ಕಾಗದದ ಮೇಲೆ ಇಲ್ಲವೇ ಡಿಜಿಟಲ್ ಪರದೆ ಮೇಲಿನ ಓದುವಿಕೆ: ಯಾವುದು ಹೆಚ್ಚು ನೆನಪುಳಿಯುತ್ತೆ?
ಇಂದಿನ ಯುವ ಸಮುದಾಯವು ಕಾಗದದ ಮೇಲೆ ಹಾಗೂ ಡಿಜಿಟಲ್ ಪರದೆಯ ಮೇಲೆ ವಿಷಯಗಳನ್ನು ಓದುತ್ತಿದ್ದಾರೆ. ಇವೆರಡರಲ್ಲಿ ಯಾವ ರೀತಿಯ ಓದುವಿಕೆ ಅತಿಹೆಚ್ಚು ಸಮಯದವರೆಗೆ ನೆನಪಿನಲ್ಲಿ ಉಳಿಯುತ್ತೆ ಎಂಬುದರ ಬಗ್ಗೆ ತಿಳಿಯೋಣ.


Published : November 6, 2025 at 10:14 PM IST
ಒಂದು ಮಾಹಿತಿಯನ್ನು ಕಾಗದದ ಮೇಲೆ ಓದುವುದು ಇಲ್ಲವೇ ಡಿಜಿಟಲ್ ಪರದೆಯ ಮೇಲೆ ಓದುವುದು ಎಂಬುದರ ಆಧಾರದ ಮೇಲೆ ವಿಷಯದ ಸಾರವನ್ನು ಅರ್ಥಮಾಡಿಕೊಳ್ಳುವುದು ಹಾಗೂ ನೆನಪಿಟ್ಟುಕೊಳ್ಳುವುದರಲ್ಲಿ ವ್ಯತ್ಯಾಸವಿದೆ. ಸಂಶೋಧನೆಯೊಂದು ಇದನ್ನೇ ನಿಜ ಎಂದು ಹೇಳುತ್ತದೆ. ಇದನ್ನು ಸ್ಕ್ರೀನ್ ಕೀಳರಿಮೆ ಪರಿಣಾಮ ಎನ್ನುತ್ತಾರೆ. ಈ ರೀತಿಯಲ್ಲಿ ಕಾಗದದ ಮೇಲೆ ಓದಿದರೆ ಅದನ್ನು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆಯೇ ಅಥವಾ ಪರದೆಯ ಮೇಲಿನ ಓದಿದ ವಿಷಯವು ನೆನಪಿನಲ್ಲಿ ಉಳಿಯುತ್ತದೆಯೇ?
ಕಾಗದದ ಮೇಲಿನ ಹಾಗೂ ಡಿಜಿಟಲ್ ರೂಪದಲ್ಲಿ ಓದಿದರೆ ಒಂದೇ ವಿಷಯವನ್ನು ನೆನಪಿಸಿಕೊಳ್ಳುವಲ್ಲಿ ವ್ಯತ್ಯಾಸವಿದೆ. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಡಿಜಿಟಲ್ ರೂಪದಲ್ಲಿ ಓದಿದರೆ ವಿಷಯವನ್ನು ಅರ್ಥಮಾಡಿಕೊಳ್ಳುವಲ್ಲಿ ಹಾಗೂ ನೆನಪಿಟ್ಟುಕೊಳ್ಳುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚು. ಇದರಿಂದ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹಿಂದುಳಿಯುವ ಅಪಾಯವಿದೆ ಎಂದು ನರ ಚಿಕಿತ್ಸಾ ತಜ್ಞರು ಹೇಳುತ್ತಾರೆ. ಕಾಗದದ ಪುಟಗಳ ಬದಲಿಗೆ ಪರದೆಯ ಮೇಲೆ ಓದುವಾಗ ಮೆದುಳು ಮಾಹಿತಿಯನ್ನು ಸೆರೆಹಿಡಿಯುವ ವಿಧಾನ ಬದಲಾಗುತ್ತದೆ.

ಪುಸ್ತಕ ಓದುವುದರ ಹಿಂದಿನ ಸಕಾರಾತ್ಮಕ ಅಂಶವೇನು?: ಆಕ್ಸ್‌ಫರ್ಡ್ ಲರ್ನಿಂಗ್ ಅಧ್ಯಯನವು, ಪುಸ್ತಕದಲ್ಲಿ ಮತ್ತು ಪರದೆಯಲ್ಲಿ ಒಂದೇ ವಿಷಯವನ್ನು ಓದಿದ ಜನರಿಗೆ ಪರೀಕ್ಷೆಯನ್ನು ನೀಡಿದಾಗ ಅದನ್ನು ಪರದೆಯ ಮೇಲೆ ಓದಿದವರು ಕಡಿಮೆ ಅಂಕಗಳನ್ನು ಗಳಿಸುತ್ತಾರೆ ಎಂದು ಹೇಳುತ್ತದೆ. ಈ ವ್ಯತ್ಯಾಸಕ್ಕೆ ಸ್ಕ್ರೀನ್ ಕೀಳರಿಮೆ ಕಾರಣ. ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಪರದೆಯಲ್ಲಿ ಓದಿದಾಗ ಏನನ್ನಾದರೂ ಅರ್ಥಮಾಡಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಅಸಮರ್ಥತೆಯನ್ನು ನರವಿಜ್ಞಾನವು ಸ್ಕ್ರೀನ್ ಕೀಳರಿಮೆ ಎನ್ನುತ್ತದೆ.
ಇದಕ್ಕೆ ಕಾರಣವೇನು?: ಪರದೆಯ ಮೇಲೆ ಓದುವಾಗ ಸಂದೇಶಗಳು ಮತ್ತು ಅಧಿಸೂಚನೆಗಳು ಬರುತ್ತವೆ. ನೀವು ಬಯಸಿದಷ್ಟು ಬಾರಿ ಸ್ಕ್ರಾಲ್ ಮಾಡಬೇಕು. ವಿಷಯವನ್ನು ಅರ್ಥ ಮಾಡಿಕೊಳ್ಳಲು ಹಾಗೂ ನೆನಪಿಟ್ಟುಕೊಳ್ಳುವಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮನಸ್ಸಿನ ನಕ್ಷೆ ರಚನೆಗೆ ಅಡ್ಡಿ ಉಂಟಾಗುತ್ತದೆ. ಪುಸ್ತಕದಲ್ಲಿ ಅಥವಾ ಕಾಗದದಲ್ಲಿ ಓದುವಾಗ ಮಾಹಿತಿಯನ್ನು ಅದರಲ್ಲಿ ಇಡುವ ವಿಧಾನವು ಪುಟಗಳನ್ನು ತಿರುಗಿಸುವುದರಿಂದ ಮೆದುಳಿಗೆ ಮಾಹಿತಿಯನ್ನು ಹೊರತೆಗೆಯಲು ಹಾಗೂ ಪರಿಷ್ಕರಿಸಲು ಅಗತ್ಯವಿರುವ ಸಮಯವನ್ನು ಒದಗಿಸುತ್ತದೆ. ಪೇಪರ್ ಮೇಲೆ ಓದುವಾಗ ಅರ್ಥವಾಗದಿದ್ದರೆ, ನಿಧಾನವಾಗಿ ಓದುತ್ತಾರೆ ಹಾಗೂ ಹಿಂತಿರುಗುತ್ತಾರೆ. ಪರದೆಯ ಮೇಲೆ ಓದುವುದನ್ನು ಹೊರತುಪಡಿಸಿ, ಓದುವುದರ ಬಗ್ಗೆ ಗಮನಿಸುವ ಹಾಗೂ ವಿಶ್ಲೇಷಣಾತ್ಮಕ ರೀತಿಯಲ್ಲಿ ಯೋಚಿಸುವುದಿಲ್ಲ.
ಯಾರು ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ?: ನಾವು ಓದುತ್ತಿದ್ದಂತೆ ಮೆದುಳಿನಲ್ಲಿ ಹೊಸ ಸರ್ಕ್ಯೂಟ್‌ಗಳು ರೂಪುಗೊಳ್ಳುತ್ತವೆ. ದೃಷ್ಟಿ, ಶ್ರವಣ ಮತ್ತು ಭಾವನೆಗಳನ್ನು ನಿಯಂತ್ರಿಸುವ ಪ್ರದೇಶಗಳ ನಡುವೆ ಹೊಸ ಸಂಪರ್ಕಗಳು ರೂಪುಗೊಳ್ಳುತ್ತವೆ. ಹಾಗಾಗಿ ಕಾಲಾನಂತರದಲ್ಲಿ ಸಂಕೀರ್ಣ ವಿಷಯಗಳನ್ನು ಅರ್ಥಮಾಡಿಕೊಳ್ಳಬಹುದು.
ಪರದೆಯಲ್ಲಿ ಓದುವವರಿಗೆ ಹೋಲಿಸಿದರೆ, ಪುಸ್ತಕಗಳನ್ನು ಓದುವವರಲ್ಲಿ ಈ ಸಂಪರ್ಕಗಳು ಉತ್ತಮವಾಗಿ ರೂಪುಗೊಳ್ಳುತ್ತವೆ. ಪರದೆಯ ಕೀಳರಿಮೆ ಪರಿಣಾಮವು ಎಲ್ಲ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತದೆಯಾದರೂ, ಇದು ಮಕ್ಕಳು ಮತ್ತು ಓದುವ ಯುವಜನರ ಮೇಲೆ ಅಧಿಕ ಪರಿಣಾಮ ಉಂಟು ಮಾಡುತ್ತದೆ. ದೀರ್ಘಾವಧಿಯಲ್ಲಿ ಅದರ ಪರಿಣಾಮವು ಕೌಶಲ್ಯಗಳ ಮೇಲೂ ಪರಿಣಾಮಕಾರಿಯಾಗಿದೆ.

ಹೀಗೆ ಮಾಡೋದು ಬೆಸ್ಟ್: ಪುಸ್ತಕ ಓದುವ ಅಭ್ಯಾಸವು ಮಕ್ಕಳಲ್ಲಿ ಸೃಜನಶೀಲತೆ, ಬುದ್ಧಿವಂತಿಕೆ ಹಾಗೂ ಸಹಾನುಭೂತಿಯನ್ನು ನೀಡುತ್ತದೆ. ಇದು ಜೀವನದಲ್ಲಿ ಆರ್ಥಿಕವಾಗಿ ಯಶಸ್ವಿಯಾಗಲು ಸಹಾಯವಾಗುತ್ತದೆ. ವಿವೇಚನೆಯಿಂದ ವರ್ತಿಸುವ ಮೂಲಕ ಅವರನ್ನು ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿಡುತ್ತದೆ. ಸಾಮಾಜಿಕ ಜವಾಬ್ದಾರಿ ತಿಳಿದುಕೊಂಡು ಆಳವಾಗಿ ಹಾಗೂ ವಿಶ್ಲೇಷಣಾತ್ಮಕವಾಗಿ ಓದಿದಾಗ ಮಾತ್ರ ಈ ಪ್ರಯೋಜನಗಳನ್ನು ಪಡೆಯಬಹುದು.
ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿ: ಮನೆಯಲ್ಲಿ ಭೌತಿಕ ರೂಪದಲ್ಲಿ ಪುಸ್ತಕಗಳಿದ್ದರೆ ಮಕ್ಕಳು ಅವುಗಳನ್ನು ಓದಲು ಗಮನ ನೀಡುತ್ತಾರೆ. ಇದು ಗ್ರಹಿಕೆ ಹಾಗೂ ಸ್ಮರಣೆ ಅಧಿಕಗೊಳಿಸುತ್ತದೆ. ಇದರಿಂದ ಭಾಷಾ ಕೌಶಲ್ಯಗಳು ಸುಧಾರಣೆಯಾಗುತ್ತದೆ. ಮಕ್ಕಳ ಪರದೆಯ ಸಮಯವನ್ನು ಮಿತಿಗೊಳಿಸಬೇಕು. ಮನೆಯಲ್ಲಿ ದೊಡ್ಡವರು ನಿಯತಕಾಲಿಕೆಗಳು ಮತ್ತು ಪುಸ್ತಕಗಳನ್ನು ಓದಿದರೆ, ಮಕ್ಕಳು ಸಹ ಅದಕ್ಕೆ ಗಮನ ಹರಿಸುತ್ತಾರೆ. ಇದರ ಪರಿಣಾಮ ಅವರ ವೃತ್ತಿಜೀವನದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಇದನ್ನೂ ಓದಿ: ಈ ಅಭ್ಯಾಸಗಳು ನಿಮಗಿದೆಯೇ? ಗಂಡ-ಹೆಂಡತಿ ಎಷ್ಟೇ ಜಗಳವಾಡಿದರೂ ಸಂಬಂಧ ತುಂಬಾ ಗಟ್ಟಿ

