ETV Bharat / sports

ದುಲೀಪ್​ ಟ್ರೋಫಿ; ವೈಭವ್​ ಅರ್ಧಶತಕ ಮಿಸ್; ಪೂರ್ವ ವಲಯ ತಂಡ ಫೈನಲ್​ಗೆ ಎಂಟ್ರಿ!!

ವೈಭವ್​ ಸೂರ್ಯವಂಶಿ ಪ್ರತಿನಿಧಿಸುತ್ತಿರುವ ಪೂರ್ವ ವಲಯ ತಂಡವೂ ದುಲೀಪ್ ಟ್ರೋಫಿಯಲ್ಲಿ ಫೈನಲ್‌ಗೆ ಮುನ್ನಡೆದಿದೆ.

ವೈಭವ್​ ಸೂರ್ಯವಂಶಿ
ವೈಭವ್​ ಸೂರ್ಯವಂಶಿ (IANS)
author img

By ETV Bharat Sports Team

Published : September 1, 2026 at 5:31 PM IST

|

Updated : September 1, 2026 at 5:39 PM IST

2 Min Read
Choose ETV Bharat

ವೈಭವ್​ ಸೂರ್ಯವಂಶಿ ಪ್ರತಿನಿಧಿಸುತ್ತಿರುವ ಪೂರ್ವ ವಲಯ ತಂಡವು 2026ರ ದುಲೀಪ್ ಟ್ರೋಫಿಯಲ್ಲಿ ಫೈನಲ್‌ಗೆ ಮುನ್ನಡೆದಿದೆ. ಮಂಗಳವಾರ, ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನ -1 ರಲ್ಲಿ ನಡೆದ ಸೆಮಿಫೈನಲ್‌ನಲ್ಲಿ ರಜತ್​ ಪಾಟಿದಾರ್​ ನೇತೃತ್ವದ ಕೇಂದ್ರ ವಲಯ​ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿತು.

ಈ ಪಂದ್ಯದಲ್ಲಿ ಕೇಂದ್ರ ವಲಯ ನಿಗದಿಪಡಿಸಿದ 159 ರನ್‌ಗಳ ಸಾಮಾನ್ಯ ಗುರಿಯನ್ನು ಬೆನ್ನಟ್ಟಿದ ಪೂರ್ವ ವಲಯವು 39.3 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ ಈ ಗುರಿಯನ್ನು ತಲುಪಿತು. ತಂಡದ ಪರ ವೈಭವ್ ಸೂರ್ಯವಂಶಿ ಅದ್ಭುತ ಪ್ರದರ್ಶನ ನೀಡಿದರು. ಅವರು ಅಭಿಮನ್ಯು ಈಶ್ವರನ್ ಅವರೊಂದಿಗೆ ಮೊದಲ ವಿಕೆಟ್ ಗೆ 61 ರನ್​ಗಳ ಜೊತೆಯಾಟ ಆಡಿದರು. ಆದರೆ, 15ರ ಹರೆಯದ ವೈಭವ್​ ಎರಡನೇ ಇನ್ನಿಂಗ್ಸ್​ನಲ್ಲಿ ಅರ್ಧಶತಕದಿಂದ ವಂಚಿತರಾದರು.

ಅವರು 43 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 40 ರನ್ ಗಳಿಸಿದರು. ಇದಕ್ಕೂ ಮುನ್ನ ಸೂರ್ಯವಂಶಿ ಮೊದಲ ಇನ್ನಿಂಗ್ಸ್​ನಲ್ಲೂ ಶತಕ ವಂಚಿತರಾಗಿದ್ದರು. ಇನ್ನು ಅಭಿಮನ್ಯು ಈಶ್ವರನ್​ 55 ಎಸೆತಗಳಲ್ಲಿ ಒಂದು ಸಿಕ್ಸರ್ ಸೇರಿದಂತೆ 24 ರನ್ ಸೇರಿಸಿದರು. 19 ನೇ ಓವರ್ ನಲ್ಲಿ ಹರ್ಷ್ ದುಬೆ ಇವರನ್ನು ಔಟ್ ಮಾಡಿದರು.

ಬಳಿಕ ಬಂದವರಲ್ಲಿ ವಿರಾಟ್ ಸಿಂಗ್ (34 ಎಸೆತಗಳಲ್ಲಿ 12) ಅವರನ್ನು 27ನೇ ಓವರ್ ನಲ್ಲಿ ದುಬೆ ಪೆವಿಲಿಯನ್​ಗೆ ಕಳುಹಿಸಿದರು. ಕುಮಾರ ಕುಶಾಗ್ರ 40 ಎಸೆತಗಳಲ್ಲಿ ಎರಡು ಬೌಂಡರಿಗಳ ಮೂಲಕ 22 ರನ್ ಸೇರಿಸಿದರು. 33ನೇ ಓವರ್ ನ ಮೂರನೇ ಎಸೆತದಲ್ಲಿ ಅವರು ದುಬೆ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಮುಂದಿನ ಎಸೆತದಲ್ಲಿ ಅನ್ಕುಲ್​ ರಾಯಲ್ (0) ಬೌಲ್ಡ್ ಆದರು. ಸುದೀಪ್ ಕುಮಾರ್ ಘರಾಮಿ 16 ಎಸೆತಗಳಲ್ಲಿ 14 ರನ್ ಗಳಿಸಿದರು. ನಾಯಕ ಇಶಾನ್ ಕಿಶನ್ ಕೊನೆಯವರೆಗೂ ಕ್ರೀಸ್​ನಲ್ಲಿದ್ದು ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. 41 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ ಅಜೇಯ 39 ರನ್ ಗಳಿಸಿದರು. ಮೊಹಮ್ಮದ್ ಶಮಿ 5 ಎಸೆತಗಳಲ್ಲಿ ಅಜೇಯ 8 ರನ್ ಗಳಿಸಿದರು.

ಇದಕ್ಕೂ ಮೊದಲು ಸೆಂಟ್ರಲ್ ವಲಯದ ಎರಡನೇ ಇನ್ನಿಂಗ್ಸ್​ನಲ್ಲಿ 50.2 ಓವರ್ ಗಳಲ್ಲಿ ಕೇವಲ 158 ರನ್ ಗಳಿಗೆ ಆಲೌಟ್​ ಆಯ್ತು. ಅಮನ್​ ಮೊಖಡೆ ಮಾತ್ರ 41 ರನ್​ಗಳಿಸಿ ಹೈಸ್ಕೋರರ್ ಎನಿಸಿಕೊಂಡರು. ಉಳಿದವಲ್ಲಿ ಕೇವಲ ನಾಲ್ವರು ಮಾತ್ರ ಎರಡಂಕಿ ಸ್ಕೋರ್​ ತಲುಪಿದರು. ರಜತ್​ ಪಾಟಿದಾರ್ ​ಎರಡನೇ ಇನ್ನಿಂಗ್ಸ್​ನಲ್ಲೂ ಫ್ಲಾಪ್​ ಆದರು. ಅವರು ಕೇವಲ 5 ರನ್​ ಮಾತ್ರ ಗಳಿಸಿದರು. ಇನ್ನು ಮುಖೇಶ್ ಕುಮಾರ್ ನಾಲ್ಕು ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮೂರು ವಿಕೆಟ್, ಅನುಕುಲ್ ರಾಯ್, ಅಭಿಜಿತ್ ಸರ್ಕಾರ್ ಮತ್ತು ಕುನಿನ್ ಖುರೇಷಿ ತಲಾ ಒಂಡು ವಿಕೆಟ್​ ಉರುಳಿಸಿದರು.

ವೈಭವ್ ಸೂರ್ಯವಂಶಿ 8 ರನ್‌ಗಳಿಂದ ಶತಕ ವಂಚಿತ: ಎರಡನೇ ದಿನದಂದು, 15 ವರ್ಷದ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಪೂರ್ವ ವಲಯಕ್ಕೆ ಬಲವಾದ ಆರಂಭವನ್ನು ನೀಡಿದರು. ಅವರು ಅಭಿಮನ್ಯು ಈಶ್ವರನ್ (69) ಅವರೊಂದಿಗೆ 161 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡರು. ಸೂರ್ಯವಂಶಿ ಕೇವಲ 81 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಏಳು ಸಿಕ್ಸರ್‌ಗಳೊಂದಿಗೆ 92 ರನ್ ಗಳಿಸಿದರು. ಅವರು 42 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು. ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರರಾದರು. ಆದಾಗ್ಯೂ, ಸೂರ್ಯವಂಶಿ ಮತ್ತು ಅಭಿಮನ್ಯು ಅವರ ಅದ್ಭುತ ಇನ್ನಿಂಗ್ಸ್ ಹೊರತಾಗಿಯೂ, ಪೂರ್ವ ವಲಯವು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 266 ರನ್‌ಗಳನ್ನು ಗಳಿಸಿತು ಮತ್ತು ಮುನ್ನಡೆ ಸಾಧಿಸುವಲ್ಲಿ ವಿಫಲವಾಯಿತು. ಕೇಂದ್ರ ವಲಯವು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 266 ರನ್‌ಗಳನ್ನು ಗಳಿಸಿತು.

ಇದನ್ನೂ ಓದಿ: 12 ವರ್ಷಗಳ ಬಳಿಕ ಬಿಗ್ ​ಬ್ಯಾಷ್​ ಲೀಗ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ಸ್ಟೋಕ್ಸ್!!

Last Updated : September 1, 2026 at 5:39 PM IST