ETV Bharat / opinion

ವೆನೆಜುವೆಲಾ ಮೇಲೆ ದಾಳಿ; ಜಾಗತಿಕ ಕ್ರಮಾಂಕಗಳಿಗೆ ಸವಾಲು, ಭಾರತಕ್ಕೆ ಸಂದಿಗ್ದತೆ

ವೆನೆಜುವೆಲಾ ಮೇಲಿನ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗೆ ಜಗತ್ತಿನ ಎರಡು ದೊಡ್ಡ ದೇಶಗಳ ಗುಂಪುಗಳು ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿವೆ.

Invasion of Venezuela: Challenges For The World Order and Dilemma for India ?
ವೆನೆಜುವೆಲಾ ಅಧ್ಯಕ್ಷ ನಿಕೋಲಸ್​ ಮಡರೊ ಮತ್ತು ಪತ್ನಿ ಚಿತ್ರಣವನ್ನು ಪ್ರದರ್ಶನ (AP)
author img

By Achal Malhotra

Published : January 9, 2026 at 5:45 PM IST

4 Min Read
Choose ETV Bharat

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ನಡುವಿನ ದೀರ್ಘಕಾಲದ ಬಿಕ್ಕಟ್ಟು 2026ರ ಜನವರಿ 3ಕ್ಕೆ ಅಂತ್ಯವಾಗಿದೆ. ಅಮೆರಿಕ, ಕ್ಯಾರಕಸ್​ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದು, ಮಾದಕವಸ್ತು - ಭಯೋತ್ಪಾದನೆಯ ಆರೋಪದ ಮೇಲೆ ಅಧ್ಯಕ್ಷ ಮಡುರೊ ಮತ್ತು ಅವರ ಪತ್ನಿಯನ್ನು ವಶಕ್ಕೆ ಪಡೆದಿದ್ದು, ನ್ಯೂಯಾರ್ಕ್​ನಲ್ಲಿ ವಿಚಾರಣೆಗೆ ಒಳಪಡಿಸಲು ಸನ್ನದ್ಧವಾಗಿದೆ.

ಯಾವುದೇ ಮಾನದಂಡಗಳ ಪ್ರಕಾರ, ಒಂದು ಸಾರ್ವಭೌಮ ರಾಷ್ಟ್ರದ ಅಧ್ಯಕ್ಷರನ್ನು (ಮತ್ತು ಅವರ ಪತ್ನಿಯನ್ನು) ಬಂಧಿಸಿ ನ್ಯೂಯಾರ್ಕ್‌ನಲ್ಲಿ ವಿಚಾರಣೆಗೆ ಒಳಪಡಿಸುವ ಹಾಗೂ ಬಲಪ್ರಯೋಗ ಮಾಡುವ ಅಮೆರಿಕದ ಈ ಕ್ರಮ ವಿಶ್ವಸಂಸ್ಥೆಯ ಚಾರ್ಟರ್ ಉಲ್ಲಂಘನೆಯಾಗಿದೆ. ಹಾಗೆಯೇ ನಿರ್ದಿಷ್ಟವಾಗಿ ಅಂತಾರಾಷ್ಟ್ರೀಯ ಸಂಬಂಧಗಳ ನಡವಳಿಕೆಯಲ್ಲಿ ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಮಾನದಂಡಗಳನ್ನು ಉಲ್ಲಂಘಿಸುತ್ತದೆ.

ಅಮೆರಿಕ ದೇಶದ ಭದ್ರತೆಗೆ ಮಾದಕ ವಸ್ತು - ಭಯೋತ್ಪಾದನೆಗೆ ಬೆದರಿಕೆವೊಡ್ಡಿರುವ ಆರೋಪದಲ್ಲಿ ಮಡರೊ ಭಾಗಿಯಾಗಿರುವುದರ ಬಗ್ಗೆ ಸಾಕ್ಷ್ಯಗಳು ಇದ್ದರೂ, ಅವರನ್ನು ಕರೆತಂದು ಪ್ರಕರಣ ದಾಖಲಿಸಲು ಕೆಲವು ಪ್ರಕ್ರಿಯೆಗಳಿವೆ. ಯಾವುದೇ ಒಂದು ದೇಶವು ಅಂತಾರಾಷ್ಟ್ರೀಯ ಪೊಲೀಸ್ ಅಥವಾ ನ್ಯಾಯಾಧೀಶರ ಪಾತ್ರವನ್ನು ವಹಿಸಿಕೊಂಡು ಬಲಪ್ರಯೋಗ ಸೇರಿದಂತೆ ಏಕಪಕ್ಷೀಯ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.

ದುರದೃಷ್ಟವಶಾತ್, ವಿವಾದಗಳನ್ನು ಇತ್ಯರ್ಥಪಡಿಸುವಲ್ಲಿ ಬಲಪ್ರಯೋಗವು ರೂಢಿಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಅರ್ಮೇನಿಯಾ ವಿರುದ್ಧ ಅಜೆರ್ಬೈಜಾನ್‌ನ ಆಕ್ರಮಣ, ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆ, ಹಮಾಸ್ ವಿರುದ್ಧ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಗಳು, ಇರಾನ್‌ನ ಪರಮಾಣು ತಾಣಗಳ ಮೇಲೆ ಅಮೆರಿಕ ಬಾಂಬ್ ದಾಳಿಯಲ್ಲಿ ಬಲವೇ ಸರಿ ಎಂಬ ಪರಿಕಲ್ಪನೆ ರೂಢಿಯಾಗಿದೆ. ಸಣ್ಣ ಮತ್ತು ಮಿಲಿಟರಿ ದುರ್ಬಲ ದೇಶಗಳು ನಿರಂತರ ಭಯದ ಭಾವನೆಯಲ್ಲಿ ಬದುಕುತ್ತಿವೆ.

ಅಮೆರಿಕದ ಮಿಲಿಟರಿ ಕಾರ್ಯಾಚರಣೆಗೆ ಜಗತ್ತಿನ ಎರಡು ದೊಡ್ಡ ದೇಶಗಳು ವಿಭಿನ್ನವಾಗಿ ಪ್ರತಿಕ್ರಿಯೆ ತೋರಿಸಿವೆ. ರಷ್ಯಾ, ಚೀನಾ, ಇರಾನ್​, ಬ್ರೆಜಿಲ್​ ಮತ್ತು ಇತರ ಲ್ಯಾಟಿನ್​ ಅಮೆರಿಕ ದೇಶಗಳು ಈ ಘಟನೆಯನ್ನು ಖಂಡಿಸಿವೆ. ಅಮೆರಿಕದ ಮಿತ್ರ ರಾಷ್ಟಗಳಾಗಿರುವ ಯುರೋಪ್​ ದೇಶಗಳು ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದರೂ ಸಹ, ಸೌಮ್ಯವಾಗಿ ವರ್ತಿಸಿವೆ. ಯುರೋಪಿಯನ್ ಒಕ್ಕೂಟವು ಅಮೆರಿಕವನ್ನು ಟೀಕಿಸುವುದರಿಂದ ದೂರಾಗಿದ್ದು, ಹೆಚ್ಚಿನ ಹೇಳಿಕೆಯು ಮಡುರೊ ಆಡಳಿತದ ಅಕ್ರಮದ ಕುರಿತಾಗಿದೆ.

ಭಾರತ ಕೂಡ ಈ ಕಾರ್ಯಾಚರಣೆ ಬಗ್ಗೆ ಸೌಮ್ಯವಾಗಿ ಪ್ರತಿಕ್ರಿಯಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಭಾರತ, ವೆನೆಜುವೆಲಾದಲ್ಲಿನ ಇತ್ತೀಚಿನ ಬೆಳವಣಿಗೆಗಳು ಆಳವಾದ ಕಳವಳಕಾರಿ ವಿಷಯವಾಗಿದೆ. ನಾವು ಬದಲಾಗುತ್ತಿರುವ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ವೆನೆಜುವೆಲಾದ ಜನರ ಯೋಗಕ್ಷೇಮ ಮತ್ತು ಸುರಕ್ಷತೆಗೆ ಭಾರತ ತನ್ನ ಬೆಂಬಲವನ್ನು ಪುನರುಚ್ಚರಿಸುತ್ತದೆ. ಪ್ರದೇಶದ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ಮಾತುಕತೆಯ ಮೂಲಕ ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಲು ನಾವು ಸಂಬಂಧಪಟ್ಟ ಎಲ್ಲರಿಗೂ ಕರೆ ನೀಡುತ್ತೇವೆ ಎಂದಿದೆ.

ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಭಾರತದ ಒತ್ತಾಯ: ಮತ್ತೊಂದು ಕಡೆ ಭಾರತವು ಅಮೆರಿಕವನ್ನು ಟೀಕಿಸಲಿಲ್ಲ. ಅಂತಾರಾಷ್ಟ್ರೀಯ ಮಾನದಂಡಗಳ ಉಲ್ಲಂಘನೆಯತ್ತ ಗಮನ ಸೆಳೆದಿಲ್ಲ. ಆದಾಗ್ಯೂ ಎಲ್ಲ ಸಮಸ್ಯೆಗಳನ್ನು ಸಂಬಂಧಪಟ್ಟ ಪಕ್ಷಗಳು ಮಾತುಕತೆ ಮೂಲಕ ಶಾಂತಿಯುತವಾಗಿ ಪರಿಹರಿಸಬೇಕು ಎಂದು ಶಿಫಾರಸು ಮಾಡಿತು. ಈ ಮೂಲಕ ಭಾರತವು ಮತ್ತೊಮ್ಮೆ ರಾಜಕೀಯ ಉದ್ದೇಶಗಳನ್ನು ಸಾಧಿಸಲು ಬಲಪ್ರಯೋಗವನ್ನು ತಿರಸ್ಕರಿಸಿದೆ. ವಾಸ್ತವವಾಗಿ, ಅಮೆರಿಕಕ್ಕೆ ಭಾರತೀಯ ರಫ್ತಿನ ಮೇಲೆ ಸುಂಕಗಳನ್ನು ವಿಧಿಸುವುದರಿಂದ ಪ್ರಸ್ತುತ ಅಮೆರಿಕದೊಂದಿಗೆ ಭಾರತದ ಸಂಬಂಧಗಳು ಸೂಕ್ಷ್ಮ ಹಂತದಲ್ಲಿ ಸಾಗುತ್ತಿವೆ. ಇದಲ್ಲದೇ, ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕದೊಂದಿಗೆ ಭಾರತದ ಮಾತುಕತೆಗಳು ನಿರ್ಣಾಯಕ ಹಂತದಲ್ಲಿವೆ.

ಕಾರ್ಯತಂತ್ರದ ವಾಸ್ತವಿಕತೆಯಲ್ಲಿ ಭಾರತ ಪ್ರಮುಖ ಪಾಲುದಾರಿಕೆಯಲ್ಲಿ ಬಿರುಕುಗಳನ್ನು ಉಂಟುಮಾಡುವ ಯಾವುದೇ ಕೃತ್ಯವನ್ನು ತಪ್ಪಿಸುವುದಾಗಿದೆ. ಅಮೆರಿಕ ಮತ್ತು ವೆನೆಜುವೆಲಾ ನಡುವಿನ ಸಂಬಂಧಗಳು ಸ್ಥಿರವಾದರೆ ಮತ್ತು ವೆನೆಜುವೆಲಾದ ಮೇಲಿನ ಅಮೆರಿಕದ ನಿರ್ಬಂಧಗಳನ್ನು ತೆಗೆದುಹಾಕಿದರೆ, ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ಮತ್ತೊಂದು ಮಾರ್ಗವನ್ನು ಕಂಡುಕೊಳ್ಳಬಹುದು. ಆದರೆ ಭಾರತೀಯ ತೈಲ ಕಂಪನಿಗಳು ವೆನೆಜುವೆಲಾದ ಮಾರುಕಟ್ಟೆಗೆ ಮರುಪ್ರವೇಶವನ್ನು ನಿರೀಕ್ಷಿಸಬಹುದು.

ಮತ್ತೆ ವಸಾಹತುಶಾಹಿ ಯುಗಕ್ಕೆ ಸಾಗುತ್ತಿದೆಯೇ?; ಪ್ರಮುಖ ವಿಷಯಕ್ಕೆ ಬರುವುದಾದರೆ, ವೆನೆಜುವೆಲಾದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯೊಂದಿಗೆ ವಿಷಯ ಅಂತ್ಯವಾಗುವುದಿಲ್ಲ. ವೆನೆಜುವೆಲಾ ಮುನ್ನಡೆಸಲು ಮತ್ತು ಅಲ್ಲಿನ ಕಚ್ಚಾ ತೈಲ ಸಂಪನ್ಮೂಲಗಳಿಂದ ಬರುವ ಆದಾಯದಿಂದ ವೆಚ್ಚಗಳನ್ನು ಪೂರೈಸಲು ಅಮೆರಿಕ ಉದ್ದೇಶಿಸಿದೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಇದು ನಾವು ವಸಾಹತುಶಾಹಿ ಯುಗಕ್ಕೆ ಮರಳುತ್ತಿದ್ದೇವೆಯೇ ಎಂಬ ಅನುಮಾನ ಮೂಡಿಸಿದೆ.

ಮಡುರೊ ಮಾದಕವಸ್ತು ಭಯೋತ್ಪಾದನೆಯಲ್ಲಿ ಭಾಗಿಯಾಗಿದ್ದು, ಇದು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತಿದೆ ಎಂಬ ಕಾರಣದಿಂದ ಅಮೆರಿಕ ಸೇನಾ ಕಾರ್ಯಾಚರಣೆ ನಡೆಸಿದೆ. ಆದರೆ, ಇಲ್ಲಿ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನದನ್ನು ಕಾಣಬಹುದು. ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿರುವ ವೆನೆಜುವೆಲಾದ ವಿಶಾಲ ತೈಲ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಲು ಟ್ರಂಪ್ ಸ್ಪಷ್ಟವಾಗಿ ಆಸಕ್ತಿ ಹೊಂದಿದ್ದಾರೆ.

ಚೀನಾದ ಕರೆನ್ಸಿಯಲ್ಲಿ ಚೀನಾಕ್ಕೆ ತೈಲ ಮಾರಾಟ ಮಾಡುವ ಮಡುರೊ ಕ್ರಮಕ್ಕೆ ಅಮೆರಿಕ ಸಂತೋಷವಾಗಿರಲಿಲ್ಲ. ಜಾಗತಿಕ ಆರ್ಥಿಕತೆಯ ಡಾಲರ್ ಕಡಿತದ ಕಲ್ಪನೆಗೆ ಟ್ರಂಪ್ ಅಲರ್ಜಿಯನ್ನು ಹೊಂದಿದ್ದಾರೆ. ಬ್ರಿಕ್ಸ್ ಕರೆನ್ಸಿ ಪರಿಚಯಿಸುವುದರ ವಿರುದ್ಧ ಅಥವಾ ಸ್ಥಳೀಯ ಕರೆನ್ಸಿಗಳಲ್ಲಿ ತಮ್ಮ ನಡುವೆ ವ್ಯಾಪಾರ ಮಾಡುವುದರ ವಿರುದ್ಧ ಬ್ರಿಕ್ಸ್ ಸದಸ್ಯರಿಗೆ ಪದೇ ಪದೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ವಿಶ್ವ ಮಾರುಕಟ್ಟೆಗಳಲ್ಲಿ ಯುಎಸ್ ಡಾಲರ್‌ಗಳ ಪ್ರಾಬಲ್ಯ ಪ್ರಶ್ನಿಸಲಾಗಿದೆ.

ಪಶ್ಚಿಮ ಗೋಳಾರ್ಧದಲ್ಲಿ ಅಮೆರಿಕ ಪ್ರಾಬಲ್ಯ: ಟ್ರಂಪ್ ಲ್ಯಾಟಿನ್ ಅಮೆರಿಕದಲ್ಲಿನ ತನ್ನ ಕೆಲವು ನೆರೆಯ ರಾಷ್ಟ್ರಗಳಿಗೂ ಇದೇ ರೀತಿಯ ಪರಿಣಾಮಗಳ ಬಗ್ಗೆ ಬೆದರಿಕೆ ಹಾಕಿದ್ದಾರೆ. ಇದನ್ನು ಮನ್ರೋ ಸಿದ್ಧಾಂತದ ಮರುಶೋಧನೆ ಮತ್ತು ಡೊನ್ರೋ ಸಿದ್ಧಾಂತ ಎಂದು ಮರುನಾಮಕರಣ ಎಂದು ನೋಡಲಾಗುತ್ತಿದೆ. ಇದರ ಪ್ರಮುಖ ಲಕ್ಷಣವೆಂದರೆ ಪಶ್ಚಿಮ ಗೋಳಾರ್ಧದಲ್ಲಿ ತನ್ನ ವಿಶೇಷ ಪ್ರಭಾವದ ಪ್ರದೇಶವಾಗಿ ಅಮೆರಿಕದ ಪ್ರಾಬಲ್ಯ.

ಸಂಕ್ಷಿಪ್ತವಾಗಿ ಹೇಳುವುದಾದರೆ, ವೆನೆಜುವೆಲಾದಲ್ಲಿ ಅಮೆರಿಕದ ಮಿಲಿಟರಿ ಹಸ್ತಕ್ಷೇಪವು ಅಂತಾರಾಷ್ಟ್ರೀಯ ಸಂಬಂಧಗಳ ನಡವಳಿಕೆಯಲ್ಲಿ ಅದೇ ಅಂತಾರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸುತ್ತಿದೆ. ಇದನ್ನು ಅಮೆರಿಕವು ಉಳಿದ ಜಗತ್ತು ಅನುಸರಿಸಬೇಕೆಂದು ನಿರೀಕ್ಷಿಸುತ್ತಿದೆ. ಅಮೆರಿಕವು ಅಪಾಯಕಾರಿ ಪೂರ್ವನಿದರ್ಶನವನ್ನು ಸ್ಥಾಪಿಸಿದೆ, ಅದರ ಪರಿಣಾಮಗಳು ಪ್ರಪಂಚದ ಉಳಿದ ಭಾಗಗಳಿಗೆ ವಿನಾಶಕಾರಿಯಾಗಬಹುದು. ಭಾರತದ ದೃಷ್ಟಿಕೋನದಿಂದ, ಅಮೆರಿಕದ ಖಂಡನೆ ಸೇರಿದಂತೆ ಯಾವುದೇ ಬಲವಾದ ನಿಲುವು ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ. ಇದಕ್ಕೆ ವಿರುದ್ಧವಾಗಿ, ಇದು ಈಗಾಗಲೇ ಹದಗೆಟ್ಟಿರುವ ಸಂಬಂಧಗಳಿಗೆ ಮತ್ತಷ್ಟು ಹಾನಿಯನ್ನುಂಟುಮಾಡಬಹುದು.

ಇದು ಯುದ್ಧದ ಯುಗವಲ್ಲ ಮತ್ತು ಎಲ್ಲ ವಿವಾದಗಳನ್ನು ರಾಜತಾಂತ್ರಿಕತೆ ಮತ್ತು ಸಂಭಾಷಣೆಯ ಮೂಲಕ ಶಾಂತಿಯುತವಾಗಿ ಇತ್ಯರ್ಥಪಡಿಸಬೇಕು ಎಂಬ ಕುರಿತು ಭಾರತ ಆಗ್ಗಾಗ್ಗೆ ಹೇಳಲಾಗುವ ತನ್ನ ನಿಲುವಿಗೆ ಬದ್ಧವಾಗಿರುವುದು.

ಇವುಗಳನ್ನೂ ಓದಿ:

ವೆನೆಜುವೆಲಾ ಹಂಗಾಮಿ ಅಧ್ಯಕ್ಷರಾಗಿ ಡೆಲ್ಸಿ ರೊಡ್ರಿಗಸ್​​ ಪ್ರಮಾಣವಚನ; ರಷ್ಯಾ ಸ್ವಾಗತ

ನನಗೆ ಅಂತಾರಾಷ್ಟ್ರೀಯ ಕಾನೂನಿನ ಅಗತ್ಯವಿಲ್ಲ: ಡೊನಾಲ್ಡ್ ಟ್ರಂಪ್