12 ವರ್ಷಗಳ ಬಳಿಕ ಬಿಗ್ ಬ್ಯಾಷ್ ಲೀಗ್‌ನಲ್ಲಿ ಕಣಕ್ಕಿಳಿಯಲು ಸಜ್ಜಾದ ಸ್ಟೋಕ್ಸ್!!
ಇಂಗ್ಲೆಂಡ್‌ನ ಮಾಜಿ ನಾಯಕ ಮತ್ತು ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಲು ಸಜ್ಜಾಗಿದ್ದಾರೆ.


Published : September 1, 2026 at 4:35 PM IST
ಇಂಗ್ಲೆಂಡ್‌ನ ಮಾಜಿ ನಾಯಕ ಮತ್ತು ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನಲ್ಲಿ ಆಡಲು ಸಜ್ಜಾಗಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಸ್ಟೋಕ್ಸ್, ಸುಮಾರು ಒಂದು ದಶಕದ ನಂತರ ಬಿಬಿಎಲ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸ್ಟೋಕ್ಸ್ ಅವರನ್ನು ಅಡಿಲೇಡ್ ಸ್ಟ್ರೈಕರ್ಸ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದ್ದು, ಅವರು ಇಡೀ ಋತುವಿಗೆ ಲಭ್ಯವಿರಲಿದ್ದಾರೆ.
2022-27ರ ಬಿಗ್ ಬ್ಯಾಷ್ ಲೀಗ್ (BBL) ಸೀಸನ್‌ಗಾಗಿ ಬೆನ್ ಸ್ಟೋಕ್ಸ್ ಅಡಿಲೇಡ್ ಸ್ಟ್ರೈಕರ್ಸ್‌ನೊಂದಿಗೆ ಅಧಿಕೃತವಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಫ್ರಾಂಚೈಸಿ ಸ್ಪಷ್ಟನೆ ನೀಡಿದೆ. ಆದಾಗ್ಯೂ ಸ್ಟೋಕ್ಸ್‌ಗೆ ಸಿಡ್ನಿ ಸಿಕ್ಸರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್‌ನಿಂದಲೂ ಆಫರ್‌ಗಳು ಬಂದಿದ್ದವು ಎಂದು ವರದಿಯಾಗಿವೆ. ಆದರೆ ಅವರು ಅಡಿಲೇಡ್ ಫ್ರಾಂಚೈಸ್ ಪರ ಆಡಲು ನಿರ್ಧರಿಸಿದ್ದಾರೆ. ಇವರನ್ನು ಸುಮಾರು 500,000 ಆಸ್ಟ್ರೇಲಿಯನ್ ಡಾಲರ್‌ಗೆ (ಸುಮಾರು 3.4 ಕೋಟಿ ರೂ.) ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
Stoked.
— Adelaide Strikers (@StrikersBBL) September 1, 2026
The Adelaide Strikers are thrilled to announce the signing of one of cricket's greatest all-rounders, Ben Stokes, ahead of BBL|16.
Details → https://t.co/a18wsyxP5y pic.twitter.com/SozHIsrdTw
35 ವರ್ಷದ ಬೆನ್ ಸ್ಟೋಕ್ಸ್ ಈಗಾಗಲೇ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಿದ್ದಾರೆ. ಸ್ಟೋಕ್ಸ್ 2014/15 ಋತುವಿನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡಿದ್ದರು. ಅವರು ಹೋಬಾರ್ಟ್ ಹರಿಕೇನ್ಸ್ ವಿರುದ್ಧ ಪಾದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಲ್ಲಿ ಅವರು 37 ಎಸೆತಗಳಲ್ಲಿ 77 ರನ್ ಗಳಿಸಿದರು. ಸ್ಟೋಕ್ಸ್ ಈ ಋತುವಿನಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಅವರು 156ರ ಸ್ಟ್ರೈಕ್ ರೇಟ್‌ನಲ್ಲಿ 128 ರನ್ ಮತ್ತು 3 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಸುಮಾರು 12 ವರ್ಷಗಳ ನಂತರ ಸ್ಟೋಕ್ಸ್ ಮತ್ತೆ ಬಿಬಿಎಲ್‌ನಲ್ಲಿ ಆಡುತ್ತಿರುವುದು ಫ್ಯಾನ್ಸ್ಗಳಿಗೆ ಮತ್ತಷ್ಟು ಮನೊರಂಜನೆ ನೀಡಲಿದೆ.
ಸ್ಟೋಕ್ಸ್ ಆಗಮನವು ಪಂದ್ಯಾವಳಿಯ ಜನಪ್ರಿಯತೆ ಮತ್ತು ಉತ್ಸಾಹವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಮಂಡಳಿಯು ಸ್ವತಃ ಸ್ಟೋಕ್ಸ್‌ನಂತಹ ಸ್ಟಾರ್ ಆಟಗಾರನನ್ನು ಆಸ್ಟ್ರೇಲಿಯಾಕ್ಕೆ ಕರೆತರಲು ಪ್ರಯತ್ನಿಸುತ್ತಿತ್ತು ಎಂದಿದೆ. ಸ್ಟೋಕ್ಸ್ ಜೊತೆಗೆ, ಇಂಗ್ಲೆಂಡ್‌ನ ದಿ ಹಂಡ್ರೆಡ್ ಪಂದ್ಯಾವಳಿಯಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್ ಕೂಡ ಈ ಬಾರಿ ಬಿಗ್ ಬ್ಯಾಷ್ ಲೀಗ್‌ನಲ್ಲಿ ಭಾರಿ ಮೊತ್ತವನ್ನು ಪಡೆಯುವ ನಿರೀಕ್ಷೆಯಿದೆ.
Ben Stokes is a Striker 💙 pic.twitter.com/d2OEbDeJS0
— Adelaide Strikers (@StrikersBBL) September 1, 2026
ಅಂತರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ
ಈ ವರ್ಷದ ಜೂನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಬೆನ್ ಸ್ಟೋಕ್ಸ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಟೆಸ್ಟ್ ಪಂದ್ಯವು ಅವರ ವೃತ್ತಿಜೀವನದ ಕೊನೆಯ ಪಂದ್ಯವಾಗಿತ್ತು. ಬೆನ್ ಸ್ಟೋಕ್ಸ್ ಅಂತರಾಷ್ಟ್ರೀಯ ಮಟ್ಟದಲ್ಲಿ 122 ಟೆಸ್ಟ್, 114 ಏಕದಿನ ಮತ್ತು 43 ಟಿ20ಐಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ, ಅವರು 220 ಇನ್ನಿಂಗ್ಸ್‌ಗಳಲ್ಲಿ 7273 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೌಲಿಂಗ್‌ನಲ್ಲಿ, ಅವರು 252 ವಿಕೆಟ್‌ಗಳನ್ನು ಪಡೆದಿದ್ದಾರೆ.
ಏಕದಿನ ಕ್ರಿಕೆಟ್ ಬಗ್ಗೆ ಹೇಳುವುದಾದರೆ, ಅವರು ಅಲ್ಲಿ 3463 ರನ್‌ಗಳನ್ನು ಗಳಿಸಿದ್ದಾರೆ ಮತ್ತು 74 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ, ಅವರು 26 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಟೋಕ್ಸ್ ಒಟ್ಟು 162 ಟಿ20 ಪಂದ್ಯಗಳಲ್ಲಿ ಆಡಿದ ಅನುಭವವನ್ನು ಹೊಂದಿದ್ದು, ಈ ವೇಳೆ ಅವರು 93 ವಿಕೆಟ್‌ಗಳನ್ನು ಪಡೆದಿದ್ದಾರೆ.
It's happening! Ben Stokes is returning to the Big Bash for a full season in #BBL16
— cricket.com.au (@cricketcomau) September 1, 2026
Details: https://t.co/eD7excHyZt pic.twitter.com/VxPYSD6jE2
ಐಪಿಎಲ್ನಲ್ಲೂ ಆಡಿದ ಅನುಭವ
ಸ್ಟೋಕ್ಸ್ ಐಪಿಎಲ್ನಲ್ಲಿಯೂ ಆಡಿರುವ ಅನುಭವ ಹೊಂದಿದ್ದಾರೆ. ಅವರು ರೈಸಿಂಗ್ ಪೂಣೆ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ. ಅವರು ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 45 ಪಂದ್ಯಗಳನ್ನು ಆಡಿದ್ದು 935 ರನ್‌ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 2 ಶತಕ ಮತ್ತು ಇಷ್ಟೇ ಅರ್ಧಶತಕ ಸೇರಿವೆ. ಬೌಲಿಂಗ್‌ನಲ್ಲಿ 38 ಇನ್ನಿಂಗ್ಸ್‌ಗಳಲ್ಲಿ 28 ವಿಕೆಟ್ ಪಡೆದುಕೊಂಡಿದ್ದಾರೆ. 15 ರನ್ಗಳಿಗೆ 3 ವಿಕೆಟ್ ಪಡೆದಿರುವುದು ಇವರ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ.
ಇದನ್ನೂ ಓದಿ: ಅಫ್ಘಾನ್ ವಿರುದ್ಧದ ಸರಣಿಗೂ ಮೊದಲೇ ಭಾರತಕ್ಕೆ ಬಿಗ್ ಶಾಕ್; ಸ್ಟಾರ್ ಆಟಗಾರ ಡೌಟ್!!

