"ವೈಭವ್ ಸೂರ್ಯವಂಶಿ ಕೇವಲ ಟ್ರೈಲರ್ ಮಾತ್ರ ತೋರಿಸಿದ್ದಾರೆ": ಅಶ್ವಿನ್
ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಯಲ್ಲಿ ವೈಭವ್ ಸೂರ್ಯವಂಶಿ ಕೇವಲ ಟ್ರೈಲರ್ ಮಾತ್ರ ತೋರಿಸಿದ್ದಾರೆ ಎಂದು ಆರ್ ಅಶ್ವಿನ್ ಹೇಳಿದ್ದಾರೆ.


Published : July 6, 2026 at 5:32 PM IST
ವೈಭವ್ ಸೂರ್ಯವಂಶಿ ಭಾರತೀಯ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರು ಕೇವಲ 15 ವರ್ಷ ಮತ್ತು 99 ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪ್ರವೇಶ ಮಾಡಿದರು. ಇಂಗ್ಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ, ಅವರು 10 ಎಸೆತಗಳಲ್ಲಿ 14 ರನ್ ಗಳಿಸಿದರು. ಆದರೆ ವಿಲ್ ಜ್ಯಾಕ್ಸ್ ಅವರ ಎಸೆತವನ್ನು ಆಡಲು ಮುಂದಾದ ನಂತರ ಸ್ಟಂಪ್ ಔಟಾದರು. ಆದಾಗ್ಯೂ, ಅವರು "ಟ್ರೇಲರ್" ಮಾತ್ರ ತೋರಿಸಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
"ಜೋಫ್ರಾ ಆರ್ಚರ್ ಮತ್ತು ಜೋಶ್ ಟಂಗ್ ಅವರ ಬೌಲಿಂಗ್ ವಿರುದ್ಧ ವೈಭವ್ ಸೂರ್ಯವಂಶಿ ಆಕ್ರಮಣಕಾರಿಯಾಗಿ ಆಡಿದ ರೀತಿ ನನಗೆ ನಿಜವಾಗಿಯೂ ಇಷ್ಟವಾಯಿತು. ವೈಭವ್ ಆ 'ಟ್ರೇಲರ್'ನಲ್ಲಿಯೇ ತಮ್ಮ ಉದ್ದೇಶವನ್ನು ಬಹಿರಂಗಪಡಿಸಿದರು. ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಿರ್ಭೀತವಾಗಿ ಆಡಿದರು. ಅವರ ಮುಖದಲ್ಲಿ ಭಯ ಅಥವಾ ಒತ್ತಡದ ಯಾವುದೇ ಲಕ್ಷಣವಿರಲಿಲ್ಲ. ಅವರು ಆಕ್ರಮಣಕಾರಿ ಆಟವನ್ನು ಆಡಲೆಂದೇ ಈ ಸ್ಟೇಜ್ನಲ್ಲಿದ್ದಾರೆ ಅದರ ಬಗ್ಗೆ ಯಾವುದೇ ಸಂದೇಹವಿಲ್ಲ".
First international career Six for Vaibhav Sooryavanshi!🤯🔥 pic.twitter.com/SzuWIScjQM
— HOVERCRAFT (@HOVERCRAFT50167) July 4, 2026
"ಈ ಬಾಲಕ ಇದೀಗ ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದು ನನಗೆ ಖುಷಿತಂದಿದೆ. ಅವರು ತಮ್ಮ ದೀರ್ಘಕಾಲೀನ ವೃತ್ತಿಜೀವನವನ್ನು ಹೇಗೆ ರೂಪಿಸಿಕೊಳ್ಳುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಆದಾಗ್ಯೂ, ಅವರಿಗೆ ಖಂಡಿತವಾಗಿಯೂ ಉತ್ತಮ ಆಟವಾಡುವ ಸಾಮರ್ಥ್ಯವಿದೆ. ವೈಭವ್ ಅವರನ್ನು ಬೇರೆ ಯಾರೊಂದಿಗೂ ಹೋಲಿಸಬಾರದು. ಅವರು ಕೇವಲ ವೈಭವ್ ಸೂರ್ಯವಂಶಿ ಆಗಿಯೇ ಇರಬೇಕು. ಅವರನ್ನು 'ಮುಂದಿನ ಬ್ರಾಡ್ಮನ್' ಅಥವಾ 'ಮುಂದಿನ ಸಚಿನ್' ಎಂದು ಹಣೆಪಟ್ಟಿ ಕಟ್ಟಬಾರದು. ಅವರ ಪ್ರಯಾಣವು ನೋಡೋಣ ಮತ್ತು ಅವರು ಕಲಿಯುವುದನ್ನು ತಂಡದೊಂದಿಗೆ ಮುಂದುವರಿಯಲೆಂದು ಆಶಿಸೋಣ," ಎಂದು ಅಶ್ವಿನ್ ಹೇಳಿದರು.
ಭಯಪಡುವ ಅಗತ್ಯವಿಲ್ಲ!: "ಟಿ20 ವಿಶ್ವಕಪ್ ಮತ್ತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಇನ್ನೂ ಸಮಯವಿದೆ. ಪ್ರಸ್ತುತ ವೈಫಲ್ಯಗಳ ಬಗ್ಗೆ ತಂಡದ ಆಟಗಾರರು ಚಿಂತಿಸುವ ಅಗತ್ಯವಿಲ್ಲ. ನಕಾರಾತ್ಮಕ ಟೀಕೆಗಳು ಬಹಳ ಬೇಗನೆ ಇಂಪ್ಯಾಕ್ಟ್ ಬೀಳುತ್ತದೆ ಹಾಗಾಗಿ ಇವುಗಳ ಬಗ್ಗೆ ಹೆಚ್ಚಿನ ಗಮನ ಕೊಡದಿರಿ. ಪ್ರಸ್ತುತ ತಂಡದಲ್ಲಿರುವ ಆಟಗಾರರಿಗೆ ಸಾಕಷ್ಟು ಸಮಯವಿದೆ. ವೈಫಲ್ಯವನ್ನು ಅನುಭವಿಸದೇ ಯಾರೂ ಯಶಸ್ಸ ಕಂಡಿಲ್ಲ. ಹಿರಿಯರು ಕ್ರಮೇಣ ಮುಂದುವರೆದಂತೆ ಯುವ ಕ್ರಿಕೆಟಿಗರು ಅವರ ಹೆಜ್ಜೆ ಅನುಸರಿಸುತ್ತಿದ್ದಾರೆ. ಅವರು ವೈಫಲ್ಯವನ್ನು ಸ್ವೀಕರಿಸದ ಹೊರತು, ಭವಿಷ್ಯದಲ್ಲಿ ಅವರು ಮಾಸ್ಟರ್ ಕ್ರಿಕೆಟಿಗರಾಗಿ ಬೆಳೆಯಲು ಸಾಧ್ಯವಿಲ್ಲ" ಎಂದು ಅಶ್ವಿನ್ ಹೇಳಿದರು.

ಎರಡನೇ ಟಿ20ಯಲ್ಲಿ ಸೋಲು!: ಏತನ್ಮಧ್ಯೆ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಯಲ್ಲಿ ಭಾರತ ಸೋಲು ಕಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 7 ವಿಕೆಟ್ ನಷ್ಟಕ್ಕೆ 190 ರನ್ಗಳನ್ನು ಕಲೆಹಾಕಿತ್ತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಬಳಿಕ ಚೇತರಿಸಿಕೊಂಡು ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಗೆಲುವು ಸಾಧಿಸಿತು. ತಂಡದ ಪರ ಜೇಕಬ್ ಬೆಥೆಲ್ ಅಜೇಯವಾಗಿ 76 ರನ್ ಕಲೆಹಾಕಿ ಗೆಲುವು ತಂದುಕೊಟ್ಟರು. ಇದರೊಂದಿಗೆ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ 3ನೇ ಪಂದ್ಯ ನಾಳೆ ನಡೆಯಲಿದೆ.
ಇದನ್ನೂ ಓದಿ: MLC 2026: ದಾಸುನ್ ಶನಕ ಡಬಲ್ ಹ್ಯಾಟ್ರಿಕ್; ಸಿಯಾಟಲ್ ಓರ್ಕಾಸ್ಗೆ ರೋಚಕ ಗೆಲುವು!!

