ವಿಂಬಲ್ಡನ್ 2026: ಫೆಡರರ್ ಸಾರ್ವಕಾಲಿಕ ದಾಖಲೆ ಮುರಿದ ಜೊಕೊವಿಕ್; ಸಬಲೆಂಕಾಗೆ ಆಘಾತ!!
ಭಾನುವಾರ ನಡೆದಿದ್ದ ವಿಂಬಲ್ಡನ್ ಪುರುಷರ ಸಿಂಗಲ್ಸ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಸರ್ಬಿಯಾದ ಸ್ಟಾರ್ ನೊವಾಕ್ ಜೊಕೊವಿಕ್ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದಿದ್ದಾರೆ. ಇದರೊಂದಿಗೆ ಫೆಡರರ್ ಅವರ ದಾಖಲೆ ಮುರಿದಿದ್ದಾರೆ.


Published : July 6, 2026 at 12:14 PM IST
|Updated : July 6, 2026 at 12:20 PM IST
ಭಾನುವಾರ ನಡೆದಿದ್ದ ವಿಂಬಲ್ಡನ್ ಪುರುಷರ ಸಿಂಗಲ್ಸ್‌ನಲ್ಲಿ, ಸರ್ಬಿಯಾದ ಸ್ಟಾರ್ ನೊವಾಕ್ ಜೊಕೊವಿಕ್ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದಿದ್ದಾರೆ. 25ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದಿರುವ ಅವರು, ಭಾನುವಾರ ನಡೆದ ನಾಲ್ಕನೇ ಸುತ್ತಿನಲ್ಲಿ ಅರ್ಹತಾ ಸುತ್ತಿನ ಆಟಗಾರ ರೋಮನ್ ಸಫಿಯುಲಿನ್ (ರಷ್ಯಾ) ಅವರನ್ನು 7-6 (8-6), 6-3, 3-6, 6-3 ಸೆಟ್‌ಗಳಿಂದ ಸೋಲಿಸಿದರು. ಈ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಜೊಕೊವಿಕ್ 10 ಏಸ್‌ಗಳನ್ನು ಬಾರಿಸಿದರು ಮತ್ತು 43 ವಿಜೇತ ಶಾಟ್ಗಳನ್ನು ಆಡಿದರು. ಅವರು ತಮ್ಮ ಎದುರಾಳಿಯ ಸರ್ವ್ ಅನ್ನು ಐದು ಬಾರಿ ಮುರಿದರು.
ಇದು ವಿಂಬಲ್ಡನ್‌ನಲ್ಲಿ ಜೊಕೊವಿಕ್ ಅವರ 106ನೇ ಗೆಲುವಾಗಿದ್ದು ಇದು ಪಂದ್ಯಾವಳಿಯ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಫೆಡರರ್ (105) ಅವರ ದಾಖಲೆಯನ್ನು ಮುರಿದಿದ್ದಾರೆ. ಒಟ್ಟಾರೆ ಪಟ್ಟಿಯಲ್ಲಿ ಮಹಿಳಾ ಟೆನಿಸ್ ಆಟಗಾರ್ತಿ ಮಾರ್ಟಿನಾ ನವ್ರಾಟಿಲೋವಾ 120 ಪಂದ್ಯಗಳ ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇದಲ್ಲದೇ ಆರನೇ ಶ್ರೇಯಾಂಕದ ಫ್ರಿಟ್ಜ್ (ಯುಎಸ್ಎ) ಮತ್ತು ಹತ್ತನೇ ಶ್ರೇಯಾಂಕದ ಬುಬ್ಲಿಕ್ (ಕಝಾಕಿಸ್ತಾನ್) ಸಹ ಪ್ರಿ-ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು.
No man has won more matches at Wimbledon, ever.
— Wimbledon (@Wimbledon) July 5, 2026
Novak Djokovic overtakes Roger Federer's record to secure a historic 106th gentlemen’s singles win at The Championships 👑 pic.twitter.com/sJ6Ee5nt7u
ಸಬಲೆಂಕಾಗೆ ಆಘಾತ!
ಏತನ್ಮಧ್ಯೆ ಮಹಿಳೆಯರ ಪಂದ್ಯದಲ್ಲಿ ವಿಶ್ವದ ನಂ.1 ಸಬಲೆಂಕಾ (ಬೆಲಾರಸ್) ಆಘಾತಕಾರ ಸೋಲನ್ನು ಕಂಡು ವಿಂಬಲ್ಡನ್ ಅಭಿಯಾನವನ್ನು ಕೊನೆಗೊಳಿಸಿದರು. ಮಹಿಳಾ ಸಿಂಗಲ್ಸ್‌ನ ನಾಲ್ಕನೇ ಸುತ್ತಿನಲ್ಲಿ ನವೋಮಿ ಒಸಾಕಾ (ಜಪಾನ್) ವಿರುದ್ಧ 2-6, 6-7 (2-7) ಅಂತರದಿಂದ ಸೋಲನ್ನು ಕಂಡರು. ಮತ್ತೊಂದೆಡೆ ನಾಲ್ಕನೇ ಶ್ರೇಯಾಂಕದ ಪೆಗುಲಾ (ಯುಎಸ್ಎ) ಸಹ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟರು. ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ, ಅವರು ತಮ್ಮ ದೇಶದ ಇವಾ ಜೊವಿಕ್ ಅವರನ್ನು 4-6, 6-3, 6-1 ಅಂತರದಿಂದ ಸೋಲಿಸಿದರು. ಮೊದಲ ಸೆಟ್ ಅನ್ನು ಕೈಬಿಟ್ಟ ನಂತರ, ಪೆಗುಲಾ ಬಲವಾದ ಪುನರಾಗಮನ ಮಾಡಿ, ಮುಂದಿನ ಎರಡು ಸೆಟ್‌ಗಳಲ್ಲಿ ಪ್ರಾಬಲ್ಯ ಸಾಧಿಸಿ ಗೆಲುವು ಸಾಧಿಸಿದರು.
Naomi Osaka: The Queen of the baseline. pic.twitter.com/aVJuB75IPK
— Wimbledon (@Wimbledon) July 5, 2026
ಪಂದ್ಯದ ಸಮಯದಲ್ಲಿ ಅವರು ಎರಡು ಏಸ್‌ಗಳನ್ನು ಹೊಡೆದರು ಮತ್ತು 21 ವಿಜೇತ ಶಾಟ್ಗಳನ್ನು ಆಡಿದರು. ಏತನ್ಮಧ್ಯೆ, 10ನೇ ಶ್ರೇಯಾಂಕದ ಮುಚೋವಾ (ಜೆಕ್ ಗಣರಾಜ್ಯ) ಕೂಡ ಕೊನೆಯ ಎಂಟರಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿದರು, ನಾಲ್ಕನೇ ಸುತ್ತಿನಲ್ಲಿ ಕ್ರೆಜ್ಸಿಕೋವಾ (ಜೆಕ್ ಗಣರಾಜ್ಯ) ಅವರನ್ನು 7-5, 5-7, 6-3 ಅಂತರದಿಂದ ಸೋಲಿಸಿದರು. ಮುಚೋವಾ ಪಂದ್ಯದಲ್ಲಿ 9 ಏಸ್‌ಗಳು ಮತ್ತು 50 ವಿಜೇತ ಶಾಟ್ಗಳನ್ನು ದಾಖಲಿಸಿದರು. ಆರನೇ ಶ್ರೇಯಾಂಕದ ಅನಿಸಿಮೊವಾ (ಯುಎಸ್ಎ) ಮತ್ತು 9ನೇ ಶ್ರೇಯಾಂಕದ ನೊಸ್ಕೋವಾ (ಜೆಕ್ ಗಣರಾಜ್ಯ) ಸಹ ಪ್ರಿ-ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು.
ಸಿನ್ನರ್ಗೆ ಗೆಲುವು
ಹಾಲಿ ಚಾಂಪಿಯನ್ ಜಾನಿಕ್ ಸಿನ್ನರ್ ವಿಂಬಲ್ಡನ್‌ನಲ್ಲಿ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ, ಜಪಾನ್‌ನ ಶಿಂಟಾರೊ ಮೊಚಿಜುಕಿಯನ್ನು 16ರ ಸುತ್ತಿನಲ್ಲಿ 6-3, 7-6(0), 6-3 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು. ಈ ಗೆಲುವಿನೊಂದಿಗೆ ಇಟಾಲಿಯನ್ ಅಥ್ಲೀಟ್ ಸತತ ಐದನೇ ಬಾರಿಗೆ ವಿಂಬಲ್ಡನ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದುಕೊಂಡರು. 1996 ರಿಂದ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಸತತ ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1996ರಲ್ಲಿ, ಪೀಟ್ ಸಾಂಪ್ರಾಸ್ 24 ವರ್ಷ ಮತ್ತು 317 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಇದರೊಂದಿಗೆ ಇಟಾಲಿಯನ್ ಅಥ್ಲೀಟ್ ಒಟ್ಟಾರೆ ವಿಂಬಲ್ಡನ್‌ನಲ್ಲಿ 15ನೇ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದುಕೊಂಡಿದ್ದಾರೆ.
5 - Jannik Sinner is the youngest player to reach 5+ consecutive Men’s Singles quarter-finals at Wimbledon since Pete Sampras (24 years 317 days) in 1996 – ages calculated at start of respective events. Streak. #Wimbledon | @Wimbledon @atptour pic.twitter.com/E5dRgdnm7L
— OptaAce (@OptaAce) July 5, 2026
ವಿಶ್ವದ ನಂ. 1 ಆಟಗಾರ ವಿಂಬಲ್ಡನ್‌ನಲ್ಲಿ ಸತತ 11 ಗೆಲುವುಗಳನ್ನು ದಾಖಲಿಸಿದ್ದಾರೆ ಮತ್ತು 2026ರಲ್ಲಿ ಅವರ ಒಟ್ಟಾರೆ ಗೆಲುವಿನ ಸಂಖ್ಯೆಯನ್ನು 41ಕ್ಕೆ ಏರಿಕೆಯಾಗಿದೆ. ಸಿನ್ನರ್ 35 ಪಂದ್ಯಗಳಲ್ಲಿ 34 ಪಂದ್ಯಗಳನ್ನು ಗೆದ್ದಿದ್ದಾರೆ, 97.14 ಗೆಲುವಿನ ಶೇಕಡಾವಾರು ಪ್ರಮಾಣವನ್ನು ಹೊಂದಿದ್ದಾರೆ.
ಇದನ್ನೂ ಓದಿ: ಅಂತರಾಷ್ಟ್ರೀಯ ಫುಟ್‌ಬಾಲ್‌ಗೆ ನೇಮಾರ್ ವಿದಾಯ! ಇವರ ಸಂಪತ್ತು ಬಗ್ಗೆ ತಿಳಿದ್ರೆ ದಂಗಾಗ್ತೀರ!!

