ಹಾಕಿ ವಿಶ್ವಕಪ್: ಬೆಲ್ಜಿಯಂ ವಿರುದ್ಧ ಭಾರತಕ್ಕೆ ಸೋಲು; 8ನೇ ಸ್ಥಾನದೊಂದಿಗೆ ವಿದಾಯ
ಹಾಕಿ ಪುರುಷರ ವಿಶ್ವಕಪ್ನ ಏಳನೇ-ಎಂಟನೇ ಸ್ಥಾನಕ್ಕಾಗಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ಬೆಲ್ಜಿಯಂ ವಿರುದ್ಧ ಸೋಲನ್ನು ಕಂಡಿದೆ.


Published : August 29, 2026 at 11:04 AM IST
ಶುಕ್ರವಾರ (ಆ.28) ಹಾಕಿ ವಿಶ್ವಕಪ್ನ ಏಳನೇ-ಎಂಟನೇ ಸ್ಥಾನಕ್ಕಾಗಿ ನಡೆದಿದ್ದ ಪಂದ್ಯದಲ್ಲಿ ಭಾರತ ಪುರುಷರ ತಂಡ ಬೆಲ್ಜಿಯಂ ವಿರುದ್ಧ ಸೋಲನ್ನು ಕಂಡು 8ನೇ ಸ್ಥಾನದೊಂದಿಗೆ ಟೂರ್ನಿಯನ್ನು ಕೊನೆಗೊಳಿಸಿತು.
ವಾವ್ರೆಯಲ್ಲಿ ನಡೆದಿದ್ದ ಈ ರೋಚಕ ಪಂದ್ಯದಲ್ಲಿ, ಭಾರತವು ವಿಶ್ವದ ಎರಡನೇ ಶ್ರೇಯಾಂಕಿತ ಬೆಲ್ಜಿಯಂ ವಿರುದ್ಧ ಕಠಿಣ ಹೋರಾಟ ನಡೆಸಿತು ಆದರೆ ಪೆನಾಲ್ಟಿ ಶೂಟೌಟ್‌ನಲ್ಲಿ 3-4 ಅಂತರದಿಂದ ಸೋಲನ್ನು ಕಂಡಿತು. ನಿಗದಿತ ಸಮಯದ ಅಂತ್ಯದಲ್ಲಿ ಎರಡೂ ತಂಡಗಳು 3-3 ಅಂತರದಲ್ಲಿ ಸಮಬಲ ಸಾಧಿಸಿದ್ದವು.
The Indian Men’s Team took on Belgium in their final game of the FIH Hockey World Cup Belgium & Netherlands 2026, drawing 3–3 before narrowly going down 3–4 in the shootout in the 7th/8th place clash. 🏑
— Hockey India (@TheHockeyIndia) August 28, 2026
Here are the moments from a hard-fought final game of the campaign. 🇮🇳… pic.twitter.com/1qG7JmMOBV
ಅದರಲ್ಲೂ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪಂದ್ಯ ಮುಕ್ತಾಯಕ್ಕೆ ಕೇವಲ 26 ಸೆಕೆಂಡುಗಳು ಬಾಕಿ ಇರುವಾಗ ಪೆನಾಲ್ಟಿ ಕಾರ್ನರ್ ಅನ್ನು ಗೋಲ್ ಆಗಿ ಪರಿವರ್ತಿಸಿದರು ಇದರಿಂದಾಗಿ ಪಂದ್ಯವು ಶೂಟೌಟ್‌ಗೆ ಮುನ್ನಡೆಯಿತು. ಈ ವಿಶ್ವಕಪ್‌ನಲ್ಲಿ ಇದು ಹರ್ಮನ್‌ಪ್ರೀತ್ ಅವರ ಎಂಟನೇ ಗೋಲಾಗಿದೆ. ಆದಾಗ್ಯೂ, ಬೆಲ್ಜಿಯಂ ಶೂಟೌಟ್‌ನಲ್ಲಿ ಒತ್ತಡವನ್ನು ಉತ್ತಮವಾಗಿ ನಿಭಾಯಿಸಿ ಪಂದ್ಯವನ್ನು ಗೆದ್ದುಕೊಂಡಿತು.
ಶೂಟೌಟ್‌ನಲ್ಲಿ ಭಾರತ ಪರ ಶಿಲಾನಂದ್ ಲಾಕ್ರ, ದಿಲ್‌ಪ್ರೀತ್ ಸಿಂಗ್ ಮತ್ತು ಅಭಿಷೇಕ್ ಗೋಲು ಗಳಿಸಿದರೆ, ಹರ್ಮನ್‌ಪ್ರೀತ್ ಸಿಂಗ್ ಮತ್ತು ಸುಖ್‌ಜೀತ್ ಸಿಂಗ್ ವಿಫಲರಾದರು. ಬೆಲ್ಜಿಯಂ ಪರ ಟಾಮ್ ಬೂನ್, ಆರ್ಥರ್ ಡಿ ಸ್ಲುಯ್ವರ್, ಅಲೆಕ್ಸಾಂಡರ್ ಹೆಂಡ್ರಿಕ್ಸ್ ಮತ್ತು ರೋಮನ್ ಡುವೆಕೋಟ್ ಗೋಲು ಗಳಿಸಿದರೆ, ವಿಕ್ಟರ್ ಫರ್ಬರ್ಟ್ ವಿಫಲರಾದು.
ಭಾರತಕ್ಕೆ ಆರಂಭಿಕ ಮುನ್ನಡೆ ನೀಡಿದ ಅಭಿಷೇಕ್
ಭಾರತವು ಪಂದ್ಯವನ್ನು ಅತ್ಯುತ್ತಮವಾಗಿ ಪ್ರಾರಂಭಿಸಿತು. ಕೇವಲ ಆರೆ ನಿಮಿಷದಲ್ಲಿ ಅಭಿಷೇಕ್ ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಅಭಿಷೇಕ್ ಅವರ ಶಾಟ್ ಬೆಲ್ಜಿಯಂ ಗೋಲ್‌ಕೀಪರ್‌ನ ಪ್ಯಾಡ್‌ಗಳಿಗೆ ತಗುಲಿ ನೆಟ್‌ಗೆ ಹಾರಿತು. ನಂತರ ಸಿಡಿದೆದ್ದ ಬೆಲ್ಜಿಯಂ ನಿರಂತರ ಒತ್ತಡ ಹೇರಿತು.
ಆರಂಭಿಕ ಕ್ವಾರ್ಟರ್‌ನಲ್ಲಿ ಮೂರು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದುಕೊಂಡಿತು, ಆದರೆ ಭಾರತೀಯ ಗೋಲ್‌ಕೀಪರ್ ಸೂರಜ್ ಕರ್ಕೇರಾ ಅದ್ಭುತ ಸೇವ್‌ಗಳನ್ನು ಮಾಡಿದರು. ಆದಾಗ್ಯೂ, 11ನೇ ನಿಮಿಷದಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾಯಿತು. ಫೌಲ್ನಿಂದಾಗಿ ನಾಯಕ ಹರ್ಮನ್‌ಪ್ರೀತ್‌ಗೆ ಹಳದಿ ಕಾರ್ಡ್ ನೀಡಲಾಯ್ತು. ಇದರಿಂದ ಅವರು ಐದು ನಿಮಿಷಗಳ ಕಾಲ ಪಂದ್ಯದಿಂದ ಹೊರಗುಳಿಯಬೇಕಾಯಿತು.
The Indian Men’s Team took on Belgium in their final game of the FIH Hockey World Cup Belgium & Netherlands 2026, drawing 3–3 before narrowly going down 3–4 in the shootout in the 7th/8th place clash. 🏑
— Hockey India (@TheHockeyIndia) August 28, 2026
Here are the moments from a hard-fought final game of the campaign. 🇮🇳… pic.twitter.com/1qG7JmMOBV
23 ನಿಮಿಷಗಳಲ್ಲಿ ಪಂದ್ಯವನ್ನು ತಿರುಚಿದ ಬೆಲ್ಜಿಯಂ
ಎರಡನೇ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಪಂದ್ಯವನ್ನು ತಿರುಚಿತು. 22ನೇ ನಿಮಿಷದಲ್ಲಿ, ರೊಮೈನ್ ಡುವೆಕೋಟ್ ಗೋಲು ಗಳಿಸಿ ಸ್ಕೋರ್ ಅನ್ನು ಸಮಗೊಳಿಸಿದರು. ಇದಾದ ಬೆನ್ನಲ್ಲೆ ಹ್ಯೂಗೋ ಲ್ಯಾಬುಶೆರೆ ಪೆನಾಲ್ಟಿ ಕಾರ್ನರ್‌ನಿಂದ ಅದ್ಭುತ ಡ್ರಾಗ್-ಫ್ಲಿಕ್ ಮೂಲಕ ಬೆಲ್ಜಿಯಂಗೆ ಮುನ್ನಡೆ 2-1 ದ್ವಿಗುಣಗೊಳಿಸಿದರು.
ಭಾರತವು ಮೂರನೇ ಕ್ವಾರ್ಟರ್ ಅನ್ನು ಅದ್ಭುತವಾಗಿ ಪ್ರಾರಂಭಿಸಿತು. ವಿರಾಮದ ನಂತರ, ಹರ್ಮನ್‌ಪ್ರೀತ್ ಪೆನಾಲ್ಟಿ ಕಾರ್ನರ್‌ನಿಂದ ಪ್ರಬಲ ಡ್ರಾಗ್-ಫ್ಲಿಕ್ ಮೂಲಕ ಗೋಲು ಗಳಿಸಿದರು, ಇದರಿಂದಾಗಿ ಸ್ಕೋರ್ 2 ರಿಂದ 2 ಸಮಬಲ ಆಗಿತ್ತು. ಆದರೆ ಬೆಲ್ಜಿಯಂ ರೆಫರಲ್ ತೆಗೆದುಕೊಂಡಿತು, ಆದರೆ ವೀಡಿಯೊ ವಿಮರ್ಶೆಯ ನಂತರ ಭಾರತದ ಗೋಲು ಮಾನ್ಯವೆಂದು ತೀರ್ಪು ನೀಡಲಾಯ್ತು. ನಂತರ ಬೆಲ್ಜಿಯಂ ಒಂದು ಗೋಲು ಗಳಿಸಿತು, ಆದರೆ ಭಾರತ ರೆಫರಲ್ ನಂತರ ಗೋಲು ಅಮಾನ್ಯ ಎಂದು ನಿರಾಕರಿಸಲಾಯಿತು. ಒಂದು ಹಂತದಲ್ಲಿ ಭಾರತ ಮುನ್ನಡೆ ಸಾಧಿಸುವ ಹತ್ತಿರ ಬಂದಿತು, ಆದರೆ ಅಭಿಷೇಕ್ ಹೊಡೆದ ಶಾಟ್ ಡಿಫೆಂಡರ್‌ನ ಸ್ಟಿಕ್‌ಗೆ ತಗುಲಿ ವೈಡ್ ಆಯಿತು.
We gave it everything till the final hooter.
— Hockey India (@TheHockeyIndia) August 28, 2026
The Indian Men’s Team drew 3–3 against Belgium in the 7th/8th place clash at the FIH Hockey World Cup Belgium & Netherlands 2026, with Harmanpreet Singh finding the equaliser in the final minute. 🏑
The game went to a shootout,… pic.twitter.com/T3h2F2WQTL
ಅಂತಿಮ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಹಿನ್ನಡೆ
ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತ ಭಾರಿ ಒತ್ತಡಕ್ಕೆ ಸಿಲುಕಿತು. ಅದರಲ್ಲೂ ಲ್ಯಾಬುಶೆರೆ ಹೊಡೆದ ಪ್ರಬಲ ಹೊಡೆತದಿಂದ ಚೆಂಡು ಮನ್ಪ್ರೀತ್ ಸಿಂಗ್ ಮುಖಕ್ಕೆ ಬಡಿದು ಮೈದಾನದಿಂದ ಹೊರನಡೆಯಬೇಕಾಯಿತು. ಅವರ ಗಾಯವು ಭಾರತೀಯ ತಂಡಕ್ಕೆ ಕಳವಳವನ್ನುಂಟುಮಾಡಿತು, ಆದರೆ ನಂತರ ಅವರು ಶೂಟೌಟ್ ಸಮಯದಲ್ಲಿ ಪಂದ್ಯಕ್ಕೆ ಹಿಂತಿರುಗಿದರು. ಸ್ವಲ್ಪ ಸಮಯದ ನಂತರ, ನಿಕೋಲಸ್ ಡಿ ಕಾರ್ಪೆಲ್ ಬೆಲ್ಜಿಯಂ ಪರ ಮೂರನೇ ಗೋಲು ಗಳಿಸಿದರು. ವೀಡಿಯೊ ಅಂಪೈರ್ ಪರಿಶೀಲಿಸಿದ ಹೊರತಾಗಿಯೂ, ಗೋಲು ಮಾನ್ಯವೆಂದು ಘೋಷಿಸಲ್ಪಟ್ಟಿತು ಮತ್ತು ಬೆಲ್ಜಿಯಂ 3-2 ಮುನ್ನಡೆ ಸಾಧಿಸಿತು. ಇದರ ನಂತಡ ಭಾರತಕ್ಕೆ ಕೆಲವೇ ನಿಮಿಷಗಳು ಉಳಿದಿದ್ದವು.
ಪಂದ್ಯ ಮುಕ್ತಾಯಕ್ಕೆ 26 ಸೆಕೆಂಡುಗಳ ಮೊದಲು ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ನಾಯಕ ಹರ್ಮನ್‌ಪ್ರೀತ್ ಚೆಂಡನ್ನು ನೆಟ್‌ಗೆ ಹಾಕಿ ಸ್ಕೋರ್ ಅನ್ನು 3-3 ಸಮಬಲಗೊಳಿಸಿದರು. ಇದರಿಂದಾಗಿ ಪಂದ್ಯವು ಶೂಟೌಟ್‌ಗೆ ಹೋಯಿತು, ಅಂತಿಮವಾಗಿ ಬೆಲ್ಜಿಯಂ ಮೇಲುಗೈ ಸಾಧಿಸಿತು.
ಇದನ್ನೂ ಓದಿ: ಹಾಕಿ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡದ ಮೇಲೆ ಹಣದ ಮಳೆ!!

