಲಿ ಮೊದಲ ದಿನ ನಡೆದ ಪಂದ್ಯಗಳಲ್ಲಿ ತಮಾರಾ ಜಿಡಾನ್ಸೆಕ್ ಮತ್ತು ಕಾಜಾ ಜುವಾನ್ ಅವರ ಕಠಿಣ ಸಿಂಗಲ್ಸ್ ಗೆಲುವಿನ ಬಳಿಕ ನೆದರ್ಲ್ಯಾಂಡ್ಸ್ ವಿರುದ್ಧ ಸ್ಲೊವೇನಿಯಾ 2-1ರ ಮುನ್ನಡೆ ಸಾಧಿಸಿತು.

ದಿನದ ಮೊದಲ ಪಂದ್ಯದಲ್ಲಿ ವಿಶ್ವದ 162ನೇ ಶ್ರೇಯಾಂಕದ ಜಿಡಾನ್ಸೆಕ್ 6-1, 7-6 (8-6) ಅಂತರದಲ್ಲಿ ಉನ್ನತ ಶ್ರೇಯಾಂಕಿತ ಅರಾಂಟ್ಕ್ಸಾ ರಸ್ ಅವರನ್ನು ಮಣಿಸಿದರು. ಸ್ಲೊವೇನಿಯನ್ ಆಟಗಾರ್ತಿ 3-1 ಮುನ್ನಡೆ ಸಾಧಿಸುವ ಮೂಲಕ ಆರಂಭಿಕ ಹಂತದಲ್ಲಿಯೇ ಪಂದ್ಯವನ್ನು ಶುಭಾರಂಭ ಮಾಡಿದರು ಮತ್ತು ಮೊದಲ ಸೆಟ್‌ನಾದ್ಯಂತ ಪ್ರಬಲ ಹಿಡಿತ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಪ್ರಬಲ ಪ್ರತಿರೋಧದಿಂದ ರಸ್ 5-5ರಲ್ಲಿ ಸಮಬಲ ಸಾಧಿಸಿದರಾದರು. ಅಂತಿಮ ಟೈ ಬ್ರೇಕಿಂಗ್ ನಂತರ ಜಿಡಾನ್ಸೆಕ್ ಮುನ್ನಡೆ ಕಾಪಾಡಿಕೊಂಡರು. ಮತ್ತು ನೇರ ಸೆಟ್‌ಗಳ ಮೂಲಕ ಜಯ ಸಾಧಿಸಿದರು.

ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇ-ಆಫ್‌ ಪಂದ್ಯ
ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇ-ಆಫ್‌ ಪಂದ್ಯ (BJK Cup 2025)

'ಇಂದು ನಾನು ಉತ್ತಮವಾಗಿ ಸರ್ವ್ ಮಾಡಿದ್ದೇನೆ ಎಂದು ಭಾವಿಸುತ್ತೇನೆ, ಮತ್ತು ಈ ಗೆಲುವು ನನಗೆ ನಿಜಕ್ಕೂ ಸಂತಸ ತಂದಿದೆ. ಎರಡನೇ ಸೆಟ್‌ನಲ್ಲಿ ರಸ್ ಮುನ್ನಡೆಗೆ ಯತ್ನಿಸಿದರು. ನಾನು ನನ್ನ ತಂತ್ರಗಳ ಮೂಲಕ ಉತ್ತಮ ಆಟ ಮುಂದುವರಿಸಿದೆ' ಎಂದು ಗೆಲುವಿನ ಬಳಿಕ ಜಿಡಾನ್ಸೆಕ್ ಹೇಳಿದರು.

ಎರಡನೇ ಪಂದ್ಯದಲ್ಲಿ ಸ್ಲೊವೇನಿಯಾ ತನ್ನ ಮುನ್ನಡೆಯನ್ನು ವಿಸ್ತರಿಸಿತು. ವಿಶ್ವದ 98ನೇ ಶ್ರೇಯಾಂಕದ ಕಾಜಾ ಜುವಾನ್, ನೆದರ್‌ಲ್ಯಾಂಡ್ಸ್‌ನ ಅಗ್ರ ಶ್ರೇಯಾಂಕಿತ ಆಟಗಾರ್ತಿ ಸುಜಾನ್ ಲ್ಯಾಮೆನ್ಸ್ (ನಂ. 87) ಅವರನ್ನು 7-6 (7-5), 4-6, 6-3 ಸೆಟ್‌ಗಳಿಂದ ಹಿಂದಿಕ್ಕಿದರು. ಲ್ಯಾಮೆನ್ಸ್ ಆರಂಭಿಕ ಸೆಟ್‌ನ ಹೆಚ್ಚಿನ ಭಾಗವನ್ನು ನಿಯಂತ್ರಿಸಿದರು, 5-2 ಮುನ್ನಡೆಗೆ ಏರಿದರು. ಆದರೆ ಪುನಃ ಪ್ರತಿರೋಧ ಮುಂದುವರೆಸಿದ ಜುವಾನ್ ಟೈ-ಬ್ರೇಕ್ ಗೆದ್ದು ಬೀಗಿದರು.

'ಲ್ಯಾಮೆನ್ಸ್ 4-1ರವರೆಗೆ ಉತ್ತಮವಾಗಿ ಆಡಿದರು ಎಂದು ನಾನು ಭಾವಿಸುತ್ತೇನೆ. ಆದರೆ ಮೂರನೇ ಸೆಟ್‌ನಲ್ಲಿ ನಾನು ನಿಜವಾಗಿಯೂ ಹೋರಾಡಲು ಮತ್ತು ಅಲ್ಲಿಯೇ ಉಳಿಯಲು ಪ್ರಯತ್ನಿಸಿದೆ. ಅದರಿಂದ ಎದುರಾಳಿಗೆ ಗೆಲುವನ್ನ ಕಠಿಣಗೊಳಿಸಲು ಸಾಧ್ಯವಾಯಿತು ಎಂದ ಜುವಾನ್, ತವರು ಮೈದಾನಕ್ಕಿಂತ ಬೆಂಗಳೂರಿನಲ್ಲಿ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ, ಇಲ್ಲಿ ಹೆಚ್ಚು ಎತ್ತರದಲ್ಲಿದ್ದೇವೆ' ಎನಿಸುತ್ತದೆ ಎಂದರು.

ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇ-ಆಫ್‌ ಪಂದ್ಯ
ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇ-ಆಫ್‌ ಪಂದ್ಯ (BJK Cup 2025)

ದಿನದ ಅಂತಿಮ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್‌ನ ಸುಜಾನ್ ಲ್ಯಾಮೆನ್ಸ್ ಮತ್ತು ಡೆಮಿ ಶುರ್ಸ್ ಸ್ಲೊವೇನಿಯಾದ ದಲಿಲಾ ಜಕುಪೋವಿಕ್ ಮತ್ತು ನಿಕಾ ರಾಡಿಸಿಕ್ ವಿರುದ್ಧ ಕಣಕ್ಕಿಳಿದರು. ಸ್ಲೊವೇನಿಯನ್ನರು 2-0 ಮುನ್ನಡೆಗಾಗಿ ಮೊದಲ ಬ್ರೇಕ್ ಪಡೆದರೂ, ಡಚ್ ಜೋಡಿ ತ್ವರಿತವಾಗಿ ಪ್ರತಿಕ್ರಿಯಿಸಿತು. 4-3 ಮುನ್ನಡೆ ಸಾಧಿಸಿದ ಡಚ್ ಜೋಡಿ ಆ ಆವೇಗವನ್ನ ಮುಂದುವರಿಸಿ ಮೊದಲ ಸೆಟ್‌ನಲ್ಲಿ 6-4ರಿಂದ ಮುನ್ನಡೆ ಕಾಪಾಡಿಕೊಂಡಿತು. ಎರಡನೇ ಸೆಟ್‌ನಲ್ಲಿ ಲ್ಯಾಮೆನ್ಸ್ ಮತ್ತು ಶುರ್ಸ್ ಜೋಡಿ ಸಂಪೂರ್ಣ ಹಿಡಿತದ ಮೂಲಕ 2-0ರ ಮುನ್ನಡೆ ಸಾಧಿಸಿದರು. ಮತ್ತು 6-4, 6-0 ಅಂತರದ ಸಮಗ್ರ ಜಯ ಸಾಧಿಸಿತು.

ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇ-ಆಫ್‌ ಪಂದ್ಯ
ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇ-ಆಫ್‌ ಪಂದ್ಯ (BJK Cup 2025)

2-1 ಮುನ್ನಡೆಯೊಂದಿಗೆ ಸ್ಲೊವೇನಿಯಾ ಇಂದಿನ ಪಂದ್ಯಗಳಿಗೆ ಸಿದ್ಧವಾಗಿದೆ. ಇಂದು ಆತಿಥೇಯ ಭಾರತವನ್ನ ಸ್ಲೋವೇನಿಯಾ ಎದುರಿಸಲಿದೆ. ಭಾರತೀಯ ತಂಡದಲ್ಲಿ ಸಹಜಾ ಯಮಲಪಲ್ಲಿ, ಶ್ರೀವಲ್ಲಿ ಭಾಮಿಡಿಪತಿ, ಅಂಕಿತಾ ರೈನಾ, ರಿಯಾ ಭಾಟಿಯಾ ಮತ್ತು ಡಬಲ್ಸ್ ವಿಭಾಗದಲ್ಲಿ ಪ್ರಾರ್ಥನಾ ಥೋಂಬರೆ ಇದ್ದಾರೆ.

ಇದನ್ನೂ ಓದಿ: 15 ಸಿಕ್ಸರ್​, 11 ಬೌಂಡರಿ, 144 ರನ್​; ವೈಭವ್​ ಸೂರ್ಯವಂಶಿ ಆರ್ಭಟಕ್ಕೆ ವಿಶ್ವದಾಖಲೆ ಸೃಷ್ಟಿ