ಕರ್ನಾಟಕ- ಜಮ್ಮು & ಕಾಶ್ಮೀರ ರಣಜಿ ಫೈನಲ್ ಡ್ರಾ ಆದ್ರೆ ಗೆಲ್ಲೋದು ಈ ತಂಡ! ಈ ಲೆಕ್ಕಾಚಾರ ಗೊತ್ತೇ?
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಜಮ್ಮು & ಕಾಶ್ಮೀರ-ಕರ್ನಾಟಕ ನಡುವಣ ರಣಜಿ ಟ್ರೋಫಿ ಫೈನಲ್ ಡ್ರಾ ಆದ್ರೆ ಗೆಲುವಿನ ಲೆಕ್ಕಾಚಾರ ಹೇಗೆ ಎಂಬುದನ್ನು ಇಲ್ಲಿ ನೋಡೋಣ.

Published : February 26, 2026 at 4:57 PM IST
ರಣಜಿ ಟ್ರೋಫಿ ಫೈನಲ್ ಸಾಮಾನ್ಯವಾಗಿ ಮ್ಯಾರಥಾನ್‌ನಂತೆ ದೀರ್ಘಾವಧಿಯ ಸ್ಪರ್ಧೆ ಉಂಟುಮಾಡುತ್ತದೆ. ಇದೀಗ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಜಮ್ಮು-ಕಾಶ್ಮೀರ ಮತ್ತು ಕರ್ನಾಟಕ ನಡುವಿನ ಪೈಪೋಟಿಯೂ ಇದೇ ರೀತಿ ಇದೆ. ಜಮ್ಮು ಮತ್ತು ಕಾಶ್ಮೀರ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಕರ್ನಾಟಕ 3ನೇ ದಿನದಾಟ ಆಡುತ್ತಿದ್ದು 5 ವಿಕೆಟ್‌ಗೆ 196 ರನ್ ಗಳಿಸಿದೆ.
ಈ ಪಂದ್ಯ ಡ್ರಾ ಆಗುವುದೇ?. ಡ್ರಾ ಆದರೆ ಯಾವ ತಂಡ ಗೆಲ್ಲುತ್ತದೆ? ಇದು ಸ್ವಲ್ಪ ಇಂಟರೆಸ್ಟಿಂಗ್ ಲೆಕ್ಕಚಾರ.
ಏಕೆಂದರೆ, ಲೀಗ್ ಪಂದ್ಯಗಳಿಗಿಂತ ಇದು ಭಿನ್ನ. ರಣಜಿ ಟ್ರೋಫಿ ಫೈನಲ್‌ನ ಗೆಲುವನ್ನು ಹಂಚಿಕೊಳ್ಳಲಾಗುವುದಿಲ್ಲ. ಇಲ್ಲಿ ವಿಜೇತರನ್ನು ಘೋಷಿಸಲೇಬೇಕಿದೆ. ಇಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಗಳಿಸುವ ತಂಡ ವಿಜೇತ ಎಂದು ಪರಿಗಣಿಸಲಾಗುತ್ತದೆ.
ಫೈನಲ್ ಪಂದ್ಯ ಸಂಪೂರ್ಣವಾಗಿ ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡರೆ, ಅಂದರೆ ಯಾವುದೇ ತಂಡವು ಇನ್ನೊಂದು ತಂಡವನ್ನು ಎರಡು ಬಾರಿ ಔಟ್ ಮಾಡುವ ಮೂಲಕ ಅಥವಾ ಟಾರ್ಗೆಟ್ ಬೆನ್ನಟ್ಟುವ ಮೂಲಕ ಗೆಲ್ಲದಿದ್ದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಹೊಂದಿರುವ ತಂಡವೇ 'ಚಾಂಪಿಯನ್'!.
A 💯 to remember for Mayank Agarawal 👏👏
— BCCI Domestic (@BCCIdomestic) February 26, 2026
He is fighting it out for Karnataka in the #RanjiTrophy Final 🫡
Updates ▶️ https://t.co/G0ytZLEyNB @IDFCFIRSTBank pic.twitter.com/5hcdYmmvuC
ಇದು ಯಾಕೆ?: ಹೌದು, ಪಂದ್ಯದ ದೀರ್ಘಾವಧಿಯಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡುವ ತಂಡವನ್ನು ಗುರುತಿಸುವುದು ಇದರ ಹಿಂದಿನ ಉದ್ದೇಶ.
ಈ ನಿಯಮಗಳ ಹಿನ್ನೆಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಫೈನಲ್ ಪಂದ್ಯದ ಪರಿಸ್ಥಿತಿಯನ್ನು ಆಧರಿಸಿ, ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೋಡೋಣ.
ಸನ್ನಿವೇಶ 1: ಕರ್ನಾಟಕ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದರೆ ಗೆಲುವು
ಕರ್ನಾಟಕ ತಂಡ ಜಮ್ಮು ಮತ್ತು ಕಾಶ್ಮೀರದ ಒಟ್ಟು 584 ರನ್‌ಗಳನ್ನು ಮೀರಿ 585 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದರೆ, ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯುತ್ತದೆ. ಪಂದ್ಯ ಡ್ರಾದಲ್ಲಿ ಕೊನೆಗೊಂಡರೂ ಸಹ ಕರ್ನಾಟಕ ರಣಜಿ ಟ್ರೋಫಿ ಚಾಂಪಿಯನ್ ಆಗುತ್ತದೆ.
ಕರ್ನಾಟಕ ಪ್ರಶಸ್ತಿ ಗೆಲ್ಲಲು ಇರುವ ಅತ್ಯಂತ ಸರಳ ಮಾರ್ಗವಿದು. ಆದರೆ ಇದು ಸದ್ಯದ ಮಟ್ಟಿಗೆ ಸವಾಲಿನ ಕೆಲಸ.
ಸನ್ನಿವೇಶ 2: ಕರ್ನಾಟಕ 584 ರನ್‌ಗಳನ್ನು ತಲುಪಲು ವಿಫಲವಾದರೆ ಜಮ್ಮು ಮತ್ತು ಕಾಶ್ಮೀರಕ್ಕೆ ಗೆಲುವು
ಕರ್ನಾಟಕ 584ಕ್ಕಿಂತ ಕಡಿಮೆ ರನ್‌ಗಳಿಗೆ ಆಲೌಟ್ ಆದರೆ, ಜಮ್ಮು ಮತ್ತು ಕಾಶ್ಮೀರ ಮೊದಲ ಇನ್ನಿಂಗ್ಸ್ ಮುನ್ನಡೆಯನ್ನು ಉಳಿಸಿಕೊಳ್ಳುತ್ತದೆ. ಆ ಸಂದರ್ಭದಲ್ಲಿ ಪಂದ್ಯದ ಸಮಯ ಉಳಿದರೂ ಅಥವಾ ಪಂದ್ಯ ಡ್ರಾದಲ್ಲಿ ಕೊನೆಗೊಂಡರೂ ಜಮ್ಮು ಮತ್ತು ಕಾಶ್ಮೀರ ವಿನ್ನರ್ ಎಂದು ಘೋಷಿಸಲಾಗುತ್ತದೆ. ಸದ್ಯ ತಂಡ ಈ ಹಂತದಲ್ಲಿದೆ ಎನ್ನಬಹುದು.
ಸನ್ನಿವೇಶ 3: ಮಳೆ ಅಥವಾ ಪಂದ್ಯದ ಸಮಯವು ಕರ್ನಾಟಕದ ಇನ್ನಿಂಗ್ಸ್ ಪೂರ್ಣಗೊಳಿಸುವುದನ್ನು ತಡೆಯಬಲ್ಲದು. ಇದು ನಡೆದರೆ ಕರ್ನಾಟಕಕ್ಕೆ ಅನುಕೂಲ (ಇದು ಗುಂಪು ಹಂತದ ಅಂಕಗಳನ್ನು ಆಧರಿಸಿ).
Standing up to the challenge 👏
— BCCI Domestic (@BCCIdomestic) February 26, 2026
Mayank Agarawal with a crucial knock for Karnataka 🙌
Updates ▶️ https://t.co/G0ytZLEyNB @IDFCFIRSTBank | #RanjiTrophy pic.twitter.com/Csytg0Nphi
ಬಾಹ್ಯ ಅಂಶಗಳು ಇನ್ನಿಂಗ್ಸ್ ಪೂರ್ಣಗೊಳಿಸುವುದನ್ನು ತಡೆಯುವ ಮತ್ತು ಮೊದಲ ಇನ್ನಿಂಗ್ಸ್ ಮುನ್ನಡೆಯನ್ನು ಗಳಿಸದೇ ಇರುವ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಪಂದ್ಯಾವಳಿಯ ನಿಯಮಗಳು ಒಟ್ಟಾರೆ ಸ್ಪರ್ಧೆಯ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು. ಆದರೆ, ಹೆಚ್ಚಿನ ರಣಜಿ ಟ್ರೋಫಿ ಫೈನಲ್‌ಗಳಲ್ಲಿ ನಿರ್ಣಾಯಕ ಅಂಶ ಮೊದಲ ಇನ್ನಿಂಗ್ಸ್ ಮುನ್ನಡೆಯಾಗಿಯೇ ಉಳಿದಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್, ಸೂಪರ್ 8: ಭಾರತ-ಜಿಂಬಾಬ್ವೆ ಮಹತ್ವದ ಪಂದ್ಯ ಇಂದು; ಲಘುವಾಗಿ ಪರಿಗಣಿಸಬೇಡಿ-ಕುಂಬ್ಳೆ ಎಚ್ಚರಿಕೆ

