ಶೂನ್ಯ ರನ್ಗೆ 3 ವಿಕೆಟ್ ಪಡೆದ ದೀಪ್ತಿ ಶರ್ಮಾ; ಇತಿಹಾಸ ಸೃಷ್ಟಿ!!
ಮಹಿಳಾ ಏಷ್ಯಾಕಪ್ನಲ್ಲಿ ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಟಾರ್ ಆಲ್ರೌಂಡರ್ ದೀಪ್ತಿ ಶರ್ಮಾ 3 ವಿಕೆಟ್ ಪಡೆದುಕೊಂಡು ಇತಿಹಾಸ ಸೃಷ್ಟಿಸಿದ್ದಾರೆ.


Published : August 31, 2026 at 12:13 PM IST
ಮಹಿಳಾ ಏಷ್ಯಾಕಪ್ ಅನ್ನು ಟೀಮ್ ಇಂಡಿಯಾ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಭಾನುವಾರ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ತನ್ನ ಮೊದಲ ಪಂದ್ಯಲ್ಲಿ ಥಾಯ್ಲೆಂಡ್ ತಂಡವನ್ನು 94 ರನ್‌ಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಸ್ಟಾರ್ ಆಲ್ರೌಂಡರ್ ದೀಪ್ತಿ ಶರ್ಮಾ ಇತಿಹಾಸ ಸೃಷ್ಟಿಸಿದ್ದಾರೆ.
ತಮ್ಮ ವೃತ್ತಿಜೀವನದ 150ನೇ ಅಂತರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅವರು 7 ಎಸೆತಗಳಲ್ಲಿ 3 ವಿಕೆಟ್‌ಗಳನ್ನು ಪಡೆಯುವ ಮೂಲಕ ಮಹಿಳಾ ಟಿ20ಐನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ವಿಷಯದಲ್ಲಿ, ಅವರು ಥಾಯ್ಲೆಂಡ್ನ ಸ್ಪಿನ್ನರ್ ತಿಪಾಚಾ ಪುಟ್ಟವೊಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ.
🚨 THE HISTORIC MOMENT 🇮🇳
— Johns. (@CricCrazyJohns) August 31, 2026
- Deepti Sharma becomes the leading wicket taker in Women's T20I history.
Deepti should be celebrated more & more in world cricket. pic.twitter.com/gzhLeLYxHH
ಮಹಿಳಾ ಟಿ20ಐಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು
ಮಹಿಳಾ ಟಿ20ಐನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ದೀಪ್ತಿ ಶರ್ಮಾ 150 ಪಂದ್ಯಗಳಲ್ಲಿ 171 ವಿಕೆಟ್‌ಗಳನ್ನು ಪಡೆದು ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಥಾಯ್ಲೆಂಡ್ನ ತಿಪಾಚಾ ಪುಟ್ಟಾವೊಂಗ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಇದುವರೆಗೆ 109 ಪಂದ್ಯಗಳಲ್ಲಿ 170 ವಿಕೆಟ್‌ಗಳನ್ನು ಪಡೆದಿದ್ದಾರೆ. ರುವಾಂಡಾದ ಹೆನ್ರಿಯೆಟ್ ಇಶಿಮ್ವೆ 134 ಪಂದ್ಯಗಳಲ್ಲಿ 164 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಇದುವರೆಗೆ 113 ಟಿ20ಐ ಪಂದ್ಯಗಳಲ್ಲಿ 154 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಶೂನ್ಯ ರನ್ಗೆ 3 ವಿಕೆಟ್ ಪಡೆದ ದೀಪ್ತಿ
ಏಷ್ಯಾ ಕಪ್ ಆರಂಭಕ್ಕೂ ಮುನ್ನ ದೀಪ್ತಿ ಮತ್ತು ತಿಪಾಚಾ ಜಂಟಿಯಾಗಿ 168 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದರು. ನಂತರ ತಿಪಾಚಾ ಹಾಂಗ್ ಕಾಂಗ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಒಂದು ವಿಕೆಟ್ ಪಡೆದು ದೀಪ್ತಿಯನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನ ಪಡೆದರು. ಇದಾದ ಬೆನ್ನಲ್ಲೆ ಭಾರತದ ವಿರುದ್ಧದ ಪಂದ್ಯದಲ್ಲಿ ಅವರು ಇನ್ನೂ ಒಂದು ವಿಕೆಟ್ ಪಡೆದು ಒಟ್ಟು 170 ವಿಕೆಟ್‌ಗಳನ್ನು ಗಳಿಸಿದರು.
ಆದಾಗ್ಯೂ, ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದೀಪ್ತಿ ಶರ್ಮಾ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ತಿಪಾಚಾ ಅವರನ್ನು ಹಿಂದಿಕ್ಕಿದರು. ಈ ಪಂದ್ಯದಲ್ಲಿ ಅವರು 1.1 ಓವರ್‌ಗಳನ್ನು ಬೌಲಿಂಗ್ ಮಾಡಿ, ಒಂದೇ ಒಂದು ರನ್ ನೀಡದೆ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವಿಷಯದಲ್ಲಿ, 2022 ರಲ್ಲಿ ಐದು ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದಿದ್ದ ರೇಣುಕಾ ಸಿಂಗ್ ಅವರನ್ನು ಹಿಂದಿಕ್ಕಿದರು.
1⃣7⃣1⃣* and counting!
— BCCI Women (@BCCIWomen) August 30, 2026
An incredible feat in her 150th T20I 🫡
Congratulations, Deepti Sharma 👏👏
Scorecard ▶️ https://t.co/Tgf2CJnHta#TeamIndia | #WomensAsiaCup | #INDvTHAI pic.twitter.com/8B8BCvkHww
ಪಂದ್ಯ ಹೈಲೈಟ್ಸ್
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಉತ್ತಮ ಆರಂಭದ ಹೊರತಾಗಿಯೂ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 159 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಶೆಫಾಲಿ ವರ್ಮಾ ತಂಡದ ಪರ ಅತ್ಯಧಿಕ 64ರನ್ ಗಳಿಸಿದರೆ, ಪ್ರತೀಕಾ ರಾವಲ್ 22 ರನ್‌ಗಳ ಕೊಡುಗೆ ನೀಡಿದರು. ಸ್ಮೃತಿ ಮಂಧಾನ 19 ರನ್‌ಗಳಿಸಿ ರನೌಟ್ ಆದರು. ಇದಕ್ಕೆ ಉತ್ತರವಾಗಿ, ಥಾಯ್ಲೆಂಡ್ ಮಹಿಳಾ ತಂಡ 16.1 ಓವರ್‌ಗಳಲ್ಲಿ 65 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಶಫಾಲಿ ವರ್ಮಾ ಅವರ ಅತ್ಯುತ್ತಮ ಇನ್ನಿಂಗ್ಸ್ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಇದನ್ನೂ ಓದಿ: 16 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದುಕೊಂಡ ಇಂಗ್ಲೆಂಡ್ ತಂಡ!!

