ಜಿಂಬಾಬ್ವೆ ವಿರುದ್ಧ ಭಾರತಕ್ಕೆ 72 ರನ್‌ಗಳ ವಿಜಯ; ಸೆಮಿ ಫೈನಲ್ ಕನಸು ಜೀವಂತ
ಭಾರತ-ಜಿಂಬಾಬ್ವೆ ಸೂಪರ್ 8 ಪಂದ್ಯ (IANS)

Published : February 26, 2026 at 9:32 PM IST
|Updated : February 26, 2026 at 9:44 PM IST
ಚೆನ್ನೈ: ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್‌ನ ಸೂಪರ್ 8 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಜಿದ ಭಾರತ, ಜಿಂಬಾಬ್ವೆಗೆ ಗೆಲ್ಲಲು 257 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತು. ಅಭಿಷೇಕ್ ಶರ್ಮಾ(55 ರನ್), ಹಾರ್ದಿಕ್ ಪಾಂಡ್ಯ(50) ಸೂರ್ಯ ಕುಮಾರ್ ಯಾದವ್(33) ತಿಲಕ್ ವರ್ಮಾ(44), ಇಶಾನ್ ಕಿಶನ್(38) ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಗುರಿ ಬೆನ್ನತ್ತಿದ ಜಿಂಬಾಬ್ವೆ ನಿಗದಿತ 20 ಓವರ್‌ಗಳಲ್ಲಿ 184 ರನ್‌ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ, ಭಾರತ 72 ರನ್‌ಗಳಿಂದ ಪಂದ್ಯ ಗೆದ್ದು ಸೆಮಿ ಫೈನಲ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿತು.
LIVE FEED
6ನೇ ವಿಕೆಟ್ ಪತನಕ್ಕೆ ಜಿಂಬಾಬ್ವೆ 173 ರನ್
- ಜಿಂಬಾಬ್ವೆಯ 6ನೇ ವಿಕೆಟ್ ಪತನ
- ತಶಿಂಗಾ ವಿಕೆಟ್ ಪಡೆದ ಶಿವಂ ದುಬೆ
- ಸಂಜು ಸ್ಯಾಮ್ಸನ್ ಆಕರ್ಷಕ ಕ್ಯಾಚ್
- ನಿಗದಿತ 20 ಓವರ್‌ಗಳಲ್ಲಿ 184 ಗಳಿಸಲಷ್ಟೇ ಶಕ್ತವಾದ ಜಿಂಬಾಬ್ವೆ
- ಬ್ರಿಯಾನ್ ಬೆನೆಟ್ (97 ರನ್) ಏಕಾಂಗಿ ಹೋರಾಟ ವ್ಯರ್ಥ
- 72 ರನ್ ಗಳಿಂದ ಗೆದ್ದು ಬೀಗಿದ ಭಾರತ
5ನೇ ವಿಕೆಟ್ ಕಳೆದುಕೊಂಡ ಜಿಂಬಾಬ್ವೆ; ಅರ್ಷ್‌ದೀಪ್‌ಗೆ 3ನೇ ವಿಕೆಟ್
- ಜಿಂಬಾಬ್ವೆಗೆ 5ನೇ ವಿಕೆಟ್ ನಷ್ಟ
- 11 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಟೋನಿ ಮುನ್ಯೊಂಗ
- ಅರ್ಷ್‌ದೀಪ್ ಎಸೆತಕ್ಕೆ ಕ್ಲೀನ್ ಬೌಲ್ಡ್
ಸೋಲಿನತ್ತ ಹೆಜ್ಜೆ ಹಾಕಿದ ಜಿಂಬಾಬ್ವೆ, 4ನೇ ವಿಕೆಟ್ ಪತನ
- ಸೋಲಿನ ಸುಳಿಯಲ್ಲಿ ಜಿಂಬಾಬ್ವೆ
- ತಂಡದ 4ನೇ ವಿಕೆಟ್ ಪತನ
- ರ್ಯಾನ್ ಬರ್ಲ್ ಅವರನ್ನು LBW ಬಲೆಗೆ ಕೆಡವಿದ ಅರ್ಷ್‌ದೀಪ್ ಸಿಂಗ್
ಜಿಂಬಾಬ್ವೆಯ 3ನೇ ವಿಕೆಟ್ ಪತನ; ನಾಯಕ ಸಿಕಂದರ್ ರಾಜಾ 31 ರನ್ ಗಳಿಸಿ ಔಟ್
- ಜಿಂಬಾಬ್ವೆಯ 3ನೇ ವಿಕೆಟ್ ಪತನ
- ನಾಯಕ ಸಿಕಂದರ್ ರಾಜಾ 31 ರನ್ ಗಳಿಸಿ ಔಟ್
- ಅರ್ಷ್‌ದೀಪ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದ ಸಿಕಂದರ್ ರಾಜಾ
- ಜಿಂಬಾಬ್ವೆ ಗೆಲುವಿಗೆ 22 ಎಸೆತಗಳಲ್ಲಿ 113 ರನ್ ಅವಶ್ಯಕತೆ
ಒಂದು ಓವರ್‌ನಲ್ಲಿ 26 ರನ್ ಬಿಟ್ಟುಕೊಟ್ಟ ಶಿವಂ ದುಬೆ
- ಶಿವ ದುಬೆ ದುಬಾರಿ ಓವರ್
- ಒಂದು ಓವರ್‌ನಲ್ಲಿ 26 ರನ್
- ಜಿಂಬಾಬ್ವೆ 2 ವಿಕೆಟ್ ನಷ್ಟಕ್ಕೆ 15.5 ಓವರ್‌ಗಳಲ್ಲಿ 143 ರನ್
- 78 ರನ್ ಗಳಿಸಿ ಆಡುತ್ತಿರುವ ಬ್ರಿಯಾನ್ ಬೆನೆಟ್
ಜಿಂಬಾಬ್ವೆಯ 2ನೇ ವಿಕೆಟ್ ಪತನ, 9 ಓವರ್‌ಗಳಿಗೆ 72 ರನ್
- ಜಿಂಬಾಬ್ವೆಯ 2ನೇ ವಿಕೆಟ್ ಪತನ
- ಡಿಯೋನ್ ಮೈಯರ್ಸ್ ವಿಕೆಟ್ ಪಡೆದ ವರುಣ್ ಚಕ್ರವರ್ತಿ
- ಜಿಂಬಾಬ್ವೆ 9.2 ಓವರ್‌ಗೆ 72 ರನ್
ಜಿಂಬಾಬ್ವೆಯ ಮೊದಲ ವಿಕೆಟ್ ಪತನ
- ಜಿಂಬಾಬ್ವೆ 6 ಓವರ್‌ಗಳಿಗೆ 44 ರನ್
- ಮೊದಲ ವಿಕೆಟ್ ಪತನ
- ತಡಿವನಶೆ ಮರುಮನಿ ವಿಕೆಟ್ ಪಡೆದ ಅಕ್ಸರ್ ಪಟೇಲ್
- ಜಿಂಬಾಬ್ವೆಗೆ ಸೋಲು
Last Updated : February 26, 2026 at 9:44 PM IST

