ETV Bharat / sports

ಸತತ ಎರಡನೇ ಟ್ರೋಫಿ ಗೆದ್ದ ಆರ್​ಸಿಬಿ ಮೇಲೆ ಹಣದ ಸುರಿಮಳೆ: ವೈಭವ್​ ಸೂರ್ಯವಂಶಿಗೂ ಸಿಕ್ಕಿತು ಭಾರಿ ಮೊತ್ತ

ಐಪಿಎಲ್​ 19ನೇ ಆವೃತ್ತಿಯಲ್ಲಿ ಚಾಂಪಿಯನ್​ ಆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ರನ್ನರ್​ ಅಪ್​ ತಂಡ ಗುಜರಾತ್​ ಟೈಟಾನ್ಸ್​ ತಂಡಗಳಿಗೆ ಭಾರಿ ಮೊತ್ತದ ಬಹುಮಾನ ಸಿಕ್ಕಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿದೆ.

ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ
ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ (IANS)
author img

By ETV Bharat Sports Team

Published : June 1, 2026 at 6:56 AM IST

|

Updated : June 1, 2026 at 7:20 AM IST

3 Min Read
Choose ETV Bharat

ಎರಡು ತಿಂಗಳು ಕಾಲ ನಡೆದಿದ್ದ ಮಿಲಿಯನ್​ ಡಾಲರ್​ ಟೂರ್ನಿ ಖ್ಯಾತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​​​​​​​ಗೆ ಭಾನುವಾರ ಅಂತಿಮ ತೆರೆಬಿದ್ದಿದೆ. ಎರಡು ತಿಂಗಳು ಕಾಲ ನಡೆದಿದ್ದ ಈ ಮೆಗಾ ಟೂರ್ನಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮತ್ತೊಮ್ಮೆ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ನರೇಂದ್ರ ಮೋದಿ ಮೈದಾನದಲ್ಲಿ ನಡೆದಿದ್ದ ರೋಚಕ ಫೈನಲ್​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್ ನೀಡಿದ್ದ 155 ರನ್​ಗಳ ಸಾಮಾನ್ಯ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ 18 ಓವರ್​ಗಳಲ್ಲಿ ಗುರಿಯನ್ನು ತುಲಪಿತು. ಇದರೊಂದಿಗೆ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದುಕೊಂಡು ದಾಖಲೆ ಬರೆದಿದೆ. ಇದಕ್ಕೂ ಮೊದಲು ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​​ ತಂಡಗಳು ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿವೆ.

ಈ ಗೆಲುವಿನೊಂದಿಗೆ ಆರ್‌ಸಿಬಿ ತಂಡವು ಭಾರಿ ಮೊತ್ತದ ಬಹುಮಾನವನ್ನು ಪಡೆದುಕೊಂಡಿದೆ, ಸೋತ ಗುಜರಾತ್ ಸಹ ಕೋಟ್ಯಂತರ ರೂಪಯಿ ಪಡೆದುಕೊಂಡಿತು. ವಿಜೇತ ಮತ್ತು ರನ್ನರ್ ಅಪ್ ತಂಡಗಳಲ್ಲದೆ, ಪ್ಲೇಆಫ್ ತಲುಪಿದ ಇತರ ತಂಡಗಳು ಸಹ ಕೋಟ್ಯಂತರ ರೂಪಾಯಿಗಳ ಬಹುಮಾನವನ್ನು ಪಡೆದವು. ಇದಲ್ಲದೆ, ವೈಯಕ್ತಿಕ ಪ್ರಶಸ್ತಿ ವಿಜೇತರು ಸಹ ಆಕರ್ಷಕ ಮೊತ್ತವನ್ನು ಪಡೆದರು.

ಯಾರಿಗೆ ಎಷ್ಟು ಹಣ ಸಿಕ್ಕಿದೆ?: ಮಾಧ್ಯಮ ವರದಿಗಳ ಪ್ರಕಾರ, ಹಿಂದಿನ ಸೀಸನ್‌ಗೆ ಹೋಲಿಸಿದರೆ ಐಪಿಎಲ್ 2026ರ ಬಹುಮಾನದ ಹಣದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ. ಈ ಸೀಸನ್‌ಗೆ ಒಟ್ಟು 46.5 ಕೋಟಿ ರೂ. ಬಹುಮಾನ ಮೊತ್ತವನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ, ಐಪಿಎಲ್ 2026ರ ವಿಜೇತ ತಂಡವು 20 ಕೋಟಿ ರೂ.ಗಳನ್ನು ಪಡೆದರೆ, ಅಂತಿಮ ಪಂದ್ಯದಲ್ಲಿ ಸೋತ ರನ್ನರ್ ಅಪ್ ತಂಡವು 12.5 ಕೋಟಿ ರೂ.ಗಳನ್ನು ಪಡೆದುಕೊಂಡಿತು. ಇದಲ್ಲದೇ, ಕ್ವಾಲಿಫೈಯರ್ -2 ರಲ್ಲಿ ಸೋತು ಮೂರನೇ ಸ್ಥಾನ ಪಡೆದ ರಾಜಸ್ಥಾನ ರಾಯಲ್ಸ್ 7 ಕೋಟಿ ರೂ.ಗಳನ್ನು ಪಡೆದರೆ, ಎಲಿಮಿನೇಟರ್‌ನಲ್ಲಿ ಸೋತು ನಾಲ್ಕನೇ ಸ್ಥಾನ ಪಡೆದ ಸನ್‌ರೈಸರ್ಸ್ ಹೈದರಾಬಾದ್ 6.5 ಕೋಟಿ ರೂ.ಗಳನ್ನು ಪಡೆದುಕೊಂಡಿತು.

ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಮತ್ತು ಇತರ ಪ್ರಶಸ್ತಿಗಳ ಬಹುಮಾನ ಮೊತ್ತ ಎಷ್ಟು: ಈ ಪ್ರಶಸ್ತಿಗಳ ಜೊತೆಗೆ, ಆಟಗಾರರು ತಮ್ಮ ವೈಯಕ್ತಿಕ ಪ್ರದರ್ಶನಕ್ಕಾಗಿ ಆಕರ್ಷಕ ಬಹುಮಾನಗಳನ್ನು ಸಹ ಪಡೆದಿದ್ದಾರೆ. ಋತುವಿನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಆರೆಂಜ್ ಕ್ಯಾಪ್ ಮತ್ತು 10 ಲಕ್ಷ ರೂ., ಹೆಚ್ಚು ವಿಕೆಟ್ ಪಡೆದ ಬೌಲರ್‌ ಪರ್ಪಲ್ ಕ್ಯಾಪ್ ಜೊತೆ 10 ಲಕ್ಷ ರೂ ಪಡೆದುಕೊಂಡಿದ್ದಾರೆ.

ಇದರ ಜೊತೆಗೆ, 'ಅತ್ಯಂತ ಮೌಲ್ಯಯುತ ಆಟಗಾರ' ಮತ್ತು 'ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್' ಆಟಗಾರ ಸಹ ತಲಾ 10 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಾರೆ. 'ಋತುವಿನ ಉದಯೋನ್ಮುಖ ಆಟಗಾರ' ಪ್ರಶಸ್ತಿ ಗೆದ್ದ ಆಟಗಾರನಿಗೆ 10 ಲಕ್ಷ ರೂ. ಬಹುಮಾನ ಸಿಕ್ಕಿದೆ.

ಯಾರಿಗೆ ಎಷ್ಟು ಬಹುಮಾನದ ಹಣ?

ಐಪಿಎಲ್ 2026 ಪ್ರಶಸ್ತಿ ಪಟ್ಟಿ:

  • ವಿಜೇತ ತಂಡ - ಆರ್‌ಸಿಬಿ - 20 ಕೋಟಿ ರೂ.,
  • ರನ್ನರ್ ಅಪ್ - ಗುಜರಾತ್ ಟೈಟಾನ್ಸ್ - 13 ಕೋಟಿ ರೂ.,
  • ಮೂರನೇ ಸ್ಥಾನ - ರಾಜಸ್ಥಾನ ರಾಯಲ್ಸ್ - 7 ಕೋಟಿ
  • ನಾಲ್ಕನೇ ಸ್ಥಾನ - ಸನ್‌ರೈಸರ್ಸ್ ಹೈದರಾಬಾದ್ - 6.5 ಕೋಟಿ
  • ಆರೆಂಜ್ ಕ್ಯಾಪ್ - ವೈಭವ್ ಸೂರ್ಯವಂಶಿ - 10 ಲಕ್ಷ ರೂ.,
  • ಪರ್ಪಲ್ ಕ್ಯಾಪ್ - ಕಗಿಸೊ ರಬಾಡ - 10 ಲಕ್ಷ ರೂ.,
  • ಸರಣಿಯ ಅತ್ಯಂತ ಮೌಲ್ಯಯುತ ಆಟಗಾರ - ವೈಭವ್ ಸೂರ್ಯವಂಶಿ - 15 ಲಕ್ಷ ರೂ.,
  • ಋತುವಿನ ಉದಯೋನ್ಮುಖ ಆಟಗಾರ - ವೈಭವ್ ಸೂರ್ಯವಂಶಿ - 10 ಲಕ್ಷ ರೂ.,
  • ಅತಿ ಹೆಚ್ಚು ಬೌಂಡರಿಗಳು - ಸಾಯಿ ಸುದರ್ಶನ್ (75) - 10 ಲಕ್ಷ ರೂ.,
  • ಹೆಚ್ಚಿನ ವಿಕೆಟ್ - ಕಗಿಸೊ ರಬಾಡ (72) - 10 ಲಕ್ಷ ರೂ.,
  • ಗ್ರೀನ್ ಡಾಟ್ ಬಾಲ್ - ಮೊಹಮ್ಮದ್ ಸಿರಾಜ್ (172) - 10 ಲಕ್ಷ ರೂ
  • ಋತುವಿನ ಅತ್ಯುತ್ತಮ ಕ್ಯಾಚ್ - ಮನೀಶ್ ಪಾಂಡೆ - 10 ಲಕ್ಷ ರೂ,
  • ಫೇರ್ ಪ್ಲೇ ಪ್ರಶಸ್ತಿ - ಪಂಜಾಬ್ ಕಿಂಗ್ಸ್ ತಂಡ
  • ಪಿಚ್ ಮತ್ತು ಗ್ರೌಂಡ್ ಪ್ರಶಸ್ತಿ - ಧರ್ಮಶಾಲಾ - 20.5 ಲಕ್ಷ ರೂ
  • ಪಿಚ್ ಮತ್ತು ಮೈದಾನ ಪ್ರಶಸ್ತಿ - ಈಡನ್ ಗಾರ್ಡನ್ಸ್ (ಕೋಲ್ಕತ್ತಾ) - 50 ಲಕ್ಷ,
  • ಋತುವಿನ ಸೂಪರ್ ಸ್ಟ್ರೈಕರ್ - ವೈಭವ್ ಸೂರ್ಯವಂಶಿ - ಟಾಟಾ ಸಿಯೆರಾ ಕಾರ್​

ಇದನ್ನೂ ಓದಿ: "ಈ ಸಲವೂ ಕಪ್​ ನಮ್ಮದೇ" ಮತ್ತೊಮ್ಮೆ ಐಪಿಎಲ್​ ಸಿಂಹಾಸನ ಏರಿದ RCB!!

Last Updated : June 1, 2026 at 7:20 AM IST