ಅಯ್ಯೋ ದುರ್ವಿಧಿಯೇ..! 38ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಸ್ಟಾರ್ ಕ್ರಿಕೆಟರ್; ಶೋಕದಲ್ಲಿ ಕ್ರೀಡಾಲೋಕ!!
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅಫ್ಘಾನಿಸ್ತಾನದ ಮಾಜಿ ದಂತಕಥೆ ವೇಗದ ಬೌಲರ್ ಶಪೂರ್ ಜದ್ರಾನ್ 38ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

Published : July 7, 2026 at 4:42 PM IST
ಅಫ್ಘಾನಿಸ್ತಾನದ ಮಾಜಿ ದಂತಕಥೆ ವೇಗದ ಬೌಲರ್ ಶಪೂರ್ ಜದ್ರಾನ್ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಇಂದು ಅವರ ಇಹಲೋಕ ತ್ಯಜಿಸಿದ್ದಾರೆ. ಜದ್ರಾನ್ ಹಿಮೋಫಾಗೊಸೈಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್ ಎಂಬ ಅಪರೂಪದ ಮತ್ತು ಮಾರಣಾಂತಿಕ ಕಾಯಿಲೆಯೊಂದಿಗೆ ಹೋರಾಡುತ್ತಿದ್ದರು ಎಂದು ವರದಿಯಾಗಿದೆ. ಅವರ ಸಾವಿನ ಸುದ್ದಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಅಫ್ಘಾನ್ ತಂಡದ ಆರಂಭಿಕ ಪಯಣದಲ್ಲಿ ಭಾಗವಾಗಿದ್ದ ಆಟಗಾರರಲ್ಲಿ ಶಪೂರ್ ಜದ್ರಾನ್ ಸಹ ಒಬ್ಬರು. ಶಪೂರ್ ಅವರ ನಿಧನಕ್ಕೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಸಂತಾಪವನ್ನು ಸೂಚಿಸಿದೆ. "ಮಾಜಿ ವೇಗದ ಬೌಲರ್ ಶಪೂರ್ ಜದ್ರಾನ್ ಅವರ ನಿಧನಕ್ಕೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ತೀವ್ರ ದುಃಖವನ್ನು ವ್ಯಕ್ತಪಡಿಸುತ್ತದೆ. ಜದ್ರಾನ್ ಅಫ್ಘಾನಿಸ್ತಾನ ಕ್ರಿಕೆಟ್‌ನ ಸ್ಥಾಪಕ ಒಬ್ಬರಾಗಿದ್ದರು. ಅವರ ಸಮರ್ಪಣೆ, ಉತ್ಸಾಹ ಮತ್ತು ಬದ್ಧತೆಯು ನಮ್ಮ ದೇಶದಲ್ಲಿ ಕ್ರೀಡೆಯ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ." ಎಂದು ಮಂಡಳಿಯು ಬರೆದುಕೊಂಡಿದೆ.
Sad news out of Afghanistan following the passing of fast bowler and Cricket World Cup hero Shapoor Zadran.https://t.co/wkaKMU9AJT
— ICC (@ICC) July 7, 2026
ಶಾಪೂರ್ ಜದ್ರಾನ್ ಕಳೆದ ಹಲವಾರು ತಿಂಗಳುಗಳಿಂದ HLH ಎಂಬ ಅಪರೂಪ ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಕಿರಿಯ ಸಹೋದರ ಘಮೈ ಜದ್ರಾನ್ ಪ್ರಕಾರ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರ ಆರೋಗ್ಯ ಹದಗೆಟ್ಟಿತು. ಇದರ ನಂತರ, ಆಫ್ಘನ್ ವೈದ್ಯರು ಉತ್ತಮ ಚಿಕಿತ್ಸೆಗಾಗಿ ಭಾರತಕ್ಕೆ ಪ್ರಯಾಣಿಸಲು ಸಲಹೆ ನೀಡಿದರು. ಅದರಂತೆ ಅವರಿಗೆ ಇಲ್ಲಿಯೆ ಚಿಕಿತ್ಸೆ ನೀಡಲಾಗುತಿತ್ತು. ಎರಡು ತಿಂಗಳ ಹಿಂದೆ ಮೇ ತಿಂಗಳಲ್ಲಿ, ಅಫ್ಘಾನ್ ಕ್ರಿಕೆಟಿಗರಾದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಶಪೂರ್ ಅವರ ಆರೋಗ್ಯ ವಿಚಾರಿಸಿದ್ದರು. ಇದೀಗ 38 ವರ್ಷದ ಜದ್ರಾನ್ ಅವರ ಸಾವಿನ ಸುದ್ದಿ ಕ್ರಿಕೆಟ್ ಜಗತ್ತಿಗೆ ದೊಡ್ಡ ಆಘಾತವನ್ನುಂಟುಮಾಡಿದೆ.

ಶಪೂರ್ ವೃತ್ತಿಜೀವನ: ಶಪೂರ್ ಜದ್ರಾನ್ ಅಫ್ಘಾನಿಸ್ತಾನದ ಅತ್ಯಂತ ಪ್ರತಿಭಾವಂತ ಆಟಗಾರರಲ್ಲಿ ಒಬ್ಬರು. 2012ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡುವಾಗ, ಅವರು ಆರಂಭಿಕ ಆಟಗಾರರಾದ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಅವರನ್ನು ಔಟ್ ಮಾಡಿದ್ದರು. ಗಂಭೀರ್ ಬೌಲ್ಡ್ ಆದರೆ ಸೆಹ್ವಾಗ್ ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡಿದ್ದರು. ಈ ಪಂದ್ಯದಲ್ಲಿ, ಅವರು 4 ಓವರ್‌ಗಳಲ್ಲಿ 33 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ಶಪೂರ್ ಜದ್ರಾನ್ ಅಫ್ಘಾನಿಸ್ತಾನ ಪರ ಒಟ್ಟು 44 ಏಕದಿನ ಮತ್ತು 36 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 43 ಮತ್ತು 37 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: ಇಂದು ಭಾರತ vs ಇಂಗ್ಲೆಂಡ್ 3ನೇ ಟಿ20! ಹೆಡ್ಟು-ಹೆಡ್, ಪಿಚ್, ಹವಾಮಾನ, ಸಂಭಾವ್ಯ ತಂಡದ ಮಾಹಿತಿ

