ETV Bharat / sports

ಭಾರತ vs ಇಂಗ್ಲೆಂಡ್​ ಮಹಿಳಾ ತಂಡಗಳ 2ನೇ ಟಿ20 ಪಂದ್ಯ; ಹೆಡ್​ ಟು ಹೆಡ್​, ಪಿಚ್​, ಸಂಭಾವ್ಯ ತಂಡ ಮಾಹಿತಿ

ಭಾರತ ಮತ್ತು ಇಂಗ್ಲೆಂಡ್​ ಮಹಿಳಾ ತಂಡಗಳು ಇಂದು ಎರಡನೇ ಟಿ20 ಪಂದ್ಯದಲ್ಲಿ ಮುಖಾಮುಖಿ ಆಗಲಿದ್ದು ಈ ಪಂದ್ಯಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಈ ಕೆಳಗಿದೆ.

ಭಾರತ ಇಂಗ್ಲೆಂಡ್​ ಮಹಿಳಾ ಟಿ20
ಭಾರತ ಇಂಗ್ಲೆಂಡ್​ ಮಹಿಳಾ ಟಿ20 (IANS)
author img

By ETV Bharat Sports Team

Published : May 30, 2026 at 12:13 PM IST

2 Min Read
Choose ETV Bharat

INDW vs ENGW: ಭಾರತ ಮಹಿಳಾ ತಂಡವು ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಟೀಮ್​ ಇಂಡಿಯಾದ ಇದೀಗ ಎರಡನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಮತ್ತೊಂದೆಡೆ, ಚಾರ್ಲಿ ಡೀನ್ ನೇತೃತ್ವದ ಇಂಗ್ಲೆಂಡ್ ತಂಡ ಮೊದಲ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವದರ ಜೊತೆಗೆ ಸರಣಿಯನ್ನು ಉಳಿಸಿಕೊಳ್ಳುವತ್ತ ಗಮನಹರಿಸಿ ಈ ಪಂದ್ಯವನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ತಂಡದ ಬ್ಯಾಟಿಂಗ್ ಪ್ರದರ್ಶನವು ಸೋಲಿಗೆ ಕಾರಣವೆಂದು ಪರಿಗಣಿಸಲಾಗಿದೆ.

ಆದಾಗ್ಯೂ, ಡೇನಿಯಲ್ ವ್ಯಾಟ್-ಹಾಡ್ಜ್, ಮಾಯಾ ಬೌಚರ್, ಹೀದರ್ ನೈಟ್, ಆಮಿ ಜೋನ್ಸ್ ಮತ್ತು ಅಲೈಸ್ ಕ್ಯಾಪ್ಸೆ ಅವರಂತಹ ಕ್ರಿಯಾತ್ಮಕ ಆಟಗಾರ್ತಿಯರ ಉಪಸ್ಥಿತಿಯೊಂದಿಗೆ ತಂಡವು ಉತ್ತಮ ಶಕ್ತಿಯಾಗಿ ಕಂಡುಬರುತ್ತದೆ. ಬೌಲಿಂಗ್ ವಿಷಯದಲ್ಲಿ, ಸೋಫಿ ಎಕ್ಲೆಸ್ಟೋನ್, ಲಾರೆನ್ ಪೆನ್, ಲಾರೆನ್ ಫಿಲ್ಲರ್, ಇಜ್ಜಿ ವಾಂಗ್ ಮತ್ತು ಲಿನ್ಸೆ ಸ್ಮಿತ್ ಅವರ ಪ್ರದರ್ಶನದಿಂದ ತಂಡವು ಹೆಚ್ಚು ಆತ್ಮವಿಶ್ವಾಸದಿಂದ ಕಾಣುತ್ತಿದೆ.

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯ ಇಂದು ಬ್ರಿಸ್ಟಲ್‌ನ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಪಿಚ್ ವರದಿ: ಬ್ರಿಸ್ಟಲ್‌ನ ಕೌಂಟಿ ಮೈದಾನದಲ್ಲಿರುವ ಪಿಚ್ ಸಾಂಪ್ರದಾಯಿಕವಾಗಿ ಬ್ಯಾಟರ್​ಗಳ ಸ್ವರ್ಗವಾಗಿದೆ, ಚೆಂಡು ಸಲೀಸಾಗಿ ಬ್ಯಾಟ್‌ಗೆ ಬರುವುದರಿಂದ, ದೊಡ್ಡ ಮೊತ್ತದ ಸ್ಕೋರ್​ ಕಲೆಹಾಕಲು ಸಾಧ್ಯವಾಗಲಿದೆ. ಇಲ್ಲಿಯ ಕಿರಿದಾದ ಬೌಂಡರಿಗಳು ಮತ್ತು ವೇಗದ ಔಟ್‌ಫೀಲ್ಡ್ ಬ್ಯಾಟರ್​​ಗಳಿಗೆ ಅನುವು ಮಾಡಿಕೊಡಲಿದೆ. ಈ ಟ್ರ್ಯಾಕ್ ಆಕ್ರಮಣಕಾರಿ ಸ್ಟ್ರೋಕ್ ಆಟಕ್ಕೆ ಹೆಚ್ಚಿನ ಪ್ರತಿಫಲ ನೀಡುತ್ತದೆ, ವೇಗದ ಬೌಲರ್‌ಗಳು ಆರಂಭಿಕ ಓವರ್‌ಗಳಲ್ಲಿ ಉತ್ತಮ ಸ್ವಿಂಗ್​ ಮತ್ತಿ ಬೌಂಸರ್​ ಪಡೆಯಬಹುದಾಗಿದೆ. ಆಟ ಮುಂದುವರೆದಂತೆ ಪಿಚ್​ ಸ್ವಲ್ಪ ನಿಧಾನವಾಗಲಿದ್ದು ನಂತರ ಸ್ಪಿನ್ನರ್‌ಗಳಿಗೆ ಹಿಡಿತ ಸಾಧಿಸುತ್ತಾರೆ. ಈ ಮೈದಾನದಲ್ಲಿ ಚೇಸಿಂಗ್​ ದಾಖಲೆಗಳನ್ನು ಗಮನಿಸಿದರೆ, ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಳ್ಳಬಹುದು.

ಹೆಡ್​ ಟು ಹೆಡ್​ ದಾಖಲೆ: ಇದುವರೆಗೆ ಉಭಯ ತಂಡಗಳು ಒಟ್ಟು 36 ಪಂದ್ಯಗಳನ್ನು ಆಡಿದ್ದು ಇದರಲ್ಲಿ ಇಂಗ್ಲೆಂಡ್ 24 ಬಾರಿ ಗೆದ್ದು ಮೇಲುಗೈ ಸಾಧಿಸಿದೆ. ಭಾರತ 12 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.

ತಂಡಗಳು - ಇಂಗ್ಲೆಂಡ್: ಸೋಫಿಯಾ ಡಂಕ್ಲಿ, ಆಲಿಸ್ ಕ್ಯಾಪ್ಸಿ, ಮಾಯಾ ಬೌಚಿಯರ್, ಹೀದರ್ ನೈಟ್, ಫ್ರೇಯಾ ಕೆಂಪ್, ಆಮಿ ಜೋನ್ಸ್ (ವಿ.ಕೀ), ಡೇನಿಯಲ್ ಗಿಬ್ಸನ್, ಷಾರ್ಲೆಟ್ ಡೀನ್ (ನಾ), ಸೋಫಿ ಎಕ್ಲೆಸ್ಟೋನ್, ಇಸ್ಸಿ ವಾಂಗ್, ಲಿನ್ಸೆ ಸ್ಮಿತ್, ಡ್ಯಾನಿ ವ್ಯಾಟ್-ಹಾಡ್ಜ್, ಲಾರೆನ್ ಬೆಲ್, ಲಾರೆನ್ ಫೈಲರ್, ಟಿಲ್ಲಿ ಕಾರ್ಟೀನ್-ಕೋಲ್ಮನ್.

ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾ), ರಿಚಾ ಘೋಷ್ (ವಿ.ಕೀ), ದೀಪ್ತಿ ಶರ್ಮಾ, ಶ್ರೇಯಾಂಕ ಪಾಟೀಲ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಗೌಡ್, ಶ್ರೀ ಚರಣಿ, ರಾಧಾ ಯಾದವ್, ಯಸ್ತಿಕಾ ಭಾಟಿಯಾ, ಭಾರತಿ ಫುಲ್ಮಾಲಿ, ನಂದಿನಿ ಶರ್ಮಾ.

ನೇರ ಪ್ರಸಾರ: ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡಗಳ ನಡುವಿನ ಟಿ20ಐ ಸರಣಿಯನ್ನು ಭಾರತೀಯ ಅಭಿಮಾನಿಗಳು ಸೋನಿ ಸ್ಪೋರ್ಟ್ಸ್ ಟಿವಿಯಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಏತನ್ಮಧ್ಯೆ, ಆನ್‌ಲೈನ್‌ನಲ್ಲಿ ವೀಕ್ಷಿಸಲು ಬಯಸುವ ಅಭಿಮಾನಿಗಳು ಸೋನಿ ಲಿವ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸರಣಿಯನ್ನು ವೀಕ್ಷಿಸಬಹುದು. ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದ್ದು, ಸಂಜೆ 6.30ಕ್ಕೆ ಟಾಸ್ ನಡೆಯಲಿದೆ.

ಇದನ್ನೂ ಓದಿ: 700 ರನ್​! ಐಪಿಎಲ್​ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ದೊಡ್ಡ ದಾಖಲೆ ಸೃಷ್ಟಿ