ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಫ್ಯಾನ್ಸ್ಗಳಿಗೆ ಗುಡ್ನ್ಯೂಸ್!!
2026ರ ಐಪಿಎಲ್ ಮುಗಿದ ಬೆನ್ನಲ್ಲೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ದ್ವೀಪಕ್ಷಿಯ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದ್ದು ಇದಕ್ಕಾಗಿ ಇಂದು ಬಿಸಿಸಿಐ ವೇಳಾಪಟ್ಟಿಯನ್ನು ಪ್ರಕಟಿಸಿದೆ.


Published : March 2, 2026 at 5:58 PM IST
IND vs AFG Schedule: ಈ ವರ್ಷ ಜೂನ್ ತಿಂಗಳಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಆಡಲಿದೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಇಂದು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ಅ್ಫಘಾನ್ ಏಕೈಕ ಟೆಸ್ಟ್ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದರಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ.
ಭಾರತ vs ಅಫ್ಘಾನ್ ಸರಣಿ ವೇಳಾಪಟ್ಟಿ: ಪ್ರಸ್ತುತ ಟಿ20 ವಿಶ್ವಕಪ್ ಪಂದ್ಯಾವಳಿಗಳು ನಡೆಯುತ್ತಿದ್ದು ಇದರ ಬೆನ್ನಲ್ಲೇ ಐಪಿಎಲ್ ಸರಣಿ ಪ್ರಾರಂಭಗೊಳ್ಳಲಿವೆ. ಬಳಿಕ ಭಾರತೀಯ ಅಭಿಮಾನಿಗಳು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಮತ್ತೆ ಆಕ್ಷನ್‌ನಲ್ಲಿ ನೋಡಲಿದ್ದಾರೆ. ಟಿ20 ವಿಶ್ವಕಪ್ ಮತ್ತು ಐಪಿಎಲ್ ನಂತರ, ಟೀಮ್ ಇಂಡಿಯಾ 2027ರ ವಿಶ್ವಕಪ್ಗಾಗಿ ಸಿದ್ಧತೆಗಳು ಪ್ರಾರಂಭಿಸಲಿದೆ ಇದು ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ.
🚨 News 🚨
— BCCI (@BCCI) March 2, 2026
Here's a look at the schedule for Afghanistan Men’s Team’s tour of India in June 2026 🗓️
Details ▶️ https://t.co/OkJVip4AhJ#TeamIndia | #INDvAFG pic.twitter.com/CQhIliTf2E
ಮೊದಲ ಬಾರಿಗೆ ದ್ವಿಪಕ್ಷೀಯ ಏಕದಿನ ಸರಣಿ: ಐಸಿಸಿ ಟೂರ್ನಿಗಳು ಮತ್ತು ಏಷ್ಯಾಕಪ್‌ನಂತಹ ಪ್ರಮುಖ ವೇದಿಕೆಗಳಲ್ಲಿ ಭಾರತ ತಂಡವು ಅಫ್ಘಾನಿಸ್ತಾನದ ವಿರುದ್ಧ ಹಲವಾರು ಬಾರಿ ಏಕದಿನ ಪಂದ್ಯಗಳನ್ನು ಆಡಿದೆ, ಆದರೆ ಉಭಯ ದೇಶಗಳ ನಡುವೆ ಇದುವರೆಗೆ ಒಂದೇ ಒಂದು ದ್ವಿಪಕ್ಷೀಯ ಏಕದಿನ ಸರಣಿ ನಡೆದಿರಲಿಲ್ಲ. ಇದೀಗ ಜೂನ್ ತಿಂಗಳಲ್ಲಿ ಚೊಚ್ಚಲ ಬಾರಿಗೆ ಈತ್ತಂಡಗಳು ಮುಖಾಮುಖಿ ಆಗಲು ಸಜ್ಜಾಗಿವೆ. ಈ ಪ್ರವಾಸವು ಮೊದಲು ಟೆಸ್ಟ್ ಪಂದ್ಯದೊಂದಿಗೆ ಆರಂಭವಾಗಲಿದೆ. ಜೂನ್ 6 ರಿಂದ ಜೂನ್ 10 ರವರೆಗೆ ಎರಡೂ ತಂಡಗಳು ನ್ಯೂ ಚಂಡೀಗಢದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಇದು ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯವಾಗಿರುತ್ತದೆ. ಇದಕ್ಕೂ ಮೊದಲು, 2018ರಲ್ಲಿ ಎರಡು ತಂಡಗಳ ನಡುವೆ ಒಂದೇ ಒಂದು ಟೆಸ್ಟ್ ಪಂದ್ಯ ನಡೆದಿತ್ತು. ಇದಲ್ಲದೆ, ಈ ಪಂದ್ಯ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಚೊಚ್ಚಲ ಟೆಸ್ಟ್ ಪಂದ್ಯವೂ ಆಗಿತ್ತು.
ಜೂನ್‌ನಲ್ಲಿ ಏಕದಿನ ಪಂದ್ಯಗಳು: ಏಕೈಕ ಟೆಸ್ಟ್ ಪಂದ್ಯದ ನಂತರ, ಜೂನ್ 14 ರಿಂದ ಪ್ರಾರಂಭವಾಗುವ ಏಕದಿನ ಸರಣಿಯಲ್ಲಿ ಉಭಯ ತಂಡಗಳು ಸೆಣಸಲಿವೆ. ಮೊದಲ ಪಂದ್ಯ ಧರ್ಮಶಾಲಾದಲ್ಲಿ, ಎರಡನೇ ಪಂದ್ಯ ಲಕ್ನೋದಲ್ಲಿ ಮತ್ತು ಮೂರನೇ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾದ ಭಾರತದ ತವರು ನೆಲದಲ್ಲಿ ಆಡುವ ಅವಕಾಶವನ್ನು ಪಡೆದಿರುವ ಅಫ್ಘಾನಿಸ್ತಾನಕ್ಕೆ ಈ ಸರಣಿಯು ಸವಾಲಿನಿಂದ ಕೂಡಿರಲಿದೆ. ಏತನ್ಮಧ್ಯೆ 2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ಭಾಗವಾಗಿ ಟೀಮ್ ಇಂಡಿಯಾಗೆ ಹೊಸ ತಂತ್ರಗಳು ಮತ್ತು ಆಟಗಾರರನ್ನು ಪರೀಕ್ಷಿಸಲು ಇದು ಉತ್ತಮ ಅವಕಾಶವಾಗಲಿದೆ.
ಭಾರತ-ಅಫ್ಘಾನಿಸ್ತಾನ ಏಕದಿನ ಪಂದ್ಯದ ವೇಳಾಪಟ್ಟಿ
ಜೂನ್ 14 - ಮೊದಲ ಏಕದಿನ ಪಂದ್ಯ, ಧರ್ಮಶಾಲಾ
ಜೂನ್ 17 - ಎರಡನೇ ಪಂದ್ಯ, ಲಕ್ನೋ
ಜೂನ್ 20 - ಮೂರನೇ ಪಂದ್ಯ, ಚೆನ್ನೈ
JUST IN: New Chandigarh to host India’s Test against Afghanistan from June 6.
— Cricbuzz (@cricbuzz) March 2, 2026
Dharamsala, Lucknow and Chennai to stage the three ODIs on June 14, 17 and 20.
ರೋ-ಕೊ ಕಂಬ್ಯಾಕ್: ಈ ಸರಣಿಯಲ್ಲಿ ಭಾರತದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳು ಸಾಧ್ಯತೆಗಳಿವೆ. ಆದಾಗ್ಯೂ, ತಂಡವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಐಪಿಎಲ್ ಮುಗಿದ ನಂತರ ಆಯ್ಕೆದಾರರು ತಂಡವನ್ನು ಪ್ರಕಟಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: 2026ರ ಫಿಫಾ ವಿಶ್ವಕಪ್ನಿಂದ ಇರಾನ್ ತಂಡ ಹೊರಗುಳಿಯುವ ಸಾಧ್ಯತೆ!

