ಭಾರತ ತಂಡದ ವಿರುದ್ಧ ಮತ್ತೇ ನಾಲಿಗೆ ಹರಿಬಿಟ್ಟ ಪಾಕ್ ಮಾಜಿ ಪ್ಲೇಯರ್
ಪಾಕಿಸ್ತಾನ ಮಾಜಿ ಕ್ರಿಕೆಟರ್ ಮೊಹಮ್ಮದ್ ಅಮೀರ್ ಭಾರತ ತಂಡ ಪ್ರಸತು ಟಿ20 ವಿಶ್ವಕಪ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ ಎಂದು ಹೇಳಿದ್ದಾರೆ.


Published : March 3, 2026 at 3:14 PM IST
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಮತ್ತೊಮ್ಮೆ ಟೀಮ್ ಇಂಡಿಯಾ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಈ ಹಿಂದೆ ಅಭಿಷೇಕ್ ಶರ್ಮಾ ಅವರನ್ನು ಸ್ಲಗ್ಗರ್ ಎಂದು ಕರೆದಿದ್ದರು. ಅಲ್ಲದೇ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನ ಸೆಮಿಫೈನಲ್ ತಲುಪುವುದು ಸಹ ಅನುಮಾನು ಎಂದು ಹೇಳಿದ್ದರು. ಆದರೆ ಭಾರತ ತಂಡ ವೆಸ್ಟ್ ಇಂಡೀಸ್ ಮಣಿಸಿ ಸೆಮಿಫೈನಲ್ ತಲುಪಿತು. ಈ ಸಂದರ್ಭದಲ್ಲಿ, ಅಮೀರ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಯಿತು. ಆದಾಗ್ಯೂ, ಅವರು ತಮ್ಮ ನಿಲುವನ್ನು ಬದಲಾಯಿಸಲಿಲ್ಲ. ಇತ್ತೀಚೆಗೆ, ಟೀಮ್ ಇಂಡಿಯಾದ ಫೀಲ್ಡಿಂಗ್ ಕಳಪೆಯಾಗಿದೆ ಎಂದು ಅವರು ಕಾಮೆಂಟ್ ಮಾಡಿದ್ದಾರೆ.
'ನನ್ನ ವಿಶ್ಲೇಷಣೆಯ ಪ್ರಕಾರ, ಟೀಮ್ ಇಂಡಿಯಾ ಸರಿಯಾದ ಕ್ರಿಕೆಟ್ ಆಡುತ್ತಿಲ್ಲ. ಅವರ ಫೀಲ್ಡಿಂಗ್ ಅನ್ನು ನೋಡಿ. ವೆಸ್ಟ್ ಇಂಡೀಸ್ ವಿರುದ್ಧ ಕನಿಷ್ಠ 3 ರಿಂದ 4 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಅಲ್ಲದೇ ಬೌಂಡರಿ ಹೋಗುತ್ತಿದ್ದ ಚೆಂಡನ್ನು ತಡೆಯುವಲ್ಲೂ ವಿಫಲರಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ, ಇತರ ಎಲ್ಲಾ ಬೌಲರ್‌ಗಳು ರನ್ ನೀಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ದೊಡ್ಡ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಅವರು ನಾಲ್ಕು ಓವರ್‌ಗಳಲ್ಲಿ 40 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳು ಸಹ ವರುಣ್ ಚಕ್ರವರ್ತಿ ಅವರ ಬೌಲಿಂಗ್‌ನಿಂದ ಸುಲಭವಾಗಿ ರನ್ ಗಳಿಸಿದರು. ಇತರ ತಂಡಗಳು ಸೆಮಿಫೈನಲ್‌ನಲ್ಲಿ ಉತ್ತಮವಾಗಿ ಸ್ಪಿನ್ ಬೌಲಿಂಗ್ ಮಾಡಬಹುದು. ಹಾಗಾಗಿ ಈ ಟೂರ್ನಮೆಂಟ್‌ನಲ್ಲಿ ಟೀಮ್ ಇಂಡಿಯಾ ಜನಪ್ರಿಯ ತಂಡವಲ್ಲ ಎಂದು ನಾನು ಬಲವಾಗಿ ನಂಬುತ್ತೇನೆ" ಎಂದು ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ಮೊಹಮ್ಮದ್ ಅಮೀರ್ ಹೇಳಿದರು.
🚨 MASSIVE STATEMENT BY MOHAMMED AMIR ON TEAM INDIA 🚨
— lndian Sports Netwrk (@IS_Netwrk29) March 1, 2026
Mohammed Amir Said 🗣️
" india is not playing good cricket. i’m telling you right now. check their fielding, they’ve dropped 3–4 catches. except for bumrah, every bowler is getting smashed. west indies doesn’t play spinners… pic.twitter.com/41pRnrvslh
ಹೆಟ್ಮೈಯರ್ ಅವರ ಔಟ್ ಬಗ್ಗೆ ಸಹ ಅಮೀರ್ ಅನುಮಾನ ವ್ಯಕ್ತಪಡಿಸಿದರು. "ಹೆಟ್ಮೈಯರ್ ಅವರ ಔಟ್ ವಿವಾದಾತ್ಮಕವಾಗಿದೆ. ಅವರು ಔಟ್ ಆಗಿದ್ದಾರೆಂದು ನಾನು ಭಾವಿಸುವುದಿಲ್ಲ. ಅವರು ಸ್ವಲ್ಪ ಸಮಯ ಕ್ರೀಸ್‌ನಲ್ಲಿದ್ದರೆ ವೆಸ್ಟ್ ಇಂಡೀಸ್ ಸುಲಭವಾಗಿ 220 ರಿಂದ 230 ರನ್ ಗಳಿಸಬಹುದಿತ್ತು. ಟೀಮ್ ಇಂಡಿಯಾ ಟೂರ್ನಮೆಂಟ್‌ನಿಂದ ಹೊರಗುಳಿಯುತ್ತಿತ್ತು ಎಂದು ಅಮೀರ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸೆಮಿಸ್ ಕದನ: ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಮಾಡು ಇಲ್ಲ ಮಡಿ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ 5 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 196 ರನ್ಗಳ ಗುರಿಯನ್ನು ಬೆನ್ನತ್ತಿದ್ದ ಭಾರತ ಸಂಜು ಸ್ಯಾಮ್ಸನ್ ಅವರ (ಅಜೇಯ 97 ರನ್) ಬ್ಯಾಟಿಂಗ್ ಬಲದಿಂದ 19.2 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಇದರೊಂದಿಗೆ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಮಾ.5 ರಂದು ನಡೆಯಲಿರುವ ಎರಡನೇ ಸೆಮಿಸ್ನಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ: ದುಬೈ ನಿಂದ ಭಾರತಕ್ಕೆ ವಾಪಾಸ್ ಆದ ಟೆನ್ನಿಸ್ ತಾರೆ ಪಿವಿ ಸಿಂಧು!!

