ETV Bharat / sports

IND vs WI Live Score: ಸಂಜು ಸ್ಯಾಮ್ಸನ್​ ಬ್ಯಾಟಿಂಗ್​ಗೆ ಶರಣಾದ ಕೆರಿಬಿಯನ್​ ಪಡೆ; ಸೆಮಿಸ್​ಗೆ ಭಾರತ

ಭಾರತ ವೆಸ್ಟ್​ ಇಂಡೀಸ್​ ಪಂದ್ಯ
ಭಾರತ ವೆಸ್ಟ್​ ಇಂಡೀಸ್​ ಪಂದ್ಯ (ETV Bharat Graphics)
author img

By ETV Bharat Sports Team

Published : March 1, 2026 at 5:38 PM IST

|

Updated : March 1, 2026 at 8:51 PM IST

Choose ETV Bharat

ಟಿ20 ವಿಶ್ವಕಪ್​ನಲ್ಲಿಂದು ಸೂಪರ್​-8 ಸುತ್ತಿನ ಕೊನೆಯ ಪಂದ್ಯ ನಡೆಯಲಿದ್ದು ಇದರಲ್ಲಿ ಭಾರತ ಮತ್ತು ವೆಸ್ಟ್​ ಇಂಡೀಸ್​ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯ ಕೋಲ್ಕತ್ತಾದ ಐತಿಹಾಸಿಕ ಈಡೆನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದಿತ್ತು ಇರದಲ್ಲಿ ವೆಸ್ಟ್​ ಇಂಡೀಸ್​ ನೀಡಿದ್ದ 196 ರನ್​ಗಳ ಗುರಿಯನ್ನು ಬೆನ್ನತ್ತಿದ ಭಾರತ 5 ವಿಕೆಟ್​ಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದೆ.

ತಂಡಗಳು - ಭಾರತ: ಸಂಜು ಸ್ಯಾಮ್ಸನ್(ವಿ.ಕೀ), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್(ನಾಯಕ), ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ

ವೆಸ್ಟ್ ಇಂಡೀಸ್: ಶಾಯ್ ಹೋಪ್(ವಿ.ಕೀ/ನಾಯಕ), ರೋಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ಶೆರ್ಫೇನ್ ರುದರ್‌ಫೋರ್ಡ್, ರೊಮಾರಿಯೋ ಶೆಫರ್ಡ್, ಜೇಸನ್ ಹೋಲ್ಡರ್, ಮ್ಯಾಥ್ಯೂ ಫೋರ್ಡ್, ಅಕೇಲ್ ಹೊಸೈನ್, ಗುಡಕೇಶ್ ಮೋಟಿ, ಶಮರ್ ಜೋಸೆಫ್.

LIVE FEED

10:52 PM, 1 Mar 2026 (IST)

ವೆಸ್ಟ್​ ಇಂಡೀಸ್​ ವಿರುದ್ಧ ಭಾರತಕ್ಕೆ ಗೆಲುವು

ಸಂಜು ಸ್ಯಾಮ್ಸ್​ನ (97*) ಅವರ ಅದ್ಭುತ ಬ್ಯಾಟಿಂಗ್​ ಪ್ರದರ್ಶನದಿಂದಾಗಿ ವೆಸ್ಟ್​ ಇಂಡೀಸ್​ ನೀಡಿದ 196 ರನ್​ಗಳ ಗುರಿಯನ್ನು ಭಾರತ ವಿರುದ್ಧ 5 ವಿಕೆಟ್​ ನಷ್ಟದೊಂದಿಗೆ ತಲುಪಿದ್ದು ಇದರೊಂದಿಗೆ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದೆ.

10:20 PM, 1 Mar 2026 (IST)

ತಿಲಕ್​ ವರ್ಮಾ ವಿಕೆಟ್​ ಪಡೆದ ಹೋಲ್ಡರ್​

ಉತ್ತಮ ಪ್ರದರ್ಶನ ನೀಡುತ್ತಿದ್ದ ತಿಲಕ್​ ವರ್ಮಾ 14.4ನೇ ಓವರ್​ನಲ್ಲಿ ಕ್ಯಾಚೌಟ್​ ಆಗಿದ್ದಾರೆ. ಅವರು 15 ಎಸೆತಗಳಲ್ಲಿ 27 ರನ್​ ಕಲೆಹಾಕಿದ್ದರು. ತಿಲಕ್​ ನಿರ್ಗಮನದ ಬೆನ್ನಲ್ಲೇ ಹಾರ್ದಿಕ್ ಕ್ರೀಸ್​ಗೆ ಆಗಮಿಸಿದ್ದಾರೆ.

10:14 PM, 1 Mar 2026 (IST)

ಗೆಲುವಿನತ್ತ ಭಾರತ ದಾಪುಗಾಲು

ಭಾರತದ ಪರ ಸಂಜು ಸ್ಯಾಮ್ಸನ್​ ಮತ್ತು ತಿಲಕ್​ ವರ್ಮಾ ಉತ್ತಮ ಪ್ರದರ್ಶನ ನೀಡುತ್ತಿದ್ದು ಈ ಇಬ್ಬರ ಬ್ಯಾಟಿಂಗ್​ ಬಲಿದಿಂದಾಗಿ ಭಾರತ ಗೆಲುವಿನತ್ತ ದಾಪುಗಾಲು ಹಾಕಿದೆ. ಭಾರತ ಗೆಲುವಿಗೆ 6 ಓವರ್​ಗಳಲ್ಲಿ 60 ರನ್​ ಬೇಕಾಗಿದೆ.

ಸಂಜು ಸ್ಯಾಮ್ಸನ್​ (69) ತಿಲಕ್​ ವರ್ಮಾ (23)

9:51 PM, 1 Mar 2026 (IST)

ಅರ್ಧಶತಕ ಸಿಡಿಸಿದ ಸಂಜು

ಆರಂಭಿಕರಾಗಿ ಬ್ಯಾಟಿಂಗ್​ಗೆ ಆಗಮಿಸಿದ ಸಂಜು ಸ್ಯಾಮ್ಸನ್​ ಅರ್ಧಶತಕ ಪೂರ್ಣಗೊಳಿಸಿದ್ದಾರೆ. 28 ಎಸೆತಗಳಲ್ಲಿ 58 ರನ್ ಕಲೆಹಾಕಿದ್ದಾರೆ. ಇದರೊಂದಿಗೆ ಭಾರತದ 10 ಓವರ್​ ಮುಕ್ತಾಯಗೊಂಡಿದ್ದು 2 ವಿಕೆಟ್​ ನಷ್ಟಕ್ಕೆ 98 ರನ್​ಗಳನ್ನು ಕಲೆಹಾಕಿದೆ. ​ಇದಾದ ಮುಂದಿನ ಓವರ್​ನಲ್ಲಿ ಸೂರ್ಯಕುಮಾರ್​ ಯಾದವ್​ ವಿಕೆಟ್​ ಪತನಗೊಂಡಿದೆ. 18 ರನ್​ಗಳಿಸಿ ಸೂರ್ಯ ನಿರ್ಗಮಿಸಿದರು.

9:33 PM, 1 Mar 2026 (IST)

ಪವರ್​ಪ್ಲೇ ಮುಕ್ತಾಯ

ಪವರ್​ಪ್ಲೇ ಮುಕ್ತಾಯಗೊಂಡಿದ್ದು ಭಾರತ 6 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 53 ರನ್​ ಕಲೆಹಾಕಿದೆ.

1ನೇ ಓವರ್​ - 5 ರನ್​

2ನೇ ಓವರ್​ - 7 ರನ್​

3ನೇ ಓವರ್​ - 17 ರನ್​ (1 ವಿಕೆಟ್​)

4ನೇ ಓವರ್​ - 8 ರನ್​

5ನೇ ಓವರ್​ - 8 ರನ್​ (1 ವಿಕೆಟ್)​

6ನೇ ಓವರ್​ - 8 ರನ್​

​ಸೂರ್ಯಕುಮಾರ್​ ಯಾದವ್​ (3*), ಸಂಜು ಸ್ಯಾಮ್ಸನ್ (24*)

9:28 PM, 1 Mar 2026 (IST)

50 ರನ್​ ಪೂರ್ಣಗೊಳಿಸಿದ ಭಾರತ

ವೆಸ್ಟ್​ ಇಂಡೀಸ್​ ನೀಡಿದ 196 ರನ್​ಗಳ ಗುರಿಯನ್ನು ಬೆನ್ನತ್ತಿರುವ ಭಾರತ 50 ರನ್​ಗಳನ್ನು ಪೂರ್ಣಗೊಳಿಸಿದೆ. ಪ್ರಸ್ತುತ ಸೂರ್ಯಕುಮಾರ್​ ಯಾದವ್​ ಮತ್ತು ಸಂಜು ಸ್ಯಾಮ್ಸನ್​ ಕ್ರೀಸ್​ನಲ್ಲಿದ್ದು ಬ್ಯಾಟಿಂಗ್​ ಮುಂದುವರೆಸಿದ್ದಾರೆ.

9:21 PM, 1 Mar 2026 (IST)

ಇಶಾನ್​ ಕಿಶನ್​ ವಿಕೆಟ್​ ಪಡೆದ ಹೋಲ್ಡರ್​

ಭಾರತ ಮತ್ತೊಂದು ವಿಕೆಟ್​ ಪತನಗೊಂಡಿದೆ. ಜೇಸನ್​ ಹೋಲ್ಡರ್​ ಎಸೆದ 5ನೇ ಓವರ್​ನ 3ನೇ ಎಸೆತದಲ್ಲಿ ಸಿಕ್ಸರ್​ ಸಿಡಿಸಲು ಯುತ್ನಿಸಿದ ಇಶಾನ್​ ಕಿಶನ್​ (10) ಶಿಮ್ರಾನ್​ ಹೆಟ್ಮೇಯರ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿದ್ದಾರೆ.

9:13 PM, 1 Mar 2026 (IST)

ಅಭಿಷೇಕ್​ ಶರ್ಮಾ ವಿಕೆಟ್​ ಪತನ

ವೆಸ್ಟ್​ ಇಂಡೀಸ್​ ನೀಡಿರುವ 196 ರನ್ ಗುರಿಯನ್ನು ಬೆನ್ನತ್ತಿರುವ ಭಾರತ ಮೊದಲ ವಿಕೆಟ್​ ಕಳೆದುಕೊಂಡಿದೆ. ಉತ್ತಮ ಆರಂಭ ಪಡೆದಿದ್ದ ತಂಡ 3 ಓವರ್​ಗಳಲ್ಲಿ 29 ರನ್​ ಕೆಲೆಹಾಕಿದೆ. ಅಕೆಲ್​ ಹೋಸೆನ್​ ಎಸೆದ 4ನೇ ಓವರ್​ನ ಕೊನೆಯ ಎಸೆತದಲ್ಲಿ 10 ರನ್​ ಗಳಿಸಿದ್ದ ಅಭಿಷೇಕ್​ ಕ್ಯಾಚೌಟ್​ ಆಗಿದ್ದಾರೆ.​

8:55 PM, 1 Mar 2026 (IST)

ವೆಸ್ಟ್ ಇಂಡೀಸ್ ಪರ ಟಿ20ಐಗಳಲ್ಲಿ ಹೆಚ್ಚು ಸಿಕ್ಸರ್‌ ಸಿಡಿಸಿದ ಆಟಗಾರರು

150 - ರೋವ್‌ಮನ್ ಪೊವೆಲ್

149 - ನಿಕೋಲಸ್ ಪೂರನ್

136 - ಎವಿನ್ ಲೂಯಿಸ್

124 - ಕ್ರಿಸ್ ಗೇಲ್

99 - ಕೀರನ್ ಪೊಲಾರ್ಡ್/ಶಿಮ್ರಾನ್ ಹೆಟ್ಮೈಯರ್

8:40 PM, 1 Mar 2026 (IST)

ಭಾರತಕ್ಕೆ 196 ರನ್ಗಳ​ ಗುರಿ ನೀಡಿದ ವೆಸ್ಟ್​ ಇಂಡೀಸ್

ವೆಸ್ಟ್​ ಇಂಡೀಸ್​ ಇನ್ನಿಂಗ್ಸ್​ ಮುಕ್ತಾಯಗೊಂಡಿದ್ದು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 195 ರನ್​ ಕಲೆಹಾಕಿದೆ. ತಂಡದ ಪರ ರೋಸ್ಟನ್​ ಚೆಸ್ (40) ಹೈಸ್ಕೋರರ್​ ಎನಿಸಿಕೊಂಡಿದ್ದಾರೆ. ಭಾರತದ ಪರ ಬುಮ್ರಾ 2 ವಿಕೆಟ್​ ಪಡೆದುಕೊಂಡಿದ್ದಾರೆ.

ಕೊನೆಯ ಐದು ಓವರ್​ನಲ್ಲಿ ವೆಸ್ಟ್​ ಇಂಡೀಸ್​ 70 ರನ್​ಗಳನ್ನು ಕಲೆಹಾಕಿದೆ

16ನೇ ಓವರ್​ - 24 ರನ್​

17ನೇ ಓವರ್​ - 14 ರನ್​

18ನೇ ಓವರ್​ - 12 ರನ್​

19ನೇ ಓವರ್​ - 6 ರನ್​

20ನೇ ಓವರ್​ - 14 ರನ್

8:27 PM, 1 Mar 2026 (IST)

ಅರ್ಷದೀಪ್​ ಸಿಂಗ್​ ತಾವೆಸೆದ 16ನೇ ಓವರ್​ ಒಂದರಲ್ಲಿ 24 ರನ್​ ಬಿಟ್ಟುಕೊಟ್ಟಿದ್ದಾರೆ. ಇದರಲ್ಲಿ 2 ಸಿಕ್ಸರ್​ 1 ಬೌಂಡರಿ, 2 ಸಿಂಗಲ್ಸ್​, 6 ಎಕ್ಸ್​ಟ್ರಾ.

8:21 PM, 1 Mar 2026 (IST)

15 ಓವರ್​ಗೆ ವೆಸ್ಟ್​ ಇಂಡೀಸ್ ಸ್ಕೋರ್ 124/4

11ನೇ ಓವರ್​ - 17ರನ್​

12ನೇ ಓವರ್​ - 4 ರನ್​ (2 ವಿಕೆಟ್, ಶಿಮ್ರಾನ್ ಹೆಟ್ಮೆಯರ್,​​ ರೋಸ್ಟನ್​ ಚೇಸ್​​)

13ನೇ ಓವರ್​ - 10 ರನ್​

14ನೇ ಓವರ್​ - 6 ರನ್​

15ನೇ ಓವರ್​ - 6​​ ರನ್​ (1 ವಿಕೆಟ್​ ಶೆರ್ಫೆನ್​ ರೂದರ್​ಫೋರ್ಡ್​ (14 ರನ್​)

ರೋಮನ್​ ಪೊವೆಲ್​ (3*), ಜೇಸನ್​ ಹೋಲ್ಡರ್ (6*) 3 ವಿಕೆಟ್

8:17 PM, 1 Mar 2026 (IST)

ರೂದರ್​ಫೋರ್ಡ್​ ವಿಕೆಟ್​ ಪತನ

ಹಾರ್ದಿಕ್​ ಪಾಂಡ್ಯ ಎಸೆದ 15ನೇ ಓವರ್​ನ ಮೊದಲ ಎಸೆತದಲ್ಲಿ ರೂದರ್​ಫೋರ್ಡ್​ (14) ಔಟಾಗಿದ್ದಾರೆ.

8:12 PM, 1 Mar 2026 (IST)

ಟಿ20ಯಲ್ಲಿ ಹೆಟ್ಮೇಯರ್ vs ಬುಮ್ರಾ

ಎಂಟು ಇನ್ನಿಂಗ್ಸ್

21 ಎಸೆತಗಳು

15 ರನ್ಗಳು

ಐದು ಬಾರಿ ಔಟ್‌

ಸರಾಸರಿ 3.00

ಸ್ಟ್ರೈಕ್​ ರೇಟ್​ - 71.42

8:02 PM, 1 Mar 2026 (IST)

ರೋಸ್ಟನ್​ ಚೇಸ್​ ವಿಕೆಟ್​ ಪಡೆದ ಬುಮ್ರಾ

ಹೆಟ್ಮೇಯರ್​ ಬೆನ್ನಲ್ಲೇ ರೋಸ್ಟನ್​ ಚೇಸ್​ ಸಹ ಔಟಾಗಿದ್ದಾರೆ. ಬುಮ್ರಾ ಎಸೆದ 12ನೇ ಓವರ್​ನ 5ನೇ ಎಸತದಲ್ಲಿ ಸೂರ್ಯಕುಮಾರ್​ಗೆ ಕ್ಯಾಚ್ ನೀಡಿ ಪೆವಿಲಿಯನ್​ ಸೇರಿದರು. ಚೇಸ್ 25 ಎಸೆತಗಳಲ್ಲಿ 45 ರನ್​ ಬಾರಿಸಿದ್ದರು.

7:57 PM, 1 Mar 2026 (IST)

ಹೆಟ್ಮೇಯರ್​ ವಿಕೆಟ್​ ಪಡೆದ ಬುಮ್ರಾ

ಸ್ಫೋಟಕ ಬ್ಯಾಟಿಂಗ್​ ಮಾಡುತ್ತಿದ್ದ ಶಿಮ್ರಾನ್​ ಹೆಟ್ಮೇಯರ್​ ಬುಮ್ರಾ ಓವರ್​ನಲ್ಲಿ ಕ್ಯಾಚೌಟ್​ ಆಗಿದ್ದಾರೆ. 12 ಎಸೆತಗಳಲ್ಲಿ 25 ರನ್​ ಗಳಿಸಿದ್ದ ಹೆಟ್ಮೆಯರ್ 12ನೇ ಓವರ್​ 3ನೇ ಎಸೆತದಲ್ಲಿ ಸಂಜು ಸ್ಯಾಮ್ಸನ್​ಗೆ ಕ್ಯಾಚ್​ ನೀಡಿದ ನಿರ್ಗಮಿಸಿದ್ದಾರೆ.

7:54 PM, 1 Mar 2026 (IST)

ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು

19* ಶಿಮ್ರಾನ್ ಹೆಟ್ಮೇಯರ್ (2026)

18 ಸಾಹಿಬ್‌ಜಾದಾ ಫರ್ಹಾನ್ (2026)

17 ನಿಕೋಲಸ್ ಪೂರನ್ (2024)

16 ಕ್ರಿಸ್ ಗೇಲ್ (2012)

16 ರಹಮಾನಲ್ಲಾ ಗುರ್ಬಾಜ್ (2024)

7:51 PM, 1 Mar 2026 (IST)

10 ಓವರ್​ಗೆ ವೆಸ್ಟ್​ ಇಂಡೀಸ್ ಸ್ಕೋರ್ 82/1

10 ಓವರ್​ಗೆ ವೆಸ್ಟ್​ ಇಂಡೀಸ್​ ತಂಡ 1 ವಿಕೆಟ್​ ಕಳೆದುಕೊಂಡು 82 ರನ್​ ಕಲೆಹಾಕಿದೆ.

7ನೇ ಓವರ್​ - 11 ರನ್​

8ನೇ ಓವರ್​ - 10 ರನ್​

9ನೇ ಓವರ್​ - 3 ರನ್​ 1 ವಿಕೆಟ್

10ನೇ ಓವರ್​ - 13 ರನ್​

ರೋಸ್ಟನ್​ ಚೇಸ್ (38*), ಶಿಮ್ರಾನ್​ ಹೆಟ್ಮೇಯರ್ (9*) ವರುಣ್​ ಚಕ್ರವರ್ತಿ 1 ವಿಕೆಟ್

7:41 PM, 1 Mar 2026 (IST)

ವೆಸ್ಟ್​ ಇಂಡೀಸ್​ ಮೊದಲ ವಿಕೆಟ್​ ಪತನ

ವೆಸ್ಟ್​ ಇಂಡೀಸ್​ ತಂಡದ ಮೊದಲ ವಿಕೆಟ್​ ಉರುಳಿದೆ. ವರುಣ್​ ಚಕ್ರವರ್ತಿ ಎಸೆದ 9ನೇ ಓವರ್​ನ 5ನೇ ಎಸೆತದಲ್ಲಿ ಶಾಹಿ ಹೋಪ್ (32) ಕ್ಲೀನ್​ ಬೋಲ್ಡ್​ ಆಗಿದ್ದಾರೆ.

7:33 PM, 1 Mar 2026 (IST)

ಪವರ್​ಪ್ಲೇನಲ್ಲಿ ವೆಸ್ಟ್​ ಇಂಡೀಸ್​ ಆರ್ಭಟ

ಪವರ್​ಪ್ಲೇನಲ್ಲಿ ವೆಸ್ಟ್​ ಇಂಡೀಸ್​ ತಂಡ ಅಜೇಯವಾಗಿ 45 ರನ್​ ಕಲೆಹಾಕಿದೆ.

  • ಮೊದಲ ಓವರ್​ - 3 ರನ್​
  • ಎರಡನೇ ಓವರ್​ - 10 ರನ್​
  • ಮೂರನೇ ಓವರ್​ - 10 ರನ್​
  • ನಾಲ್ಕನೇ ಓವರ್​ - 5 ರನ್​
  • ಐದನೇ ಓವರ್​ - 7 ರನ್​
  • ಆರನೇ ಓವರ್​ - 10 ರನ್​

ರೋಸ್ಟನ್​ ಚೇಸ್​ (20) ಮತ್ತು ಬ್ರೆಂಡನ್​ ಕಿಂಗ್ (25*)

7:07 PM, 1 Mar 2026 (IST)

ಕ್ಯಾಚ್​ ಕೈಚೆಲ್ಲಿದ ಅಭಿಷೇಕ್​

ಜಸ್ಪ್ರೀತ್​ ಬುಮ್ರಾ ಅವರು ಎಸೆದ 5ನೇ ಓವರ್​ನ 5ನೇ ಎಸೆತದಲ್ಲಿ ಅಭಿಷೇಕ್​ ಶರ್ಮಾ, ರೋಸ್ಟನ್​ ಚೇಸ್​ ಕ್ಯಾಚ್​ ಕೈಚೆಲ್ಲಿದ್ದಾರೆ.

7:01 PM, 1 Mar 2026 (IST)

ಮೊದಲ ಓವರ್​ನಲ್ಲಿ ಕೇವಲ 3 ರನ್​ ​

ಅರ್ಷದೀಪ್​ ಎಸೆದ ಮೊದಲ ಓವರ್​ನಲ್ಲಿ ಕೇವಲ 3 ರನ್​ ಬಿಟ್ಟುಕೊಟ್ಟಿದ್ದಾರೆ. ವೆಸ್ಟ್​ ಇಂಡೀಸ್​ ಪರ ಹೋಪ್ 2 ರನ್​​ ಮತ್ತು ಚೇಸ್ 1 ರನ್​ ಕಲೆಹಾಕಿದ್ದಾರೆ.​

6:30 PM, 1 Mar 2026 (IST)

ಟಾಸ್​ ಗೆದ್ದ ಭಾರತ ಫೀಲ್ಡಿಂಗ್​ ಆಯ್ಕೆ

ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್​ ಯಾದವ್​ ಟಾಸ್​ ಗೆದ್ದುಕೊಂಡು ಮೊದಲು ಫೀಲ್ಡಿಂಗ್​​ ಆಯ್ಕೆ ಮಾಡಿಕೊಂಡಿದ್ದಾರೆ.

5:38 PM, 1 Mar 2026 (IST)

ಉಭಯ ತಂಡಗಳ ಹೆಡ್​ ಟು ಹೆಡ್​ ದಾಖಲೆ ಹೇಗಿದೆ?

ಭಾರತ ಮತ್ತು ವೆಸ್ಟ್​ ಇಂಡೀಸ್​ ತಂಡಗಳು ಇಲ್ಲಿಯವರೆಗೆ 30 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 19 ಬಾರಿ ಗೆಲುವು ಸಾಧಿಸಿದ್ದರೇ, ವೆಸ್ಟ್ ಇಂಡೀಸ್ 10 ಬಾರಿ ಗೆಲುವು ಸಾಧಿಸಿದೆ. ಒಂದು ಪಂದ್ಯ ರದ್ದಾಗಿದೆ. ಎರಡೂ ತಂಡಗಳು ಟಿ20 ವಿಶ್ವಕಪ್‌ನಲ್ಲಿ ನಾಲ್ಕು ಬಾರಿ ಮುಖಾಮುಖಿಯಾಗಿವೆ. ವೆಸ್ಟ್ ಇಂಡೀಸ್ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಕೊಂಡಿದೆ. ಈಡೆನ್​ ಗಾರ್ಡನ್ಸ್​ ಮೈದಾನದಲ್ಲಿ ಭಾರತ ವೆಸ್ಟ್​ ಇಂಡೀಸ್​ ವಿರುದ್ಧ ಆಡಿರುವ ಯಾವುದೇ ಪಂದ್ಯವನ್ನು ಸೋತಿಲ್ಲ.

Last Updated : March 1, 2026 at 8:51 PM IST