ಐಸಿಸಿ ಶಾಕಿಂಗ್ ನಿರ್ಧಾರ! 6 ಬಾರಿ ವಿಶ್ವಕಪ್ ಆಡಿದ್ದ ಕ್ರಿಕೆಟ್ ತಂಡದ ಸದಸ್ಯತ್ವ ಅಮಾನತು!!
ಸೋಮವಾರ ನಡೆದಿದ್ದ ಸಭೆಯಲ್ಲಿ 6 ಬಾರಿ ವಿಶ್ವಕಪ್ ಆಡಿದ್ದ ತಂಡದ ಸದಸ್ಯತ್ವವನ್ನು ಐಸಿಸಿ ಅಮಾನತುಗೊಳಿಸಿದೆ.


Published : June 2, 2026 at 3:07 PM IST
ಐಪಿಎಲ್ ಮುಗಿದ ಬೆನ್ನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ಬೋರ್ಡ್ ಮೀಟಿಂಗ್ ನಡೆಸಿತ್ತು. ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ 6 ಬಾರಿ ವಿಶ್ವಕಪ್ ಆಡಿದ್ದ ತಂಡದ ಸದಸ್ಯತ್ವವನ್ನು ಅಮಾನತು ಮಾಡಿದ್ದು ಸೇರಿದೆ. ಐಸಿಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳೇನು ಯಾವ ತಂಡದ ಸದಸ್ಯತ್ವ ಅಮಾನತು ಮಾಡಿದೆ ಎಂಬ ಬಗ್ಗೆ ಇದೀಗ ತಿಳಿಯೋಣ.
ಟೆಸ್ಟ್ ಕ್ರಿಕೆಟ್ ನಿಯಮಗಳ ಬದಲಾವಣೆ!
ಟೆಸ್ಟ್ ಪಂದ್ಯಗಳ ಸಮಯದಲ್ಲಿ ಕಳಪೆ ಬೆಳಕಿನ ಕಾರಣದಿಂದಾಗಿ ಹಲವು ಬಾರಿ ಬೇಗನೆ ಪಂದ್ಯ ಮುಗಿಸಬೇಕಾದ ಪರಿಸ್ಥಿತಿಗಳು ಎದುರಾಗಿದ್ದು, ಪರಿಹಾರವಾಗಿ ಇಂತಹ ಸಂದರ್ಭಗಳಲ್ಲಿ ಗುಲಾಬಿ ಚೆಂಡನ್ನು ಬಳಸಲು ಐಸಿಸಿ ಅನುಮೋದನೆ ನೀಡಿದೆ. ಆದಾಗ್ಯೂ, ಇದು ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿರಲಿದೆ. ಟೆಸ್ಟ್ ಪಂದ್ಯಗಳಲ್ಲಿ ಓವರ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದು ಈ ನಿರ್ಧಾರದ ಉದ್ದೇಶವಾಗಿತ್ತು. ಕಳಪೆ ಬೆಳಕಿನ ವೇಳೆ ಪಂದ್ಯದಲ್ಲಿ ಓವರ್‌ಗಳ ಸಂಖ್ಯೆಯನ್ನು ಕಡಿತಗೊಳಿಸುವುದು ಅಥವಾ ಮಾರನೇ ದಿನ ಪಂದ್ಯವನ್ನು ಬೇಗನ ಶುರು ಮಾಡಬೇಕಾಗುತ್ತದೆ. ಇದೀಗ ಗುಲಾಬಿ ಚೆಂಡನ್ನು ಬಳಕೆ ಮಾಡುವುದರಿಂದ ರಾತ್ರಿ ಸಮಯದಲ್ಲೂ ಚೆಂಡು ಸ್ಪಷ್ಟವಾಗಿ ಗೋಚರಿಸುತ್ತದೆ.
ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು 2015ರಲ್ಲಿ ಆಡಲಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿತು. ಅಂದಿನಿಂದ, ಎರಡೂ ದೇಶಗಳ ನಡುವೆ ಕಾಲಕಾಲಕ್ಕೆ ಪಿಂಕ್ ಬಾಲ್‌ನಲ್ಲಿ ಪಂದ್ಯಗಳನ್ನು ಆಡಲಾಗುತ್ತಿದೆ. ಹೊಸ ನಿಯಮದ ಪ್ರಕಾರ ಪಿಂಕ್ ಬಾಲ್ ಪಂದ್ಯವನ್ನಾಡಲೂ ಎರಡೂ ತಂಡಗಳು ಒಪ್ಪಿಗೆ ಕಡ್ಡಾಯವಾಗಿರಲಿದೆ ಎಂದು ತಿಳಿಸಿದೆ.
ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು 2015 ರಲ್ಲಿ ಆಡಲಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿತು. ಅಂದಿನಿಂದ, ಎರಡೂ ದೇಶಗಳ ನಡುವೆ ಕಾಲಕಾಲಕ್ಕೆ ಪಿಂಕ್ ಬಾಲ್‌ನಲ್ಲಿ ಪಂದ್ಯಗಳನ್ನು ಆಡಲಾಗುತ್ತಿದೆ.
ತರಬೇತುದಾರರು ಮೈದಾನಕ್ಕೆ ಬರಲು ಅನುಮತಿ
ಐಸಿಸಿ ಮತ್ತೊಂದು ಪ್ರಮುಖ ಬದಲಾವಣೆಯನ್ನು ಮಾಡಿದೆ. ತರಬೇತುದಾರರು ಪಾನೀಯ ವಿರಾಮದ ಸಮಯದಲ್ಲಿ ಆಟಗಾರರೊಂದಿಗೆ ಸಂವಹನ ನಡೆಸಲು ಮೈದಾನಕ್ಕೆ ಪ್ರವೇಶಿಸಬಹುದಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಮತ್ತೊಂದು ಪ್ರಮುಖ ನಿರ್ಧಾರವನ್ನು ಅನುಮೋದಿಸಲಾಯಿತು. ಕೆಲ ಪಂದ್ಯಗಳಲ್ಲಿ ಬೌಲರ್ಗಳು ಆ್ಯಕ್ಷನ್ಗಳಲ್ಲಿ ವೇರಿಯೇಷನ್ ಮಾಡುತ್ತಿರುತ್ತಾರೆ. ಇದೀಗ ಬೌಲರ್‌ಗಳ ಬೌಲಿಂಗ್ ಆ್ಯಕ್ಷನ್ ಕಾನುಬದ್ದವಾಗಿದೆಯೂ ಇಲ್ಲವೆ ಎಂಬುದನ್ನು ಪತ್ತೆಹಚ್ಚಲು ಪಂದ್ಯದ ಅಧಿಕಾರಿಗಳು ಹಾಕ್-ಐ ಡೇಟಾವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಈ ಹೊಸ ನಿಯಮವು ಅಕ್ಟೋಬರ್ 1, 2026 ರಿಂದ ಜಾರಿಗೆ ಬರಲಿದೆ. ಹಾಕ್-ಐ ಡೇಟಾ ಎಂದರೇನು ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿಗಳನ್ನು ಐಸಿಸಿ ಹಂಚಿಕೊಂಡಿಲ್ಲ.
6 ವಿಶ್ವಕಪ್ ಆಡಿದ್ದ ತಂಡದ ಸದಸ್ಯತ್ವ ಅಮಾನತು
ಈ ಸಭೆಯಲ್ಲಿ, ಆರು ವಿಶ್ವಕಪ್‌ಗಳಲ್ಲಿ ಭಾಗವಹಿಸಿದ್ದ ಕೆನಡಾದ ಸದಸ್ಯತ್ವವನ್ನು ಅಮಾನತುಗೊಳಿಸಲಾಗಿದೆ. ಆದಾಗ್ಯೂ, ಈ ಅಮಾನತು ಹೊರತಾಗಿಯೂ, ವಿಶ್ವಕಪ್‌ನಂತಹ ಸ್ಪರ್ಧೆಗಳಲ್ಲಿ ಭಾಗವಹಿಸಲು ಅನುಮತಿಸಲಾಗುತ್ತದೆ. ಇದರ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ ಎಂದು ಐಸಿಸಿ ತಿಳಿಸಿದೆ. ಕ್ರಿಕೆಟ್ ಕೆನಡಾ ತನ್ನ ಸದಸ್ಯತ್ವಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ನಿಯಮಗಳು ಮತ್ತು ಜವಾಬ್ದಾರಿಗಳನ್ನು ಉಲ್ಲಂಘಿಸಿದೆ ಎಂದು ಐಸಿಸಿ ಹೇಳಿದೆ. ಇದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆನಡಾದಲ್ಲಿ ಭಾರತೀಯ ಉಪಖಂಡದ ಅನೇಕ ಆಟಗಾರರಿದ್ದಾರೆ. ಇದರಲ್ಲಿ ಮುಖ್ಯವಾಗಿ ಭಾರತ ಮತ್ತು ಪಾಕಿಸ್ತಾನದ ಆಟಗಾರರು ಸೇರಿದ್ದಾರೆ.
🚨 Following the ICC Board Meeting in Ahmedabad, Cricket Canada has been suspended from its ICC membership with immediate effect due to " serious breaches of its membership obligations"
— Cricbuzz (@cricbuzz) June 1, 2026
canadian national representative teams will be eligible, however, to participate in icc events… pic.twitter.com/BumsfzkIut
ಆಡಳಿತ ಮಂಡಳಿಯಲ್ಲಿ ಸಮಸ್ಯೆಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಐಸಿಸಿ ನಿಖರವಾದ ಕಾರಣಗಳನ್ನು ವಿವರಿಸದಿದ್ದರೂ, ಕೆನಡಾ ತಂಡವು ಭವಿಷ್ಯದ ಐಸಿಸಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹವಾಗಿರುತ್ತದೆ ಎಂದು ದೃಢಪಡಿಸಿದೆ. ಕಳೆದ ವರ್ಷ ಕ್ರಿಕೆಟ್ ಯುಎಸ್ಎಯನ್ನು ಸಹ ಅಮಾನತುಗೊಳಿಸಲಾಗಿತ್ತು. ಸದಸ್ಯತ್ವ ನಿಯಮಗಳ ಗಮನಾರ್ಹ ಉಲ್ಲಂಘನೆಯಿಂದಾಗಿ ಐಸಿಸಿ ಮಂಡಳಿಯು ಕ್ರಿಕೆಟ್ ಕೆನಡಾದ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲು ನಿರ್ಧರಿಸಿದೆ.
ಗಮನಿಸಬೇಕಾದ ಅಂಶವೆಂದರೆ, ಕೆನಡಾ ಒಟ್ಟು 6 ವಿಶ್ವಕಪ್‌ಗಳಲ್ಲಿ ಭಾಗವಹಿಸಿರುವ ರಾಷ್ಟ್ರವಾಗಿದೆ. ಕೆನಡಾ ತಂಡವು 2024 ಮತ್ತು 2026 ರ ಟಿ20 ವಿಶ್ವಕಪ್‌ಗಳಲ್ಲಿ ಭಾಗವಹಿಸಿತ್ತು. ತಂಡವು ನಾಲ್ಕು ಏಕದಿನ ವಿಶ್ವಕಪ್‌ಗಳನ್ನು ಸಹ ಆಡಿದೆ. 1999, 2003, 2007 ಮತ್ತು 2011 ರಲ್ಲಿ ಏಕದಿನ ವಿಶ್ವಕಪ್‌ಗಳಲ್ಲಿ ಭಾಗವಹಿಸಿತು. ಕ್ರಿಕೆಟ್ ಕೆನಡಾಕ್ಕೆ 1968 ರಲ್ಲಿ ಐಸಿಸಿಯ ಸದಸ್ಯತ್ವ ನೀಡಲಾಗಿತ್ತು.
ಇದನ್ನೂ ಓದಿ: ಐಪಿಎಲ್ ಟ್ರೋಫಿ ಬೆಲೆ ಎಷ್ಟು ಗೊತ್ತಾ?: ಆ ಮೊತ್ತ ಕೇಳಿದ್ರೆ ಬೆಚ್ಚಿಬೀಳ್ತೀರಾ!

