ಡಿಸೆಂಬರ್‌ನಲ್ಲಿ ಐಪಿಎಲ್ ಮಿನಿ ಹರಾಜು; ನ. 27ಕ್ಕೆ WPL ಮೆಗಾ ಆಕ್ಷನ್
ಮುಂದಿನ ಆವೃತ್ತಿಯ ಐಪಿಎಲ್ ಹಿನ್ನೆಲೆ ಈ ವರ್ಷ ಕೊನೆಯಲ್ಲಿ ಮಿನಿ ಹರಾಜು ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.


Published : November 9, 2025 at 8:13 PM IST
IPL Mini Auction Date: ಐಪಿಎಲ್ 2026ರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ತೋರುತ್ತದೆ. ಡಿಸೆಂಬರ್ 15 ರಂದು ಬಿಸಿಸಿಐ ಹರಾಜನ್ನು ನಡೆಸಲು ಯೋಜಿಸುತ್ತಿದೆ ಎಂದು ವರದಿಗಳಿವೆ. ಅಲ್ಲದೇ ಎಲ್ಲಾ ಫ್ರಾಂಚೈಸಿಗಳು ನವೆಂಬರ್ 15 ರೊಳಗೆ ಬಿಸಿಸಿಐಗೆ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಸಲ್ಲಿಸಲು ತಿಳಿಸಿದೆ. ಹಿಂದಿನ ಎರಡು ಋತುಗಳಂತೆ, ಈ ಬಾರಿಯೂ ಐಪಿಎಲ್ ಹರಾಜು ಗಲ್ಫ್ ದೇಶಗಳಲ್ಲಿ ನಡೆಯಲಿದ್ದು, ಈ ಮಾಹಿತಿಯನ್ನು ಕೆಲವು ದಿನಗಳ ಹಿಂದೆಯೇ ಫ್ರಾಂಚೈಸಿಗಳಿಗೆ ತಿಳಿಸಲಾಗಿದೆ.
ಆದಾಗ್ಯೂ, ಇತ್ತೀಚಿನ ವರದಿಗಳು ಈ ಬಾರಿ ಹರಾಜು ಭಾರತದಲ್ಲಿ ನಡೆಯಲಿದೆ ಎಂದು ಹೇಳುತ್ತವೆ. ಆದ್ರೆ ಹರಾಜು ಯಾವ ನಗರದಲ್ಲಿ ನಡೆಯಲಿದೆ ಎಂಬುದು ಸ್ಪಷ್ಟವಾಗಿಲ್ಲ. ಕೊನೆಯ ಎರಡು ಹರಾಜುಗಳು ವಿದೇಶದಲ್ಲಿ ನಡೆದಿದ್ದವು. ಹರಾಜು ಪ್ರಕ್ರಿಯೆಯನ್ನು 2023ರಲ್ಲಿ ದುಬೈನಲ್ಲಿ ಮತ್ತು 2024ರಲ್ಲಿ ಜೆಡ್ಡಾದಲ್ಲಿ (ಸೌದಿ ಅರೇಬಿಯಾ) ನಡೆಸಲಾಗಿತ್ತು. ಆದಾಗ್ಯೂ, ಐಪಿಎಲ್ 2026ರ ಹರಾಜು ಪ್ರಕ್ರಿಯೆಯ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
ನವೆಂಬರ್ 27ಕ್ಕೆ ಮೆಗಾ ಹರಾಜು: ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಋತುವಿನ ಮೆಗಾ ಹರಾಜು ನವೆಂಬರ್ 27 ರಂದು ದೆಹಲಿಯಲ್ಲಿ ನಡೆಯಲಿದೆ. ಪಂದ್ಯಾವಳಿಯಲ್ಲಿರುವ ಐದು ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ ವಿವರಗಳನ್ನು ಈಗಾಗಲೇ ಬಹಿರಂಗಪಡಿಸಿವೆ. ಡೆಲ್ಲಿ ಕ್ಯಾಪಿಟಲ್ಸ್ 13, ಗುಜರಾತ್ ಜೈಂಟ್ಸ್ 16, ಮುಂಬೈ ಇಂಡಿಯನ್ಸ್ 13, ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಮತ್ತು ಯುಪಿ ವಾರಿಯರ್ಸ್ನಲ್ಲಿ 17 ಸ್ಲಾಟ್ಗಳು ಖಾಲಿ ಇವೆ. ಯುಪಿ ಪರ್ಸ್ನಲ್ಲಿ 14.5 ಕೋಟಿ ರೂ.ಗಳ ಅತ್ಯಧಿಕ ಮೊತ್ತ ಉಳಿಸಿಕೊಂಡಿದೆ.
ಆರ್ಸಿಬಿ ಉಳಿಸಿಕೊಂಡ ಆಟಗಾರ್ತಿಯರು: ಸ್ಮೃತಿ ಮಂಧಾನ (ರೂ. 3.5 ಕೋಟಿ), ರಿಚಾ ಘೋಷ್ (ರೂ. 2.75 ಕೋಟಿ), ಎಲಿಸಾ ಪೆರ್ರಿ (ರೂ. 2 ಕೋಟಿ), ಮತ್ತು ಶ್ರೇಯಾಂಕ ಪಾಟೀಲ್ (ರೂ. 60 ಲಕ್ಷ) ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ.
ಬಿಡುಗಡೆಯಾದ ಆಟಗಾರ್ತಿಯರು: ಡ್ಯಾನಿ ವ್ಯಾಟ್, ಸಬ್ಬಿನೇನಿ ಮೇಘನಾ, ಚಾರ್ಲಿ ಡೀನ್, ಜಾರ್ಜಿಯಾ ವೇರ್ಹ್ಯಾಮ್, ಹೀದರ್ ಗ್ರಹಾಂ, ಜೋಶಿತಾ ವಿಜೆ, ಕನಿಕಾ ಅಹುಜಾ, ಕಿಮ್ ಗಾರ್ತ್, ಪ್ರೇಮಾ ರಾವತ್, ರಾಘ್ವಿ ಬಿಸ್ಟ್, ಸ್ನೇಹ ರಾಣಾ, ನುಝತ್ ಪರ್ವೀನ್, ಏಕ್ತಾ ಬಿಷ್ತ್, ಜಾಗ್ರವಿ ಪವಾರ್, ರೇಣುಕಾ ಸಿಂಗ್.
ಯುಪಿ ವಾರಿಯರ್ಸ್: ತಂಡವು ಶ್ವೇತಾ ಸೆಹ್ರಾವತ್ (ರೂ. 50 ಲಕ್ಷ) ಅವರನ್ನು ಮಾತ್ರ ಉಳಿಸಿಕೊಂಡಿದೆ. ಅವರ ಬಳಿ ಎಲ್ಲಾ ಫ್ರಾಂಚೈಸಿಗಳಿಗಿಂತ ಹೆಚ್ಚು ರೂ. 14.5 ಕೋಟಿ ಉಳಿದಿದೆ. ಅವರು ಈ ಮೊತ್ತವನ್ನು ಮೆಗಾ ಹರಾಜಿನಲ್ಲಿ ಬಳಸುವ ಸಾಧ್ಯತೆಯಿದೆ.
ಬಿಡುಗಡೆಯಾದ ಆಟಗಾರ್ತಿಯರು: ಅರುಷಿ ಗೋಯೆಲ್, ಜಾರ್ಜಿಯಾ ವೋಲ್, ಕಿರಣ್ ನವಗಿರೆ, ವೃಂದಾ ದಿನೇಶ್, ಚಿನೆಲ್ಲೆ ಹೆನ್ರಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕ್ರಾಂತಿ ಗೌಡ್, ಪೂನಮ್ ಖೇಮ್ನಾರ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಕ್‌ಗ್ರಾತ್, ಉಮಾ ಚೆಟ್ರಿ, ಅಲನಾ ಕಿಂಗ್, ಅಂಜಲಿ ಸಾರ್ವಾನಿ, ಅಂಜಲಿ ಸಾರ್ವಾನಿ, ರಾಜೇಶ್ವರಿ ಸವಾನಿ ಠಾಕೂರ್.
ತಂಡಗಳು ಉಳಿಸಿಕೊಂಡ ಪರ್ಸ್ ಮೊತ್ತ
- ಯುಪಿ ವಾರಿಯರ್ಸ್ - 14.5 ಕೋಟಿ
- ಗುಜರಾತ್ ಜೈಂಟ್ಸ್ - 9 ಕೋಟಿ
- ರಾಯಲ್ ಚಾಲೆಂಜರ್ಸ್ ಬೆಂಗಳೂರು - 6.15 ಕೋಟಿ
- ಮುಂಬೈ ಇಂಡಿಯನ್ಸ್ - 5.75 ಕೋಟಿ
- ಡೆಲ್ಲಿ ಕ್ಯಾಪಿಟಲ್ಸ್ - 5.7 ಕೋಟಿ
ಇದನ್ನೂ ಓದಿ: ಪಂದ್ಯ ರದ್ದಾದರೂ ವಿಶ್ವದಾಖಲೆ ಬರೆದ ಶುಭ್ಮನ್ ಗಿಲ್-ಅಭಿಷೇಕ್ ಶರ್ಮಾ

