ETV Bharat / lifestyle

ಕೆಲವು ಆರೋಗ್ಯಕರ ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸಿದರೆ ಅನಾರೋಗ್ಯಕ್ಕೆ ಕಾರಣವಾಗುತ್ತೆ: ತಜ್ಞರ ಎಚ್ಚರಿಕೆ

ಕೆಲವು ಆರೋಗ್ಯಕರ ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸುತ್ತೀರಾ? ಈ ಸಣ್ಣ ತಪ್ಪುಗಳಿಂದ ದೇಹದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

Do not reheat food repeatedly  Harmful to health  Is reheating foods good  ಆಹಾರ ಮತ್ತೆ ಬಿಸಿ ಮಾಡುವುದರ ಪರಿಣಾಮಗಳು
ಆಹಾರ ಮತ್ತೆ ಬಿಸಿ ಮಾಡುವುದರ ಪರಿಣಾಮಗಳು - ಸಾಂದರ್ಭಿಕ ಚಿತ್ರ (Getty Images)
author img

By ETV Bharat Lifestyle Team

Published : July 7, 2026 at 5:19 PM IST

3 Min Read
Choose ETV Bharat

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಸಾಕಷ್ಟು ಆರೋಗ್ಯ ಪ್ರಜ್ಞೆ ಹೊಂದಿದ್ದಾರೆ. ಆರೋಗ್ಯಕರ ಆಹಾರ ತಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ. ಆದರೆ, ಆಗಾಗ್ಗೆ ತಿಳಿಯದೇ ಮಾಡುವಂತಹ ಚಿಕ್ಕ ಚಿಕ್ಕ ತಪ್ಪುಗಳು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಂತಹ ಕೆಲವು ತಪ್ಪುಗಳು ಅಂದ್ರೆ, ಆರೋಗ್ಯಕರ ಆಹಾರವನ್ನು ಪದೇ ಪದೆ ಮತ್ತೆ ಬಿಸಿ ಮಾಡುವುದು. ಅನೇಕರು ಜನರು ತಮ್ಮ ಸಮಯವನ್ನು ಉಳಿಸಲು ಸಾಮಾನ್ಯವಾಗಿ ಉಳಿದ ಆಹಾರವನ್ನು ಮತ್ತೆ ಬಿಸಿ ಮಾಡುತ್ತಾರೆ. ಮತ್ತೆ ಮತ್ತೆ ಬಿಸಿ ಮಾಡಿದ ಬಳಿಕ ಪೌಷ್ಠಿಕಾಂಶದ ಮೌಲ್ಯ ಕಡಿಮೆಯಾಗುವ ಹಾಗೂ ಹಾನಿಕಾರಕ ರಾಸಾಯನಿಕ ಬದಲಾವಣೆಗಳಿಗೆ ಒಳಗಾಗುವ ಕೆಲವು ಆಹಾರಗಳಿವೆ.

ಈ ರೀತಿ ಒಮ್ಮೆ ಬೇಯಿಸಿದ ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅಪಾಯ ಉಂಟು ಮಾಡುತ್ತದೆ. ಪ್ರೋಟೀನ್, ನೈಟ್ರೇಟ್‌ಗಳು ಹಾಗೂ ಕೊಬ್ಬು ಸಮೃದ್ಧವಾಗಿರುವ ಆಹಾರವನ್ನು ಪದೇ ಪದೆ ಬಿಸಿ ಮಾಡುವುದನ್ನು ಆರೋಗ್ಯಕರವೆಂದು ಪರಿಗಣಿಸಲಾಗುವುದಿಲ್ಲ. ಯಾವ ಆರೋಗ್ಯಕರ ಆಹಾರ ಪದಾರ್ಥಗಳನ್ನು ಮತ್ತೆ ಬಿಸಿ ಮಾಡಬಾರದು ಎಂಬುದನ್ನು ಇಲ್ಲಿ ಅರಿತುಕೊಳ್ಳೋಣ.

Do not reheat food repeatedly  Harmful to health  Is reheating foods good  ಆಹಾರ ಮತ್ತೆ ಬಿಸಿ ಮಾಡುವುದರ ಪರಿಣಾಮಗಳು
ಆಹಾರ ಮತ್ತೆ ಬಿಸಿ ಮಾಡುವುದರ ಪರಿಣಾಮಗಳು - ಸಾಂದರ್ಭಿಕ ಚಿತ್ರ (Getty Images)

ಪಾಲಕ್, ಹಸಿರು ಸೊಪ್ಪು & ತರಕಾರಿಗಳು: ಪಾಲಕ್ ಹಾಗೂ ಇತರ ಹಸಿರು ಸೊಪ್ಪು ಹಾಗೂ ತರಕಾರಿಗಳು ನೈಟ್ರೇಟ್‌ಗಳನ್ನು ಹೊಂದಿರುತ್ತವೆ. ಪದೇ ಪದೇ ಬಿಸಿ ಮಾಡುವುದರಿಂದ ಈ ನೈಟ್ರೇಟ್‌ಗಳನ್ನು ದೇಹಕ್ಕೆ ಹಾನಿಕಾರಕ ಸಂಯುಕ್ತಗಳಾಗಿ ಪರಿವರ್ತಿಸಬಹುದು. ಅಡುಗೆ ಮಾಡಿದ ನಂತರ ತಾಜಾ ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ಸೇವಿಸಲು ಪ್ರಯತ್ನಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ.

ಅನ್ನವನ್ನು ಮತ್ತೆ ಮತ್ತೆ ಬಿಸಿ ಮಾಡಬೇಡಿ: ರೈಸ್​ ಅನ್ನು ಮತ್ತೆ ಬಿಸಿ ಮಾಡುವುದು ಕೆಲವು ಜನರಿಗೆ ಸಾಮಾನ್ಯ ಅಭ್ಯಾಸವಾಗಿದೆ. ಆದರೆ, ಸರಿಯಾಗಿ ಸಂಗ್ರಹಿಸದಿದ್ದರೆ ಬ್ಯಾಸಿಲಸ್ ಸೀರಿಯಸ್ ನಂತಹ ಬ್ಯಾಕ್ಟೀರಿಯಾಗಳು ಅದರಲ್ಲಿ ಬೆಳೆಯಬಹುದು. ಇವುಗಳು ಆಹಾರ ವಿಷಕ್ಕೆ ಕಾರಣವಾಗಬಹುದು. ಉಳಿದ ಅನ್ನವನ್ನು ತಕ್ಷಣ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ ಹಾಗೂ ಅಗತ್ಯವಿರುವ ಪ್ರಮಾಣದಲ್ಲಿ ಮಾತ್ರ ಮತ್ತೆ ಬಿಸಿ ಮಾಡಬೇಕು ಎನ್ನುವುದು ತಜ್ಞರ ಅಭಿಪ್ರಾಯ.

Do not reheat food repeatedly  Harmful to health  Is reheating foods good  ಆಹಾರ ಮತ್ತೆ ಬಿಸಿ ಮಾಡುವುದರ ಪರಿಣಾಮಗಳು
ಆಹಾರ ಮತ್ತೆ ಬಿಸಿ ಮಾಡುವುದರ ಪರಿಣಾಮಗಳು - ಸಾಂದರ್ಭಿಕ ಚಿತ್ರ (Getty Images)

ಮೊಟ್ಟೆಗಳು: ಮೊಟ್ಟೆಗಳಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಬೇಯಿಸಿದ ಮೊಟ್ಟೆಗಳನ್ನು ಮತ್ತೆ ಮತ್ತೆ ಬಿಸಿ ಮಾಡುವುದರಿಂದ ಅವುಗಳ ರುಚಿ ಹಾಗೂ ಸುವಾನೆ ಬದಲಾಗುತ್ತದೆ. ಹೆಚ್ಚುವರಿಯಾಗಿ ದೀರ್ಘಕಾಲದವರೆಗೆ ಸಂಗ್ರಹಿಸಲಾದ ಮೊಟ್ಟೆಗಳನ್ನು ಸೇವಿಸುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆಯ ಅಪಾಯವಿರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಚಿಕನ್ ಮತ್ತು ಇತರ ಮಾಂಸಗಳು: ಚಿಕನ್ ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಪದೇ ಪದೆ ಬಿಸಿ ಮಾಡುವುದರಿಂದ ಪ್ರೋಟೀನ್ ರಚನೆ ಬದಲಾಗುತ್ತದೆ. ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಚಿಕನ್ ಒಮ್ಮೆ ಮಾತ್ರ ಮತ್ತೆ ಬಿಸಿ ಮಾಡಿ ತಿನ್ನುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಚಿಕನ್ ಮತ್ತು ಇತರ ಮಾಂಸಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸುವುದು ಸರಿಯಲ್ಲ ಎಂದು ತಜ್ಞರು ತಿಳಿಸುತ್ತಾರೆ.

ಎಣ್ಣೆಯುಕ್ತ ಆಹಾರಗಳು: ಎಣ್ಣೆಯಲ್ಲಿ ಬೇಯಿಸಿದ ಆಹಾರವನ್ನು ಪದೇ ಪದೆ ಬಿಸಿ ಮಾಡುವುದರಿಂದ ಎಣ್ಣೆಯ ಗುಣಮಟ್ಟ ಕುಸಿಯುತ್ತದೆ. ಹಾನಿಕಾರಕ ಪದಾರ್ಥಗಳು ರೂಪುಗೊಳ್ಳಲು ಕಾರಣವಾಗಬಹುದು. ಅಂತಹ ಆಹಾರವನ್ನು ಆಗಾಗ್ಗೆ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆಗಾಗ್ಗೆ ಅನಾರೋಗ್ಯ ಕಾಡುತ್ತದೆ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.

ಆಲೂಗಡ್ಡೆ: ಬೇಯಿಸಿದ ಆಲೂಗಡ್ಡೆ ಕೋಣೆಯ ಉಷ್ಣಾಂಶದಲ್ಲಿ ದೀರ್ಘಕಾಲದವರೆಗೆ ಬಿಡುವುದು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು. ಇವುಗಳನ್ನು ಮತ್ತೆ ಮತ್ತೆ ಬಿಸಿ ಮಾಡುವ ಮೊದಲು ಸರಿಯಾದ ಸಂಗ್ರಹಣೆ ಅತ್ಯಗತ್ಯವಾಗಿದೆ. ಆಲೂಗಡ್ಡೆಯಿಂದ ಅಡುಗೆಗಳನ್ನು ಸೀಮಿತ ಪ್ರಮಾಣದಲ್ಲಿ ತಯಾರಿಸಿ ಸೇವನೆ ಮಾಡಬೇಕಾಗುತ್ತದೆ.

ಅಣಬೆಗಳು: ಅಣಬೆಗಳಲ್ಲಿನ ಪ್ರೋಟೀನ್‌ಗಳು ಬೇಗನೆ ಹಾಳಾಗಬಹುದು. ಅವುಗಳನ್ನು ಮತ್ತೆ ಬಿಸಿ ಮಾಡುವುದರಿಂದ ಜೀರ್ಣಕಾರಿ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು. ಹೊಸದಾಗಿ ಬೇಯಿಸಿದ ಅಣಬೆಗಳನ್ನು ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಆಹಾರವನ್ನು ಪದೇ ಪದೇ ಬಿಸಿ ಮಾಡುವಾಗ ಈ ವಿಷಯಗಳನ್ನು ಮರೆಯದಿರಿ:

  1. ಕೋಣೆಯ ಉಷ್ಣಾಂಶದಲ್ಲಿ ಆಹಾರವನ್ನು ದೀರ್ಘಕಾಲ ಇಡಬೇಡಿ.
  2. ಎರಡು ಗಂಟೆಗಳ ಒಳಗೆ ಉಳಿದ ಆಹಾರವನ್ನು ರೆಫ್ರಿಜರೇಟರ್‌ನಲ್ಲಿಡಿ.
  3. ಆಹಾರವನ್ನು ಪದೇ ಪದೆ ಬಿಸಿ ಮಾಡುವುದನ್ನು ತಪ್ಪಿಸಿ.
  4. ನಿಮಗೆ ಅಗತ್ಯವಿರುವಷ್ಟು ಆಹಾರವನ್ನು ಮಾತ್ರ ಮತ್ತೆ ಬಿಸಿ ಮಾಡಿ.
  5. ಬ್ಯಾಕ್ಟೀರಿಯಾ ನಾಶಮಾಡಲು ಆಹಾರವನ್ನು ಸಂಪೂರ್ಣವಾಗಿ ಬಿಸಿ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಾದರೆ ಪರಿಣಿತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇವುಗಳನ್ನೂ ಓದಿ:

  1. ನೀವು ಪ್ರತಿನಿತ್ಯ ಸಿಹಿ ಪದಾರ್ಥಗಳನ್ನು ಸೇವಿಸುತ್ತೀರಾ? ಹೈಬಿಪಿ, ಹೃದಯ ಕಾಯಿಲೆ ಅಪಾಯ: ತಜ್ಞರು ತಿಳಿಸುವುದೇನು?
  2. ಫಿಟ್ನೆಸ್ ನೆಪದಲ್ಲಿ ಮಲ್ಟಿವಿಟಮಿನ್‌ ಮಾತ್ರೆ ಸೇವಿಸುತ್ತೀರಾ? ಈ ತಪ್ಪುಗಳಿಂದ ಯಕೃತ್ತು ಜೊತೆಗೆ ಕಿಡ್ನಿ ಹಾನಿ: ವೈದ್ಯರ ಎಚ್ಚರಿಕೆ
  3. ನಿಮ್ಮ ದೇಹದಲ್ಲಿ ಪದೇ ಪದೇ ಕಾಣಿಸುವ ನೋವುಗಳು ಕ್ಯಾನ್ಸರ್‌ನ ಚಿಹ್ನೆಗಳೇ? ನಿರ್ಲಕ್ಷಿಸಿದರೆ ಅಪಾಯ- ವೈದ್ಯರ ಎಚ್ಚರಿಕೆ
  4. ಮಾನ್ಸೂನ್​ನಲ್ಲಿ ಕೀಲು ನೋವು ಏಕೆ ಹೆಚ್ಚಾಗುತ್ತದೆ? ಈ ಸಮಸ್ಯೆಗೆ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ವೈದ್ಯರ ಸಲಹೆ
  5. ದಿನಕ್ಕೆ ಒಂದು ಬಾರಿ ಮದ್ಯಪಾನ ಮಾಡುವುದರಿಂದ ಹೃದಯಾಘಾತದ ಅಪಾಯ: ಸಂಶೋಧನೆಯಿಂದ ಆಘಾತಕಾರಿ ಅಂಶಗಳು ಬಹಿರಂಗ