ಅಫ್ಘಾನ್ ವಿರುದ್ಧದ ಸರಣಿಗೂ ಮೊದಲೇ ಭಾರತಕ್ಕೆ ಬಿಗ್ ಶಾಕ್; ಸ್ಟಾರ್ ಆಟಗಾರ ಡೌಟ್!!
ಅಫ್ಘಾನಿಸ್ತಾನ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಪ್ರಾರಂಭಕ್ಕೂ ಮೊದಲೇ ಟೀಮ್ ಇಂಡಿಯಾಗೆ ದೊಡ್ಡ ಆಘಾತವಾಗಿದೆ.


Published : September 1, 2026 at 3:12 PM IST
ಸೆಪ್ಟೆಂಬರ್ 13 ರಿಂದ ಪ್ರಾರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೂ ಮೊದಲೇ ಟೀಮ್ ಇಂಡಿಯಾದ ಆತಂಕ ಹೆಚ್ಚಿದೆ. ದೀರ್ಘ ಸಮಯದ ಬಳಿಕ ತಂಡಕ್ಕೆ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದ ಹಾರ್ದಿಕ್ ಪಾಂಡ್ಯ ಮತ್ತೆ ಗಾಯಗೊಂಡಿದ್ದಾರೆ. ತರಬೇತಿಯ ಸಮಯದಲ್ಲಿ ಅವರ ಕಾಲಿಗೆ ಗಾಯವಾಗಿದ್ದು ತಂಡಕ್ಕೆ ಮರಳಲು ಅವರಿಗೆ ಮತ್ತಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಈ ವರ್ಷ ಮಾರ್ಚ್‌ನಿಂದ ಹಾರ್ದಿಕ್ ಪಾಂಡ್ಯ ಯಾವುದೇ ಅಂತರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ ಎಂಬುದು ಗಮನಾರ್ಹ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಮರಳಿ ಫಿಟ್ನೆಸ್ ಪಡೆಯುವತ್ತ ಗಮನ ಹರಿಸಿದ್ದರು. ಆದಾಗ್ಯೂ ಅವರು ಚೇತರಿಕೆ ಹೊಸ್ತಿಲಲ್ಲಿರುವಾಗಲೆ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ. ಈ ಗಾಯವೂ ಮುಂಬರುವ ಸರಣಿಯಲ್ಲಿ ಆಡದಂತೆ ಅವರನ್ನು ತಡೆಯಬಹುದಾಗಿದ್ದು ಇದು ತಂಡದ ಆತಂಕಕ್ಕೂ ಕಾರಣವಾಗಿದೆ ಎಂದು ತಿಳಿಸಿದೆ. ಇನ್ನು ಅಫ್ಘಾನಿಸ್ತಾನ ವಿರುದ್ಧದ T20 ಸರಣಿಗೆ ತಂಡವನ್ನು ಅಂತಿಮಗೊಳಿಸಲು ಬಿಸಿಸಿಐ ಆಯ್ಕೆ ಸಮಿತಿ ಈ ವಾರ ಸಭೆ ಸೇರಲಿದೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ T20 ಸರಣಿಯು ಸೆಪ್ಟೆಂಬರ್ 13 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ.
🚨 PANDYA COMEBACK DELAYED. 🚨
— Mufaddal Vohra (@mufaddal_vohra) September 1, 2026
- Hardik Pandya’s comeback could be delayed due to leg niggle he suffered at the BCCI CoE. (TOI). pic.twitter.com/ORgxkcpifa
ಹಾರ್ದಿಕ್ ಪಾಂಡ್ಯ ಅಭ್ಯಾಸದ ವೇಳೆ ಕಾಲಿಗೆ ಗಾಯವಾದ ಕಾರಣ ಕೂಡಲೆ ಅವರನ್ನು ಬೌಲಿಂಗ್ ಮಾಡದಂತೆ ಸೂಚಿಸಲಾಯಿತು ಎಂದು ಮೂಲವೊಂದು ಬಹಿರಂಗಪಡಿಸಿದೆ. ಅವರು ಶೀಘ್ರದಲ್ಲೇ ಕ್ರಿಕೆಟ್ ಮೈದಾನಕ್ಕೆ ಮರಳಬಹುದು, ಆದರೆ ಅಫ್ಘಾನಿಸ್ತಾನ ವಿರುದ್ಧದ ಸರಣಿ ಹತ್ತಿರವಾಗಿರುವುದರಿಂದ, ಹಾರ್ದಿಕ್ ಆ ಹೊತ್ತಿಗೆ ಸಂಪೂರ್ಣವಾಗಿ ಫಿಟ್ ಆಗುತ್ತಾರೆ ಎಂಬುದು ಅನುಮಾನವಾಗಿದೆ. ಪ್ರಸ್ತುತ ಅವರ ಬ್ಯಾಟಿಂಗ್ ಮತ್ತು ರನ್ನಿಂಗ್ನಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಆದರೆ ಸೆಂಟರ್ ಆಫ್ ಎಕ್ಸಲೆನ್ಸ್ ಅವರನ್ನು ಸಂಪೂರ್ಣ ಫಿಟ್ ಎಂದು ಘೋಷಿಸುವ ವರೆಗೂ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲ್ಲ.
ಮೇ 24 ರಂದು ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. ಅದಾದ ನಂತರ, ಅವರು ಕಳೆದ ಐದು ತಿಂಗಳಿನಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದಾರೆ. 2027ರ ಏಕದಿನ ವಿಶ್ವಕಪ್ ಸಮೀಪಿಸುತ್ತಿರುವ ಕಾರಣ ಮುಂಬರುವ ಏಕದಿನ ಸರಣಿಗಳಲ್ಲಿ ಭಾಗಿಯಾಗಲು ಫಿಟ್ನೆಸ್ ಪಡೆಯಲು ಶ್ರಮಿಸುತ್ತಿದ್ದಾರೆ. ಆದಾಗ್ಯೂ ಈ ಆಲ್‌ರೌಂಡರ್ 2025ರ ಚಾಂಪಿಯನ್ಸ್ ಟ್ರೋಫಿ ಮುಗಿದ ನಂತರ ಗಾಯಗಳಿಂದಾಗಿ ಅವರು ಅಫ್ಘಾನಿಸ್ತಾನ, ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಹಲವಾರು ವೈಟ್-ಬಾಲ್ ಸರಣಿಗಳನ್ನು ಕಳೆದುಕೊಳ್ಳಬೇಕಾಯಿತು. ಈಗ, ಈ ಹೊಸ ಗಾಯವು ಅವರ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
🚨 BIG UPDATES ON TEAM INDIA 🚨
— Vikas (@Vikas662005) September 1, 2026
- BCCI held a meeting on Ajit Agarkar tenure extension or not as chief selector.
- Hardik Pandya niggle & no avaible for AFG T20 series.
- Nitish Kumar Reddy & Jasprit Bumrah is fully fit.
- Prince Yadav is completely fit.
- Krunal Pandya… pic.twitter.com/GTxwp7LAhc
ಭಾರತಕ್ಕೆ ಸಿಹಿ ಸುದ್ಧಿ
ಹಾರ್ದಿಕ್ ಗಾಯದ ನಡುವೆಯೂ ಭಾರತಕ್ಕೆ ಸಿಕ್ಕಿರುವ ಸಮಾಧಾನಕರ ಸುದ್ದಿ ಎಂದರೆ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಗಾಯಗಳಿಂದ ಚೇತರಿಸಿಕೊಂಡಿದ್ದಾರೆ. ಆದರೆ ಜಸ್ಪ್ರೀತ್ ಬುಮ್ರಾ ಅವರ ಗಾಯವೂ ಕಳವಳಕಾರಿಯಾಗಿದೆ. ಏತನ್ಮಧ್ಯೆ, ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ತಂಡವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ತಂಡಕ್ಕೆ ಮರಳಬಹುದೇ ಅಥವಾ ಇಲ್ಲವೇ ಎಂಬುದು ಕಾದು ನೋಡಬೇಕಿದೆ.
ಇದನ್ನೂ ಓದಿ: ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ 'ಎ' ತಂಡ ಪ್ರಕಟ; ಇಬ್ಬರು ಭಾರತೀಯರಿಗೆ ಸ್ಥಾನ!!

