ನೀವು ಧರಿಸುವ ಟಿ-ಶರ್ಟ್‌ನಲ್ಲಿರುವ 'ಟಿ' ಎಂದರೇನು? ಮೊದಲು ಯಾರಿಗೆ ಟಿ-ಶರ್ಟ್ ಡಿಸೈನ್ ಮಾಡಲಾಗಿತ್ತು?
ಮಕ್ಕಳು, ಯುವಕ-ಯುವತಿಯರು ಹಾಗೂ ವೃದ್ಧರು ಟಿ-ಶರ್ಟ್‌ಗಳನ್ನು ತುಂಬಾ ಇಷ್ಟಪಟ್ಟು ಧರಿಸುತ್ತಾರೆ. ಅನೇಕರಿಗೆ ಟಿ-ಶರ್ಟ್‌ಗಳ ನಿಜವಾದ ಅರ್ಥ ಗೊತ್ತಿಲ್ಲ. ಟಿ-ಶರ್ಟ್ ಹಿಂದಿನ ಇತಿಹಾಸ ಹಾಗೂ ಇದನ್ನು ಯಾರಿಗಾಗಿ ವಿನ್ಯಾಸಗೊಳಿಸಲಾಗಿತ್ತು ಎಂಬುದರ ಬಗ್ಗೆ ಅರಿತುಕೊಳ್ಳೋಣ.


Published : November 6, 2025 at 6:01 AM IST
ವಿವಿಧ ಟ್ರೆಂಡ್ಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಟಿ-ಶರ್ಟ್‌ಗಳು ಲಭಿಸುತ್ತವೆ. ಟಿ-ಶರ್ಟ್‌ಗಳನ್ನು ಯಾವುದೇ ವಯಸ್ಸಿನ ಮಿತಿಯಿಲ್ಲದೇ ಮಕ್ಕಳು, ಯುವಕರು, ಹುಡುಗಿಯರು ಹಾಗೂ ವೃದ್ಧರು ಇಷ್ಟಪಟ್ಟು ಧರಿಸುತ್ತಿದ್ದಾರೆ. ಟಿ-ಶರ್ಟ್‌ಗಳು ಆರಾಮದಾಯಕವಾಗಿರುವುದಲ್ಲದೆ ಸ್ಟೈಲಿಶ್ ಲುಕ್ ನೀಡುತ್ತವೆ. ವಿಶೇಷವಾಗಿ ಬೇಸಿಗೆಯ ಕಾಲದಲ್ಲಿ ಶರ್ಟ್‌ಗಳು ಅಥವಾ ಫಾರ್ಮಲ್ ಬಟ್ಟೆಗಳ ಬದಲಿಗೆ ಟಿ-ಶರ್ಟ್‌ಗಳನ್ನು ಧರಿಸಲು ಅನೇಕರು ಇಷ್ಟಪಡುತ್ತಾರೆ. ಅನೇಕರಿಗೆ ಟಿ-ಶರ್ಟ್‌ಗಳ ನಿಜವಾದ ಅರ್ಥ ತಿಳಿದಿಲ್ಲ. ಟಿ-ಶರ್ಟ್‌ಗಳ ಹಿಂದಿನ ಇತಿಹಾಸ ಮತ್ತು ಅದನ್ನು ಯಾರಿಗಾಗಿ ವಿನ್ಯಾಸಗೊಳಿಸಲಾಗಿತ್ತು ಎಂಬುದರ ಬಗ್ಗೆ ವಿವರವಾಗಿ ತಿಳಿಯೋಣ.
ಫ್ಯಾಷನ್ ಲೋಕವು ದಿನದಿಂದ ದಿನಕ್ಕೆ ಹೊಸ ಹೊಸ ವಿನ್ಯಾಸ ಪಡೆಯುತ್ತಿದೆ. ಫ್ಯಾಷನ್ ಜಗತ್ತಿನಲ್ಲಿ ನಮಗೆ ತಿಳಿದಿರದ ಹಲವು ವಿಷಯಗಳಿವೆ. ಈಗ ಹಲವರು ಟಿ-ಶರ್ಟ್‌ಗಳನ್ನು ಧರಿಸಲು ಇಷ್ಟಪಡುತ್ತಾರೆ. ಯುವ ಜನತೆ ಸ್ಟೈಲ್ಗಾಗಿ ಟಿ-ಶರ್ಟ್‌ಗಳನ್ನು ಧರಿಸುತ್ತಾರೆ. ಇವು ಆರಾಮದಾಯಕ ಜೊತೆಗೆ ಕಡಿಮೆ ಬಜೆಟ್‌ನಲ್ಲಿಯೂ ದೊರೆಯುತ್ತವೆ. ಏನು ಧರಿಸಬೇಕೆಂದು ತಿಳಿಯದಿದ್ದ ಸಮಯದಲ್ಲಿ ಕೆಲವರು ವಾರ್ಡ್ರೋಬ್‌ನಲ್ಲಿ ಇಟ್ಟಿರುವ ಕಣ್ಣಿಗೆ ಕಂಡಂತಹ ಟಿ-ಶರ್ಟ್‌ಗಳನ್ನು ಧರಿಸಲು ಇಷ್ಟಪಡುತ್ತಾರೆ. ಇವುಗಳನ್ನು ಆಯ್ಕೆ ಮಾಡುವುದು ಕೂಡ ಸುಲಭ.
ಸಾಮಾನ್ಯವಾಗಿ ಎಲ್ಲರೂ 5ಕ್ಕಿಂತ ಹೆಚ್ಚು ಟಿ-ಶರ್ಟ್‌ಗಳನ್ನು ಹೊಂದಿರುತ್ತಾರೆ. ಪ್ರತಿದಿನ ಧರಿಸುವ ಟಿ-ಶರ್ಟ್‌ನಲ್ಲಿರುವ ಮೊದಲ ಅಕ್ಷರ ಟಿ ಎಂದರೆ ಅದರ ಅರ್ಥ ಹೆಚ್ಚಿನವರಿಗೆ ತಿಳಿದಿಲ್ಲ. ಅದರ ಹಿಂದೆ ಬಹಳಷ್ಟು ಮಹತ್ವದ ವಿಚಾರವಿದೆ. ಇದರ ಅರ್ಥ ಹಾಗೂ ಟಿ-ಶರ್ಟ್‌ಗಳನ್ನು ಮೂಲತಃ ಯಾರಿಗಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿತ್ತು ಎಂಬುದನ್ನು ನೋಡೋಣ.
ಸ್ಟೈಲಿಶ್ ಲುಕ್: ಟಿ-ಶರ್ಟ್ ಎಂದರೆ ಕೇವಲ ಆರಾಮದಾಯಕವಾಗಿರುವುದರ ಬಗ್ಗೆ ಮಾತ್ರ ಅಲ್ಲ. ಇದು ಹೊಸ ಫ್ಯಾಷನ್ ಮತ್ತು ವ್ಯಕ್ತಿತ್ವದ ಸಂಕೇತ. ಇದನ್ನು ಪುರುಷರು ಮತ್ತು ಮಹಿಳೆಯರು ಧರಿಸುತ್ತಾರೆ. ಇದು ಎಲ್ಲರ ವಾರ್ಡ್ರೋಬ್‌ನಲ್ಲಿ ಸುಲಭವಾಗಿ ಕಾಣಿಸುತ್ತವೆ. ಟಿ-ಶರ್ಟ್‌ಗಳು ಕೇವಲ ಸರಳ ಬಣ್ಣಗಳಿಗೆ ಸೀಮಿತವಲ್ಲ. ವಿಭಿನ್ನ ವಿನ್ಯಾಸಗಳು, ಆಕರ್ಷಕ ಗ್ರಾಫಿಕ್ಸ್, ಸೊಗಸಾದ ಲೋಗೋಗಳು ಹಾಗೂ ಅನನ್ಯ ಮುದ್ರಣಗಳಲ್ಲಿ ಲಭ್ಯವಿರುತ್ತವೆ. ಕಾಲೇಜಿಗೆ ಹೋಗುವ ಯುವಕರಾಗಲಿ ಅಥವಾ ಕಚೇರಿಯಲ್ಲಿ ಕೆಲಸ ಮಾಡುವ ವೃತ್ತಿಪರರಾಗಲಿ ಅನೇಕರು ಟಿ-ಶರ್ಟ್‌ಗಳನ್ನು ಧರಿಸುತ್ತಾರೆ. ಟೀ-ಶರ್ಟ್ ಧರಿಸುವ ಪ್ರವೃತ್ತಿ ಎಷ್ಟಿದೆ ಎಂದರೆ ಇವುಗಳು ಇಂದಿನ ಆಧುನಿಕ ಜೀವನಶೈಲಿಯ ಪ್ರಮುಖ ಭಾಗವಾಗಿ ಬದಲಾಗಿವೆ.
ಟಿ-ಶರ್ಟ್ನ ಇತಿಹಾಸವೇನು?: ಟಿ-ಶರ್ಟ್ ಫ್ಯಾಷನ್ ಎಲ್ಲಿಂದ ಬಂತು ಎಂಬುದನ್ನು ತಿಳಿಯುವುದು ಅಗತ್ಯವಿದೆ. ಆರಂಭದಲ್ಲಿ ಇವುಗಳನ್ನು ಸಾಮಾನ್ಯ ಜನರು ಧರಿಸುತ್ತಿರಲಿಲ್ಲ. ತರಬೇತಿಯ ಸಮಯದಲ್ಲಿ ಹಗುರವಾಗಿರಲು, ಶಾಖವನ್ನು ನಿವಾರಿಸಲು ಸೈನಿಕರು ಇವುಗಳನ್ನು ಧರಿಸುತ್ತಿದ್ದರು. ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಅಮೇರಿಕನ್ ಸೈನಿಕರು ತರಬೇತಿಯ ಸಮಯದಲ್ಲಿ ಹಗುರ, ಆರಾಮದಾಯಕ ಬಟ್ಟೆಗಳನ್ನು ಧರಿಸುತ್ತಿದ್ದರು. ಇವುಗಳನ್ನು ತರಬೇತಿ ಶರ್ಟ್‌ಗಳು ಎನ್ನಲಾಗುತ್ತಿತ್ತು. ಬಳಿಕ ಸಮಯ ಕಳೆದಂತೆ ಇವು ಟಿ-ಶರ್ಟ್ ಆಗಿ ಜನಪ್ರಿಯವಾದವು.
ಟಿ-ಶರ್ಟ್‌ಗಳು ಫ್ಯಾಷನ್ ಜಗತ್ತಿಗೆ ಪ್ರವೇಶ: ಟಿ-ಶರ್ಟ್‌ಗಳು 1950ರ ದಶಕದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಈ ಸಮಯದಲ್ಲಿ ಪ್ರಸಿದ್ಧ ಹಾಲಿವುಡ್ ನಟ ಮರ್ಲಾನ್ ಬ್ರಾಂಡೊ ತಮ್ಮ 'ಎ ಸ್ಟ್ರೀಟ್‌ಕಾರ್ ನೇಮ್ಡ್ ಡಿಸೈರ್' ಚಿತ್ರದಲ್ಲಿ ಇದನ್ನು ಧರಿಸಿದ್ದರು. ಇದರ ನಂತರ ಜೇಮ್ಸ್ ಡೀನ್ 'ರೆಬೆಲ್ ವಿಥೌಟ್ ಎ ಕಾಸ್' ಚಿತ್ರದಲ್ಲಿ ಟಿ-ಶರ್ಟ್ ಧರಿಸಿದ್ದರು.
ಅಂದಿನಿಂದ ಇವುಗಳು ಫ್ಯಾಷನ್ ಐಕಾನ್ ಆಗಿ ಮಾರ್ಪಟ್ಟವು. ಈ ಇಬ್ಬರು ನಟರು ಟಿ-ಶರ್ಟ್ ಅನ್ನು ಕೇವಲ ಒಳ ಉಡುಪು ಮಾತ್ರವಲ್ಲದೆ ಸ್ಟೈಲಿಶ್ ಆಗಿ ಬಳಸಿದರು. ಬಳಿಕ ಇವು ಜನಪ್ರಿಯವಾದವು. ಮೊದಲು ಕಾಲರ್ ಇಲ್ಲದ ಟಿ-ಶರ್ಟ್‌ಗಳು ಇದ್ದವು. ಅವು ಕಾಲಕಾಲಕ್ಕೆ ಕಾಲರ್ ಹೊಂದಿರುವ ಟಿ-ಶರ್ಟ್‌ಗಳಾಗಿ ಸಹ ಬದಲಾದವು.
ಟಿ-ಶರ್ಟ್‌ನಲ್ಲಿರುವ 'ಟಿ' ಎಂದರೆ ಅರ್ಥವೇನು?: ಸಾಮಾನ್ಯವಾಗಿ ಟಿ-ಶರ್ಟ್ ಅನ್ನು ಸಮತಟ್ಟಾದ ಮೇಲ್ಮೈಯಲ್ಲಿ ಇಟ್ಟರೆ ಅದರ ಆಕಾರವು ಇಂಗ್ಲಿಷ್ ಅಕ್ಷರ ಟಿ ಯಂತೆ ಕಾಣುತ್ತದೆ. ಅದಕ್ಕಾಗಿಯೇ ಟಿ-ಶರ್ಟ್ ಅನ್ನು ಈ ಹೆಸರಿನಿಂದ ಕರೆಯಲಾಗುತ್ತದೆ. ಇದನ್ನು ಧರಿಸಿದರೆ ಇದು ದೇಹದ ಮೇಲೆ ನೇರ ಪಟ್ಟಿಯನ್ನು ಮತ್ತು ತೋಳುಗಳ ಎರಡೂ ಬದಿಗಳಲ್ಲಿ ಪಟ್ಟಿಯನ್ನು ಹೊಂದಿರುತ್ತದೆ. ಇದರಿಂದ ಟಿ ಆಕಾರದಲ್ಲಿರಿಸಲಾಗುತ್ತದೆ. ಜೊತೆಗೆ ಇದನ್ನು ಆರಂಭದಲ್ಲಿ ತರಬೇತಿ ಶರ್ಟ್ ಎಂದು ಹೆಸರಿಸಲಾಗುತ್ತಿತ್ತು. ತರಬೇತಿಯಲ್ಲಿ ಮೊದಲ ಅಕ್ಷರ ಟಿ. ಅದಕ್ಕಾಗಿಯೇ ಫ್ಯಾಶನ್ ತಜ್ಞರು ಟಿ ಎಂದರೆ ತರಬೇತಿ ಕರೆಯುತ್ತಾರೆ.
ಬಿಳಿ ಟಿ-ಶರ್ಟ್ ಹೆಚ್ಚು ಜನಪ್ರಿಯ: ಆರಂಭದ ಅವಧಿಯಲ್ಲಿ ಬಿಳಿ ಟಿ-ಶರ್ಟ್ ಹೆಚ್ಚು ಜನಪ್ರಿಯವಾಗಿದ್ದವು. ಬಿಳಿ ಟಿ-ಶರ್ಟ್ ನೀಲಿ ಬಣ್ಣದ ಡೆನಿಮ್ ಜೀನ್ಸ್‌ನೊಂದಿಗೆ ಧರಿಸಿದಾಗ ಬರುವ ನೋಟ ಅದ್ಭುತ. ಇದು ಕ್ಯಾಶುಯಲ್ ಮತ್ತು ಸ್ಮಾರ್ಟ್ ಲುಕ್ ನೀಡುತ್ತದೆ. ಈ ಸಂಯೋಜನೆಯನ್ನು ಹೆಚ್ಚಾಗಿ ಯುವಕರು ಇಷ್ಟಪಟ್ಟು ಧರಿಸುತ್ತಾರೆ. ಹುಡುಗಿಯರು ಹಾಗೂ ಹುಡುಗರು ಹೆಚ್ಚಾಗಿ ಈ ಕಾಂಬಿನೇಷನ್ ಇಷ್ಟಪಡುತ್ತಾರೆ.
ಜೊತೆಗೆ ಇದು ಆಫೀಸ್ ಲುಕ್ ಅನ್ನು ಸಹ ನೀಡುತ್ತದೆ. ಟೀ ಶರ್ಟ್‌ಗಳನ್ನು ಹೆಚ್ಚಾಗಿ ಕ್ರೀಡಾಪಟುಗಳು ಧರಿಸುತ್ತಾರೆ. ಇದು ಬಹಳಷ್ಟು ಆರಾಮವನ್ನು ನೀಡುತ್ತದೆ. ಟೆನಿಸ್ ಆಟಗಾರರು, ಬ್ಯಾಡ್ಮಿಂಟನ್ ಆಟಗಾರರು ಹಾಗೂ ಕ್ರೀಡಾಪಟುಗಳು ಟೀ ಶರ್ಟ್‌ಗಳನ್ನು ಧರಿಸಿ ಆಟ ಆಡುತ್ತಾರೆ. ಇದರಿಂದ ಟೀ ಶರ್ಟ್‌ಗಳು ಅಂತಹ ಕ್ರೇಜ್ ಹೊಂದಿವೆ.
ಇದನ್ನೂ ಓದಿ: ನೀವು ಈ ಹಣ್ಣು, ಆಹಾರಗಳನ್ನು ಸೇವಿಸಿದ ತಕ್ಷಣವೇ ನೀರು ಕುಡಿದರೆ ಈ ಆರೋಗ್ಯ ಸಮಸ್ಯೆ ಕಾಡುತ್ತೆ: ಇದಕ್ಕೆ ತಜ್ಞರು ಹೇಳುವುದೇನು?
ಅರಿಶಿನ ನೀರನ್ನು ಕುಡಿದರೆ ಯಾವೆಲ್ಲಾ ಆರೋಗ್ಯದ ಪ್ರಯೋಜನಗಳಿವೆ ಗೊತ್ತೇ? ತಜ್ಞರು ಹೇಳುವುದೇನು?

