ETV Bharat / sports

ಲಾರ್ಡ್ಸ್ ಟೆಸ್ಟ್‌ನಲ್ಲಿ ಹೈಡ್ರಾಮಾ: ಪಂದ್ಯ ಬಹಿಷ್ಕರಿಸುವ ಬೆದರಿಕೆ ಹಾಕಿದ ಪಾಕ್​; ಕಾರಣ ಬಹಿರಂಗ!!

ಪಾಕಿಸ್ತಾನ ಕ್ರಿಕೆಟ್ ತಂಡವು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಕಾರಣ ಏನು ಎಂದು ಈ ಕೆಳಗಿದೆ ಮಾಹಿತಿ.

ಪಾಕಿಸ್ತಾನ ಕ್ರಿಕೆಟ್​ ತಂಡ
ಪಾಕಿಸ್ತಾನ ಕ್ರಿಕೆಟ್​ ತಂಡ (AP)
author img

By ETV Bharat Sports Team

Published : August 28, 2026 at 2:37 PM IST

2 Min Read
Choose ETV Bharat

ಪಾಕಿಸ್ತಾನ ಕ್ರಿಕೆಟ್ ತಂಡವು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿತ್ತು. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪುತ್ರರೊಂದಿಗೆ ಸ್ಕೈ ನ್ಯೂಸ್ ನಡೆಸಿದ ಸಂದರ್ಶನವೇ ಇದಕ್ಕೆ ಕಾರಣವಾಗಿದೆ.

ಮಾಜಿ ಇಂಗ್ಲೆಂಡ್ ನಾಯಕ ಮೈಕ್ ಅಥರ್ಟನ್ ಅವರು ಖಾನ್ ಅವರ ಪುತ್ರರಾದ ಖಾಸಿಮ್ ಮತ್ತು ಸುಲೈಮಾನ್ ಅವರೊಂದಿಗೆ ನಡೆಸಿದ ಸಂದರ್ಶನವನ್ನು ಮೊದಲ ದಿನದ ಊಟದ ವಿರಾಮದ ಸಮಯದಲ್ಲಿ ಪ್ರಸಾರ ಮಾಡಲಾಯಿತು. ಪಾಕಿಸ್ತಾನ ಸರ್ಕಾರವು ತಮ್ಮ ತಂದೆಯನ್ನು ಜೈಲಿನಲ್ಲಿ ಕೊಲ್ಲಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಸಹೋದರರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಟೆಸ್ಟ್ ಪಂದ್ಯದ ಸಮಯದಲ್ಲಿ ಪ್ರಸಾರವಾದ ಈ ಸಂದರ್ಶನದ ಭಾರಿ ಸಂಚಲನ ಸೃಷ್ಟಿಸಿತ್ತು.

ಸಂದರ್ಶನದಲ್ಲಿ "ಇಮ್ರಾನ್ ಖಾನ್ ವಿಚಾರದಲ್ಲಿ ಸರ್ಕಾರ ಏನು ಮಾಡುತ್ತಿದೆ ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದು ಖಾಸಿಮ್ ಮತ್ತು ಸುಲೈಮಾನ್ ತಿಳಿಸಿದ್ದಾರೆ. ಹೆಚ್ಚಿನ ಕಾಲ ಅವರನ್ನು ಜೈಲಿನಲ್ಲಿ ಇರಿಸಿ ಬಳಿಕ ಸೈಲೆಂಟ್​ ಆಗಿ ಕೊಲ್ಲಲು ಪ್ರಯತ್ನಿಸುತ್ತಿದೆ. ಅವರು ಕೊನೆಯ ಬಾರಿಗೆ ನಮ್ಮ ಸಂಬಂಧಿಕರೊಂದಿಗೆ ಮಾತನಾಡಿದಾಗ, ಅವರು ಅಲ್ಲಿನ ಪರಿಸ್ಥಿತಿಯ ಭೀಕರತೆ ಬಗ್ಗೆ ವಿವರಿಸಿದರು. ಜೈಲಿನಲ್ಲಿ ಹತ್ಯೆಯಾದ ಮತ್ತು ಮರಣಹೊಂದಿದ ಇತರ ರಾಜಕೀಯ ನಾಯಕರ ಪರಿಸ್ಥಿತಿಯ ಬಗ್ಗೆ ಬಿಚ್ಚಿಟ್ಟಿದ್ದಾರೆ. ಅವರನ್ನು ದಿನವಿಡೀ ಕೋಣೆಯಲ್ಲೆ ಬಂಧನದಲ್ಲಿ ಇರಿಸಲಾಗುತ್ತಿದೆ" ಎಂದು ಖಾಸಿಮ್ ಮತ್ತು ಸುಲೈಮಾನ್ ಆರೋಪಿಸಿದ್ದಾರೆ.

ಪಿಸಿಬಿಯ ಆಕ್ಷೇಪಣೆ

ಇನ್ನು ಸಂದರ್ಶನ ಪ್ರಸಾರಕ್ಕೂ ಮೊದಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸ್ಕೈ ನ್ಯೂಸ್ ಅನ್ನು ಸಂಪರ್ಕಿಸಿತ್ತು ಎಂದು ವರದಿಗಳು ಸೂಚಿಸುತ್ತವೆ. ಈ ಸಂದರ್ಶನವನ್ನು ಪ್ರಸಾರ ಮಾಡಿದರೆ, ಲಾರ್ಡ್ಸ್ ಟೆಸ್ಟ್‌ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿತ್ತು. ಆದಾಗ್ಯೂ, ಎರಡನೇ ಟೆಸ್ಟ್​ನಲ್ಲಿ ಪಾಕ್​ ಮೈದಾನಕ್ಕೆ ಇಳಿದಿದ್ದು ಮೊದಲ ದಿನ ಮುಕ್ತಾಯಗೊಂಡಿದೆ. ಏತನ್ಮಧ್ಯೆ, 2023ರಲ್ಲಿ ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಪಾಕ್​ ಪ್ರಧಾನಿಗೆ ಕ್ರಿಕೆಟಿಗರ ಪತ್ರ

ಇತ್ತೀಚೆಗೆ ಇಮ್ರಾನ್ ಖಾನ್ ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಕೋರಿ 21 ಮಾಜಿ ನಾಯಕರು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರವನ್ನು ಸಹ ಬರೆದಿದ್ದರು. ಇವರಲ್ಲಿ ಭಾರತದ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಸೇರಿದಂತೆ 9 ದೇಶಗಳ 21 ಕ್ರಿಕೆಟಿಗರು ಸೇರಿದ್ದಾರೆ. ಇದಕ್ಕೂ ಮೊದಲು 6 ತಿಂಗಳ ಹಿಂದೆಯೂ ಇದೇ ರೀತಿಯ ಪತ್ರ ಬರೆದಿದ್ದರು. ಈ ಬಾರಿ ಇನ್ನೂ ಏಳು ಜನರು ಸೇರಿಕೊಂಡಿದ್ದಾರೆ. ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಲು ಮನಿವ ಮಾಡಿದ್ದಾರೆ.

ಪಂದ್ಯದ ಹೈಲೈಟ್ಸ್​: ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡುತ್ತಿರುವ ಇಂಗ್ಲೆಂಡ್ ತಂಡ ಮೊದಲ ದಿನದ ಆಟದ ಅಂತ್ಯದ ವೇಳೆಗೆ 9 ವಿಕೆಟ್‌ಗಳ ನಷ್ಟಕ್ಕೆ 248 ರನ್ ಗಳಿಸಿತ್ತು. ಮಳೆಯಿಂದಾಗಿ ಕೇವಲ 56 ಓವರ್‌ಗಳ ಆಟ ನಡೆಯಿತು. ಜೋರ್ಡಾನ್ ಕಾಕ್ಸ್ (55) ಮತ್ತು ಜೇಮೀ ಸ್ಮಿತ್ (61) ಅರ್ಧಶತಕಗಳನ್ನು ಗಳಿಸಿದರು. ಪಾಕಿಸ್ತಾನಿ ಬೌಲರ್‌ಗಳಲ್ಲಿ, ಮೊಹಮ್ಮದ್ ಅಬ್ಬಾಸ್ 4 ವಿಕೆಟ್‌ಗಳನ್ನು ಪಡೆದರು, ಮೊಹಮ್ಮದ್ ಅಲಿ 3 ವಿಕೆಟ್‌ಗಳನ್ನು ಪಡೆದರು ಮತ್ತು ಖುರ್ರಾಮ್ ಒಂದು ವಿಕೆಟ್ ಕಿತ್ತಿದ್ದಾರೆ. ಇಂದು ಎರಡನೇ ದಿನದಾಟ ನಡೆಯಲಿದೆ.

ಇದನ್ನೂ ಓದಿ: ಭಾರತ WTC ಫೈನಲ್​ ಹಾದಿ ಹೇಗಿದೆ? ಉಳಿದ 7 ಪಂದ್ಯಗಳಲ್ಲಿ ಎಷ್ಟು ಗೆಲ್ಲಬೇಕಿದೆ?