ETV Bharat / sports

ಅಂದಕ್ಕೆ ತಕ್ಕಂತೆ ಬೌಲಿಂಗ್​! 24 ಎಸೆತಗಳಲ್ಲಿ 19 ಡಾಟ್​ ಬಾಲ್​!! ಇಂಗ್ಲೆಂಡ್​ ಸುಂದರಿಗೆ ಆರ್​ಸಿಬಿ ಫ್ಯಾನ್ಸ್​ ಫಿದಾ!!

Lauren Bell Dream Debut: ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಪಂದ್ಯದಲ್ಲೇ ಲಾರೆನ್​ ಬೆಲ್​ 24 ಎಸೆತದಲ್ಲಿ 19 ಡಾಟ್​ ಬಾಲ್​ ಎಸೆಯುವ ಮೂಲಕ ಆರ್​ಸಿಬಿ ಫ್ಯಾನ್​ಗಳ ಹೃದಯ ಗೆದ್ದಿದ್ದಾರೆ.

WHO IS LAUREN BELL  LAUREN BELL RECORDS  RCB VS MI WPL 2026  RCB WON AGAINST MUMBAI INDIANS
ಇಂಗ್ಲೆಂಡ್​ ಸುಂದರಿಗೆ ಆರ್​ಸಿಬಿ ಫ್ಯಾನ್ಸ್​ ಫಿದಾ!! (Photo Credit: IANS Photo)
author img

By ETV Bharat Sports Team

Published : January 10, 2026 at 11:50 AM IST

|

Updated : January 10, 2026 at 12:23 PM IST

2 Min Read
Choose ETV Bharat

Lauren Bell Dream Debut: ಇಂಗ್ಲೆಂಡ್‌ನ ವೇಗಿ ಲಾರೆನ್ ಬೆಲ್ ಪ್ರಸ್ತುತ ವಿಶ್ವದ ಅತ್ಯಂತ ಸುಂದರ ಮಹಿಳಾ ಕ್ರಿಕೆಟಿಗ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ತಮ್ಮ ಚೊಚ್ಚಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದರು.

ಮುಂಬೈ ಇಂಡಿಯನ್ಸ್ ವಿರುದ್ಧದ WPLನ ನಾಲ್ಕನೇ ಸೀಸನ್‌ನ ಆರಂಭಿಕ ಪಂದ್ಯದಲ್ಲಿ ಲಾರೆನ್ ತಮ್ಮ ಸೌಂದರ್ಯ ಮತ್ತು ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅದರಲ್ಲೂ ಆರ್​ಸಿಬಿ ಫ್ಯಾನ್​ಗಳು ಸಖತ್​ ಖುಷಿಯಲ್ಲಿದ್ದಾರೆ. ಅವರು ಬಿಗಿಯಾಗಿ ಬೌಲಿಂಗ್ ಮಾಡಿ 4 ಓವರ್‌ಗಳಲ್ಲಿ 19 ಡಾಟ್​ ಬೌಲ್​ನಲ್ಲಿ 14 ರನ್‌ಗಳನ್ನು ನೀಡಿ ಒಂದು ವಿಕೆಟ್ ಪಡೆದು ಮಿಂಚಿದ್ದಾರೆ.

ಮೇಡನ್ ಓವರ್‌ನೊಂದಿಗೆ ಪ್ರಾರಂಭ: ಲಾರೆನ್ ಬೆಲ್ ಮೇಡನ್ ಓವರ್‌ನೊಂದಿಗೆ ಆರ್‌ಸಿಬಿ ಪರ ಬೌಲಿಂಗ್ ಪ್ರಾರಂಭಿಸಿದರು. ಲಾರೆನ್ ಆರಂಭಿಕ ಓವರ್‌ಗಳಲ್ಲಿ ಅಮೆಲಿಯಾ ಕೆರ್ ಮತ್ತು ಜಿ ಕಮಲಿನಿ ಅವರನ್ನು ನಿಯಂತ್ರಣದಲ್ಲಿಟ್ಟುಕೊಂಡು ಸ್ಕೋರ್ ಮಾಡದಂತೆ ಕಟ್ಟಿ ಹಾಕಿದರು.

11ನೇ ಎಸೆತದಲ್ಲಿ ಮೊದಲ ರನ್: ಲಾರೆನ್ ಬೆಲ್ ಅದ್ಭುತ ಬೌಲಿಂಗ್ ಮಾಡಿದರು. ತಮ್ಮ ಸ್ಪೆಲ್‌ನ ಮೊದಲ 10 ಎಸೆತಗಳಲ್ಲಿ ಯಾವುದೇ ರನ್ ಬಿಟ್ಟುಕೊಡಲಿಲ್ಲ. ಆದರೆ 11ನೇ ಎಸೆತದಲ್ಲಿ ಒಂದು ರನ್ ಬಂದಿತು. ಬೆಲ್ ತಮ್ಮ ಮೊದಲ ಎರಡು ಓವರ್‌ಗಳಲ್ಲಿ ಕೇವಲ ಒಂದು ರನ್ ಬಿಟ್ಟುಕೊಟ್ಟರು.

ಮೊದಲ ವಿಕೆಟ್ ಕಬಳಿಸಿದ ಬೆಲ್​​: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಲಾರೆನ್ ಬೆಲ್‌ಗೆ ಅಮೆಲಿಯಾ ಕೆರ್ ಮೊದಲ ಬಲಿಯಾದರು. ಕಿವೀಸ್ ಆಲ್‌ರೌಂಡರ್ ಅಮೆಲಿಯಾ ಕೆರ್ ಬೆಲ್ ಬೌಲಿಂಗ್‌ನಲ್ಲಿ ಅರುಂಧತಿ ರೆಡ್ಡಿಗೆ ಕ್ಯಾಚ್ ನೀಡಿ ಪೆವಲಿಯನ್​ ದಾರಿ ಹಿಡಿದರು. ಬೆಲ್ ತನ್ನ ಮೂರು ಓವರ್‌ಗಳಲ್ಲಿ ಏಳು ರನ್‌ ನೀಡಿ ಒಂದು ವಿಕೆಟ್ ಪಡೆದರು.

24 ಎಸೆತಗಳಲ್ಲಿ 19 ಡಾಟ್ ಬಾಲ್‌ಗಳು: ಲಾರೆನ್ ಬೆಲ್ ಮುಂಬೈ ಇಂಡಿಯನ್ಸ್ ವಿರುದ್ಧ ನಾಲ್ಕು ಓವರ್‌ಗಳಲ್ಲಿ ಕೇವಲ 14 ರನ್‌ ನೀಡಿ ಒಂದು ವಿಕೆಟ್ ಪಡೆದರು. ಅದರಲ್ಲಿ ಒಂದು ಮೇಡನ್ ಓವರ್​ ಕೂಡ ಸೇರಿದೆ. ಲಾರೆನ್ ಬೆಲ್ ಒಂದು ಅವಧಿಯಲ್ಲಿ 24 ಎಸೆತಗಳಲ್ಲಿ 19 ಡಾಟ್​ ಬಾಲ್​ ಮಾಡುವ ಮೂಲಕ ಆರ್‌ಸಿಬಿ ಪರ ಚೊಚ್ಚಲ ಪಂದ್ಯದಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಡಬ್ಲ್ಯೂಪಿಎಲ್ ದಾಖಲೆಯನ್ನು ಸ್ಥಾಪಿಸಿದ ಎರಡನೇಯವರು ಆಗಿದ್ದಾರೆ.

ಅತಿ ಹೆಚ್ಚು ಡಾಟ್ ಬಾಲ್‌ಗಳ ದಾಖಲೆ: ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಎರಡನೇ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಬೌಲರ್ ಲಾರೆನ್ ಬೆಲ್. WPL ನಲ್ಲಿ ಈ ದಾಖಲೆ ಶಬ್ನಿಮ್ ಇಸ್ಮಾಯಿಲ್ ಅವರ ಹೆಸರಿನಲ್ಲಿದೆ. ಮುಂಬೈ ಇಂಡಿಯನ್ಸ್ ಪರ ಆಡುವಾಗ ಇಸ್ಮಾಯಿಲ್ ಒಂದೇ ಪಂದ್ಯದಲ್ಲಿ 20 ಡಾಟ್ ಬಾಲ್‌ಗಳನ್ನು ಎಸೆದು ಈ ಸಾಧನೆ ಮಾಡಿದ್ದಾರೆ.

ಓದಿ: ಲಾಸ್ಟ್​ ಓವರ್​ಗೆ​ 18 ರನ್ ಟಾರ್ಗೆಟ್! 0,0,6,4,6,4!! ಆರ್​ಸಿಬಿ ನಾಡಿನ್ ಅಬ್ಬರಕ್ಕೆ ಮುಂಬೈ ತತ್ತರ!

Last Updated : January 10, 2026 at 12:23 PM IST