ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು; 20 ವರ್ಷದ ಹಳೆ ದಾಖಲೆ ಉಡೀಸ್
ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಮೂರನೇ ಮಹಿಳಾ ಏಕದಿನ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲನ್ನು ಕಂಡಿದೆ.


Published : March 1, 2026 at 10:13 PM IST
INDW vs AUSW: ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಯು ವಿಶ್ವ ಚಾಂಪಿಯನ್ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ನಿರಾಶೆಯನ್ನುಂಟುಮಾಡಿತು. ಆತಿಥೇಯ ಆಸ್ಟ್ರೇಲಿಯಾ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತು. ಭಾನುವಾರ (ಇಂದು) ಹೋಬಾರ್ಟ್‌ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ 409 ರನ್‌ಗಳನ್ನು ಕಲೆಹಾಕಿತು. ಈ ಸವಾಲನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 224 ರನ್‌ಗಳಿಗೆ ಆಲೌಟ್ ಆಗಿ 185 ರನ್‌ಗಳ ಬೃಹತ್ ಅಂತರದಿಂದ ಸೋಲನ್ನು ಕಂಡಿತು. ಈ ಗೆಲುವಿನೊಂದಿಗೆ, ಆಸ್ಟ್ರೇಲಿಯಾದ ನಾಯಕಿ ಮತ್ತು ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ಅಲಿಸಾ ಹೀಲಿ ತಮ್ಮ ಏಕದಿನ ವೃತ್ತಿಜೀವನವನ್ನು ಕೊನೆಗೊಳಿಸಿದರು.
ಆಸ್ಟ್ರೇಲಿಯಾ ಪರ ನಾಯಕಿ ಅಲಿಸಾ ಹೀಲಿ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ ಅವರು 158 ರನ್ ಗಳಿಸುವ ಮೂಲಕ ತಂಡವನ್ನು 7 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಲು ಸಹಾಯ ಮಾಡಿದರು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಬೆತ್ ಮೂನಿ ಕೂಡ ಅಜೇಯ 106 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ಸ್ಕೋರ್ 400 ರನ್‌ಗಳ ಗಡಿ ದಾಟಲು ಸಹಾಯ ಮಾಡಿದರು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ಫೋಬೆ ಲಿಚ್‌ಫೀಲ್ಡ್ (14) ಅವರ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ನಂತರ ಹೀಲಿ ಮತ್ತು ಜಾರ್ಜಿಯಾ ವೋಲ್ (52 ಎಸೆತಗಳಲ್ಲಿ 62) ಎರಡನೇ ವಿಕೆಟ್‌ಗೆ 134 ರನ್‌ಗಳ ಜೊತೆಯಾಟದೊಂದಿಗೆ ತಂಡದ ಸ್ಕೋರ್ ಸುಧಾರಿಸಿದರು. ನಂತರ ಹೀಲಿ ಮತ್ತು ಮೂನಿ ಮೂರನೇ ವಿಕೆಟ್‌ಗೆ 145 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.
A fine 42 (29) from Jemimah Rodrigues to give #TeamIndia a good start 🙌
— BCCI Women (@BCCIWomen) March 1, 2026
Captain Harmanpreet Kaur and Harleen Deol at the crease now 🤝
Updates ▶️ https://t.co/PqlLKl0Fz3#AUSvIND pic.twitter.com/Sb06B1m9HF
ಹೀಲಿ ತನ್ನ 126ನೇ ಮತ್ತು ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡುತ್ತಾ, ತನ್ನ ಎಂಟನೇ ಏಕದಿನ ಶತಕವನ್ನು ಬಾರಿಸಿದರು. ಇದರಲ್ಲಿ ಇನ್ನಿಂಗ್ಸ್‌ನಲ್ಲಿ 27 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ವೋಲ್ ಇನ್ನಿಂಗ್ಸ್‌ನಲ್ಲಿ 7 ಬೌಂಡರಿಗಳು ಮತ್ತು 1 ಸಿಕ್ಸರ್‌ಗಳನ್ನು ಹೊಡೆದರೆ, ಮೂನಿ ಅವರ ಅಜೇಯ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳು ಮತ್ತು 1 ಸಿಕ್ಸರ್ ಸೇರಿದ್ದವು. ಭಾರತದ ಪರ ಸ್ನೇಹ ರಾಣ ಮತ್ತು ಶ್ರೀಚರಣಿ ತಲಾ 2 ವಿಕೆಟ್ ಪಡೆದರು.
ದಾಖಲೆ ಬರೆದ ಹೀಲಿ: ಹೀಲಿ ಈ ಪಂದ್ಯದಲ್ಲಿ 158 ರನ್‌ಗಳನ್ನು ಕಲೆಹಾಕಿದ್ದ ಇದು ಭಾರತದ ವಿರುದ್ಧದ ಮಹಿಳಾ ಏಕದಿನ ಪಂದ್ಯದಲ್ಲಿ ದಾಖಲಾದ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಕ್ಲೇರ್ ಟೇಲರ್ 2006ರಲ್ಲಿ ಲಾರ್ಡ್ಸ್‌ನಲ್ಲಿ 156 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಹೊಂದಿದ್ದರು. ಇದೀಗ ಅವರ ದಾಖಲೆ ಮುರಿದಿದ್ದಾರೆ. ಮಹಿಳಾ ಏಕದಿನ ಪಂದ್ಯಗಳಲ್ಲಿ ಭಾರತದ ವಿರುದ್ಧ 150 ರನ್ ಗಳಿಸಿದ ಆಟಗಾರ್ತಿಯರೆಂದರೆ ಹೀಲಿ ಮತ್ತು ಟೇಲರ್ ಆಗಿದ್ದಾರೆ.
ಭಾರತದ ಇನ್ನಿಂಗ್ಸ್: ಇನ್ನು 410 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಪರ ಸ್ನೇಹಾ ರಾಣಾ 44 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರು, ಆದಾಗ್ಯೂ ತಂಡವನ್ನು ದೊಡ್ಡ ಅಂತರದ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿ, ಜೆಮಿಮಾ ರೊಡ್ರಿಗಸ್ ಆಸ್ಟ್ರೇಲಿಯಾದ ಬೌಲರ್‌ಗಳಿಗೆ ಕೆಲ ಸಮಯದವರೆಗೆ ಉತ್ತಮ ಪ್ರದರ್ಶನ ನೀಡಿದರು. ಅವರು ಕೇವಲ 29 ಎಸೆತಗಳಲ್ಲಿ 42 ರನ್‌ಗಳ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದರು ಇವರು ಔಟಾದ ನಂತರ ಭಾರತೀಯ ಇನ್ನಿಂಗ್ಸ್ ಕುಸಿಯಿತು. ಬೇರೆ ಯಾವುದೇ ಬ್ಯಾಟ್ಸ್‌ಮನ್ ಗಮನಾರ್ಹ ಪರಿಣಾಮ ಬೀರಲು ಸಾಧ್ಯವಾಗದ ಕಾರಣ ಭಾರತವು ಪೂರ್ಣ 50 ಓವರ್‌ಗಳನ್ನು ಆಡಲು ಸಹ ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯಾ ಪರ ಅಲಾನಾ ಕಿಂಗ್ ಅತ್ಯುತ್ತಮ ಪ್ರದರ್ಶನ ನೀಡಿದ್ದು 4 ವಿಕೆಟ್ ಪಡೆದು ಭಾರತೀಯ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು. ಜಾರ್ಜಿಯಾ ವೇರ್‌ಹ್ಯಾಮ್ 2 ವಿಕೆಟ್ ಪಡೆದರೆ, ನಿಕೋಲಾ ಕ್ಯಾರಿ, ಅನ್ನಾಬೆಲ್ಲೆ ಸದರ್ಲ್ಯಾಂಡ್ ಮತ್ತು ಆಶ್ಲೇ ಗಾರ್ಡ್ನರ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: "ಕ್ಷಣ ಕ್ಷಣಕ್ಕೂ ಭಯವಾಗುತ್ತಿದೆ"; ದುಬೈ ಪರಿಸ್ಥಿತಿಯ ವಿಡಿಯೋ ಹಂಚಿಕೊಂಡ ಸಿಂಧು

