ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ 'ಎ' ತಂಡ ಪ್ರಕಟ; ಇಬ್ಬರು ಭಾರತೀಯರಿಗೆ ಸ್ಥಾನ!!
ಭಾರತ ಪ್ರವಾಸಕ್ಕಾಗಿ ಆಸ್ಟ್ರೇಲಿಯಾ ಎ ತಂಡ ಪ್ರಕಟಗೊಂಡಿದ್ದು ಇದರಲ್ಲಿ ಇಬ್ಬರು ಭಾರತೀಯ ಮೂಲದ ಆಟಗಾರರಿಗೂ ಅವಕಾಶ ನೀಡಲಾಗಿದೆ.


Published : September 1, 2026 at 2:36 PM IST
ಮುಂಬರು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಎ ವಿರುದ್ಧ ಸರಣಿಗಳಿಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಎ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ಆಸ್ಟ್ರೇಲಿಯಾ ಎ ಭಾರತ ಎ ತಂಡಗಳು ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಮತ್ತು ಮೂರು ಏಕದಿನ ಸರಣಿಯನ್ನು ಆಡಲಿವೆ. ಏತನ್ಮಧ್ಯೆ ಈ ಪ್ರವಾಸಕ್ಕಾಗಿ 35 ವರ್ಷದ ಪೀಟರ್ ಹ್ಯಾಂಡ್ಸ್‌ಕಾಂಬ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಇದಲ್ಲದೇ ತಂಡದಲ್ಲಿ ಬ್ರೆಂಡನ್ ಡಾಗೆಟ್ ಮತ್ತು ಜೇ ರಿಚರ್ಡ್ಸನ್, ಸ್ಯಾಮ್ ಕಾನ್ಸ್ಟಾಸ್ ಕೂಡ ಇದ್ದಾರೆ.
ಆಸ್ಟ್ರೇಲಿಯಾ ಎ ತಂಡವು ಈ ತಿಂಗಳ ಕೊನೆಯಲ್ಲಿ ನಾಲ್ಕು ದಿನಗಳ ಪಂದ್ಯಗಳನ್ನು ಆಡಲು ಪುದುಚೇರಿಗೆ ಪ್ರಯಾಣ ಬೆಳೆಸಲಿದ್ದು, ನಂತರ ಮೂರು 50 ಓವರ್‌ಗಳ ಪಂದ್ಯಗಳನ್ನು ಆಡಲಿದೆ. ಭಾರತ ಎ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೆ ಮುಂಚಿತವಾಗಿ ಹಲವಾರು ಆಸ್ಟ್ರೇಲಿಯಾದ ಆಟಗಾರರು ಹಿರಿಯರ ತಂಡಕ್ಕೆ ಪ್ರವೇಶಿಸಲು ಇದು ಒಂದು ಸುವರ್ಣವಕಾಶವಾಗಿದೆ.
2023ರ ನಂತರ ತಂಡದಿಂದ ಹೊರಗುಳಿದಿರುವ ಹ್ಯಾಂಡ್ಸ್‌ಕಾಂಬ್
35 ವರ್ಷ ವಯಸ್ಸಿನ ಹ್ಯಾಂಡ್ಸ್‌ಕಾಂಬ್ ಅವರನ್ನು ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಸರಣಿಗಾಗಿ ತಂಡಕ್ಕೆ ಆಯ್ಕೆಯಾದ ಅತ್ಯಂತ ಹಿರಿಯ ಮತ್ತು ಅನುಭವಿ ಆಟಗಾರ ಎನಿಸಿಕೊಂಡಿದ್ದಾರೆ. ಈ ಬಲಗೈ ಬೌಲರ್ 2023ರಲ್ಲಿ ಆಸ್ಟ್ರೇಲಿಯಾ ಪರ ಕೊನೆಯ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಪ್ರವಾಸದ ಎಲ್ಲಾ ನಾಲ್ಕು ಟೆಸ್ಟ್‌ಗಳಲ್ಲಿ ಆಡಿದ್ದರು. ಆ ಬಳಿಕ ತಂಡದಿಂದ ದೂರವಾಗಿದ್ದರು. ಮುಂಬರುವ ತಿಂಗಳುಗಳಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಪ್ರವಾಸ ಬೆಳೆಸುತ್ತಿರುವುದರಿಂದ ಈ ಪ್ರವಾಸವು ಹಿರಿಯ ತಂಡಕ್ಕೆ ಮರಳಲು ಅವಕಾಶವನ್ನು ಒದಗಿಸುತ್ತದೆ.
The Australia A squads for the tour of India have dropped, so what do you make of them?
— cricket.com.au (@cricketcomau) August 31, 2026
MORE: https://t.co/Z9tlMrF5Ff pic.twitter.com/8B9doHmwRj
ಇಬ್ಬರು ಭಾರತೀಯರಿಗೆ ಸ್ಥಾನ
ಆಸ್ಟ್ರೇಲಿಯಾ 'ಎ' ಏಕದಿನ ತಂಡದಲ್ಲಿ ಇಬ್ಬರು ಭಾರತೀಯ ಮೂಲದ ಆಟಗಾರರಾದ ನಿಖಿಲ್ ಚೌಧರಿ ಮತ್ತು ತನ್ವೀರ್ ಸಂಘ ಸಹ ಸ್ಥಾನ ಪಡೆದುಕೊಂಡಿದ್ದಾರೆ. ಇವರಲ್ಲದೆ, ಯುವ ಆಟಗಾರರಾದ ಓಲ್ಲಿ ಪಿಕ್ ಮತ್ತು ಕೂಪರ್ ಕಾನೊಲಿ ಕೂಡ ಇರಲಿದ್ದಾರೆ. ತನ್ವೀರ್ ಸಂಘ ಇಲ್ಲಿಯವರೆಗೆ 6 ಏಕದಿನ ಮತ್ತು 7 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಏಕದಿನದಲ್ಲಿ 4 ವಿಕೆಟ್‌ಗಳು ಮತ್ತು ಟಿ20ಯಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ನಿಖಿಲ್ ಚೌಧರಿ ಇಲ್ಲಿಯವರೆಗೆ ಕೇವಲ 3 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅಲ್ಲಿ ಅವರು ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.
ನಾಲ್ಕು ದಿನದ ಅನಧಿಕೃತ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ 'ಎ' ತಂಡ: ಬ್ರಾಂಡನ್ ಡಾಗೆಟ್, ಜ್ಯಾಕ್ ಎಡ್ವರ್ಡ್ಸ್, ಪೀಟರ್ ಹ್ಯಾಂಡ್ಸ್‌ಕಾಂಬ್, ಸ್ಯಾಮ್ ಹಾರ್ಪರ್, ಲಿಯಾಮ್ ಹ್ಯಾಚರ್, ಕ್ಯಾಂಪ್‌ಬೆಲ್ ಕೆಲ್ಲಾವೇ, ಸ್ಯಾಮ್ ಕಾನ್ಸ್ಟಾಸ್, ನಾಥನ್ ಮೆಕ್‌ಸ್ವೀನಿ, ಟಾಡ್ ಮರ್ಫಿ, ಫರ್ಗಸ್ ಓ'ನೀಲ್, ಜೋಶ್ ಫಿಲಿಪ್, ಜೇ ರಿಚರ್ಡ್‌ಸನ್, ಕೋರಿ ರೊಚ್ಚಿಯೋಲಿ, ಜೇಸನ್ ಸಂಘ, ಲಿಯಾಮ್ ಸ್ಕಾಟ್.
ಆಸ್ಟ್ರೇಲಿಯಾ 'ಎ' ಏಕದಿನ ತಂಡ : ಮಹ್ಲಿ ಬಿಯರ್ಡ್‌ಮನ್, ನಿಖಿಲ್ ಚೌಧರಿ, ಬೆನ್ ದ್ವಾರ್ಶಿಯಸ್, ಜ್ಯಾಕ್ ಎಡ್ವರ್ಡ್ಸ್, ಎರ್ನ್ ಹಾರ್ಡಿ, ಸ್ಪೆನ್ಸರ್ ಜಾನ್ಸನ್, ಸ್ಯಾಮ್ ಕಾನ್ಸ್ಟಾಸ್, ನಾಥನ್ ಮೆಕ್‌ಸ್ವೀನಿ, ಟಾಡ್ ಮರ್ಫಿ, ಮಿಚ್ ಓವನ್, ಜೋಶ್ ಫಿಲಿಪ್, ತನ್ವೀರ್ ಸಂಘ, ಲಿಯಾಮ್ ಸ್ಕಾಟ್, ಲಾಚ್ಲನ್ ಶಾ.
ಭಾರತ ಎ vs ಆಸ್ಟ್ರೇಲಿಯಾ 'ಎ' ಪಂದ್ಯಗಳ ವೇಳಾಪಟ್ಟಿ
ಸೆ 22 ರಿಂದ 25: ಅನಧಿಕೃತ ಟೆಸ್ಟ್ ಮೊದಲ ಪಂದ್ಯ, ಪುದುಚೇರಿ
ಸೆ 29 ರಿಂದ ಅ.2: ಎರಡನೇ ಪಂದ್ಯ, ಪುದುಚೇರಿ
ಅಕ್ಟೋಬರ್ 6: ಮೊದಲ ಏಕದಿನ ಪಂದ್ಯ, ಪುದುಚೇರಿ
ಅಕ್ಟೋಬರ್ 9: ಎರಡನೇ ಏಕದಿನ ಪಂದ್ಯ, ಪುದುಚೇರಿ
ಅಕ್ಟೋಬರ್ 11: ಮೂರನೇ ಏಕದಿನ ಪಂದ್ಯ, ಪುದುಚೇರಿ
ಇದನ್ನೂ ಓದಿ: ಏಕದಿನ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ; ಸ್ಟಾರ್ಕ್, ಕಮಿನ್ಸ್ ಕಮ್ಬ್ಯಾಕ್!

