ಮಹಿಳಾ ಏಷ್ಯಾಕಪ್ ಇಂದಿನಿಂದ ಪ್ರಾರಂಭ: ಭಾರತದ ಪಂದ್ಯ ಯಾವಾಗ, ನೇರಪ್ರಸಾರ ಎಲ್ಲಿ?
10ನೇ ಆವೃತ್ತಿಯ ಮಹಿಳಾ ಏಷ್ಯಾಕಪ್ ಪಂದ್ಯಾವಳಿ ಇಂದಿನಿಂದ ಪ್ರಾರಂಭಗೊಳ್ಳಲಿದೆ. ಪಂದ್ಯಗಳ ವೇಳಾಪಟ್ಟಿ, ನೇರ ಪ್ರಸಾರ ಸೇರಿ ಪ್ರಮುಖ ಮಾಹಿತಿ ಈ ಕೆಳಗಿದೆ.


Published : August 28, 2026 at 3:23 PM IST
Womens Asia Cup 2026: ಮಹಿಳಾ ಏಷ್ಯಾಕಪ್ 2026 ಪಂದ್ಯಾವಳಿಗಳು ಇಂದಿನಿಂದ ಯುಎಇಯಲ್ಲಿ ಪ್ರಾರಂಭವಾಗುತ್ತಿವೆ. ಇದು 10ನೇ ಆವೃತ್ತಿಯಾಗಿದೆ. ಇಲ್ಲಿಯವರೆಗೆ, ಭಾರತ 7 ಬಾರಿ ಮಹಿಳಾ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದಿದ್ದರೆ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಲಾ ಒಮ್ಮೆ ಮಾತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿವೆ. ಮಹಿಳಾ ಏಷ್ಯಾ ಕಪ್ 2004 ರಲ್ಲಿ ಪ್ರಾರಂಭವಾಯಿತು. ಇದನ್ನು 2008 ರವರೆಗೆ ಏಕದಿನ ಸ್ವರೂಪದಲ್ಲಿ ಆಡಲಾಯಿತು. 2012 ರಿಂದ ಟಿ20 ಸ್ವರೂಪದಲ್ಲಿ ಆಯೋಜಿಸಲಾಗುತ್ತಿದೆ. ಶ್ರೀಲಂಕಾ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ.
ಎಷ್ಟು ತಂಡಗಳು ಭಾಗಿ: ಈ ಬಾರಿ ಏಷ್ಯಾಕಪ್‌ನಲ್ಲಿ ಎಂಟು ತಂಡಗಳು ಭಾಗವಹಿಸುತ್ತಿವೆ. ಇವುಗಳಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಯುಎಇ, ಥಾಯ್ಲೆಂಡ್, ಹಾಂಗ್ ಕಾಂಗ್ ಮತ್ತು ಇಂಡೋನೇಷ್ಯಾ ಸೇರಿವೆ. ಈ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಎ ನಲ್ಲಿ ಹಾಂಗ್ ಕಾಂಗ್, ಭಾರತ, ಪಾಕಿಸ್ತಾನ ಮತ್ತು ಥಾಯ್ಲೆಂಡ್ ಸೇರಿವೆ.
Shining bright. Ready for glory. 🏆✨
— Sony Sports Network (@SonySportsNetwk) August 27, 2026
The #DPWorldWomensAsiaCup2026 trophy has arrived! Time for the best in Asia to step up and leave it all on the field. 🔥
Watch all the action from tomorrow, 8 pm onwards, LIVE on Sony Sports Network TV channels & Sony LIV.… pic.twitter.com/dtislGxjNP
ಗುಂಪು ಬಿಯಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಯುಎಇ ಮತ್ತು ಇಂಡೋನೇಷ್ಯಾ ಸೇರಿವೆ. ಮೊದಲ ಪಂದ್ಯವು ಥಾಯ್ಲೆಂಡ್ ಮತ್ತು ಹಾಂಗ್ ಕಾಂಗ್ ನಡುವೆ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡವು ಆಗಸ್ಟ್ 30 ರಂದು ಥಾಯ್ಲೆಂಡ್ ವಿರುದ್ಧ ತನ್ನ ಏಷ್ಯಾ ಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.
ಸೆಪ್ಟೆಂಬರ್ 13 ರಂದು ಫೈನಲ್ ಪಂದ್ಯ
ಗುಂಪು ಹಂತದಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಮೊದಲ ಸೆಮಿಫೈನಲ್ ಸೆಪ್ಟೆಂಬರ್ 10 ರಂದು ಮತ್ತು ಎರಡನೇ ಸೆಮಿಫೈನಲ್ ಸೆಪ್ಟೆಂಬರ್ 11 ರಂದು ನಡೆಯಲಿದೆ. ಸೆಮಿಫೈನಲ್‌ನ ವಿಜೇತರು ಸೆಪ್ಟೆಂಬರ್ 13 ರಂದು ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. 17 ದಿನಗಳ ಮಹಿಳಾ ಏಷ್ಯಾ ಕಪ್‌ನಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ.
ಮಹಿಳಾ ಏಷ್ಯಾ ಕಪ್ ವೇಳಾಪಟ್ಟಿ
ಆ.28: ಥೈಲ್ಯಾಂಡ್ vs ಹಾಂಗ್ ಕಾಂಗ್, ರಾತ್ರಿ 8:00, ದುಬೈ
ಆ.29: ಶ್ರೀಲಂಕಾ vs ಯುಎಇ, ರಾತ್ರಿ 8:00, ದುಬೈ
ಆ.30: ಭಾರತ vs ಥಾಯ್ಲೆಂಡ್, ರಾತ್ರಿ 8:00, ದುಬೈ
ಆ.31: ಬಾಂಗ್ಲಾದೇಶ vs ಇಂಡೋನೇಷ್ಯಾ, ರಾತ್ರಿ 8:00, ದುಬೈ
ಸೆ.1: ಪಾಕಿಸ್ತಾನ vs ಥಾಯ್ಲೆಂಡ್, ರಾತ್ರಿ 8:00, ದುಬೈ
The #DPWorldWomensAsiaCup2026 gets underway with Thailand taking on debutants Hong Kong, China 🇹🇭🇭🇰
— AsianCricketCouncil (@ACCMedia1) August 28, 2026
With plenty of cricket between these two sides in the past ~ expect a closely fought opening contest! ⭐️#ACC pic.twitter.com/2CNNIIDfK6
ಸೆ.2: ಶ್ರೀಲಂಕಾ vs ಇಂಡೋನೇಷ್ಯಾ, ರಾತ್ರಿ 8:00, ದುಬೈ
ಸೆ.3: ಭಾರತ vs ಹಾಂಗ್ ಕಾಂಗ್, ರಾತ್ರಿ 8:00, ದುಬೈ
ಸೆ.4: ಯುಎಇ vs ಇಂಡೋನೇಷ್ಯಾ, ರಾತ್ರಿ 8:00, ದುಬೈ
ಸೆ.5: ಭಾರತ vs ಪಾಕಿಸ್ತಾನ, ರಾತ್ರಿ 8:00, ದುಬೈ
ಸೆ.6: ಶ್ರೀಲಂಕಾ vs ಬಾಂಗ್ಲಾದೇಶ, ರಾತ್ರಿ 8:00, ದುಬೈ
ಸೆ.7: ಪಾಕಿಸ್ತಾನ vs ಹಾಂಗ್ ಕಾಂಗ್, ರಾತ್ರಿ 8:00, ದುಬೈ
ಸೆ.8: ಬಾಂಗ್ಲಾದೇಶ vs ಯುಎಇ , ರಾತ್ರಿ 8:00, ದುಬೈ
ಸೆ.10: ಸೆಮಿಫೈನಲ್-1, ರಾತ್ರಿ 8:00 ಗಂಟೆಗೆ, ದುಬೈ
ಸೆ.11: ಸೆಮಿಫೈನಲ್-2, ರಾತ್ರಿ 8:00 ಗಂಟೆಗೆ, ದುಬೈ
ಸೆ.13: ಫೈನಲ್ ಪಂದ್ಯ, ರಾತ್ರಿ 8:00 ಗಂಟೆಗೆ, ದುಬೈ
5 T20 Asia Cup editions mein se 3 trophies seedha GHAR aayi! Women in Blue are aiming for a continental takeover in 2026!
— Sony LIV (@SonyLIV) August 27, 2026
Watch #DPWorldAsiaCup from Aug 28, 8 PM, LIVE on #SonyLIV & #SonySportsNetwork 📺📲 pic.twitter.com/Kl8pY2R6Ce
ಮಹಿಳಾ ಏಷ್ಯಾ ಕಪ್‌ನ ಪಂದ್ಯಗಳನ್ನು ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು?
2026 ರ ಮಹಿಳಾ ಏಷ್ಯಾ ಕಪ್ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಲೈವ್ ಸ್ಟ್ರೀಮಿಂಗ್ ಸೋನಿ ಲಿವ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ಇದನ್ನೂ ಓದಿ: ಲಾರ್ಡ್ಸ್ ಟೆಸ್ಟ್‌ನಲ್ಲಿ ಹೈಡ್ರಾಮಾ: ಪಂದ್ಯ ಬಹಿಷ್ಕರಿಸುವ ಬೆದರಿಕೆ ಹಾಕಿದ ಪಾಕ್; ಕಾರಣ ಬಹಿರಂಗ!!

