ಪಾಕಿಸ್ತಾನ ತಂಡದ ಆಟಗಾರರಿಗೆ ತಲಾ ₹50 ಲಕ್ಷ ದಂಡ ವಿಧಿಸಿದ ಪಿಸಿಬಿ!!
ಟಿ20 ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ತೋರಿದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರಿಗೆ ಪಿಸಿಬಿ ತಲಾ 50 ಲಕ್ಷ ದಂಡ ವಿಧಿಸಿದೆ.


Published : March 2, 2026 at 9:05 PM IST
ಪಾಕಿಸ್ತಾನ ಕ್ರಿಕೆಟ್ ತಂಡವು 2026ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ತಲುಪಲು ವಿಫಲವಾಗಿರುವ ಕಾರಣ ಪಿಸಿಬಿ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ತಂಡವು ತನ್ನ ಕೊನೆಯ ಸೂಪರ್ 8 ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿತು ಆದರೆ ಕಳಪೆ ರನ್ ರೇಟ್ನಿಂದಾಗಿ ಸೆಮಿಫೈನಲ್ ತಲುಪುವಲ್ಲಿ ವಿಫಲವಾಯ್ತು ಇದರ ಬೆನ್ನಲ್ಲೆ ಪಿಸಿಬಿ ಈ ನಿರ್ಧಾರ ತೆಗೆದಯಕೊಂಡಿದೆ.
ಸೆಮಿಫೈನಲ್ ತಲುಪಲು ವಿಫಲವಾದ ಕಾರಣ ತಂಡದ ಪ್ರತಿಯೊಬ್ಬ ಆಟಗಾರನಿಗೆ 5 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳ ದಂಡ ವಿಧಿಸಿದ್ದು ಇದು ಭಾರತೀಯ ಕರೆನ್ಸಿಯಲ್ಲಿ ₹16 ಲಕ್ಷ ರೂಪಾಯಿಗಳಾಗಿವೆ. ಸಾಮಾನ್ಯವಾಗಿ ತಂಡಗಳು ಗೆದ್ದಿದ್ದಕ್ಕಾಗಿ ಬಹುಮಾನಗಳನ್ನು ಘೋಷಣೆ ಮಾಡುವುದು ನೋಡಿದ್ದೇವೆ ಆದರೆ ಇದೇ ಮೊದಲ ಬಾರಿಗೆ ಸೋತದಕ್ಕಾಗಿ ಆಟಗಾರರಿಗೆ ದಂಡ ವಿಧಿಸಲಾಗಿದೆ. ಕೆಲ ವರದಿಗಳ ಪ್ರಕಾರ ಭಾರತ ವಿರುದ್ಧ ಸೋಲಿನ ಬೆನ್ನಲ್ಲೇ ಈ ನಿರ್ಧಾರ ಮಾಡಲಾಗಿತ್ತು ಎನ್ನಲಾಗುತ್ತಿದೆ.
ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧದ ಪಾಕಿಸ್ತಾನ ಸ್ವಲ್ಪದರಲ್ಲೇ ಸೋಲಿನಿಂದ ಪಾರಾಗಿತ್ತು. ನಂತರ ಯುಎಸ್‌ಎ ವಿರುದ್ಧ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ನಂತರ ಶ್ರೀಲಂಕಾದಲ್ಲಿ ಭಾರತದ ವಿರುದ್ಧ ಸೋಲನ್ನು ಕಂಡಿತು. ಬಳಿಕ ಕೊನೆಯ ಲೀಗ್ ಪಂದ್ಯದಲ್ಲಿ ನಮೀಬಿಯಾವನ್ನು ಸೋಲಿಸಿ ಸೂಪರ್ 8ಕ್ಕೆ ಅರ್ಹತೆ ಪಡೆಯಿತು. ಇಲ್ಲಿ ನ್ಯೂಜಿಲೆಂಡ್ ವಿರುದ್ಧದ ಅವರ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಯಿತು, ನಂತರ ಇಂಗ್ಲೆಂಡ್ ವಿರುದ್ಧ ಸೋಲನ್ನು ಕಂಡಿತು, ಆದರೆ ಶ್ರೀಲಂಕಾ ವಿರುದ್ಧದ ಗೆಲುವು ಸಾಧಿಸಿದರು ಸೆಮಿಸ್ಗೆ ತಲುಪಲು ರನ್ ರೇಟ್ ಸಾಕಾಗದ ಕಾರಣ ನ್ಯೂಜಿಲೆಂಡ್ ಸೆಮಿಫೈನಲ್ ತಲುಪಿತು, ಇಲ್ಲಿಗೆ ಪಾಕಿಸ್ತಾನದ ಪ್ರಯಾಣವನ್ನು ಕೊನೆಗೊಳಿಸಿತು.
ಈ ಪ್ರದರ್ಶನದಿಂದಾಗಿ ಪಿಸಿಬಿ ಅಧಿಕಾರಿಗಳೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತಮ ಪ್ರದರ್ಶನಕ್ಕಾಗಿ ಆಟಗಾರರು ಬಹುಮಾನ ಪಡೆದರೆ, ಕಳಪೆ ಪ್ರದರ್ಶನಕ್ಕಾಗಿ ದಂಡವನ್ನು ಸಹ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ವಿರುದ್ಧ ಸೋತ ತಕ್ಷಣ ಈ ಬಗ್ಗೆ ಚರ್ಚೆಗಳು ನಡೆದಿದ್ದವು ಎಂದು ಪಿಸಿಬಿ ಅಧಿಕಾರಿ ತಿಳಿಸಿದ್ದಾಗಿ ವರದಿಗಳಿವೆ.
ಪಿಸಿಬಿ ತನ್ನ ಎ-ಕೆಟಗರಿಯ ಆಟಗಾರರಿಗೆ ಮಾಸಿಕ ₹4.5 ಮಿಲಿಯನ್ ವೇತನವನ್ನು ಮತ್ತು ಐಸಿಸಿ ಆದಾಯದ ₹2.7 ಮಿಲಿಯನ್ ಪಾಲನ್ನು ಪಾವತಿಸುತ್ತದೆ. ಬಿ-ಕೆಟಗರಿಯ ಆಟಗಾರರು ಮಾಸಿಕ ₹3 ಮಿಲಿಯನ್ ವೇತನ ಮತ್ತು ₹1.5 ಮಿಲಿಯನ್ ಐಸಿಸಿ ಪಾಲನ್ನು ಪಡೆಯುತ್ತಾರೆ. ಸಿ-ಕೆಟಗರಿಯ ಆಟಗಾರರು ಮಾಸಿಕ ₹1 ಮಿಲಿಯನ್ ಮತ್ತು ₹1 ಮಿಲಿಯನ್ ಐಸಿಸಿ ಪಾಲನ್ನು ಪಡೆಯುತ್ತಾರೆ. ಡಿ-ಕೆಟಗರಿಯ ಆಟಗಾರರು ಮಾಸಿಕ ₹7 ಮಿಲಿಯನ್ ಮತ್ತು ಐಸಿಸಿ ಪಾಲಿನ ₹5.7 ಮಿಲಿಯನ್ ಪಡೆಯುತ್ತಾರೆ. ಪಂದ್ಯ ಶುಲ್ಕಗಳು ಪ್ರತ್ಯೇಕವಾಗಿವೆ. ಜುಲೈ 1, 2025 ರಿಂದ ಜೂನ್ 30, 2026 ರವರೆಗೆ ಕೇಂದ್ರ ಒಪ್ಪಂದಗಳಲ್ಲಿ ಯಾವುದೇ ಆಟಗಾರನನ್ನು ಎ ವರ್ಗದಲ್ಲಿ ಸೇರಿಸಲಾಗಿಲ್ಲ.
ಪಾಕಿಸ್ತಾನ ಆಟಗಾರರ ಪಂದ್ಯ ಶುಲ್ಕ ಎಷ್ಟು?: ಆಟಗಾರರು ತಮ್ಮ ಮಂಡಳಿಯಿಂದ ಆಡಿದ್ದಕ್ಕಾಗಿ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ. ಪಾಕಿಸ್ತಾನಿ ಆಟಗಾರನೊಬ್ಬ ಟೆಸ್ಟ್ ಪಂದ್ಯವನ್ನು ಆಡಿದ್ದಕ್ಕಾಗಿ 1,257,795 ಪಾಕಿಸ್ತಾನಿ ರೂಪಾಯಿಗಳನ್ನು ಪಡೆಯುತ್ತಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಆಟಗಾರರಿಗೆ ಒಂದು ODI ಪಂದ್ಯಕ್ಕೆ 644,000 ಪಾಕಿಸ್ತಾನಿ ರೂಪಾಯಿಗಳನ್ನು ಮತ್ತು T20 ಅಂತರರಾಷ್ಟ್ರೀಯ ಪಂದ್ಯಕ್ಕೆ 4,18,584 ಪಾಕಿಸ್ತಾನಿ ರೂಪಾಯಿಗಳನ್ನು ಪಾವತಿಸುತ್ತದೆ.
ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾಗಿದ್ದ ಸಂಜು ಸ್ಯಾಮ್ಸನ್ಗೆ ಬಿಗ್ ಶಾಕ್!

