ಮಾರುಕಟ್ಟೆಯಲ್ಲಿ ಲಭಿಸುವ ಬೆಲ್ಲ ಅಸಲಿಯೋ, ನಕಲಿಯೋ?: ಹೀಗೆ ಪತ್ತೆ ಹಚ್ಚಿ
ನಕಲಿ ಬೆಲ್ಲ ಸೇವನೆ ಆರೋಗ್ಯಕ್ಕೆ ಹಾನಿಕರ. ಮಾರುಕಟ್ಟೆಯಲ್ಲಿ ದೊರೆಯುವ ಬೆಲ್ಲ ಅಸಲಿಯೋ ಅಥವಾ ನಕಲಿಯೋ ಎನ್ನುವುದನ್ನು ತಿಳಿಯವುದು ಹೇಗೆ ಗೊತ್ತೇ?


Published : November 7, 2025 at 7:01 AM IST
ಕೆಲವು ಸರಳ ಸಲಹೆಗಳನ್ನು ಬಳಸಿಕೊಂಡು ನೀವು ಬೆಲ್ಲದ ಕಲಬೆರಕೆಯನ್ನು ಸುಲಭವಾಗಿ ಪತ್ತೆ ಮಾಡಬಹುದು. ಏಕೆಂದರೆ.. ನಿಜವಾದ ಬೆಲ್ಲ ರುಚಿಕರವಾಗಿದೆ. ಆರೋಗ್ಯಕರ. ಇದು ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿಡುತ್ತದೆ. ನಕಲಿ ಬೆಲ್ಲ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅದಕ್ಕಾಗಿಯೇ ಈ ಸಣ್ಣ ಉಪಾಯವನ್ನು ಅನುಸರಿಸುವುದರಿಂದ ನಿಜವಾದ ಸತ್ಯ ಬಹಿರಂಗಗೊಳ್ಳುತ್ತದೆ.
ಬೆಲ್ಲವು ರುಚಿಕರವಾಗಿರುವ ಜೊತೆಗೆ ದೇಹದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಲ್ಲದಲ್ಲಿ ಮೆಗ್ನೀಸಿಯಮ್, ಕಬ್ಬಿಣ, ಪೊಟ್ಯಾಸಿಯಮ್, ರಂಜಕದಂತಹ ಅನೇಕ ಪೋಷಕಾಂಶಗಳಿವೆ. ಖನಿಜಗಳು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಚಳಿಗಾಲದಲ್ಲಿ ಬೆಲ್ಲ ತಿನ್ನುವುದು ದೇಹವನ್ನು ಬೆಚ್ಚಗಿಡುತ್ತದೆ. ಶೀತಗಳನ್ನು ತಡೆಯುತ್ತದೆ. ಬೆಲ್ಲವು ಜೀರ್ಣಕ್ರಿಯೆ ಸುಧಾರಿಸುತ್ತದೆ. ರಕ್ತಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಊಟದ ಬಳಿಕ ಪ್ರತಿದಿನ ಸ್ವಲ್ಪ ಪ್ರಮಾಣದ ಬೆಲ್ಲವನ್ನು ತಿನ್ನುವುದು ಹೊಟ್ಟೆಯನ್ನು ಸ್ವಚ್ಛವಾಗಿರಿಸುತ್ತದೆ. ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಬೆಲ್ಲ ತಿನ್ನುವುದು ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ. ಮಕ್ಕಳಿಗೆ ಸಿಹಿತಿಂಡಿಗಳಿಗೆ ಬದಲಾಗಿ ಆರೋಗ್ಯಕರ ಪರ್ಯಾಯವಾಗಿದೆ. ನೀರಿನ ಅಂಶ, ಬಣ್ಣ, ರುಚಿ ಮತ್ತು ವಾಸನೆಯಿಂದ ಮನೆಯಲ್ಲಿ ಬೆಲ್ಲವನ್ನು ಗುರುತಿಸುವುದು ಸುಲಭವಾಗುತ್ತದೆ. ನೆನಪಿಡಿ, ಹೊಳೆಯುವ ಬೆಲ್ಲ ಎಂದಿಗೂ ಒಳ್ಳೆಯದಲ್ಲ. ನೈಸರ್ಗಿಕ ಬಣ್ಣ ಹಾಗೂ ರುಚಿಯನ್ನು ಹೊಂದಿರುವ ಬೆಲ್ಲ ಮಾತ್ರ ಪೋಷಕಾಂಶಗಳನ್ನು ಒದಗಿಸುತ್ತದೆ.
ಬೆಲ್ಲವು ಚಳಿಗಾಲದಲ್ಲಿ ಆರೋಗ್ಯಕ್ಕೆ ಅತ್ಯುತ್ತಮ: ಚಳಿಗಾಲದ ಅವಧಿಯಲ್ಲಿ ಪ್ರತಿ ಮನೆಯಲ್ಲೂ ಆರೋಗ್ಯಕರ ಹಾಗೂ ರುಚಿಕರವಾದ ಬೆಲ್ಲ ಅತ್ಯಗತ್ಯವಾಗುತ್ತದೆ. ಚಳಿಗಾಲ ಬಂದಾಗ ಹೆಚ್ಚು ಹೆಚ್ಚು ಜನರು ಬೆಲ್ಲವನ್ನು ಬಳಸುತ್ತಾರೆ. ಚಹಾ ಸೇರಿದಂತೆ ಕೆಲವು ವಿಶೇಷ ಲಡ್ಡುಗಳನ್ನು ಇದರೊಂದಿಗೆ ತಯಾರಿಸಲಾಗುತ್ತದೆ. ಹೆಚ್ಚಿನ ಜನರು ಎಳ್ಳು ಬೆಲ್ಲ ಮತ್ತು ಶೇಂಗಾಯಿಂದ ಮಾಡಿದ ಲಡ್ಡುಗಳನ್ನು ತಿನ್ನಲು ಇಷ್ಟಪಡುತ್ತಾರೆ.
ಆದ್ರೆ, ಮಾರುಕಟ್ಟೆಯಲ್ಲಿ ನಿಜವಾದ ಮತ್ತು ನಕಲಿ ಬೆಲ್ಲ ಎರಡೂ ಲಭ್ಯವಿದೆ. ನಿಜವಾದ ಬೆಲ್ಲವನ್ನು ಗುರುತಿಸುವುದು ಹೇಗೆ ಎಂಬುದರ ಬಗ್ಗೆ ಹಲವರಿಗೆ ಗೊಂದಲವಿದೆ. ನಕಲಿ ಬೆಲ್ಲವನ್ನು ರಾಸಾಯನಿಕಗಳಿಂದ ತಯಾರಿಸಲಾಗುತ್ತದೆ. ಬೆಲ್ಲದ ಬಣ್ಣ ಮತ್ತು ಹೊಳಪನ್ನು ಹೆಚ್ಚಿಸುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಖರೀದಿಸುವ ಮೊದಲು ಜಾಗರೂಕರಾಗಿರಬೇಕಾಗುತ್ತದೆ.
ಅಸಲಿ ಅಥವಾ ನಕಲಿ ಬೆಲ್ಲ ಗುರುತಿಸುವುದು ಹೇಗೆ?:
- ಗುಣಮಟ್ಟದ ಬೆಲ್ಲವನ್ನು ಗುರುತಿಸಲು ಕೆಲವು ಸುಲಭವಾದ ಟ್ರಿಕ್ಸ್ ಇವೆ. ತುಂಬಾ ಸರಳವಾಗಿ ನೀರಿನ ಪರೀಕ್ಷೆ ಮಾಡಬಹುದು. ಒಂದು ಲೋಟ ನೀರಿನಲ್ಲಿ ಸ್ವಲ್ಪ ಬೆಲ್ಲ ಹಾಕಿ. ನಿಜವಾದ ಬೆಲ್ಲ ತಳಕ್ಕೆ ಹೋಗಿ ತಲುಪುತ್ತದೆ. ಆದರೆ, ನಕಲಿ ಬೆಲ್ಲವು ಮೇಲಕ್ಕೆ ತೇಲುತ್ತದೆ. ನಿಜವಾದ ಬೆಲ್ಲವು ಹೆಚ್ಚಿನ ಶುದ್ಧತೆ ಹಾಗೂ ಸಾಂದ್ರತೆಯನ್ನು ಹೊಂದಿರುತ್ತದೆ. ಅಲ್ಲದೇ ನಕಲಿ ಬೆಲ್ಲವು ರಾಸಾಯನಿಕಗಳು ಮತ್ತು ಕೃತಕ ಬಣ್ಣಗಳನ್ನು ಹೊಂದಿರುತ್ತದೆ. ಇವು ಅದನ್ನು ಹಗುರಗೊಳಿಸುತ್ತವೆ.
- ಬೆಲ್ಲದಲ್ಲಿ ಕಲಬೆರಕೆಯನ್ನು ಪತ್ತೆಹಚ್ಚಲು ಮತ್ತೊಂದು ಸುಲಭ ಮಾರ್ಗವೆಂದರೆ ವಾಸನೆಯ ಮೂಲಕ ಕಂಡುಹಿಡಿಬಹುದು. ನಿಜವಾದ ಬೆಲ್ಲವು ಸೌಮ್ಯವಾದ, ನೈಸರ್ಗಿಕ ಸಿಹಿ ವಾಸನೆ ಹೊಂದಿರುತ್ತದೆ. ನಕಲಿ ಬೆಲ್ಲವು ರಾಸಾಯನಿಕ ವಾಸನೆ ಹೊಂದಿರುತ್ತದೆ.
- ನಿಜವಾದ ಬೆಲ್ಲವು ಸಿಹಿ ಹಾಗೂ ನಯವಾದ ರುಚಿಯನ್ನು ಹೊಂದಿರುತ್ತದೆ. ಆದರೆ, ನಕಲಿ ಬೆಲ್ಲವು ಸ್ವಲ್ಪ ಕಹಿ ಹಾಗೂ ಒರಟಾಗಿರುತ್ತದೆ. ನಿಜವಾದ ಬೆಲ್ಲವು ತಿಳಿ ಕಂದು, ಚಿನ್ನದ ಬಣ್ಣವನ್ನು ಹೊಂದಿರುತ್ತದೆ. ಆದರೆ, ನಕಲಿ ಬೆಲ್ಲವು ಹೊಳೆಯುತ್ತದೆ, ಗಾಢ ಕೆಂಪು ಬಣ್ಣದಲ್ಲಿ ಕಾಣುತ್ತದೆ.
- ಬೆಲ್ಲವನ್ನು ಖರೀದಿಸುವಾಗ ತುಂಡುಗಳ ಮೇಲಿನ ಪದರವನ್ನು ಎಚ್ಚರಿಕೆಯಿಂದ ಪರೀಕ್ಷಿಸಿ. ನಿಜವಾದ ಬೆಲ್ಲವು ಸ್ವಲ್ಪ ಧಾನ್ಯದ, ನೈಸರ್ಗಿಕ ಮೇಲ್ಮೈಯನ್ನು ಹೊಂದಿರುತ್ತದೆ. ನಕಲಿ ಬೆಲ್ಲವು ಮೃದು ಮತ್ತು ಹೊಳೆಯುವಂತೆ ಕಾಣುತ್ತದೆ.
- ಬೆಲ್ಲವನ್ನು ಆಕರ್ಷಕವಾಗಿಸಲು ರಾಸಾಯನಿಕಗಳು, ಕೃತಕ ಬಣ್ಣಗಳನ್ನು ಬಳಸಲಾಗುತ್ತದೆ. ಅಂತಹ ಬೆಲ್ಲವನ್ನು ತಿನ್ನುವುದರಿಂದ ಹೊಟ್ಟೆ ನೋವು, ತಲೆನೋವು ಇಲ್ಲವೇ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಕಲಬೆರಕೆ ಬೆಲ್ಲವನ್ನು ಪತ್ತೆಹಚ್ಚುವುದು ಅತ್ಯಗತ್ಯವಾಗಿದೆ.
ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

