ಸ್ಪೇನ್ ಮಣಿಸಿ ನಾಲ್ಕನೇ ಬಾರಿಗೆ ಹಾಕಿ ವಿಶ್ವಕಪ್ ಗೆದ್ದುಕೊಂಡ ಜರ್ಮನಿ!!
ಪುರುಷರ ಹಾಕಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸ್ಪೇನ್ ಅನ್ನು ಮಣಿಸುವ ಮೂಲಕ ಜರ್ಮನಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.


Published : August 31, 2026 at 10:41 AM IST
2026ರ ಪುರುಷರ ಹಾಕಿ ವಿಶ್ವಕಪ್ನಲ್ಲಿ ಜರ್ಮನಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆಗಸ್ಟ್ 30ರ ಭಾನುವಾರದಂದು ವಾವ್ರೆಯ ಬೆಲ್ಫಿಯಸ್ ಹಾಕಿ ಅರೆನಾದಲ್ಲಿ ನಡೆದ ಫೈನಲ್‌ನಲ್ಲಿ ಜರ್ಮನಿ ಸ್ಪೇನ್ ಅನ್ನು 1-0 ಗೋಲುಗಳಿಂದ ಮಣಿಸಿತು. ಇದರೊಂದಿಗೆ ಸತತ ಎರಡನೇ ಬಾರಿಗೆ ಮತ್ತು ಒಟ್ಟಾರೆಯಾಗಿ ನಾಲ್ಕನೇ ಬಾರಿಗೆ ಹಾಕಿ ವಿಶ್ವಕಪ್ ಅನ್ನು ಗೆದ್ದುಕೊಂಡು ಪಾಕಿಸ್ತಾನ ದಾಖಲೆ ಸರಿಗಟ್ಟಿತು.
ಫೈನಲ್ ಪಂದ್ಯ ಹೀಗಿತ್ತು
ಫೈನಲ್ ಪಂದ್ಯ ಅತ್ಯಂತ ರೋಚಕವಾಗಿತ್ತು. ಜರ್ಮನಿ ಮತ್ತು ಸ್ಪೇನ್ ಅತ್ಯುತ್ತಮ ರಕ್ಷಣಾ ಪ್ರದರ್ಶನ ನೀಡಿದವು. ಮೊದಲ 15 ನಿಮಿಷಗಳಲ್ಲಿ ಎರಡೂ ತಂಡಗಳು ಪೆನಾಲ್ಟಿ ಕಾರ್ನರ್ ಗಳಿಸಿದವು ಆದರೆ ಯಾವುದೇ ತಂಡಕ್ಕೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಜರ್ಮನಿ ಪಂದ್ಯದ ಆರಂಭದಲ್ಲಿ ಆಕ್ರಮಣಕಾರಿಯಾಗಿ ಆಡಿತು, ಎರಡನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಗಳಿಸಿತು. ಆದಾಗ್ಯೂ, ಬೆನೆಡಿಕ್ಟ್ ಶ್ವಾರ್ಜಾಪ್ ಅವರ ಹೊಡೆತವನ್ನು ಸ್ಪ್ಯಾನಿಷ್ ಗೋಲ್‌ಕೀಪರ್ ತಡೆದರು. ನಂತರ ಸ್ಪೇನ್ ಒಂಬತ್ತನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಗಳಿಸಿತು, ಆದರೆ ಅದನ್ನು ತಪ್ಪಿಸಿಕೊಂಡಿತು.
4-TIME WORLD CHAMPIONS!!!! 🇩🇪 🏆 🏆 🏆 🏆 🇩🇪
— International Hockey Federation (@FIH_Hockey) August 30, 2026
Die Honamas defend their World Cup and join Pakistan as the most successful side in the history of the Men's FIH Hockey World Cups, with 4 titles to their name!!#HWC2026 #HockeyWorldCup2026 #WorldCup #WorldChampions #Germany pic.twitter.com/ofk5ZNOrl4
ನಂತರ ಎರಡನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಜರ್ಮನಿ ಮತ್ತು ಸ್ಪೇನ್ ಎರಡೂ ತಂಡಗಳು ಗೋಲು ಗಳಿಸಲು ಹೋರಾಡಿದವು. ಆದರೆ ಯಾವುದೇ ತಂಡಕ್ಕೆ ಪೆನಾಲ್ಟಿ ಕಾರ್ನರ್ ಸಿಗಲಿಲ್ಲ. ಹೀಗಾಗಿ, ಮೊದಲಾರ್ಧವು ಗೋಲುರಹಿತವಾಗಿ ಕೊನೆಗೊಂಡಿತು.
ಜರ್ಮನಿಗೆ ಗೆಲುವು ತಂದುಕೊಟ್ಟ ಸ್ಟ್ರುಥಾಫ್
ಗೋಲು ರಹಿತ ಮೊದಲಾರ್ಧದ ನಂತರ, ಎರಡೂ ತಂಡಗಳು ಒತ್ತಡದಲ್ಲಿದ್ದವು. ಮೂರನೇ ಕ್ವಾರ್ಟರ್‌ನಲ್ಲಿ 39ನೇ ನಿಮಿಷದಲ್ಲಿ ಸ್ಪೇನ್‌ಗೆ ಪೆನಾಲ್ಟಿ ಕಾರ್ನರ್ ಸಿಕ್ಕಿತು, ಆದರೆ ಸ್ಪ್ಯಾನಿಷ್ ನಾಯಕ ಮಾರ್ಕ್ ಮಿರಾಲ್ಸ್ ಹೊಡೆತವನ್ನು ತಪ್ಪಿಸಿಕೊಂಡರು. ಅಂತಿಮವಾಗಿ ಪಂದ್ಯದ ಮೊದಲ ಗೋಲು 44ನೇ ನಿಮಿಷದಲ್ಲಿ ಬಂದಿತು. ಜರ್ಮನಿಯ ಮೈಕೆಲ್ ಸ್ಟ್ರುಥಾಪ್‌ಗೆ ಅದ್ಭುತ ಆಟದ ಮೂಲಕ ಚೆಂಡನ್ನು ನೆಟ್ಗೆ ಬಾರಿಸಿ ಜರ್ಮನಿಗೆ 1-0 ಮುನ್ನಡೆ ಸಾಧಿಸಿತು.
Argentina make their way on to the podium!! 🥉 🇦🇷
— International Hockey Federation (@FIH_Hockey) August 30, 2026
Los Leones get just their second-ever bronze medal at the FIH Hockey World Cups defeating Netherlands in Wavre!#HWC2026 #Hockey #LosLeones #Argentina pic.twitter.com/RLQy7P7av4
ಇದಾದ ನಂತರ, ನಾಲ್ಕನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಹೆಣಗಾಡಿದವು. ಜರ್ಮನಿ ತಮ್ಮ ಮುನ್ನಡೆಯನ್ನು ಬಲಪಡಿಸಲು ನೋಡಿತು, ಆದರೆ ಸ್ಪೇನ್ ಸಮಬಲ ಸಾಧಿಸಲು ಹೋರಾಡಿತು. ಆದಾಗ್ಯೂ, ನಾಲ್ಕನೇ ಕ್ವಾರ್ಟರ್‌ನಲ್ಲಿ ಯಾವುದೇ ತಂಡವು ಗೋಲು ಗಳಿಸಲಿಲ್ಲ. ಹೀಗಾಗಿ, ಜರ್ಮನಿ ಸ್ಪೇನ್ ಅನ್ನು 1-0 ಗೋಲುಗಳಿಂದ ಸೋಲಿಸಿ ಪುರುಷರ ಹಾಕಿ ವಿಶ್ವಕಪ್ ಟ್ರೋಫಿಯನ್ನು ಪಡೆದುಕೊಂಡಿತು.
ಪಾಕ್ ದಾಖಲೆ ಸರಿಗಟ್ಟಿದ ಜರ್ಮನಿ
ಈ ಗೆಲುವಿನೊಂದಿಗೆ ಜರ್ಮನಿಯ ನಾಲ್ಕನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತು. ಇದರೊಂದಿಗೆ ಪಾಕಿಸ್ತಾನದ ದಾಖಲೆ ಸರಿಗಟ್ಟಿತು. ಪಾಕಿಸ್ತಾನ 1971, 1978, 1982 ಮತ್ತು 1994 ರಲ್ಲಿ ಪ್ರಶಸ್ತಿಗಳನ್ನು ಗೆದ್ದಿದೆ. ಜರ್ಮನಿ ಈ ಹಿಂದೆ ಕೌಲಾಲಂಪುರ (2002), ಮೊಂಚೆಂಗ್ಲಾಡ್‌ಬಾಚ್ (2006) ಮತ್ತು ಭುವನೇಶ್ವರ (2023) ಮತ್ತು ಇದೀಗ 2026ರಲ್ಲಿ ನಡೆದ ಪುರುಷರ ಹಾಕಿ ವಿಶ್ವಕಪ್ ಅನ್ನು ಗೆದ್ದುಕೊಂಡಿದೆ.
2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದಿದ್ದ ಪಂದ್ಯದಲ್ಲಿ ಭಾರತ ವಿರುದ್ಧ ಸೋತ ನಂತರ ಜರ್ಮನಿ ಅದ್ಭುತ ಪುನರಾಗಮನ ಮಾಡಿದೆ. ಅಂದಿನಿಂದ ತಂಡವು ಎರಡು ವಿಶ್ವಕಪ್‌ಗಳು, ಒಂದು ಒಲಿಂಪಿಕ್ ಬೆಳ್ಳಿ ಪದಕ ಮತ್ತು ಒಂದು ಯುರೋಪಿಯನ್ ಪ್ರಶಸ್ತಿಯನ್ನು ಗೆದ್ದಿದೆ. 2022ರಲ್ಲಿ ತಂಡದ ನಾಯಕತ್ವ ವಹಿಸಿಕೊಂಡ ನಂತರ ಇದು ಜರ್ಮನಿಯ ಕೋಚ್ ಆಂಡ್ರೆ ಹೆನ್ನಿಗ್ ಅವರ ನಾಲ್ಕನೇ ಪ್ರಮುಖ ಪ್ರಶಸ್ತಿಯಾಗಿದೆ.
ಕಂಚಿನ ಪದಕ ಗೆದ್ದ ಅರ್ಜೆಂಟೀನಾ
ಇನ್ನು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ನೆದರ್ಲ್ಯಾಂಡ್ಸ್ ತಂಡವನ್ನು 2-1 ಅಂತರದಿಂದ ಸೋಲಿಸಿತು. 59ನೇ ನಿಮಿಷದಲ್ಲಿ ಮಥಿಯಾಸ್ ರೇ ಪೆನಾಲ್ಟಿ ಕಾರ್ನರ್ ಮೂಲಕ ಗೆಲುವಿನ ಗೋಲು ಗಳಿಸಿದರು.
FIH President Tayyab Ikram congratulated the Men’s World Champions:
— International Hockey Federation (@FIH_Hockey) August 30, 2026
“Warm congratulations to Germany on being crowned once again men’s world champions! A remarkable achievement that reflects an exceptional combination of talent, determination, mental strength and relentless hard… pic.twitter.com/7xQFUv3bMK
ಭಾರತಕ್ಕೆ 8ನೇ ಸ್ಥಾನ
ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ಭಾರತ 8ನೇ ಸ್ಥಾನದೊಂದಿಗೆ ಟೂರ್ನಿಯನ್ನು ಕೊನೆಗೊಳಿಸಿತು. 7ನೇ-8 ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ, ಬೆಲ್ಜಿಯಂ ಶೂಟೌಟ್‌ನಲ್ಲಿ 4-3 ಅಂತರದಿಂದ ಗೆದ್ದುಕೊಂಡಿತು. ಎರಡನೇ ಸುತ್ತಿನಲ್ಲಿ ಅರ್ಜೆಂಟೀನಾ ವಿರುದ್ಧ 3-5 ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ 1-3 ಅಂತರದಲ್ಲಿ ಸೋತ ನಂತರ ಭಾರತ ಸೆಮಿಫೈನಲ್ ರೇಸ್‌ನಿಂದ ಹೊರಬಿತ್ತು.
ಇದನ್ನೂ ಓದಿ: ಮಹಿಳಾ ಏಷ್ಯಾಕಪ್ 2026: ಥಾಯ್ಲೆಂಡ್ ವಿರುದ್ಧ ಭಾರತಕ್ಕೆ 94 ರನ್ಗಳ ಜಯ!!

