ಮುಕ್ತಾಯಗೊಂಡ ಐಪಿಎಲ್ ಟ್ರೇಡ್; ಸಂಜು ನಿಂದ ತೆಂಡೂಲ್ಕರ್ ವರೆಗೆ ಯಾರು ಯಾವ ತಂಡಕ್ಕೆ?
ಐಪಿಎಲ್ ಆಟಗಾರ ವಿನಿಮಯ ಪ್ರಕ್ರಿಯೆ ಪೂರ್ಣಗೊಂಡಿದ್ದು ಒಟ್ಟು 8 ಆಟಗಾರರ ಟ್ರೇಡ್ ನಡೆದಿದ್ದಾಗಿ ಐಪಿಎಲ್ ಸಂಘಟಕರು ಮಾಹಿತಿ ನೀಡಿದ್ದಾರೆ.


Published : November 15, 2025 at 11:52 AM IST
IPL 2026 Trade: ಐಪಿಎಲ್ ಆಟಗಾರ ವಿನಿಮಯ ಪ್ರಕ್ರಿಯೆ ಪೂರ್ಣಗೊಂಡಿದೆ. ಇದರೊಂದಿಗೆ ಒಟ್ಟು 8 ಆಟಗಾರರ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಐಪಿಎಲ್ ಸಂಘಟಕರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಆಟಗಾರರ ವ್ಯಾಪಾರ ಮತ್ತು ವಿನಿಮಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದವು. ಇದೀಗ ಆಟಗಾರರ ವಿನಿಮಯ ಪ್ರಕ್ರಿಯೆ ಪೂರ್ಣಗೊಂಡಿದ್ದ ಈ ಎಲ್ಲಾ ಸುದ್ದಿಗಳಿಗೆ ತೆರೆ ಬಿದ್ದಿದೆ.
ಸಂಜು ಸ್ಯಾಮ್ಸನ್ ರಾಜಸ್ಥಾನದಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರ್ಪಡೆಗೊಂಡಿದ್ದರೇ. ಮತ್ತೊಂದೆಡೆ, ಜಡೇಜಾ CSK ಯಿಂದ ರಾಜಸ್ಥಾನಕ್ಕೆ ವಿನಿಮಯ ಮಾಡಿಕೊಳ್ಳಲಾಗಿದೆ. ಐಪಿಎಲ್ 2026ಕ್ಕಾಗಿ ಯಾವೆಲ್ಲ ಆಟಗಾರರ ಟ್ರೇಡ್ ನಡೆದಿದೆ ಯಾರು ಯಾವ ತಂಡಕ್ಕೆ ಸೇರಿದ್ದಾರೆ ಎಂಬುದರ ಬಗ್ಗೆ ಇದೀಗ ತಿಳಿಯೋಣ.
ಯಾರು ಯಾವ ತಂಡಕ್ಕೆ ?
ರವೀಂದ್ರ ಜಡೇಜಾ: ಹಿರಿಯ ಆಲ್‌ರೌಂಡರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ನಾಯಕ ರವೀಂದ್ರ ಜಡೇಜಾ ಮುಂಬರುವ ಐಪಿಎಲ್ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ (RR) ಪರ ಆಡಲಿದ್ದಾರೆ. CSK ಪರ 12 ಸೀಸನ್‌ಗಳನ್ನು ಆಡಿರುವ ಜಡೇಜಾ, 250 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಲೀಗ್‌ನ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರು. ವ್ಯಾಪಾರ ಒಪ್ಪಂದದಡಿಯಲ್ಲಿ, ಅವರ ಲೀಗ್ ಶುಲ್ಕವನ್ನು ₹18 ಕೋಟಿಯಿಂದ ₹14 ಕೋಟಿಗೆ ಇಳಿಸಲಾಗಿದ್ದು ರಾಜಸ್ಥಾನ ತಂಡ ಸೇರಿಕೊಂಡಿದ್ದಾರೆ.
🚨 NEWS 🚨#TATAIPL 2026 - Player Trade updates
— IndianPremierLeague (@IPL) November 15, 2025
🧵 A look at all the trades ahead of today's retention deadline 🙌
Details of all trades ▶️ https://t.co/wLTQBlcame pic.twitter.com/OfmEpSM4Bi
ಸಂಜು ಸ್ಯಾಮ್ಸನ್: ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ನಾಯಕ ಮತ್ತು ಭಾರತೀಯ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಮುಂದಿನ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡಲಿದ್ದಾರೆ. ಇವರನ್ನು ಸಿಎಸ್‌ಕೆ 18 ಕೋಟಿ ರೂಪಾಯಿಗೆ ಟ್ರೇಡ್ ಮಾಡಿಕೊಂಡಿದೆ. ಐಪಿಎಲ್ ಇತಿಹಾಸದಲ್ಲೇ ಇದು ಅತಿ ದೊಟ್ಟ ವ್ಯಾಪಾರವಾಗಿದೆ.
ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರಾದ ಸ್ಯಾಮ್ಸನ್ 177 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಸಿಎಸ್‌ಕೆ ಅವರ ಐಪಿಎಲ್ ವೃತ್ತಿಜೀವನದ ನಾಲ್ಕನೇ ಫ್ರಾಂಚೈಸಿಯಾಗಲಿದೆ. ಸಂಜು 2013ರಲ್ಲಿ ಕೆಕೆಆರ್ ಪರ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅವರು 2016 ಮತ್ತು 2017 ರಲ್ಲಿ ಎರಡು ಋತುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 2018 ರಿಂದ 2025ರ ವರೆಗೆ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. ಇದೀಗ ಚೆನ್ನೈ ಪರ ಅವರು ಆಡಲಿದ್ದಾರೆ.
— IndianPremierLeague (@IPL) November 15, 2025
ಸ್ಯಾಮ್ ಕರನ್: ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್ ಅವರು ತಮ್ಮ ಪ್ರಸ್ತುತ ಲೀಗ್ ಶುಲ್ಕ ₹2.4 ಕೋಟಿ ಬೆಲೆಯೊಂದಿಗೆ ಯಶಸ್ವಿ ವಹಿವಾಟಿನ ನಂತರ ಚೆನ್ನೈ ಸೂಪರ್ ಕಿಂಗ್ಸ್ (CSK) ನಿಂದ ರಾಜಸ್ಥಾನ್ ರಾಯಲ್ಸ್ (RR) ತಂಡವನ್ನು ಸೇರಿಕೊಂಡಿದ್ದಾರೆ. 27 ವರ್ಷದ ಅವರು 64 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಮತ್ತು RR ಅವರ ಮೂರನೇ ಫ್ರಾಂಚೈಸಿಯಾಗಲಿದೆ. ಅವರು ಈ ಹಿಂದೆ 2019, 2023 ಮತ್ತು 2024 ರಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಇತರ ಋತುಗಳಲ್ಲಿ CSK ಅನ್ನು ಪ್ರತಿನಿಧಿಸಿದ್ದರು.
ಮೊಹಮ್ಮದ್ ಶಮಿ: ಅನುಭವಿ ವೇಗಿ ಮೊಹಮ್ಮದ್ ಶಮಿ ಸನ್‌ರೈಸರ್ಸ್ ಹೈದರಾಬಾದ್ (SRH) ನಿಂದ ಲಕ್ನೋ ಸೂಪರ್ ಜೈಂಟ್ಸ್ (LSG)ಗೆ ಸ್ಥಳಾಂತರಗೊಂಡಿದ್ದಾರೆ. 2025 ರ ಐಪಿಎಲ್ ಸೀಸನ್‌ಗೆ ಮೊದಲು ₹10 ಕೋಟಿಗೆ SRHನ ಎರಡನೇ ಅತಿ ಹೆಚ್ಚು ಬೆಲೆ ಬಾಳುವ ಆಟಗಾರನಾಗಿದ್ದ ಶಮಿ, ತಮ್ಮ ಪ್ರಸ್ತುತ ಅದೇ ಮೊತ್ತದ ಹಣದೊಂದಿಗೆ LSG ಗೆ ಸ್ಥಳಾಂತರಗೊಂಡಿದ್ದಾರೆ. 2013 ರಲ್ಲಿ ಚೊಚ್ಚಲ ಪ್ರವೇಶದಿಂದ ಐದು ಫ್ರಾಂಚೈಸಿಗಳಿಗಾಗಿ 119 ಐಪಿಎಲ್ ಪಂದ್ಯಗಳನ್ನು ಆಡಿರುವ ಈ ಹಿರಿಯ ವೇಗಿ 133 ವಿಕೆಟ್ ಪಡೆದಿದ್ದಾರೆ. 2023 ರಲ್ಲಿ 17 ಪಂದ್ಯಗಳಲ್ಲಿ 28 ವಿಕೆಟ್‌ಗಳೊಂದಿಗೆ ಅವರು ಪರ್ಪಲ್ ಕ್ಯಾಪ್ ಗೆದ್ದಿದ್ದರು.
Lala: 𝙒𝙞𝙘𝙠𝙚𝙩𝙨 𝙨𝙚 𝙠𝙖𝙧𝙚𝙣𝙜𝙚 𝙨𝙖𝙗𝙠𝙖 𝙨𝙬𝙖𝙜𝙖𝙩 \|/ ✌️ pic.twitter.com/fgt0qJIycQ
— Lucknow Super Giants (@LucknowIPL) November 15, 2025
ಮಾಯಾಂಕ್ ಮಾರ್ಕಂಡೆ: ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಿಂದ ಯಶಸ್ವಿ ವಹಿವಾಟು ನಡೆಸಿದ ನಂತರ ಲೆಗ್-ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ತಮ್ಮ ಹಿಂದಿನ ಫ್ರಾಂಚೈಸ್ ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ಮರಳಲಿದ್ದಾರೆ. ₹30 ಲಕ್ಷ ಶುಲ್ಕಕ್ಕೆ KKR ತಂಡದ ಪಾಲಾಗಿದ್ದ ಅವರು ಇದೇ ಮೊತ್ತಕ್ಕೆ MI ತಂಡಕ್ಕೆ ಸೇರಿದ್ದಾರೆ.
ಮಾರ್ಕಂಡೆ ತಮ್ಮ ಐಪಿಎಲ್ ವೃತ್ತಿಜೀವನವನ್ನು ಮುಂಬೈ ಪರ ಆರಂಭಿಸಿದರು, 2018, 2019 ಮತ್ತು 2022 ರಲ್ಲಿ ಫ್ರಾಂಚೈಸಿ ಪರ ಆಡಿದ್ದರು. ನಂತರ 2021ರಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು 2023 ಮತ್ತು 2024 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದರು. 37 ಐಪಿಎಲ್ ಪಂದ್ಯಗಳಲ್ಲಿ 37 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಅರ್ಜುನ್ ತೆಂಡೂಲ್ಕರ್: ಬೌಲಿಂಗ್ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು ಸೇರಿಕೊಂಡಿದ್ದಾರೆ. ಅರ್ಜುನ್ ತಮ್ಮ ಪ್ರಸ್ತುತ ₹30 ಲಕ್ಷ ಶುಲ್ಕದಲ್ಲಿ LSG ತಂಡವನ್ನು ಸೇರಲಿದ್ದಾರೆ.
ನಿತೀಶ್ ರಾಣಾ: ಎಡಗೈ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಈಗ ರಾಜಸ್ಥಾನ್ ರಾಯಲ್ಸ್ (RR) ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು ಪ್ರತಿನಿಧಿಸಲಿದ್ದಾರೆ. ಅವರು ಪ್ರಸ್ತುತ ₹4.2 ಕೋಟಿ ಶುಲ್ಕದೊಂದಿಗೆ ಈ ತಂಡದಲ್ಲಿ ಮುಂದುವರಿಯಲಿದ್ದಾರೆ. 100ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ರಾಣಾ, 2013 ರಲ್ಲಿ ಶ್ರೇಯಸ್ ಅಯ್ಯರ್ ಗಾಯದ ಕಾರಣ ಹೊರಗುಳಿದಾಗ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ವಹಿಸಿದ್ದರು.
ಡೊನೊವನ್ ಫೆರೀರಾ: ಡೆಲ್ಲಿ ಕ್ಯಾಪಿಟಲ್ಸ್ (DC)ಯಿಂದ ಯಶಸ್ವಿ ವಹಿವಾಟಿನ ನಂತರ ಆಲ್‌ರೌಂಡರ್ ಡೊನೊವನ್ ಫೆರೇರಾ ತಮ್ಮ ಹಿಂದಿನ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಗೆ ಮರಳಲಿದ್ದಾರೆ. ಅವರ ಶುಲ್ಕವನ್ನು ₹75 ಲಕ್ಷದಿಂದ ₹1 ಕೋಟಿಗೆ (ಸುಮಾರು $1.7 ಮಿಲಿಯನ್) ಹೆಚ್ಚಿಸಲಾಗಿದೆ.
ಶಾರ್ದೂಲ್ ಠಾಕೂರ್: ಕಳೆದ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಬದಲಿ ಪ್ಲೇಯರ್ ಆಗಿ ಆಡಿದ್ದ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್, 2025ರ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದದ್ದರು. ಬಳಿಕ ಗಾಯಗೊಂಡ ಆಟಗಾರ ಸ್ಥಾನಕ್ಕೆ ಬದಲಿಗನಾಗಿ ಇವರನ್ನು ಎಲ್ಎಸ್ಜಿ ತಂಡ ಖರೀದಿ ಮಾಡಿತ್ತು. ಇದೀg ಮುಂಬೈ ಇಂಡಿಯನ್ಸ್ ₹2 ಕೋಟಿ (ಸುಮಾರು $1.5 ಬಿಲಿಯನ್)ಗೆ ವಹಿವಾಟು ನಡೆಸಿ ತಂಡಕ್ಕೆ ಕರೆ ತಂದಿದೆ.
ಶೆರ್ಫೇನ್ ರುದರ್ಫೋರ್ಡ್: 2026ರ ಐಪಿಎಲ್ಗೂ ಮುನ್ನ ಶೆರ್ಫೇನ್ ರುದರ್ಫೋರ್ಡ್ ಅವರನ್ನು ಗುಜರಾತ್ ಟೈಟಾನ್ಸ್ ನಿಂದ ಮುಂಬೈ ಇಂಡಿಯನ್ಸ್ ಗೆ ವಿನಿಮಯ ಮಾಡಿಕೊಳ್ಳಲಾಗಿದೆ. ವೆಸ್ಟ್ ಇಂಡೀಸ್ ಎಡಗೈ ಬ್ಯಾಟ್ಸ್ ಮನ್ ಶೆರ್ಫೇನ್ ರುದರ್ಫೋರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ₹2.6 ಕೋಟಿ (26 ಮಿಲಿಯನ್ ರೂಪಾಯಿ) ಗೆ ಸಹಿ ಮಾಡಿದೆ. ರುದರ್ಫೋರ್ಡ್ ಕೊನೆಯ ಬಾರಿಗೆ 2020ರಲ್ಲಿ ಮುಂಬೈ ಪರ ಆಡಿದ್ದರು.
ಇದನ್ನೂ ಓದಿ: ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇ-ಆಫ್, ಮೊದಲ ದಿನ ಸ್ಲೊವೇನಿಯಾ ಪ್ರಾಬಲ್ಯ

