ಟೇಸ್ಟಿ ಟೇಸ್ಟಿ ಗರಿಗರಿಯಾದ ಹಾಗಲಕಾಯಿ ಪಕೋಡ ತಯಾರಿಸೋದು ಅಷ್ಟೇ ಸುಲಭ ನೋಡಿ
ಈರುಳ್ಳಿ ಬಜ್ಜಿ ಮಾಡುವ ಬದಲು ಹಾಗಲಕಾಯಿ ಪಕೋಡ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.


Published : October 15, 2025 at 7:51 PM IST
ಬಜ್ಜಿ ಅಥವಾ ಪಕೋಡ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತವೆ. ಸಂಜೆಯ ತಣ್ಣನೆಯ ವಾತಾವರಣದಲ್ಲಿ ಬಿಸಿ ಚಹಾ ಇಲ್ಲವೇ ಕಾಫಿಯೊಂದಿಗೆ ಗರಿಗರಿಯಾದ ಬಜ್ಜಿ ಅದ್ಭುತ ರುಚಿ ನೀಡುತ್ತದೆ. ಹಾಗೆಯೇ ಅನೇಕರು ಸಾಮಾನ್ಯವಾಗಿ ಈರುಳ್ಳಿ ಬಜ್ಜಿಗಳನ್ನು ತಿನ್ನುತ್ತಾರೆ. ದಿನನಿತ್ಯದ ತಿಂಡಿಗಳನ್ನು ತಿನ್ನುವುದರ ಜೊತೆಗೆ ಸ್ವಲ್ಪ ವೈವಿಧ್ಯತೆಯಿಂದ ತಿಂಡಿ ತಯಾರಿಸಲು ಹಾಗಲಕಾಯಿ ಬಜ್ಜಿ ಮಾಡಬಹುದು.
ಹಾಗಲಕಾಯಿ ಪಲ್ಯ ಅಥವಾ ಕರಿ ತಿನ್ನುವುದು ಕಷ್ಟ ಎಂದುಕೊಂಡಿದ್ದರೆ ಬಜ್ಜಿ ಮಾಡಿ ತಿನ್ನಬಹುದು. ಹಾಗಲಕಾಯಿಯೊಂದಿಗೆ ತುಂಬಾ ರುಚಿಕರವಾದ ಗರಿಗರಿಯಾದ ಬಜ್ಜಿಗಳನ್ನು ಮಾಡಬಹುದು. ಇವು ಕಹಿಯಾಗಿರದೇ ಮಕ್ಕಳೂ ಸಹ ಇಷ್ಟಪಟ್ಟು ತಿನ್ನುತ್ತಾರೆ.

ಹಾಗಲಕಾಯಿ ಪಕೋಡ ಬೇಕಾಗುವ ಸಾಮಗ್ರಿ:
- ಹಾಗಲಕಾಯಿ - ಅರ್ಧ ಕೆ.ಜಿ
- ಉಪ್ಪು - ರುಚಿಗೆ ತಕ್ಕಷ್ಟು
- ಕಡಲೆ ಹಿಟ್ಟು - 2 ಟೀಸ್ಪೂನ್
- ಅಕ್ಕಿ ಹಿಟ್ಟು - 2 ಟೀಸ್ಪೂನ್
- ಮೆಕ್ಕೆಜೋಳದ ಹಿಟ್ಟು - 2 ಟೀಸ್ಪೂನ್
- ಮೆಣಸಿನ ಪುಡಿ - 1 ಟೀಸ್ಪೂನ್
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
- ಜೀರಿಗೆ ಪುಡಿ - ಅರ್ಧ ಟೀಸ್ಪೂನ್
- ಇಂಗು - ¼ ಟೀಸ್ಪೂನ್
- ಅರಿಶಿನ - ¼ ಟೀಸ್ಪೂನ್
- ಹಸಿ ಮೆಣಸಿನಕಾಯಿ - 2
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಕರಿಬೇವು - 3 ಹಿಡಿಷ್ಟು

ಹಾಗಲಕಾಯಿ ಪಕೋಡ ತಯಾರಿಸುವ ವಿಧಾನ:
- ಮೊದಲು ಹಾಗಲಕಾಯಿಯನ್ನು ಸ್ವಚ್ಛವಾಗಿ ತೊಳೆದು, ಒಣಗಿಸಿ ಒರೆಸಿ ತುದಿಗಳನ್ನು ಕತ್ತರಿಸಬೇಕು. ಬಳಿಕ ಹಾಗಲಕಾಯಿಯ ಗಾತ್ರಕ್ಕೆ ಅನುಗುಣವಾಗಿ ಎರಡು ಇಲ್ಲವೇ ಮೂರು ಭಾಗಗಳಾಗಿ ಕತ್ತರಿಸಿಕೊಳ್ಳಿ.
- ಈಗ ಒಂದು ಭಾಗವನ್ನು ತೆಗೆದುಕೊಂಡು ಮಧ್ಯದಲ್ಲಿ ಕತ್ತರಿಸಿ. ಅದರಲ್ಲಿರುವ ಬೀಜಗಳನ್ನು ತೆಗೆದುಹಾಕಬೇಕು.

- ಬಳಿಕ ಇವುಗಳನ್ನು ಉದ್ದವಾಗಿ ಮತ್ತು ತೆಳುವಾಗಿ ಕತ್ತರಿಸಿ ಒಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ. ಉಳಿದ ಎಲ್ಲಾ ಹಾಗಲಕಾಯಿ ತುಂಡುಗಳನ್ನು ಅದೇ ರೀತಿಯಲ್ಲಿ ಕತ್ತರಿಸಿ ಬಟ್ಟಲಿನಲ್ಲಿ ಹಾಕಬೇಕು.
- ಹಾಗಲಕಾಯಿ ತುಂಡುಗಳನ್ನು ರುಚಿಗೆ ತಕ್ಕಷ್ಟು ಉಪ್ಪು ಮಿಶ್ರಣವಾಗುವವರೆಗೆ ಬೆರೆಸಿ, ಮುಚ್ಚಿ ಸ್ವಲ್ಪ ಹೊತ್ತು ಪಕ್ಕಕ್ಕೆ ಇಡಬೇಕು.
- ಈ ಮಧ್ಯೆ ಹಸಿಮೆಣಸಿನಕಾಯಿ, ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಕತ್ತರಿಸಿ ಪಕ್ಕಕ್ಕೆ ಇಡಿ.
- 10 ನಿಮಿಷಗಳ ಬಳಿಕ ಹಾಗಲಕಾಯಿ ತುಂಡುಗಳನ್ನು ಕೈಗಳಿಂದ ಪುಡಿಮಾಡಿ ಇನ್ನೊಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ. ಹೀಗೆ ಮಾಡುವುದರಿಂದ ಅವುಗಳಿಂದ ರಸ ಬಿಡುಗಡೆಯಾಗುತ್ತದೆ. ಇದು ಹಾಗಲಕಾಯಿ ತುಂಡುಗಳು ಕಹಿಯಾಗುವುದನ್ನು ತಡೆಯುತ್ತದೆ.

- ಈ ರೀತಿ ಎಲ್ಲಾ ತುಂಡುಗಳಿಂದ ರಸವನ್ನು ತೆಗೆದು ಒಂದು ಬಟ್ಟಲಿಗೆ ಹಾಕಬೇಕು. ಬಳಿಕ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್‌ಫ್ಲೋರ್, ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಅರಿಶಿನ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವು ಸೇರಿಸಿ ಮತ್ತು ಎಲ್ಲಾ ಪದಾರ್ಥಗಳು ಒಂದು ಹನಿ ನೀರು ಇಲ್ಲದೆ ಮಿಶ್ರಣವಾಗುವವರೆಗೆ ಮಿಶ್ರಣ ಮಾಡಿಕೊಳ್ಳಿ.
- ಬಜ್ಜಿಗಳನ್ನು ತಯಾರಿಸಲು ಹಿಟ್ಟಿನ ಅಳತೆ ಸರಿಯಾಗಿದ್ದ ಬಳಿಕ ಅದಕ್ಕೆ ಉಪ್ಪು ಸಾಕಾಗದಿದ್ದರೆ, ನೀವು ಸ್ವಲ್ಪ ಹೆಚ್ಚು ಸೇರಿಸಬಹುದು. ಹಿಟ್ಟನ್ನು ಬೆರೆಸಿದ ಬಳಿಕ ಅದು ತುಂಬಾ ಜಿಗುಟಾಗಿ ಕಂಡುಬಂದರೆ ಇನ್ನೂ ಸ್ವಲ್ಪ ಹಿಟ್ಟನ್ನು ಸೇರಿಸಬಹುದು.
- ಇದೀಗ ಒಲೆ ಆನ್ ಮಾಡಿ ಕಡಾಯಿ ಇಟ್ಟು ಆಳವಾಗಿ ಕರಿಯಲು ಸಾಕಷ್ಟು ಎಣ್ಣೆಯನ್ನು ಹಾಕಿ ಮತ್ತು ಎಣ್ಣೆಯನ್ನು ಕಾಯಲು ಬಿಡಿ. ಮಿಶ್ರಣ ಮಾಡಿದ ಬಜ್ಜಿ ಹಿಟ್ಟನ್ನು ಅನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಎಣ್ಣೆಯಲ್ಲಿ ಹಾಕಿ ಕರಿಯಬೇಕು
- ಕಡಾಯಿಯ ಗಾತ್ರಕ್ಕೆ ತಕ್ಕಂತೆ ಬಜ್ಜಿಗಳನ್ನು ಹಾಕಿದ ಬಳಿಕ ಒಲೆಯನ್ನು ಜ್ವಾಲೆಯನ್ನು ಮಧ್ಯಮ ಉರಿಯಲ್ಲಿ ಇರಿಸಿ ಮತ್ತು ಬಜ್ಜಿಗಳು ಕಂದು ಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ ಬಳಿಕ ಚಮಚದೊಂದಿಗೆ ಎರಡೂ ಬದಿಗಳನ್ನು ತಿರುಗಿಸಿ ಕರಿಯಬೇಕು.
- ಚೆನ್ನಾಗಿ ಕರಿದ ಬಳಿಕ ಅದನ್ನು ತಟ್ಟೆಯಲ್ಲಿ ತೆಗೆಯಬೇಕು, ಈಗ ತುಂಬಾ ರುಚಿಯಾದ ಹಾಗಲಕಾಯಿ ಪಕೋಡ ಸವಿಯಲು ಸಿದ್ಧ. ಈ ಪಕೋಡ ಮಾಡುವ ವಿಧಾನ ನಿಮಗೆ ಇಷ್ಟವಾದರೆ ಪ್ರಯತ್ನಿಸಬೇಕಾಗುತ್ತದೆ.

ಇವುಗಳನ್ನೂ ಓದಿ: ಹೊಸ ಸ್ನ್ಯಾಕ್ಸ್ ರೆಸಿಪಿ: ಪಾಲಕ್ ಮೆಂತ್ಯೆ ಪಕೋಡ ತಯಾರಿಸುವುದು ಹೇಗೆ ಗೊತ್ತೇ?
ಅತ್ಯಂತ ರುಚಿಕರ & ಗರಿಗರಿಯಾದ ಬ್ರೆಡ್ ಮಂಚೂರಿಯನ್: ಮಕ್ಕಳಿಗೆ ತುಂಬಾ ಅಚ್ಚುಮೆಚ್ಚು.. ಮಾಡುವುದು ಹೇಗೆ ಗೊತ್ತಾ?

