ETV Bharat / sports

ವೆಸ್ಟ್​ ಇಂಡೀಸ್​ ವಿರುದ್ಧ ಭಾರತದ ಗೆಲುವಿಗೆ ಕಾರಣವಾಗಿದ್ದ ಸಂಜು ಸ್ಯಾಮ್ಸನ್​ಗೆ ಬಿಗ್​ ಶಾಕ್!

ವೆಸ್ಟ್​ ಇಂಡೀಸ್​ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸ್​ನಗೆ ಟೀಮ್​ ಇಂಡಿಯಾ ಆಡಳಿತ ಮಂಡಳಿ ಶಾಕ್​ ನೀಡಿದೆ.

ಟೀಮ್​ ಇಂಡಿಯಾ
ಟೀಮ್​ ಇಂಡಿಯಾ (IANS)
author img

By ETV Bharat Sports Team

Published : March 2, 2026 at 8:51 PM IST

2 Min Read
Choose ETV Bharat

2026ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ತಲುಪಿದ್ದು ಗೊತ್ತಿರುವ ವಿಷಯ. ನಿನ್ನೆ ನಡೆದಿದ್ದ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೋಲಿಸಿದ ಭಾರತ ತಂಡವು ಮಾರ್ಚ್ 5 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (97*) ಅದ್ಭುತ ಪ್ರದರ್ಶನ ನೀಡಿದಕ್ಕಾಗಿ ಪ್ಲೇಯರ್​ ಆಫ್​ ದಿ ಮ್ಯಾಚ್​ ಪ್ರಶಸ್ತಿ ಪಡೆದುಕೊಂಡರು.

ಆದಾಗ್ಯೂ, ಪಂದ್ಯದ ಬಳಿಕ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಟೀಮ್ ಇಂಡಿಯಾ ಆಡಳಿತ ಮಂಡಳಿ 'ಇಂಪ್ಯಾಕ್ಟ್ ಪ್ಲೇಯರ್ ಆಫ್ ಮ್ಯಾಚ್' ಪದಕವನ್ನು ನೀಡುತ್ತದೆ. ಆದರೆ ನಿನ್ನೆ ಪಂದ್ಯದ ಬಳಿಕ ಸಂಜುಗೆ ಈ ಪದಕ ನೀಡಲಿಲ್ಲ. ಬದಲಿಗೆ ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆದ ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಕೊಡುವ ಮೂಲಕ ಸಂಜುಗೆ ಶಾಕ್​ ನೀಡಿತು. ಕಾರಣ ಬುಮ್ರಾ ಒಂದೇ ಓವರ್​ನಲ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಾದ ಶಿಮ್ರಾನ್ ಹೆಟ್ಮೈಯರ್ ಮತ್ತು ರೋಸ್ಟನ್ ಚೇಸ್ ಅವರ ವಿಕೆಟ್‌ಗಳನ್ನು ಪಡೆದರು. ಇದು ವೆಸ್ಟ್ ಇಂಡೀಸ್ ದೊಡ್ಡ ಸ್ಕೋರ್ ಗಳಿಸುವುದನ್ನು ತಡೆಯಲು ಸಹಾಯ ಮಾಡಿತು. ಇದಕ್ಕೂ ಮೊದಲು, ಬುಮ್ರಾ ತಮ್ಮ ಪತ್ನಿ ಮತ್ತು ಕ್ರಿಕೆಟ್ ನಿರೂಪಕಿ ಸಂಜನಾ ಗಣೇಶನ್ ಅವರೊಂದಿಗೆ ಚಿಟ್ ಚಾಟ್ ನಡೆಸಿದ್ದರು. ಈ ಸಂದರ್ಭದಲ್ಲಿ, ಸಂಜು ಸ್ಯಾಮ್ಸನ್, ಶಿವಂ ದುಬೆ ಅವರನ್ನು ಕೊಂಡಾಡಿದರು.

"ಶಿವಂ ದುಬೆ ಕೊನೆಯಲ್ಲಿ ಎರಡು ಬೌಂಡರಿ ಹೊಡೆದು ಒತ್ತಡವನ್ನು ಕಡಿಮೆ ಮಾಡಿದರು. ಕ್ರಿಕೆಟ್ ಚೆನ್ನಾಗಿ ತಿಳಿದಿರುವವರಿಗೆ ಆ ಎರಡು ಬೌಂಡರಿಗಳ ಮೌಲ್ಯ ಅರ್ಥವಾಗುತ್ತದೆ. ಏಕೆಂದರೆ ಕೆಲವೊಮ್ಮೆ ಕೊನೆಯ ಓವರ್‌ನಲ್ಲಿ ಎಂಟು ಅಥವಾ ಒಂಬತ್ತು ರನ್ ಗಳಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ಅದಕ್ಕಾಗಿಯೇ, ಗುರಿಯನ್ನು ಬೆನ್ನಟ್ಟುವಾಗ ಆರಂಭಿಕ ಓವರ್​ಗಳಲ್ಲಿ ಸಾಧ್ಯವಾದಷ್ಟು ರನ್ ಗಳಿಸಬೇಕು" ಎಂದು ಬುಮ್ರಾ ಹೇಳಿದರು.

ಮುಂದುವರೆದು ಮಾತನಾಡುತ್ತ, ಇತ್ತೀಚೆಗೆ ಸಂಜು ಸ್ಯಾಮ್ಸನ್ ತಮ್ಮ ವೃತ್ತಿಜೀವನದಲ್ಲಿ ಹಿನ್ನಡೆಗಳನ್ನು ಎದುರಿಸುತ್ತಿದ್ದರು. ಆದಾಗ್ಯೂ, ಅವರು ತಾಳ್ಮೆಯಿಂದ ಅವಕಾಶಕ್ಕಾಗಿ ಕಾಯುತ್ತಿದ್ದರು. ವೆಸ್ಟ್​ ಇಂಡೀಸ್​ ಪಂದ್ಯದಲ್ಲಿ ಅವರು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ತಮ್ಮ ಸಾಮರ್ಥ್ಯ ಏನೆಂದು ತಿಳಿಸಿದ್ದಾರೆ. ಸಂಜು ಅವರ ಆಕರ್ಷಕ ಪ್ರದರ್ಶನದಿಂದಾಗಿ ನನಗೆ ಸಂತೋಷವಾಗಿದೆ. ಮುಂದಿನ ಪಂದ್ಯಗಳಲ್ಲೂ ಇದೇ ಆಟವನ್ನು ಮುಂದುವರಿಸುತ್ತಾರೆಂದು ನಾನು ಬಯಸುತ್ತೇನೆ" ಎಂದು ಬುಮ್ರಾ ಹೇಳಿದರು. ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಬುಮ್ರಾ 4 ಓವರ್​ಗಳಲ್ಲಿ 32 ರನ್​ಗಳನ್ನು ಪ್ರಮುಖ ಎರಡು ವಿಕೆಟ್​ ಪಡೆದುಕೊಂಡರು. ಉಳಿದ ಬೌಲರ್​ಗಳು 40ಕ್ಕೂ ಅಧಿಕ ರನ್​ ಬಿಟ್ಟುಕೊಟ್ಟು ದುಬಾರಿ ಎನಿಸಿಕೊಂಡರು.

ಇದನ್ನೂ ಓದಿ: ಅಭಿಷೇಕ್ ಶರ್ಮಾ​ ಫ್ಲಾಪ್​ ಆಗಲು ಅದೇ ಕಾರಣ; ಅನಿಲ್​ ಕುಂಬ್ಳೆ