ಮುಖದ ತ್ವಚೆ, ಕೂದಲು ಸೌಂದರ್ಯ ಕಾಪಾಡಲು ಬಯಸುವವರು ಈ ತಪ್ಪುಗಳನ್ನು ಮಾಡಬೇಡಿ: ತಜ್ಞರು ಸಲಹೆ
ಕೆಲವರು ತಮ್ಮ ಚರ್ಮದ ಆರೈಕೆ ದಿನಚರಿಯಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳು ಯಾವುವು? ಸೌಂದರ್ಯ ತಜ್ಞರು ಸೂಚಿಸುವ ಸಲಹೆಗಳು ಇಲ್ಲಿವೆ ನೋಡಿ.


Published : July 7, 2026 at 6:40 PM IST
ಪ್ರತಿಯೊಬ್ಬರೂ ಸುಂದರವಾಗಿ ಕಾಣಲು ಬಯಸುತ್ತಾರೆ. ನೀವು ನೈಸರ್ಗಿಕವಾಗಿ ಸುಂದರವಾಗಿದ್ದರೂ ಕೂಡ ನಿಮ್ಮ ಕೆಲವು ತಪ್ಪುಗಳನ್ನು ಮಾಡುವುದರಿಂದ ಮುಖದ ಲುಕ್ ಅನ್ನು ಕುಂದಿಸಬಹುದು ಎಂದು ಸೌಂದರ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ. ಈ ಕೆಲವು ಸಾಮಾನ್ಯ ದೋಷಗಳನ್ನು ಹೇಗೆ ಸರಿಪಡಿಸುವುದು ಎಂಬುದನ್ನು ಈ ಸ್ಟೋರಿಯಲ್ಲಿ ವಿವರವಾಗಿ ಅರಿತುಕೊಳ್ಳೋಣ.
ಮುಖದ ತ್ವಚೆಯ ಆರೈಕೆ: ತಜ್ಞರು ತಿಳಿಸುವ ಪ್ರಕಾರ, ಸುಂದರ ಲುಕ್ ಅನ್ನು ಕಾಪಾಡಿಕೊಳ್ಳಲು ಮಲಗುವ ಮೊದಲು ನಿರ್ದಿಷ್ಟ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಲಗುವ ಮೊದಲು ಮುಖಕ್ಕೆ ಲೇಪಿಸಲಾದ ಯಾವುದೇ ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿ, ನಂತರ ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕಾಗುತ್ತದೆ ಎಂದು ಸಲಹೆ ನೀಡುತ್ತಾರೆ. ನೈಟ್ ಕ್ರೀಮ್ ಅನ್ನು ಹಚ್ಚಬಾರದು. ಏಕೆಂದರೆ ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಹಾಗೂ ಹೊಳಪನ್ನು ನೀಡುತ್ತದೆ. ಅತಿಯಾದ ಪ್ರಮಾಣದಲ್ಲಿ ಹಚ್ಚುವ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಾರೆ. ಹಗಲು ಹಾಗೂ ರಾತ್ರಿ ಕ್ರೀಮ್‌ಗಳನ್ನು ಬಳಸುವುದರಿಂದ ದೇಹದ ಸಿರ್ಕಾಡಿಯನ್ ಲಯವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಎಂದು ರಿಸರ್ಚ್‌ಗೇಟ್ ಗಮನಿಸುತ್ತದೆ.

ತುಟಿಗಳ ತ್ವಚೆಗಾಗಿ ಹೀಗೆ ಮಾಡಿ: ತುಟಿಗಳ ಮೇಲಿನ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಇದರಿಂದ ಹೆಚ್ಚುವರಿ ಆರೈಕೆಯ ಅಗತ್ಯವನ್ನು ತಜ್ಞರು ಒತ್ತಿಹೇಳುತ್ತಾರೆ. ಮಲಗುವ ಮೊದಲು ನೀರಿನಲ್ಲಿ ಅದ್ದಿದ ಹತ್ತಿ ಪ್ಯಾಡ್‌ನಿಂದ ತುಟಿಗಳನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ಬಳಿಕ, ಎಣ್ಣೆ ಹಚ್ಚಿ 5ರಿಂದ 10 ನಿಮಿಷಗಳ ಕಾಲ ತುಟಿಗಳಿಗೆ ನಿಧಾನವಾಗಿ ಮಸಾಜ್ ಮಾಡುವುದು ಉತ್ತಮ. ಏಕೆಂದರೆ ಇದು ಉತ್ತಮ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ ಎಂದು ಸೌಂದರ್ಯ ತಜ್ಞರು ಸಲಹೆ ನೀಡುತ್ತಾರೆ.
ಕಣ್ಣುಗಳಿಗೆ ಸಂಬಂಧಿಸಿದಂತೆ ಈ ವಿಷಯ ಮರೆಯದಿರಿ: ಕೆಲವರು ಕೋಲ್, ಐಶ್ಯಾಡೋ ಹಾಗೂ ಮಸ್ಕರಾದಂತಹ ಉತ್ಪನ್ನಗಳನ್ನು ಬಳಸುತ್ತಾರೆ. ಮುಖದ ಮೇಕಪ್ ತೆಗೆಯುವಾಗ ಇವುಗಳನ್ನು ತೆಗೆದುಹಾಕಲು ಮರೆತುಬಿಡುತ್ತಾರೆ. ಇದು ಮರುದಿನ ಬೆಳಗ್ಗೆ ಕಣ್ಣುಗಳು ದಣಿದಂತೆ ಕಾಣುವಂತೆ ಮಾಡುತ್ತದೆ. ಈ ಅಭ್ಯಾಸವು ಕಣ್ಣುಗಳ ಸುತ್ತ ಕಪ್ಪು ವೃತ್ತಗಳನ್ನು ಬೆಳೆಸುವ ಅಪಾಯ ಹೆಚ್ಚಿಸುತ್ತದೆ ಎಂದು ಸೌಂದರ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ.

ಮಲಗುವ ಮೊದಲು ಕಣ್ಣಿನ ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಸೂಕ್ತವಾಗಿದೆ. ರಾತ್ರಿಯಿಡೀ ಚರ್ಮದ ಮೇಲೆ ಉಳಿದಿರುವ ವರ್ಣದ್ರವ್ಯಗಳು ಹಾಗೂ ಭಾರವಾದ ಪದಾರ್ಥಗಳು ಕಡಿಮೆ ದರ್ಜೆಯ ಡರ್ಮಟೈಟಿಸ್ (ಚರ್ಮದ ಉರಿಯೂತ) ಇಲ್ಲವೇ ರಾಸಾಯನಿಕ ಕಿರಿಕಿರಿ ಉಂಟುಮಾಡಬಹುದು ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ತಿಳಿಸುತ್ತದೆ.

ಕೂದಲಿನ ಆರೈಕೆಗೆ ಒತ್ತು ನೀಡಿ: ಸಾಮಾನ್ಯವಾಗಿ ಬೆಳಗ್ಗೆ ಶಾಲೆಗೆ ಅಥವಾ ಕೆಲಸಕ್ಕೆ ತಯಾರಾಗುವಾಗ ನಮ್ಮ ಕೂದಲನ್ನು ಬಾಚಿಕೊಳ್ಳುತ್ತೇವೆ. ಸ್ಟೈಲ್ ಮಾಡುತ್ತೇವೆ. ಆದರೆ ನಂತರ ಅದರ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಮಲಗುವ ಮುನ್ನ ಅದನ್ನು ಹಾಗೆಯೇ ಬಿಡುತ್ತೇವೆ. ಈ ಅಭ್ಯಾಸವು ಕೂದಲಿನ ಕಿರುಚೀಲಗಳಿಗೆ ಹಾನಿಕಾರಕವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.

ಹೆಚ್ಚುವರಿಯಾಗಿ ಸಿಕ್ಕು ಬಿದ್ದ ಕೂದಲಿನೊಂದಿಗೆ ಮಲಗುವುದು (ಸಾಮಾನ್ಯವಾಗಿ ಗಾಳಿಯಿಂದಾಗಿ) ಮತ್ತಷ್ಟು ಗಂಟು ಬೀಳುವುದು ಹಾಗೂ ಸಂಭಾವ್ಯ ತುಂಡಾಗುವಿಕೆಗೆ ಕಾರಣವಾಗಬಹುದು. ಇದರಿಂದ ಮಲಗುವ ಮೊದಲು ನಿಮ್ಮ ಕೂದಲನ್ನು ಬಾಚಿಕೊಳ್ಳುವುದು ಉತ್ತಮ. ಹೀಗೆ ಮಾಡುವುದರಿಂದ ನೆತ್ತಿಯ ಮೇಲೆ ಸಂಗ್ರಹವಾದ ಯಾವುದೇ ಬೆವರು ಒಣಗಲು ಕೂಡ ಸಹಾಯ ಮಾಡುತ್ತದೆ. ಕೂದಲಿನ ಕಿರು ಚೀಲಗಳಿಗೆ ಹಾನಿಯಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಸೌಂದರ್ಯ ತಜ್ಞರು ವಿವರಿಸುತ್ತಾರೆ.
ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನೂ ಓದಿ:
- ಕೆಲವು ಆರೋಗ್ಯಕರ ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸಿದರೆ ಅನಾರೋಗ್ಯಕ್ಕೆ ಕಾರಣವಾಗುತ್ತೆ: ತಜ್ಞರ ಎಚ್ಚರಿಕೆ
- ನೀವು ಪ್ರತಿನಿತ್ಯ ಸಿಹಿ ಪದಾರ್ಥಗಳನ್ನು ಸೇವಿಸುತ್ತೀರಾ? ಹೈಬಿಪಿ, ಹೃದಯ ಕಾಯಿಲೆ ಅಪಾಯ: ತಜ್ಞರು ತಿಳಿಸುವುದೇನು?
- ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಏಕೆ ಕಾಣಿಸಿಕೊಳ್ಳುತ್ತವೆ ಗೊತ್ತೇ? ಪರಿಹಾರ ಪಡೆಯುವುದು ಹೇಗೆ?
- ನಿಮ್ಮ ದೇಹದಲ್ಲಿ ಪದೇ ಪದೇ ಕಾಣಿಸುವ ನೋವುಗಳು ಕ್ಯಾನ್ಸರ್‌ನ ಚಿಹ್ನೆಗಳೇ? ನಿರ್ಲಕ್ಷಿಸಿದರೆ ಅಪಾಯ- ವೈದ್ಯರ ಎಚ್ಚರಿಕೆ
- ಮಾನ್ಸೂನ್ನಲ್ಲಿ ಕೀಲು ನೋವು ಏಕೆ ಹೆಚ್ಚಾಗುತ್ತದೆ? ಈ ಸಮಸ್ಯೆಗೆ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ವೈದ್ಯರ ಸಲಹೆ

