ETV Bharat / sports

ರಾಜಸ್ಥಾನ್ ಟ್ರೋಫಿ ಕನಸಿಗೆ ಕೊಳ್ಳಿ ಇಟ್ಟ ಗುಜರಾತ್! ಮೂರನೇ ಬಾರಿಗೆ ಫೈನಲ್ ಪ್ರವೇಶ

ರಾಜಸ್ಥಾನ್​ ರಾಯಲ್ಸ್​ ವಿರುದ್ಧ ನಡೆದಿದ್ದ ಕ್ವಾಲಿಫೈರ್ 2ರಲ್ಲಿ ಗುಜರಾತ್​ ಟೈಟಾನ್ಸ್​ 7 ವಿಕೆಟ್​ಗಳಿಂದ ಗೆಲುವು ಸಾಧಿಸಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ.

gt-defeated-rr-by-7-wickets-in-qualifier-2-and-entered-the-final-of-ipl-2026
ವಿಕೆಟ್​ ಪಡೆದ ಸಂಭ್ರಮದಲ್ಲಿ ಕಗಿಸೋ ರಬಾಡ (IANS)
author img

By ETV Bharat Sports Team

Published : May 30, 2026 at 12:05 AM IST

2 Min Read
Choose ETV Bharat

ನಾಯಕ ಶುಭಮನ್ ಗಿಲ್ ಅವರ ಅದ್ಭುತ ಶತಕ ಮತ್ತು ಸಾಯಿ ಸುದರ್ಶನ್ ಅವರ ಅರ್ಧಶತಕ ನೆರವಿನಿಂದ ಗುಜರಾತ್ ಟೈಟಾನ್ಸ್, ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಐಪಿಎಲ್ 2026ರ ಫೈನಲ್‌ಗೆ ಸ್ಥಾನ ಪಡೆದುಕೊಂಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ರಾಜಸ್ಥಾನ್ ತಂಡ ವೈಭವ್ ಸೂರ್ಯವಂಶಿ ಅವರ ಅದ್ಭುತ ಇನ್ನಿಂಗ್ಸ್‌ನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 214 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಗುಜರಾತ್ 18.4 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 219 ರನ್ ಬಾರಿಸಿ ಪಂದ್ಯವನ್ನು ಗೆದ್ದುಕೊಂಡಿತು. ರಾಜಸ್ಥಾನದ ಐಪಿಎಲ್​​ ಪ್ರಯಾಣವು ಕ್ವಾಲಿಫೈಯರ್ 2ರಲ್ಲಿ ಕೊನೆಗೊಂಡಿತು.

ಗುಜರಾತ್ ಟೈಟಾನ್ಸ್ ಮೂರನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದೆ. ಇದಕ್ಕೂ ಮೊದಲು, ತಂಡವು 2022 (ವಿಜೇತ) ಮತ್ತು 2023 (ರನ್ನರ್-ಅಪ್) ರಲ್ಲಿ ಫೈನಲ್​ ಪಂದ್ಯವನ್ನಾಡಿತ್ತು. ಈಗ ಗುಜರಾತ್ ಮೇ 31ರಂದು ಅಂದರೆ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ, ಆರ್‌ಸಿಬಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೊರಾಡುತ್ತಿದ್ದರೆ, ಗುಜರಾತ್ ಎರಡನೇ ಬಾರಿಗೆ ಟ್ರೋಫಿಯನ್ನು ಗೆಲ್ಲಲು ಬಯಸಿದೆ.

ಪಂದ್ಯ ಹೈಲೈಟ್ಸ್​: 215 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಆರಂಭ ಪಡೆದಿಕೊಂಡಿತು. ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ 167 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ಬುನಾದಿ ಹಾಕಿದರು. ಸಾಯಿ ಸುದರ್ಶನ್ 32 ಎಸೆತಗಳಲ್ಲಿ 58 ರನ್‌ಗಳಿಸಿ ಔಟಾದರೆ, ನಾಯಕ ಶುಭ್ಮನ್ ಗಿಲ್ 53 ಎಸೆತಗಳಲ್ಲಿ 104 ರನ್‌ಗಳ ಇನ್ನಿಂಗ್ಸ್ ಆಡಿದರು. ಉಳಿದಂತೆ ವಾಷಿಂಗ್ಟನ್ ಸುಂದರ್ 9 ಎಸೆತಗಳಲ್ಲಿ 16 ರನ್ ಗಳಿಸಿದರೆ ಜೊಸ್​ ಬಟ್ಲರ್​ (9) ಮತ್ತು ರಾಹುಲ್​ ತೆವಾಟಿಯಾ (17) ಅಜೇಯರಾಗಿ ಉಳಿದರು. ರಾಜಸ್ಥಾನ್​ ಪರ ಆರ್ಚರ್​, ಬರ್ಗರ್​, ಬ್ರಿಜೇಶ್​ ಶರ್ಮಾ ತಲಾ ಒಂದು ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಪವರ್‌ಪ್ಲೇನಲ್ಲಿ ಎರಡು ಹಿನ್ನಡೆಗಳನ್ನು ಅನುಭವಿಸಿತು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಒಂದು ರನ್ ಗಳಿಸಿದರೆ, ಧ್ರುವ್ ಜುರೆಲ್ 6 ಎಸೆತಗಳಲ್ಲಿ ಏಳು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಸಿರಾಜ್ ಯಶಸ್ವಿ ಅವರನ್ನು ಔಟ್ ಮಾಡಿದರೆ, ಜುರೆಲ್ ಅವರನ್ನು ರಬಾಡ ಔಟ್ ಮಾಡಿದರು. 8ನೇ ಓವರ್ ನಂತರ ರವೀಂದ್ರ ಜಡೇಜಾ ಗಾಯಗೊಂಡು ಮೈದಾನದಿಂದ ಹೊರನಡೆದರು. ನಾಯಕ ರಿಯಾನ್ ಪರಾಗ್ 6 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು. ದಾಸುನ್ ಶನಕ ಕೇವಲ ಮೂರು ರನ್ ಗಳಿಸಲು ಸಾಧ್ಯವಾಯಿತು. ಜೋಫ್ರಾ ಆರ್ಚರ್ 4 ಎಸೆತಗಳಲ್ಲಿ 7 ರನ್ ಗಳಿಸಿದರು.

ಆದರೆ ಆರಂಭಿಕ ವೈಭವ್ ಸೂರ್ಯವಂಶಿ ಸತತ ಎರಡನೇ ಬಾರಿಗೆ ಶತಕ ವಂಚಿತರಾದರು. ಅವರು 47 ಎಸೆತಗಳಲ್ಲಿ 96 ರನ್ ಗಳಿಸಿದರು. 18ನೇ ಓವರ್‌ನಲ್ಲಿ ಶತಕದತ್ತ ಸಾಗುತ್ತಿದ್ದ ವೈಭವ್ ಸೂರ್ಯವಂಶಿ ಅವರನ್ನು ಕಗಿಸೊ ರಬಾಡ ಔಟ್ ಮಾಡಿದರು. ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಏಳು ಸಿಕ್ಸರ್‌ಗಳೊಂದಿಗೆ 96 ರನ್ ಗಳಿಸಿದರು. ಡೊನೊವನ್ ಫೆರೇರಾ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು ಮತ್ತು 11 ಎಸೆತಗಳಲ್ಲಿ ಔಟಾಗದೆ 38 ರನ್ ಗಳಿಸಿದರು, ಇದರಲ್ಲಿ ಎರಡು ಬೌಂಡರಿಗಳು ಸೇರಿದ್ದವು. ರವೀಂದ್ರ ಜಡೇಜಾ 35 ಎಸೆತಗಳಲ್ಲಿ ಔಟಾಗದೆ 45 ರನ್ ಗಳಿಸಿದರು, ಇವರ ಇನ್ನಿಂಗ್ಸ್​ನಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿತ್ತು. ಗುಜರಾತ್ ಟೈಟಾನ್ಸ್ ಪರ ಕಗಿಸೊ ರಬಾಡ ಮತ್ತು ಜೇಸನ್ ಹೋಲ್ಡರ್ ತಲಾ ಎರಡು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಒಬ್ಬ ಬ್ಯಾಟ್ಸ್‌ಮನ್ ಅನ್ನು ಔಟ್ ಮಾಡಿದರು.

ಇದನ್ನೂ ಓದಿ: ಸತತ 2ನೇ ಬಾರಿಗೆ ಐಪಿಎಲ್ ಫೈನಲ್‌ ತಲುಪಿದ ಆರ್‌ಸಿಬಿ: ಫ್ಯಾನ್ಸ್​ಗೆ ಸುರಕ್ಷತಾ ಮಾರ್ಗಸೂಚಿ ಪ್ರಕಟಿಸಿದ ಬೆಂಗಳೂರು ಪೊಲೀಸರು