ಇಂದು IND vs ENG 2ನೇ ಟಿ20 ಪಂದ್ಯಕ್ಕೂ ಮೊದಲೆ ಬಿಗ್ ಶಾಕ್!!
ಭಾರತ ಮತ್ತ ಇಂಗ್ಲೆಂಡ್ ತಂಡಗಳ ನಡುವಿನ ಎರಡನೇ ಟಿ20 ಪಂದ್ಯವೂ ಇಂದು ನಡೆಯಲಿದ್ದು ಈ ಪಂದ್ಯಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಈಕೆಳಗಿದೆ.


Published : July 4, 2026 at 12:07 PM IST
IND vs ENG 2nd T20: 2026ರ ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇತ್ತೀಚೆಗೆ ನಡೆದಿದ್ದ ಐರ್ಲೆಂಡ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಹೀನಾಯ ಸೋಲುನ್ನು ಕಂಡಿತ್ತು. ಇದೀಗ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ.
ಮೊದಲ ಪಂದ್ಯದಲ್ಲಿ ಭಾರತ 189 ರನ್ ಗಳಿಸಿತ್ತಾದರೂ ಮಳೆಯಿಂದಾಗಿ ಪಂದ್ಯ ರದ್ದಾಯ್ತು. ಇಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಅಯ್ಯರ್ ಪಡೆ ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿದೆ. ಇಂದಿನ ಪಂದ್ಯಕ್ಕೆ ಸಂಬಂಧಿಸಿದಂತೆ ಹವಾಮಾನ ವರದಿ, ಹೆಡ್ ಟು ಹೆಡ್ ಪಿಚ್ ವರದಿ ಬಗ್ಗೆ ಇದೀಗ ತಿಳಿಯೋಣ.
Manchester is ready for the action! 🏟️
— Star Sports (@StarSportsIndia) July 4, 2026
Will #ShreyasIyer and #TeamIndia register their first win of the series and take a lead? 👀🇮🇳#ENGvIND 👉 2nd T20I | SAT, 4th JULY, 6 PM on JioHotstar pic.twitter.com/GAbTZIEbVj
ಮುಖಾಮುಖಿ ದಾಖಲೆ
ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇಲ್ಲಿಯವರೆಗೆ 31 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿವೆ. ಈ ಪೈಕಿ ಭಾರತ 18 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಎರಡೂ ತಂಡಗಳು ಇಂಗ್ಲೆಂಡ್‌ನಲ್ಲಿ 10 ಪಂದ್ಯಗಳನ್ನು ಆಡಿದ್ದು ಇದರಲ್ಲಿ ಇಂಗ್ಲೆಂಡ್ ಐದು ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ನಾಲ್ಕು ಪಂದ್ಯಗಳನ್ನು ಜಯಭೇರಿ ಬಾರಿಸಿದೆ, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಉಭಯ ತಂಡಗಳ ನಡುವೆ ಇದೂವರೆಗೆ ಒಂಬತ್ತು ಟಿ20 ಸರಣಿಗಳು ನಡೆದಿವೆ. ಇದರಲ್ಲಿ ಭಾರತ ಐದು, ಇಂಗ್ಲೆಂಡ್ ಮೂರು ಮತ್ತು ಒಂದು ಸರಣಿ ಡ್ರಾದಲ್ಲಿ ಕೊನೆಗೊಂಡಿದೆ. ಕಳೆದ ಐದು ಟಿ20 ಸರಣಿಗಳಲ್ಲಿ ಭಾರತ ಇಂಗ್ಲೆಂಡ್ ಅನ್ನು ಮಣಿಸಿದೆ.
ಪಿಚ್ ವರದಿ: ಇಂದಿನ ಪಂದ್ಯ ಮ್ಯಾಂಚೆಸ್ಟರ್ನ ಒಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಲಿದ್ದು ಈ ಪಿಚ್ ವೇಗದ ಮತ್ತು ಸ್ಪಿನ್ ಬೌಲರ್‌ಗಳಿಬ್ಬರಿಗೂ ಸಹಾಯಕವಾಗಿರಲಿದೆ. ಆದಾಗ್ಯೂ, ಬ್ಯಾಟರ್ಗಳು ಆರಂಭದಲ್ಲಿ ಕಠಿಣ ಸವಾಲುಗಳನ್ನು ಎದುರಿಸಬಹುದು. ಒಮ್ಮೆ ಸೆಟ್ ಆದರೆ ಸುಲಭವಾಗಿ ರನ್ ಗಳಿಸುತ್ತಾರೆ. ಕಳೆದ ವರ್ಷ, ಇಂಗ್ಲೆಂಡ್ ಇದೇ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 304/2 ಕಲೆಹಾಕಿತ್ತು. ಇದು ಪೂರ್ಣ ಸದಸ್ಯ ತಂಡಗಳ ನಡುವಿನ ಮೊದಲ 300+ T20 ಸ್ಕೋರ್ ಆಗಿತ್ತು.
Focus: 💯
— BCCI (@BCCI) July 4, 2026
Energy: 📈#TeamIndia dialled in ahead of the 2️⃣nd #ENGvIND T20I 🎯 pic.twitter.com/jwLItS3xwY
ದಾಖಲೆ ನಿರ್ಮಿಸುವ ಅವಾಕಶ ಹೊಂದಿರುವ ಆಟಗಾರರು
- ಅಕ್ಷರ್ ಪಟೇಲ್ ಅವರಿಗೆ ಇದು 98ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಭಾರತ ಪರ 100 ಟಿ20 ವಿಕೆಟ್‌ಗಳನ್ನು ತಲುಪಲು ಕೇವಲ ಒಂದು ವಿಕೆಟ್ ಅಗತ್ಯವಿದೆ.
- ಆದಿಲ್ ರಶೀದ್ ಪ್ರಸ್ತುತ 164 ಟಿ20 ವಿಕೆಟ್‌ಗಳನ್ನು ಹೊಂದಿದ್ದಾರೆ. ಇನ್ನೂ ಎರಡು ವಿಕೆಟ್‌ಗಳನ್ನು ಪಡೆದರೆ ಅವರು ಈ ಸ್ವರೂಪದಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಲಿದ್ದಾರೆ.
ಆರ್ಚರ್ ವಾಪಾಸ್, ಟಂಗ್ ಪದಾರ್ಪಣೆ!
ಎರಡನೇ ಟಿ20ಐ ಪಂದ್ಯಕ್ಕಾಗಿ ಇಂಗ್ಲೆಂಡ್ ತನ್ನ ಆಡುವ ಹನ್ನೊಂದನ್ನು ಈಗಾಗಲೇ ಪ್ರಕಟಿಸಿದೆ. ವೇಗದ ಬೌಲರ್ ಜೋಫ್ರಾ ಆರ್ಚರ್ ತಂಡಕ್ಕೆ ಮರಳಿದ್ದಾರೆ, ಜೋಶ್ ಟಂಗ್ ತಮ್ಮ ಚೊಚ್ಚಲ ಟಿ20ಐ ಪಂದ್ಯವನ್ನಾಡಲಿದ್ದಾರೆ. ಇಬ್ಬರೂ ಆಟಗಾರರನ್ನು ಸಕಿಬ್ ಮಹಮೂದ್ ಮತ್ತು ಲ್ಯೂಕ್ ವುಡ್ ಅವರ ಸ್ಥಾನಕ್ಕೆ ಸೇರಿಸಲಾಗಿದೆ.
ನೇರ ಪ್ರಸಾರ ಮಾಹಿತಿ
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟಿ20 ಸರಣಿಯನ್ನು ಜಿಯೋ ಹಾಟ್ಸ್ಟಾರ್ ಮತ್ತು ಸೋನಿ ಲೀವ್ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
— BCCI (@BCCI) July 4, 2026
ಹವಾಮಾನ ವರದಿ: ಮೊದಲ ಪಂದ್ಯದಂತೆ ಈ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಹೆಚ್ಚಿದೆ. ಹವಾಮಾನ ಇಲಾಖೆಯ ಪ್ರಕಾರ, ಇಂದು ಮಳೆಯಾಗುವ ಸಾಧ್ಯತೆ ಶೇ.55 ರಷ್ಟು ಇರಲಿದೆ ಎಂದು ತಿಳಿಸಿದ್ದು ಇದು ಫ್ಯಾನ್ಸ್ಗಳ ಆತಂಕಕ್ಕೆ ಕಾರಣವಾಗಿದೆ.
ಪ್ಲೇಯಿಂಗ್ ಇಲೆವೆನ್ - ಇಂಗ್ಲೆಂಡ್: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾ), ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಜೋಶ್ ಟಂಗ್.
ಭಾರತ ಸಂಭಾವ್ಯ ತಂಡ: ವೈಭವ್ ಸೂರ್ಯವಂಶಿ/ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿ.ಕೀ), ಶ್ರೇಯಸ್ ಅಯ್ಯರ್ (ನಾ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ.
ಪಂದ್ಯ ಪ್ರಾರಂಭ: ಸಂಜೆ 7 ಗಂಟೆಗೆ
ಇದನ್ನೂ ಓದಿ: ಕೇಪ್ ವರ್ಡೆ ವಿರುದ್ಧ ಸೋಲಿನಿಂದ ಪಾರಾದ ಅರ್ಜೆಂಟೀನಾ!! ಕೊಲಂಬಿಯಾಗೂ ಗೆಲುವು

