ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್; ವೆಸ್ಟ್ ಇಂಡೀಸ್ ಮಣಿಸಿದ ಭಾರತ
ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ.


Published : October 11, 2026 at 11:03 PM IST
IND vs WI 3rd T20: ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೂರನೇ ಟಿ20ಐನಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡವನ್ನು 14 ರನ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಭಾರತದ 224 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ 7 ವಿಕೆಟ್‌ಗೆ 209 ರನ್ ಗಳಿಸಲಷ್ಟೇ ಶಕ್ತವಾಯಿತು.
ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ಪರ ಶಿಮ್ರಾನ್ ಹೆಟ್ಮೆಯರ್ (43 ರನ್, 26 ಎಸೆತ, 6 ಬೌಂಡರಿ, 2 ಸಿಕ್ಸರ್) ಮತ್ತು ಕಮಿಲ್ ಪೂರನ್ (42 ರನ್, 27 ಎಸೆತ, 3 ಸಿಕ್ಸರ್, 3 ಬೌಂಡರಿ) ಭರ್ಜರಿ ಪ್ರದರ್ಶನ ನೀಡಿದರು. ನಂತರ, ಶಮರ್ ಸ್ಪ್ರಿಂಗರ್ (11 ಎಸೆತ, 35 ರನ್, 4 ಸಿಕ್ಸರ್, 2 ಬೌಂಡರಿ) ಕೊನೆಯವರೆಗೂ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದರು ಆದರೆ ಅವರು ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಭಾರತ ಪರ, ಅರ್ಶ್ದೀಪ್ ಸಿಂಗ್ 44 ರನ್ಗಳಿಗೆ 3 ವಿಕೆಟ್ ಪಡೆದರೆ, ನಮನ್ ಧೀರ್ 39 ರನ್ಗಳಿಗೆ 2 ವಿಕೆಟ್ ಕಬಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ, ಅಭಿಷೇಕ್ ಶರ್ಮಾ ಅವರ ಆಕ್ರಮಣಕಾರಿ ಅರ್ಧಶತಕದ ಸಹಾಯದಿಂದ ವೆಸ್ಟ್ ಇಂಡೀಸ್ ವಿರುದ್ಧ 200ರ ಗಡಿ ದಾಟಲು ಸಾಧ್ಯವಾಯ್ತು. ಅಭಿಷೇಕ್ ಶರ್ಮಾ 30 ಎಸೆತಗಳಲ್ಲಿ 69 ರನ್‌ಗಳನ್ನು ಗಳಿಸಿದರು, ಈ ವೇಳೆ ಅವರು 6 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದರು. ಮತ್ತೊಂದೆಡೆ, ಇಶಾನ್ ಕಿಶನ್ 18 ಎಸೆತಗಳಲ್ಲಿ 6 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 37 ರನ್ ಗಳಿಸಿದರು. ಈ ಇಬ್ಬರೂ ಆಟಗಾರರು ಎರಡನೇ ವಿಕೆಟ್‌ಗೆ 108 ರನ್‌ಗಳ ಪಾಲುದಾರಿಕೆಯನ್ನು ಮಾಡುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಿದರು.
Back in the lead in the #INDvWI T20I series 💪 #TeamIndia clinch the 𝗪 in Indore to go 2️⃣-1️⃣ up ✅ Scorecard ▶️ https://t.co/0ve4uDWSIn @mflone_ https://t.co/35WSM1eUtk
— BCCI (@BCCI) October 11, 2026
ತಿಲಕ್ ವರ್ಮಾ 28 ರನ್ ಗಳಿಸಿದರೆ, ನಿತೀಶ್ ಕುಮಾರ್ ರೆಡ್ಡಿ 21 ಮತ್ತು ಅಕ್ಷರ್ ಪಟೇಲ್ 20 ರನ್ ಗಳಿಸಿದರು. ಇದರಿಂದಾಗಿ ಭಾರತವು 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 223 ರನ್‌ಗಳನ್ನು ಕಲೆಹಾಕಿತು. ವೆಸ್ಟ್ ಇಂಡೀಸ್ ಪರ, ರೋಸ್ಟನ್ ಚೇಸ್, ಶಮರ್ ಜೋಸೆಫ್ ಮತ್ತು ಶಮರ್ ಸ್ಪ್ರಿಂಗರ್ ತಲಾ 2 ವಿಕೆಟ್‌ಗಳನ್ನು ಪಡೆದರೆ, ಕಿಮೊ ಪಾಲ್ ಮತ್ತು ಗುಡಕೇಶ್ ಮೋತಿ ತಲಾ 1 ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ ಈಗ 2-1 ಮುನ್ನಡೆ ಸಾಧಿಸಿದೆ. ಸರಣಿಯ ನಾಲ್ಕನೇ ಪಂದ್ಯ ಅಕ್ಟೋಬರ್ 14 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ 69 ರನ್‌ಗಳಿಂದ ಗೆಲುವು ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 6 ವಿಕೆಟ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

