ಅಭಿಷೇಕ್ ಶರ್ಮಾ ಫ್ಲಾಪ್ ಆಗಲು ಅದೇ ಕಾರಣ; ಅನಿಲ್ ಕುಂಬ್ಳೆ
ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಅಭಿಷೇಕ್ ಶರ್ಮಾ ಸತತ ಫ್ಲಾಪ್ ಆಗಲು ಕಾರಣ ಏನು ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ.


Published : March 2, 2026 at 7:46 PM IST
ಹೈದರಾಬಾದ್: ಐಸಿಸಿ ಪುರುಷರ ಟಿ20 ವಿಶ್ವಕಪ್ ಸೂಪರ್-8 ರ ಭಾಗವಾಗಿ ಭಾನುವಾರ ನಡೆದಿದ್ದ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು ಮಣಿಸುವ ಮೂಲಕ ಸೆಮಿಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಆದಾಗ್ಯೂ, ಈ ನಿರ್ಣಾಯಕ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತೊಮ್ಮೆ ವಿಫಲರಾದರು. ಅವರು 11 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ಪೆವಿಲಿಯನ್ ಸೇರಿದರು. ಬ್ಯಾಟಿಂಗ್ ಮೂಲಕವೇ ಆರ್ಭಟಿಸುತ್ತಿದ್ದ ಅಭಿಷೇಕ್ ಈ ಟೂರ್ನಿಯಲ್ಲಿ ಸತತ ವಿಫಲರಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮಾತ್ರ ಅವರು ಅರ್ಧಶತಕ ಸಿಡಿಸಿದರು. ಇದನ್ನು ಹೊರತು ಪಡಿಸಿ ಗುಂಪು ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಸತತ ಡಕೌಟ್ ಆಗಿದ್ದರು.
ಇದೀಗ ಭಾರತ ತಂಡ ಮಾರ್ಚ್ 5 ರಂದು ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಈ ಸಂದರ್ಭದಲ್ಲಿ, ಅಭಿಷೇಕ್ ಶರ್ಮಾ ಅವರ ಕಳಪೆ ಫಾರ್ಮ್ ತಂಡದ ಆತಂಕವನ್ನು ಹೆಚ್ಚಿಸದೆ. ಈ ಮೆಗಾ ಟೂರ್ನಮೆಂಟ್‌ನಲ್ಲಿ ಅವರು ಇಲ್ಲಿಯವರೆಗೆ ಆರು ಪಂದ್ಯಗಳಲ್ಲಿ ಕೇವಲ 80 ರನ್ ಗಳಿಸಿದ್ದಾರೆ. ಈ ಸಂದರ್ಭದಲ್ಲಿ, ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ಅಭಿಷೇಕ್ ಶರ್ಮಾ ಅವರಿಗೆ ಆತ್ಮವಿಶ್ವಾಸದ ಕೊರತೆ ಇದೆ. ಅದಕ್ಕಾಗಿಯೇ ಅವರು ರನ್ ಗಳಿಸುತ್ತಿಲ್ಲ ಎಂದು ಹೇಳಿದ್ದಾರೆ.
ಅಭಿಷೇಕ್ ಶರ್ಮಾ ಈ ಟೂರ್ನಿಯಲ್ಲಿ ಆತ್ಮವಿಶ್ವಾಸದಿಂದ ಕಾಣುತ್ತಿಲ್ಲ. ನಾವು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವನ್ನು ಗೆದ್ದಿದ್ದೇವೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯ ಸವಾಲಿನದ್ದಾಗಿರುತ್ತದೆ. ಅವರ ತಂಡದಲ್ಲಿ ವಿಲ್ ಜ್ಯಾಕ್ಸ್ ಇದ್ದಾರೆ. ಅವರು ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಅವರ ಬೌಲಿಂಗ್‌ನಲ್ಲಿ ಆಡುವುದು ಸ್ವಲ್ಪ ಕಷ್ಟದ ಕೆಲಸ. ಆದಾಗ್ಯೂ, ಫಾರ್ಮ್‌ನಲ್ಲಿಲ್ಲದಿದ್ದರೂ ಅಭಿಷೇಕ್ ಅವರನ್ನು ಇಂಗ್ಲೆಂಡ್ ವಿರುದ್ಧದ ಪಂದ್ಯದಿಂದ ಹೊರಗಿಡಬೇಡಿ,' ಎಂದು ಅವರು ಸಲಹೆ ನೀಡಿದರು.
ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಗೆಲುವು ಅಭಿಷೇಕ್ ಶರ್ಮಾಗೆ ರಕ್ಷಣ ಕವಚವಾಗಿ ಕಾರ್ಯನಿರ್ವಹಿಸಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡು ಪ್ಲೆಸಿಸ್ ಹೇಳಿದ್ದಾರೆ. 'ಒಳ್ಳೆಯ ವಿಷಯವೆಂದರೆ ಅಭಿಷೇಕ್ ಕಳಪೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಹೊರತಾಗಿಯೂ ಭಾರತ ಗೆಲುವು ಸಾಧಿಸಿದೆ. ತಂಡ ಗೆದ್ದಾಗ, ಫಾರ್ಮ್‌ನಲ್ಲಿಲ್ಲದ ವ್ಯಕ್ತಿಯ ಬಗ್ಗೆ ಹೆಚ್ಚಾಗಿ ಟೀಕೆಗಳು ಕೇಳಿಬರಲ್ಲ. ಆದರೆ ಟೀಮ್ ಸೋತಾಗ ಹೆಚ್ಚಾಗಿ ಟೀಕೆಗಳು ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಇಂತಹ ಸಂದರ್ಭ ಎದುರಾದಗ ಆ ವ್ಯಕ್ತಿ ಸೋಲಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಡುಪ್ಲೆಸಿಸ್ ಸೆಮಿಫೈನಲ್‌ನಲ್ಲಿ ಅಭಿಷೇಕ್ ಮಿಂಚುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಫ್ಯಾನ್ಸ್ಗಳಿಗೆ ಗುಡ್ನ್ಯೂಸ್!!

