ನರೇಂದ್ರ ಮೋದಿ ಮೈದಾನದಲ್ಲಿ RCB ದಾಖಲೆ ಹೇಗಿದೆ? ಇಲ್ಲಿ ಗೆದ್ದ - ಸೋತ ಪಂದ್ಯಗಳೆಷ್ಟು?
ಐಪಿಎಲ್ 2026ರ ಫೈನಲ್ ಪಂದ್ಯ ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ಮಧ್ಯೆ ನಡೆಯಲಿದೆ. ಈ ಪಂದ್ಯಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಈ ಕೆಳಗಿದೆ.


Published : May 31, 2026 at 3:06 PM IST
ಸುಮಾರು ಎರಡು ತಿಂಗಳು ಕಾಲ ನಡೆದಿದ್ದ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಇಂದು ತೆರೆ ಬೀಳಲಿದೆ. ಟೂರ್ನಿಯಾದ್ಯಂತ ಅತ್ಯುತ್ತಮ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪ್ರಶಸ್ತಿ ನಿರ್ಣಾಯಕ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಿಕೊಳ್ಳುತ್ತಿದೆ. ನಾಲ್ಕನೇ ಬಾರಿಗೆ ಈ ಮೈದಾನದಲ್ಲಿ ಐಪಿಎಲ್ ಫೈನಲ್ ಪಂದ್ಯ ಆಯೋಜಿಸಲಾಗುತ್ತದೆ. ಇಲ್ಲಿ ಆರ್‌ಸಿಬಿ ತಂಡ ಇದುವರೆಗೆ ಆಡಿದ್ದೆಷ್ಟು ಮತ್ತು ಗೆದ್ದ - ಸೋತ ಪಂದ್ಯಗಳೆಷ್ಟು ಎಂಬುದ ಜೊತೆಗೆ ಇತರೆ ಪ್ರಮುಖ ಮಾಹಿತಿಯ ಬಗ್ಗೆ ಇದೀಗ ತಿಳಿದುಕೊಳ್ಳೊಣ.
ಪಿಚ್ ವರದಿ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿರುವ ಪಿಚ್ ಬ್ಯಾಟಿಂಗ್ ಸ್ನೇಹಿ ಆಗಿರಲಿದೆ. ಈ ಮೈದಾನವು ಬಹಳ ಹಿಂದಿನಿಂದಲೂ ಬ್ಯಾಟಿಂಗ್ ಸ್ನೇಹಿ ಪಿಚ್ ಎಂದು ಕರೆಯಲ್ಪಡುತ್ತದೆ, ಇಲ್ಲಿ ಚೆಂಡು ಉತ್ತಮ ಬೌನ್ಸ್ ಮತ್ತು ವೇಗದೊಂದಿಗೆ ಬ್ಯಾಟ್‌ಗೆ ಬರುತ್ತದೆ. ಬ್ಯಾಟ್ಸ್‌ಮನ್‌ಗಳು, ವಿಶೇಷವಾಗಿ ಕೆಂಪು ಮಣ್ಣಿನ ಪಿಚ್‌ನಲ್ಲಿ, ತಮ್ಮ ಹೊಡೆತಗಳನ್ನು ಮುಕ್ತವಾಗಿ ಆಡಬಹುದು ಇಂದು ಸಹ ದೊಡ್ಡ ಮೊತ್ತವನ್ನು ನಿರೀಕ್ಷಿಸಬಹುದಾಗಿದೆ. ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 160 ರಿಂದ 180 ರನ್‌ಗಳ ನಡುವೆ ಇರಲಿದೆ, ಆದರೆ 170 ರಿಂದ 180 ಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸುವುದು ಸವಾಲಿನ ಸಂಗತಿಯಾಗಿರಲಿದೆ. ಆರಂಭದಲ್ಲಿ ವೇಗದ ಬೌಲರ್‌ಗಳು ಹೊಸ ಸ್ವಿಂಗ್ ಪಡೆಯಬಹುದಾಗಿದೆ. ಮಧ್ಯ ಓವರ್‌ಗಳಲ್ಲಿ ಪಿಚ್ ನಿಧಾನವಾದರೆ, ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿ ಬೀಳುವ ಸಾಧ್ಯತೆಯೂ ಇದೆ. ಆದ್ದರಿಂದ, ಟಾಸ್ ಗೆಲ್ಲುವ ತಂಡಗಳು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಬಹುದು.
ಇಂದಿನ ಪಂದ್ಯಕ್ಕೆ ಹಮವಾನ ಹೇಗಿರಲಿದೆ?: ಆರ್‌ಸಿಬಿ vs ಜಿಟಿ ಫೈನಲ್ ಪಂದ್ಯಕ್ಕೂ ಅಕ್ಯೂವೆದರ್ ಪ್ರಕಾರ, ಸಾಮಾನ್ಯವಾಗಿರಲಿದೆ. ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆಗಳು ತೀರ ಕಡಿಮೆ ಇರಲಿದೆ. ಈ ಹಿನ್ನೆಲೆ ಇಂದಿನ ಪಂದ್ಯಕ್ಕೆ ಯಾವುದೇ ದೊಡ್ಡ ಅಡಚಣೆ ಉಂಟಾಗುವ ಸಾಧ್ಯತೆ ಇಲ್ಲ. ಭಾನುವಾರ ಸಂಜೆ ಮಳೆಯಾಗುವ ಸಾಧ್ಯತೆ ಕೇವಲ ಶೇ. 2 ರಷ್ಟು ಮಾತ್ರ ಇದ್ದು ಬೆಳಗಿನ ಸಮಯ ಬಿಸಿಲಿನ ವಾತಾವರಣ ಇರಲಿದೆ. ಇಂದು ಅಹಮದಾಬಾದ್‌ನಲ್ಲಿ ಗರಿಷ್ಠ ತಾಪಮಾನ ಸುಮಾರು 41 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ ಸುಮಾರು 31 ಸೆಲ್ಸಿಯಸ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ಕನಸು ಹತ್ತಿರದಲ್ಲಿದೆ. ಈಗ ಅದನ್ನು ಸಾಕಾರಗೊಳಿಸುವ ಸಮಯ. ✨🧿
— Royal Challengers Bengaluru (@RCBTweets) May 31, 2026
ಐಪಿಎಲ್ 2️⃣0️⃣2️⃣6️⃣ ಫೈನಲ್ಗೆ ನಾವ್ ತಯಾರಿದ್ದೀವಿ! 🏆🔥
ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲಿರಲಿ, 12th Man Army! 🙌❤️#PlayBold #ನಮ್ಮRCB #IPL2026 pic.twitter.com/Iv1OGjxMu5
ಹೆಡ್ ಟು ಹೆಡ್ ದಾಖಲೆ: ಐಪಿಎಲ್ ಇತಿಹಾಸದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ಒಟ್ಟು 9 ಪಂದ್ಯಗಳು ನಡೆದಿದ್ದು, ಅದರಲ್ಲಿ ಆರ್‌ಸಿಬಿ 5 ಪಂದ್ಯಗಳನ್ನು ಗೆದ್ದಿದೆ ಮತ್ತು ಗುಜರಾತ್ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಐಪಿಎಲ್ 2026 ರಲ್ಲಿ, ಈ ಎರಡೂ ತಂಡಗಳು ಪರಸ್ಪರ 3 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಆರ್‌ಸಿಬಿ 2-1 ಮುನ್ನಡೆ ಸಾಧಿಸಿದೆ.
ಮೋದಿ ಮೈದಾನದಲ್ಲಿ ಆರ್‌ಸಿಬಿ ದಾಖಲೆ ಹೇಗಿದೆ?: ಈ ಮೈದಾನದಲ್ಲಿ ಆರ್‌ಸಿಬಿ ಇದುವರೆಗೆ ಒಟ್ಟು 8 ಪಂದ್ಯಗಳನ್ನು ಆಡಿದ್ದು ಇದರಲ್ಲಿ 4 ಬಾರಿ ಗೆಲುವು 4 ಬಾರಿ ಸೋಲನ್ನು ಕಂಡಿದೆ. ಈ ಮೈದಾನದಲ್ಲಿ ವಿರಾಟ್ ಕೊಹ್ಲಿ 48.33ರ ಸರಾಸರಿಯಲ್ಲಿ 290 ರನ್‌ಗಳನ್ನು ಕಲೆಹಾಕಿದ್ದರೇ, ರಜತ್ ಪಾಟಿದಾರ್ 33.16ರ ಸರಾಸರಿಯಲ್ಲಿ 199 ರನ್ ಗಳಿಸಿದ್ದಾರೆ.
ಸಂಭಾವ್ಯ ತಂಡಗಳು - ರಾಯಲ್ ಚಾಲೆಂಜರ್ಸ್ ಬೆಂಗಳೂರು: ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ ವುಡ್, ರಾಸಿಖ್ ಸಲಾಮ್ ವುಡ್, ರಾಸಿಖ್ ಸಲಾಮ್ ವುಡ್.
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: 53 ಕೆಜಿ ಟ್ರಯಲ್ಸ್ನಲ್ಲಿ ಸೋತ ವಿನೇಶ್ ಫೋಗಟ್; ಏಷ್ಯನ್ ಗೇಮ್ಸ್ ಕನಸು ಭಗ್ನ!

