ETV Bharat / lifestyle

ಮಕರ ಸಂಕ್ರಾಂತಿ & ಏಕಾದಶಿಯ ಈ ಬಾರಿ ಒಟ್ಟಿಗೆ ಬಂದಿರುವುದು ಅಪರೂಪ: ಸಂಕ್ರಾಂತಿಗೆ ಶುಭ ಮುಹೂರ್ತ ಯಾವುದು?

ಮಕರ ಸಂಕ್ರಾಂತಿ & ಏಕಾದಶಿಯ ಈ ಬಾರಿ ಒಟ್ಟಿಗೆ ಬಂದಿರುವುದು ಅಪರೂಪವಾಗಿದೆ. ಈ ದಿನ ಸೂರ್ಯ ದೇವರನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ಬಾರಿಯ ಶುಭ ಮುಹೂರ್ತ ಯಾವುದು ಎಂಬುದನ್ನು ಈ ಸ್ಟೋರಿಯಲ್ಲಿ ವಿವರವಾಗಿ ತಿಳಿಯೋಣ.

auspicious time for Sankranti  Makar Sankranti 2026  Ekadashi 2026  ಮಕರ ಸಂಕ್ರಾಂತಿ 2026
ಮಕರ ಸಂಕ್ರಾಂತಿ (ETV Bharat)
author img

By ETV Bharat Lifestyle Team

Published : January 10, 2026 at 8:59 PM IST

2 Min Read
Choose ETV Bharat

ರಾಜ್ಯದಲ್ಲಿ 'ಮಕರ ಸಂಕ್ರಾಂತಿ 2026' ಹಬ್ಬವನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. 2026ರಲ್ಲಿ, ಮಕರ ಸಂಕ್ರಾಂತಿಯನ್ನು ಜನವರಿ 14 ರ ಬುಧವಾರದಂದು ಆಚರಿಸಲಾಗುತ್ತದೆ. ಈ ಬಾರಿ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ಕಾರಣದಿಂದಾಗಿ ಜನವರಿ 14 ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ದಿನ ನದಿಯಲ್ಲಿ ಸ್ನಾನ ಮಾಡುವುದು ಮತ್ತು ಹಣವನ್ನು ದಾನ ಮಾಡುವುದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಬಾರಿ ಮಕರ ಸಂಕ್ರಾಂತಿ ಹಾಗೂ ಏಕಾದಶಿ ಒಟ್ಟಿಗೆ ಬಂದಿರುವುದು ಶುಭ ಸಂಕೇತವಾಗಿದೆ.

ಮಕರ ಸಂಕ್ರಾಂತಿ ದಿನವೇ ಏಕಾದಶಿ: ಈ ವರ್ಷವು ಮಕರ ಸಂಕ್ರಾಂತಿಯ ದಿನದಂದು ಏಕಾದಶಿ ಕೂಡ ಬರುತ್ತದೆ. ಇದರಿಂದ ಈ ವರ್ಷ ಸೂರ್ಯ ದೇವರ ಜೊತೆಗೆ ವಿಷ್ಣು ಕೂಡ ಆಶೀರ್ವಾದವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ವರ್ಷ ಮಕರ ಸಂಕ್ರಾಂತಿಯನ್ನು ಜನವರಿ 14ರಂದು ಆಚರಿಸಲಾಗುತ್ತದೆ.

ಮಕರ ಸಂಕ್ರಾಂತಿ ಏಕೆ ಮುಖ್ಯ ಗೊತ್ತೇ?: ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಮಕರ ಸಂಕ್ರಾಂತಿಯಂದು ಸೂರ್ಯನನ್ನು ಪೂಜಿಸಲಾಗುತ್ತದೆ. ಈ ದಿನದಂದು ಸೂರ್ಯನು ಮಕರ ರಾಶಿಚಕ್ರ ಚಿಹ್ನೆಯನ್ನು ಪ್ರವೇಶಿಸಿದಾಗ ಹಗಲು ದೊಡ್ಡದು ಇರುತ್ತದೆ. ಜೊತೆಗೆ ಚಳಿ ಕ್ರಮೇಣ ಕಡಿಮೆಯಾಗುತ್ತದೆ. ಮಕರ ಸಂಕ್ರಾಂತಿ ಹೊಸ ಬೆಳೆಯ ಆಗಮನವನ್ನು ಸಂಕೇತಿಸುತ್ತದೆ. ಈ ದಿನದಿಂದ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸುತ್ತಾನೆ.

ಕಪ್ಪು ಬಣ್ಣದ ಮಹತ್ವವೇನು?: ಮಕರ ಸಂಕ್ರಾಂತಿಯ ದಿನದಂದು ಕಪ್ಪು ಬಟ್ಟೆಗಳನ್ನು ಧರಿಸುವುದು ವಾಡಿಕೆ. ಕಪ್ಪು ಬಣ್ಣವು ಅಶುಭವಲ್ಲ. ಮಂಗಳಸೂತ್ರದ ಮಣಿಗಳ ಬಣ್ಣವೂ ಕಪ್ಪು. ಮಕರ ಸಂಕ್ರಾಂತಿಯ ದಿನದಂದು ರಾತ್ರಿ ದೀರ್ಘವಾಗಿರುತ್ತದೆ. ನಂತರದ ದಿನದಿಂದ ಹಗಲು ಹೆಚ್ಚಾಗಲು ಪ್ರಾರಂಭಿಸುತ್ತದೆ. ಕಪ್ಪು ಬಟ್ಟೆಗಳನ್ನು ಧರಿಸುವ ಮೂಲಕ ಕತ್ತಲ ರಾತ್ರಿಗೆ ವಿದಾಯ ಹೇಳಲಾಗುತ್ತದೆ. ಮತ್ತೊಂದು ಪ್ರಮುಖ ವೈಜ್ಞಾನಿಕ ಕಾರಣವೆಂದರೆ ಬಟ್ಟೆಗಳ ಕಪ್ಪು ಬಣ್ಣವು ಶಾಖವನ್ನು ಹೀರಿಕೊಳ್ಳುತ್ತದೆ. ಮಕರ ಸಂಕ್ರಾಂತಿ ಶೀತದಲ್ಲಿದೆ. ಚಳಿ ದಿನಗಳಲ್ಲಿ ದೇಹವನ್ನು ಬೆಚ್ಚಗಿಡಲು ಮಕರ ಸಂಕ್ರಾಂತಿಯಂದು ಕಪ್ಪು ಬಟ್ಟೆಗಳನ್ನು ಧರಿಸುವುದು ವಾಡಿಕೆ.

ಚಳಿ ದಿನಗಳಲ್ಲಿ ಎಳ್ಳು ದೇಹಕ್ಕೆ ತುಂಬಾ ಉಪಯುಕ್ತವಾಗಿದೆ. ಇದರಿಂದ ಎಳ್ಳು ಮತ್ತು ಬೆಲ್ಲವನ್ನು ನೀಡುವ ಪದ್ಧತಿಯನ್ನು ಅನುಸರಿಸಲಾಗಿದೆ. ವರ್ಷದಲ್ಲಿ ಯಾರೊಂದಿಗಾದರೂ ಜಗಳವಾಡದೆ, ಮಕರ ಸಂಕ್ರಾಂತಿಯ ದಿನದಂದು ಎಳ್ಳು ನೀಡಿ ಎಳ್ಳನ್ನು ತೆಗೆದುಕೊಂಡು ಸಿಹಿಯಾಗಿ ಮಾತನಾಡುವುದು ವಾಡಿಕೆಯಾಗಿದೆ. ಬೇರೆಯವರು ಏನಾದರೂ ತಪ್ಪು ಮಾಡಿದ್ದರೆ ಈ ರೀತಿ 'ಕ್ಷಮಿಸಿ ಮರೆತುಬಿಡೋಣ' ಎಂಬ ಸಂದೇಶವನ್ನು ನೀಡುತ್ತದೆ.

ಮಕರ ಸಂಕ್ರಾಂತಿ ವಿಶೇಷವೇನು?

  1. ಸೂರ್ಯನ ರಾಶಿಚಕ್ರ ಚಿಹ್ನೆ ಬದಲಾಗುತ್ತೆ: ಈ ದಿನದಂದು, ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುತ್ತಾನೆ. ಧಾರ್ಮಿಕ ನಂಬಿಕೆಯ ಪ್ರಕಾರ, ಈ ಸಮಯವು ಸಕಾರಾತ್ಮಕ ಶಕ್ತಿ, ಪ್ರಗತಿ ಮತ್ತು ಶುಭ ಫಲಿತಾಂಶಗಳನ್ನು ತೋರಿಸುತ್ತದೆ.
  2. ಸಂಪ್ರದಾಯ, ಆಚರಣೆಗಳು: ಈ ದಿನದಂದು ದೇಶಾದ್ಯಂತ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
  3. ಪವಿತ್ರ ಸ್ನಾನ: ಗಂಗಾ, ಯಮುನಾ, ಕಾವೇರಿ, ತುಂಗಭದ್ರಾ ಮತ್ತು ಗೋದಾವರಿ ಸೇರಿದಂತೆ ನದಿಗಳಲ್ಲಿ ಸ್ನಾನ ಮಾಡುವುದನ್ನು ಪವಿತ್ರ ಸ್ನಾನವೆಂದು ಪರಿಗಣಿಸಲಾಗುತ್ತದೆ.
  4. ಸೂರ್ಯ ಪೂಜೆ: ಉದಯಿಸುತ್ತಿರುವ ಸೂರ್ಯನನ್ನು ಪೂಜಿಸುವುದು ಮತ್ತು ಅರ್ಘ್ಯ (ನೀರು) ಅರ್ಪಿಸುವುದು ಒಂದು ಪ್ರಾಚೀನ ಸಂಪ್ರದಾಯವಾಗಿದೆ. ಇದರಿಂದ ಆರೋಗ್ಯ, ಸಮೃದ್ಧಿ, ಸಕಾರಾತ್ಮಕ ಶಕ್ತಿ, ಆಧ್ಯಾತ್ಮಿಕ ಶುದ್ಧೀಕರಣಕ್ಕಾಗಿ ಮಾಡಲಾಗುತ್ತದೆ. 'ಓಂ ಸೂರ್ಯ ನಮಃ' ನಂತಹ ಮಂತ್ರಗಳನ್ನು ಪಠಿಸುವುದು ಒಳ್ಳೆಯದು.
  5. ದಾನ: ಆಹಾರ, ಬಟ್ಟೆ, ಎಳ್ಳು ಮತ್ತು ಬೆಲ್ಲವನ್ನು ದಾನ ಮಾಡುವುದನ್ನು ಶುಭ ಎಂದು ಪರಿಗಣಿಸಲಾಗುತ್ತದೆ.
  6. ಮಕರ ಸಂಕ್ರಾಂತಿಯ ವಾಹನ ಯಾವುದು?: ಪಂಚಾಂಗದ ಪ್ರಕಾರ, ಈ ವರ್ಷದ ಮಕರ ಸಂಕ್ರಾಂತಿಯ ಹೆಸರು 'ನಂದ' ಹಾಗೂ ಅದರ ನೋಟವು ಬಹಳ ಪ್ರಭಾವಶಾಲಿಯಾಗಿದೆ. ಸಂಕ್ರಾಂತಿಯ ವಾಹನ ಕುದುರೆ (ಅಶ್ವಹನ) ಮತ್ತು ಉಪ - ವಾಹನ ಸಿಂಹವಾಗಿದೆ. ಕುದುರೆ ವೇಗದ ಸಂಕೇತವಾಗಿದ್ದರೆ, ಸಿಂಹವು ಶೌರ್ಯದ ಸಂಕೇತವಾಗಿದೆ. ಹೀಗಾಗಿ ವಿಶ್ವ ರಾಜಕೀಯ, ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆಗಳು ಬಹಳ ಬೇಗನೆ ಸಂಭವಿಸುವ ನಿರೀಕ್ಷೆಯಿದೆ ಎಂದು ಜ್ಯೋತಿಷ್ಯ ತಜ್ಞರು ತಿಳಿಸುತ್ತಾರೆ.

ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ ಬಾಯಲ್ಲಿ ನೀರೂರಿಸುವ ಕೊಬ್ಬರಿ ಬರ್ಫಿ: ರುಚಿ ಮಾತ್ರ ಅದ್ಭುತ

ಮಕರ ಸಂಕ್ರಾಂತಿ ಸ್ಪೆಷಲ್ ರೆಸಿಪಿ: ಭರ್ಜರಿ ರುಚಿಯ ಬೆಂಗಾಲಿ ಸ್ವೀಟ್ 'ಗೋಜಾ' ಮಾಡಿ