ETV Bharat / sports

ಸಚಿನ್​ ದಾಖಲೆ ಸರಿಗಟ್ಟಲು ಒಂದು ಹೆಜ್ಜೆ ದೂರದಲ್ಲಿ ರೂಟ್​!

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5ನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ಸ್ಟಾರ್​ ಬ್ಯಾಟರ್ ಜೋ ರೂಟ್​ ಅರ್ಧಶತಕ ಸಿಡಿಸಿ ವೆಸ್ಟ್​ ಇಂಡೀಸ್​ ದಿಗ್ಗಜ ಬ್ಯಾಟರ್​ ದಾಖಲೆ ಮುರಿದಿದ್ದಾರೆ. ​

ಜೋ ರೂಟ್​
ಜೋ ರೂಟ್​ (AP)
author img

By ETV Bharat Sports Team

Published : January 4, 2026 at 3:31 PM IST

2 Min Read
Choose ETV Bharat

Aus vs Eng 5th Test: ಆಶಸ್​ ಟೆಸ್ಟ್​ ಸರಣಿಯ ಭಾಗವಾಗಿ ಇಂದಿನಿಂದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳು 5ನೇ ಮತ್ತು ಅಂತಿಮ ಟೆಸ್ಟ್​ ಪಂದ್ಯವನ್ನಾಡುತ್ತಿವೆ. ಈಗಾಗಲೇ 3-1 ಅಂತರಿದಿಂದ ಸರಣಿ ಗೆದ್ದಿರು ಆಸೀಸ್​ ಪಡೆ ಅಂತಿಮ ಪಂದ್ಯವನ್ನು ಗೆಲ್ಲುವ ಗುರಿಯನ್ನು ಹೊಂದಿದ್ದಾರೆ. ಬ್ಯಾಟ್ಸ್‌ಮನ್ ಜೋ ರೂಟ್ 2025-26ರ ಆಶಸ್‌ನ ಐದನೇ ಟೆಸ್ಟ್‌ನಲ್ಲಿ ಅರ್ಧಶತಕ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಗೆ ಹತ್ತಿರವಾಗಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (SCG) ನಡೆಯುತ್ತಿರುವ ಅಂತಿಮ ಆಶಸ್ ಪಂದ್ಯದ ಮೊದಲ ದಿನದಂದು ಇಂಗ್ಲೆಂಡ್‌ನ ಮಾಜಿ ನಾಯಕ ತಮ್ಮ 67ನೇ ಟೆಸ್ಟ್ ಅರ್ಧಶತಕವನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಅವರು ವೆಸ್ಟ್ ಇಂಡೀಸ್‌ನ ದಿಗ್ಗಜ ಶಿವನಾರಾಯಣ್ ಚಂದ್ರಪಾಲ್ ಅವರ 66 ಟೆಸ್ಟ್ ಅರ್ಧಶತಕಗಳನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಇದೀಗ ಅವರು ಕ್ರಿಕೆಟ್​ ದಂತಕಥೆ ಸಚಿನ್ ತೆಂಡೂಲ್ಕರ್ ಅವರ 68 ಟೆಸ್ಟ್ ಅರ್ಧಶತಕ ದಾಖಲೆ ಸರಿಗಟ್ಟಲು ಒಂದು ಹೆಜ್ಜೆ ದೂರದಲ್ಲಿದ್ದಾರೆ.

ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್​ ತಂಡ 13ನೇ ಓವರ್ ಅಂತ್ಯದ ವೇಳೆಗೆ 57 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡಿತು. ಕಳಪೆ ಆರಂಭದ ಹೊರತಾಗಿಯೂ ಜೋ ರೂಟ್ ಅದ್ಭುತ ಪ್ರದರ್ಶನ ನೀಡಿ ಅರ್ಧಶತಕ ಸಿಡಿಸಿದರು. ರೂಟ್ ಮತ್ತು ಬ್ರೂಕ್ ನಾಲ್ಕನೇ ವಿಕೆಟ್‌ಗೆ 154 ರನ್‌ಗಳ ಜೊತೆಯಾಟ ಆಡಿದರು. ರೂಟ್ 103 ಎಸೆತಗಳಲ್ಲಿ ಎಂಟು ಬೌಂಡರಿಗಳೊಂದಿಗೆ 72 ರನ್ ಗಳಿಸಿ ಕ್ರೀಸ್​ನಲ್ಲಿದ್ದರ, ಹ್ಯಾರಿ ಬ್ರೂಕ್ 92 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 78 ರನ್ ಗಳಿಸಿ ಮತ್ತೊಂದು ತುದಿಯಲ್ಲಿದ್ದಾರೆ. ಈ ಇಬ್ಬರ ಬ್ಯಾಟಿಂಗ್​ ಬಲದಿಂದ ಮೊದಲ ದಿನದ ಆಟದ ಅಂತ್ಯಕ್ಕೆ ಇಂಗ್ಲೆಂಡ್ 3 ವಿಕೆಟ್‌ ನಷ್ಟಕ್ಕೆ 211 ರನ್‌ಗಳಿಸಿದೆ.

ಪ್ಲೇಯಿಂಗ್​ ಇಲೆವೆನ್​ನಲ್ಲಿ ಬದಲಾವಣೆ: ಹಿಂದಿನ ಪಂದ್ಯಕ್ಕೆ ಹೋಲಿಸಿದರೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ಪ್ಲೇಯಿಂಗ್​ ಇಲೆವೆನ್​ನಲ್ಲಿ ಒಂದು ಬದಲಾವಣೆ ಮಾಡಿ ಕಣಕ್ಕಿಳಿದಿವೆ. ಇಂಗ್ಲೆಂಡ್ ಗಸ್ ಅಟ್ಕಿನ್ಸನ್ ಬದಲಿಗೆ ಮ್ಯಾಥ್ಯೂ ಪಾಟ್ಸ್ ಅವರನ್ನು ಸೇರಿಸಿಕೊಂಡರೆ, ಆಸ್ಟ್ರೇಲಿಯಾ ಜೇ ರಿಚರ್ಡ್ಸನ್ ಬದಲಿಗೆ ಬ್ಯೂ ವೆಬ್‌ಸ್ಟರ್ ಅವರನ್ನು ಆಯ್ಕೆ ಮಾಡಿದೆ.

ಸ್ಪಿನ್ನರ್​ಗಳಿಲ್ಲದೆ ಪಂದ್ಯ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೊದಲ ಬಾರಿಗೆ ಎರಡೂ ತಂಡಗಳು ಪಿಚ್ ಅನ್ನು ಪರಿಗಣಿಸಿ ತಮ್ಮ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಪಿನ್​ ಬೌಲರ್​ ಅನ್ನು ಸೇರಿಸಿಕೊಂಡಿಲ್ಲ. 1888ರ ನಂತರ ಆಸ್ಟ್ರೇಲಿಯಾ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪ್ರಾಪರ್​ ಸ್ಪಿನ್ನರ್ ಇಲ್ಲದೆ ಆಡುತ್ತಿರುವುದು ಇದೇ ಮೊದಲು.

5ನೇ ಟೆಸ್ಟ್​ ಆಡುತ್ತಿರುವ ತಂಡಗಳ - ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಜೇಕ್ ವೆದರಾಲ್ಡ್, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್ (ನಾಯಕ), ಉಸ್ಮಾನ್ ಖವಾಜಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಬ್ಯೂ ವೆಬ್‌ಸ್ಟರ್, ಮೈಕೆಲ್ ನೇಸರ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್.

ಇಂಗ್ಲೆಂಡ್: ಝ್ಯಾಕ್ ಕ್ರಾಲಿ, ಬೆನ್ ಡಕೆಟ್, ಜಾಕೋಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಬ್ರೈಡನ್ ಕರ್ಸ್, ಮ್ಯಾಥ್ಯೂ ಪಾಟ್ಸ್, ಜೋಶ್ ಟಂಗ್.

ಇದನ್ನೂ ಓದಿ: ಟಿ20 ವಿಶ್ವಕಪ್​ಗಾಗಿ ಬಾಂಗ್ಲಾದೇಶ ತಂಡ ಪ್ರಕಟ; ಲಿಟ್ಟನ್​ ಕುಮಾರ್​ ದಾಸ್​ಗೆ ನಾಯಕ ಪಟ್ಟ